ಬೋಲೋ ನಾಥ ಉಮಾಪತೇ(ಪತಿ)
ಶಂಭೋ ಶಂಕರ ಪಶುಪತೇ
ನಾಂದಿ ವಾಹನ ನಾಗ ಭೂಷಣ
ಚಂದ್ರಶೇಖರ ಜಟಾಧರ
ಶೂಲಾಧಾರ ಜ್ಯೋತಿ ಪ್ರಕಾಶ
ವಿಭೂತಿ ಸುಂದರ ಪರಮೇಶ
ಸ್ಮಶಾನವಾಸ ಚಿದಂಬರೇಶ
ನೀಲಕಂಠ ಮಹದೇವ
ಕೈಲಾಸ ವಾಸ ಕನಕ ಸಭೇಷ
ಗೌರಿ ಮನೋಹರ ವಿಶ್ವೇಶ
-------------------------------------
Bolo Natha Uma Pathe
Shambho Shankara Pashupathe
Nandi Vahana Naga Bhooshana
Chandrashekara Jatadhara
Shooladhara Jyoti Prakasha
Vibhooti Sundara Paramesha
Smashaana Vaasa Chidambaresha
Neelakanta Mahadeva
Kailasa Vaasa Kanaka Sabhesha
Gauri Manohara Vishvesha
Audio link by Udaiyalur Kalyanaraman

Composer: Dayananda Saraswati
Raga: Revati
Tala: Adi
ಭೋ ಶಂಭೋ ಶಿವ ಶಂಭೋ ಸ್ವಯಂಭೋ
ಗಂಗಾಧರ ಶಂಕರ ಕರುಣಾಕರ
ಮಾಮವ ಭವ ಸಾಗರ ತಾರಕ
ನಿರ್ಗುಣ ಪರಬ್ರಹ್ಮ ಸ್ವರೂಪ
ಗಮ ಗಮ ಭೂತ ಪ್ರಪಂಚ ರಹಿತ
ನಿಜ ಗುಹ ನಿಹಿತ ನಿತಾಂತ ಅನಂತ
ಆನಂದ ಅತಿಶಯ ಅಕ್ಷಯಲಿಂಗ
ಧಿಮಿತ ಧಿಮಿತ ಧಿಮಿ ಧಿಮಿಕಿಟ ಕಿಟತೊಂ
ತೋಂ ತೋಂ ತರಿಕಿಟ ತರಿಕಿಟ ಕಿಟತೊಂ
ಮಾತಂಗ ಮುನಿವರ ವಂದಿತ ಈಶ
ಸರ್ವ ದಿಗಂಬರ ವೇಷ್ಟಿತ ವೇಷ
ನಿತ್ಯ ನಿರಂಜನ ನಿತ್ಯ ನಟೇಶ
ಈಶ ಸರ್ವೇಶ ಸರ್ವೇಶ.
