Welcome to my Blog.I hope you enjoy the music.Please leave your comments and suggestions. Thankyou :)
All songs posted here have audio links!!

Kodu bega divyamathi / ಕೊಡು ಬೇಗ ದಿವ್ಯಮತಿ

August 25, 2009

ರಚನೆ : ಪುರಂದರ ದಾಸರು
ರಾಗ:
ವಸಂತ
ತಾಳ : ಆದಿ

ಭಾಷೆ : ಕನ್ನಡ

ಪಲ್ಲವಿ
ಕೊಡು ಬೇಗ ದಿವ್ಯಮತಿ ಸರಸ್ವತಿ ||

ಅನುಪಲ್ಲವಿ
ಮೃಡ ಹರಿಹರ ಮುಖರೊಡೆಯಳೆ ನಿನ್ನಯ
ಅಡಿಗೆರಗುವೆ
ಅಮ್ಮ ಬ್ರಹ್ಮನ ರಾಣಿ||

ಚರಣ
ಇಂದಿರಾ ರಮಣನ ಹಿರಿಯ ಸೋಸಯು ನಿನು
ಬಂದೆನ್ನ
ವದನದಿ ನಿಂದು ನಾಮವ ನುಡಿಸೆ||1||

ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದರಾಣಿ
ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ||2||

ಪತಿತ ಪಾವನೆ ನೀ ಗತಿಯೆಂದು ನಂಬಿದೆ
ಸತತ
ಪುರಂದರ ವಿಠಲನ ತೋರೆ||3||

------------------------------------------------------------------------------

Composer : Purandara Daasa
Raaga : Vasantha
Taala : Adi

pallavi
koDu bEga divyamati saraswati

anupallavi
mruDa harihara mukharoDayaLe ninnaya
adigeraguve amma brahmana rANi

charaNa
indirA ramaNana hiriya sosayu nInu
bandenna vadanadi nindu nAmava nuDise||1||

akhila vidyAbhimAni ajana paTTadaraNi
sukhavittu pAlise sujana shirOmaNi ||2||

patita pAvane nI gatiyendu nambide
satata purandara viTalana tOre||3||


1.Audio by Erode Rajamani2.Audio by SriSangita below: Ugabhoga followed by the song


Shakti Sahita Ganapatim / ಶಕ್ತಿ ಸಹಿತ ಗಣಪತಿಂ

August 19, 2009

ರಾಗ : ಶಂಕರಾಭರಣ
ತಾಳ : ಏಕ
ರಚನೆ : ಮುತ್ತುಸ್ವಾಮಿ ದೀಕ್ಷಿತರು

ಶಕ್ತಿ ಸಹಿತ ಗಣಪತಿಂ ಶಂಕರಾದಿ ಸೇವಿತಂ

ವಿರಕ್ತ ಸಕಲ ಮುನಿವರ ಸುರ
ರಾಜ
ವಿನುತ ಗುರುಗುಹಂ

ಭಕ್ತಾದಿ ಪೋಷಕಂ ಭವಸುತಂ ವಿನಾಯಕಂ
ಭುಕ್ತಿ ಮುಕ್ತಿ ಪ್ರದಂ
ಭೂಷಿ ತಾಂಗಂ
ರಕ್ತ
ಪಾದಂಬುಜ ಭಾವಯಾಮಿ

-------------------------------------------------------------------------

raaga : shankarabharana
taala : Eka
Composer : Muttuswami Dikshitir

shakti sahita gaNapatim shankaraadi sEvitam

virakta sakala munivara sura
rAja vinuta guruguham

bhaktAdi pOShakam
bhavasutam vinayakam
bhukti mukti pradam bhooshitaangam
rakta padAmbujam bhAvayAmiLambodara Lakumikara / ಲಂಬೋದರ ಲಕುಮಿಕರ

