November 9, 2008
ರಾಗ : ರಂಜನಿ
ರಚನೆ : ಕನಕ ದಾಸರು
ವರವ ಕೊಡು ಎನಗೆ ವಾಗ್ದೇವಿ ನಿನ್ನ
ಚರಣ ಕಮಲಂಗಳ ದಯಮಾಡು ದೇವಿ || ಪಲ್ಲವಿ ||
ಶಶಿ ಮುಖದ ನಸು ನಗೆಯ ಬಾಲೆ
ಎಸೆವ ಕರ್ಣದ ಮುತ್ತಿನ ಓಲೆ
ನಸುವ ಸುಪಲ್ಲ ಗುಣಶೀಲೇ ದೇವಿ
ಬಿಸಜಾಕ್ಷಿ ಎನ್ನ ಹೃದಯದೊಳು ನಿಂದು || ೧ ||
ಇಂಪು ಸೊಂಪಿನ ಚಂದ್ರ ಬಿಂಬೆ
ಕೆಂಪು ತುಟಿ ನಾಸಿಕದ ರಂಭೆ
ಜೋಂಪು ಮದನನ ಪೂರ್ಣ ಶಕ್ತಿ ಗೊಂಬೆ
ಸಂಪಿಗೆಯ ಮುಡಿದಿಟ್ಟ ವಿದ್ಯಾ || ೨ ||
ರವಿ ಕೋಟಿ ತೇಜ ಪ್ರಕಾಶೇ ಮಹಾ
ಕವಿಜನ ಹ್ರಿತ್ಕಮಲ ವಾಸೇ
ಅವಿರಳ ಪುರಿ ಕಾಗಿನೆಲೆಯಾದಿ
ಕೇಶವನ ಸುತನಿಗೆ ಸನ್ನುತ ರಾಣಿವಾಸೆ || ೩ ||
Audio Link - ವಿದ್ಯಾಭೂಷಣರು ಕಲ್ಯಾಣಿ ರಾಗದಲ್ಲಿ ಈ ಹಾಡನ್ನು ಹಾಡಿದ್ದಾರೆ.
ನಾಗವಲ್ಲಿ ನಾಗರಾಜ್ ಅವರು ರಂಜನಿ ರಾಗದಲ್ಲಿ ಹಾಡಿರುವುದನ್ನು ಇಲ್ಲಿ ನೋಡಬಹುದು.
0 comments:
Post a Comment