------------------------------------------------------------------------
ರಚನೆ : ಪುರಂದರ ದಾಸರು
ತಾಳ : ಆದಿ
AudioLink - VidyaBhushana ಅವರು ಹಾಡಿದ್ದಾರೆ
ರಚನೆ : ವಿಜಯ ದಾಸರು
ಪಲ್ಲವಿ
ಕೈಲಾಸ ವಾಸ ಗೌರೀಶ ಈಶ
ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ||
ಅಹೋರಾತ್ರಿಯಲ್ಲಿ ನಾನು ಅನುಜರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೋ ಮಹದೇವನೇ
ಅಹಿಭೂಶಣನೆ ಎನ್ನ ಅವಗುಣಗಳೆಣಿಸದಲೇ
ವಿಹಿತಧರ್ಮದಲಿಡು ವಿಷ್ಣು ಭಕುತಿಯನು ಕೊಡು ಶಂಭೋ|೧|
ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ
ಧನುಜಗತ ಮದಹಾರಿ ದಂಡ ಪ್ರಣಾಮವ ಮಾಡ್ಪೆ
ಮಣಿಸು ಈ ಶಿರವ ಸಜ್ಜನ ಚರಣ ಕಮಲದಲ್ಲಿ ಶಂಭೋ|೨|
ಭಾಗೀರಥಿಧರನೆ ಭಯವ ಪರಿಹರಿಸಯ್ಯ
ಲೇಸಾಗಿ ನೀ ಸಲಹೊ ಸಂತತ ಸರ್ವದೇವ
ಭಾಗವತಗಳ ಪ್ರಿಯ ವಿಜಯ ವಿಠಲನಂಘ್ರಿ
ಜಾಡು ಮಾಡದೆ ಭಜಿಪ ಭಾಗ್ಯವನು ಕೊಡು ಶಂಭೋ|೩|
1.AudioLink by Vidya Bhushana
2.AudioLink by Balamuralikrishna(song 1)
3.AudioLink by Pt.Bhimsen Joshi
ರಚನೆ : ಪುರಂದರದಾಸರು
ತಾಳ : ಆದಿ
1.AudioLink - Balamuralikrishna (song 6)
2.Audio link by Upendra Bhat
ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ
ರಚನೆ : ಪುರಂದರ ದಾಸರು
ರಾಗ : ರಾಗ ಮಾಲಿಕೆ
ತಾಳ : ಆದಿ
ಪಲ್ಲವಿ
ಚಂದ್ರಚೂಡ ಶಿವ ಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ
ಅನುಪಲ್ಲವಿ
ಸುಂದರ ಮೃಗದರ ಪಿನಾಕಧರಹರ ಗಂಗಾಧರ ಶಿರ ಗಜ ಚರ್ಮಾಂಬರಧರ
ಚರಣ
ನಂದಿ ವಾಹನಾನಂದಿಂದ ಮೂರ್ಜಗದಿ ಮೆರೆವನು ನೀನೆ
ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವನು ನೀನೆ
ಕಂದರ್ಪನ ಕ್ರೋಧದಿಂದ ಕಣ್ತೆರದು ಕೊಂದ ಉಗ್ರನು ನೀನೆ
ಇಂದಿರೇಶ ಶ್ರೀ ರಾಮನ ಪಾದವ ಚಂದದಿ ಪೋಗಳುವನು ನೀನೆ೧
ಬಾಲ ಮೃಕಂಡನ ಕಾಲನು ಎಳೆವಾಗ ಪಲಿಸಿದವನು ನೀನೆ
ಕಾಲಕೂಟ ವಿಷವ ಪಾನ ಮಾಡಿದ ನೀಲಕಂಠ ನೀನೆ
ವಾಲಯದಿ ಕಪಾಲವ ಪಿಡಿದು ಭಿಕ್ಷೆ ಬೇಡೋ ದಿಗಂಬರನು ನೀನೆ
ಜಾಲ ಮಾಡುವ ಗೋಪಾಲನೆಂಬ ಪೆಣ್ಣಿಗೆ ಮರುಳಾದವನು ನೀನೆ೨
ಧರೆಗೆ ದಕ್ಷಿಣ ಕಾವೇರಿ ತೀರ ಕುಂಭಾಪುರ ನಿವಾಸನು ನೀನೆ
ಕರದಲಿ ವೀಣೆಯ ಗಾನವ ಮಾಡುವ ನಮ್ಮ ಉರಗ ಭೂಷಣನು
ಕೊರಳಲಿ ಭಸ್ಮ ರುದ್ರಾಕ್ಷಿ ಧರಿಸಿದ ಪರಮ ವೈಷ್ಣವನು ನೀನೆ
ಗರುಡ ಗಮನ ಶ್ರೀ ಪುರಂದರ ವಿಠಲಗೆ ಪ್ರಾಣ ಪ್ರಿಯನು ನೀನೆ೩
ಈ ಹಾಡನ್ನು ಬೇರೆ ಬೇರೆ ಕಲಾವಿಧರು ಬೇರೆ ರಾಗಗಳಲ್ಲಿ ಹಾಡಿದ್ದಾರೆ.
(Album link)
2.AudioLink by Sri Vidya Bhushana
3.Audio by M L Vasantha Kumari [song 10]
3.Audio by M S Sheela [song 9]