August 15, 2009

ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯುವಾಗ ಹೇಳಿಕೊಡುವ ಮೊದಲ ಹಾಡು/ಗೀತೆ ಇದು. ಇದು ಚಿಕ್ಕದಾಗಿದ್ದು ಕಲಿಯಲು ಸುಲಭವಾಗಿದೆ. ಮೊದಲು ಗಣಪತಿಗೆ ವಂದಿಸಿ ಮುಂದೆ ಅಮೇಲೆ ಹೋಗಬೇಕು ಅಲ್ಲವೇ :)

ರಾಗ
: ಮಲಹರಿ
ತಳ : ರೂಪಕ
ರಚನೆ ಪುರಂದರದಾಸ

ಪಲ್ಲವಿ :
ಲಂಬೋದರ ಲಕುಮಿ ಕರಾ ಅಂಬಾ ಸುತ ಅಮರ ವಿನುತ

ಚರಣ:
ಶ್ರೀ ಗಣನಾಥ ಸಿಂಧೂರ ವರ್ಣ ಕರುಣ ಸಾಗರ ಕರಿ ವಾದನ ||||

ಸಿದ್ಧ ಚರಣ ಗಣ ಸೇವಿತ ಸಿದ್ಧಿ ವಿನಾಯಕ ತೇ ನಮೋ ನಮೋ ||||

ಸಕಲ ವಿದ್ಯಾ ಆದಿ ಪೂಜಿತ ಸರ್ವೋತ್ತಮ ತೇ ನಮೋ ನಮೋ ||||
-------------------------------------------------------------
Raaga:Malahari
Taala : Roopaka
Composer : Purandara Dasa

Pallavi:
LambOdara Lakumi karaa Ambaa Sutha Amara Vinutha||

CharaNa:
Sri Gananatha Sindhoora VarNa KaruNa Saagara Kari Vadana ||1||

Siddha CharaNa GaNa Sevitha Siddhi Vinayaka tE Namo Namo||2||

Sakala Vidya aadi Poojitha Sarvottama tE Namo Namo
||3||

Elliruvano Ranga Emba Samshaya Beda /ಎಲ್ಲಿರುವನೋ ರಂಗ

August 11, 2009


ಪಲ್ಲವಿ
ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ
ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನು

ತರಳ ಪ್ರಹ್ಲಾದ ಹರಿ ವಿಶ್ವಮಯನೆಂದು
ಭರದೊದೆಯಲವನಪಿತ ಕೋಪದಿಂದ
ಸ್ಥಿರವಾದೊಳಿ ಕಂಭದಲಿ ತೋರು ತೋರೆನಲು
ಭರದಿಂದ ಬರಲದಕೆ ವೈಕುಂಠ ನೆರೆಮನೆಯೇ ೧

ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆ
ತರುಣಿ ಹಾ ಕೃಷ್ಣ ಎಂದರೆ ಕೇಳ್ದು
ಭರದಿಂದ ಅಕ್ಷಯಾಂಬರವೀಯೆ ಹಸ್ತಿನಾ
ಪುರಿಗೆ ದ್ವಾರಾವತಿಯು ಕೂಗಳತೆಯೇ ೨

ಅಣುಹೊತ್ತಿನೊಳೆಲ್ಲ ಪರಿಪೂರ್ಣ ವಿಶ್ವಮಯ
ಗಣನೆಯಿಲ್ಲದ ಮಹಾಮಹಿಮನೆನಿಪ
ಘನ ಕೃಪಾನಿಧಿ ನಮ್ಮ ಪುರಂದರ ವಿಠಲನ
ನೆನೆವರ ಮನದೊಳಿಹನೆಂಬ ಬಿರುದುಂಟಾಗಿ ೩


1.Audio Link -Vidya Bhushana(musicindiaonline - song 5)

2.Audio Link - Vidya Bhushana(rediff)

Krishna nee Begane Baaro / ಕೃಷ್ಣ ನೀ ಬೇಗನೇ ಬಾರೋ

August 8, 2009

ರಚನೆ : ವ್ಯಾಸರಾಯರು
ರಾಗ : ಯಮನ್ ಕಲ್ಯಾಣಿ
ತಾಳ : ಮಿಶ್ರ ಛಾಪು

ಭಾಷೆ : ಕನ್ನಡ

ಪಲ್ಲವಿ
ಕೃಷ್ಣ ನೀ ಬೇಗನೇ ಬಾರೋ

ಅನುಪಲ್ಲವಿ
ಬೇಗನೆ ಬಾರೋ ಮುಖವನ್ನು ತೋರೋ


ಕಾಲಾಲಂದುಗೆ ಗೆಜ್ಜೆ ನೀಲದ ಭಾವುಲಿ
ನೀಲವರ್ಣನೆ ನಾಟ್ಯವಾಡುತ್ತ ಬಾರೋ


ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರ
ಕೊರಳಲ್ಲಿ ಹಾಕಿದ ವೈಜಯಂತಿಮಾಲ ೨


ಕಾಶಿ ಪೀತಾಂಬರ ಕೈಯಲ್ಲಿ ಕೊಳಲು
ಪೂಶಿದ ಶ್ರೀ ಗಂಧ ಮೈಯೊಳು ಗಮ್ಮ ೩


ತಾಯಿಗೆ ಬಾಯಲ್ಲಿ ಜಗವನ್ನು ತೋರಿದ
ಜಗದೋದ್ಧಾರಕ ನಮ್ಮ ಉಡುಪಿ ಶ್ರೀ ಕೃಷ್ಣ ೪


1. Audio Link - by Bombay Jayashri


2. Audio Link - by Yesudas

Moorutiyane (Moorutiyanu) Nilliso /ಮೂರುತಿಯೆನು ನಿಲ್ಲಿಸೋ

August 6, 2009


ರಚನೆ : ಪುರಂದರ ದಾಸರು
ಭಾಷೆ : ಕನ್ನಡ

ಮೂರುತಿಯೆನೆ ನಿಲ್ಲಿಸೋ , ಮಾಧವ ನಿನ್ನ
ಮೂರುತಿಯೆನೆ ನಿಲ್ಲಿಸೋ ||ಪ||


ಎಳೆ ತುಳಸಿಯ ವನಮಾಲೆಯು ಕೊರಳೊಳು
ಹೊಳೆವ ಪೀತಾಂಬರದಿಂದಲೊಪ್ಪುವ ನಿನ್ನ ||


ಮುತ್ತಿನ ಸರ ನವರತ್ನದುಂಗುರವಿಟ್ಟು
ಮತ್ತೆ ಶ್ರೀ ಲಕುಮಿಯ ಉರದೊಳೊಪ್ಪುವ ನಿನ್ನ||


ಭಕ್ತರ ಕಲ್ಪತರು ಭಾಗ್ಯದ ಸುರಧೇನು
ಮುಕ್ತಿದಾಯಕ ಸಿರಿ ಪುರಂದರ ವಿಠಲ ನಿನ್ನ||

1.Audio Link - M.S.Sheela [song6]

2.Audio Link - Bhimsen Joshi

Vandipe Ninage Gananatha (Modalondipe) / ವಂದಿಪೆ ನಿನಗೆ ಗಣನಾಥ

August 4, 2009ರಚನೆ : ಶ್ರೀಪಾದ ರಾಯರು (ಶ್ರೀ ಪಾದರಾಜರು )
ಭಾಷೆ
: ಕನ್ನಡ


ವಂದಿಪೆ ನಿನಗೆ ಗಣನಾಥ
ಮೊದಲೊಂದಿಪೆ
ನಿನಗೆ ಗಣನಾಥ
ಬಂದ
ವಿಘ್ನ ಕಳೆಯೋ ಗಣನಾಥ||


ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲ್ಲಿ ಗಣನಾಥ ||


ಮಾಧವನ ಆಜ್ಞೆಯಿಂದ (ಆದಿಯಲ್ಲಿ ನಿನ್ನ ಪಾದ) ಪೂಜಿಸಿದ ಧರ್ಮರಾಯ
ಸಾಧಿಸಿದ
ರಾಜ್ಯ ಗಣನಾಥ ||


ಮಂಗಳ ಮೂರುತಿ ಗುರು ರಂಗ ವಿಠಲನ ಪಾದ
ಭೃಂಗನೆ
(ಹಿಂಗದೆ) ಪಾಲಿಸೋ ಗಣನಾಥ ||


1.Audio Link - Vidya Bhushana

2.Audio Link - Shashidhar Kote (song 18)

3. Audio Link by Parameshwara Hegde (song 23)

4. Audio & Video - Gopal Bhat Jogimane below

Jo Jo Shri Krishna Paramananda / ಜೋ ಜೋ ಶ್ರೀ ಕೃಷ್ಣ ಪರಮಾನಂದ

August 2, 2009ಜೋ ಜೋ ಶ್ರೀಕೃಷ್ಣ ಪರಮಾನಂದ
ಜೋ
ಜೋ ಗೋಪಿಯ ಕಂದ ಮುಕುಂದ ಜೋಜೋ ||ಪ||

ಪಾಲಗಡಲೊಳು ಪವಡಿಸಿದವನೇ
ಆಲದೆಲೆಯ ಮೇಲೆ ಮಲಗಿದ ಶಿಶುವೇ
ಶ್ರೀಲತಾಂಗಿಯರ ಚಿತ್ತದೊಲ್ಲಭನೇ

ಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋಜೋ ||

ಹೊಳೆವಂಥ ರನ್ನದ ತೊಟ್ಟಿಲ ಮೇಲೆ
ಥಳಥಳಿಸುವ ಗುಲ
ಗಂಜಿಯ ಮಾಲೆ
ಅಳದೆ ನೀ ಪಿಡಿದಾಡೆನ್ನಯ ಮುದ್ದು ಬಾಲ

ನಳಿನನಾಭನೆ ನಿನ್ನ ಪಾಡಿ ತೂಗುವೆನು ಜೋಜೋ ||


ಯಾರ ಕಂದ ನೀನಾರ ನಿಧಾನೀ

ಆರ ರತ್ನವೊ ನೀನಾರ ಮಾಣಿಕವೋ

ಸೇರಿತು ಎನಗೊಂದು ಚಿಂತಾಮಣಿ ಎಂದು

ಪೋರ ನಿನ್ನನು ಪಾಡಿ ತೂಗುವೆನಯ್ಯ ಜೋಜೋ ||


ಗುಣನಿಧಿಯೇ ನಿನ್ನ ಎತ್ತಿಕೊಂಡಿದ್ದರೆ

ಮನೆಯ ಕೆಲಸವಾರು ಮಾಡುವರಯ್ಯ
ಮನಕೆ ಸುಖನಿದ್ರೆ ತಂದುಕೋ ಬೇಗ
ಫಣಿಶಯನನೆ ನಿನ್ನ ಪಾಡಿ ತೂಗುವೆನು
ಜೋಜೋ ||

ಅಂಡಜವಾಹನ ಅನಂತಮಹಿಮ
ಪುಂಡರೀಕಾಕ್ಷ ಶ್ರೀ ಪರಮಪಾವನ

ಹಿಂಡು ದೈವದ ಗಂಡ ಉದ್ದಂಡನೆ

ಪಾಂಡುರಂಗ ಶ್ರೀ ಪುರಂದರ ವಿಠಲ
ಜೋಜೋ ||

1.Audio Link by Pallavi Arun


2.Audio link by Upendra Bhat

stat

Counter

Blog Widget by LinkWithin
 
Bhakthi Geetha / ಭಕ್ತಿ ಗೀತೆಗಳು - by Templates blogger