Welcome to my Blog.I hope you enjoy the music.Please leave your comments and suggestions. Thankyou :)
All songs posted here have audio links!!

Chandra Chooda Shiva / ಚಂದ್ರ ಚೂಡ ಶಿವ

January 23, 2009

ರಚನೆ : ಪುರಂದರ ದಾಸರು
ರಾಗ : ರಾಗ ಮಾಲಿಕೆ
ತಾಳ : ಆದಿ



ಪಲ್ಲವಿ
ಚಂದ್ರಚೂಡ ಶಿವ ಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ

ಅನುಪಲ್ಲವಿ
ಸುಂದರ ಮೃಗದರ ಪಿನಾಕಧರಹರ ಗಂಗಾಧರ ಶಿರ ಗಜ ಚರ್ಮಾಂಬರಧರ

ಚರಣ
ನಂದಿ ವಾಹನಾನಂದಿಂದ ಮೂರ್ಜಗದಿ ಮೆರೆವನು ನೀನೆ
ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವನು ನೀನೆ

ಕಂದರ್ಪನ ಕ್ರೋಧದಿಂದ ಕಣ್ತೆರದು ಕೊಂದ ಉಗ್ರನು ನೀನೆ
ಇಂದಿರೇಶ ಶ್ರೀ ರಾಮನ ಪಾದವ ಚಂದದಿ ಪೋಗಳುವನು ನೀನೆ

ಬಾಲ ಮೃಕಂಡನ ಕಾಲನು ಎಳೆವಾಗ ಪಲಿಸಿದವನು ನೀನೆ
ಕಾಲಕೂಟ ವಿಷವ ಪಾನ ಮಾಡಿದ ನೀಲಕಂಠ ನೀನೆ
ವಾಲಯದಿ ಕಪಾಲವ ಪಿಡಿದು ಭಿಕ್ಷೆ ಬೇಡೋ ದಿಗಂಬರನು ನೀನೆ
ಜಾಲ ಮಾಡುವ ಗೋಪಾಲನೆಂಬ ಪೆಣ್ಣಿಗೆ ಮರುಳಾದವನು ನೀನೆ


ಧರೆಗೆ ದಕ್ಷಿಣ ಕಾವೇರಿ ತೀರ ಕುಂಭಾಪುರ ನಿವಾಸನು ನೀನೆ
ಕರದಲಿ ವೀಣೆಯ ಗಾನವ ಮಾಡುವ ನಮ್ಮ ಉರಗ ಭೂಷಣನು
ಕೊರಳಲಿ ಭಸ್ಮ ರುದ್ರಾಕ್ಷಿ ಧರಿಸಿದ ಪರಮ ವೈಷ್ಣವನು ನೀನೆ
ಗರುಡ ಗಮನ ಶ್ರೀ ಪುರಂದರ ವಿಠಲಗೆ ಪ್ರಾಣ ಪ್ರಿಯನು ನೀನೆ

ಈ ಹಾಡನ್ನು ಬೇರೆ ಬೇರೆ ಕಲಾವಿಧರು ಬೇರೆ ರಾಗಗಳಲ್ಲಿ ಹಾಡಿದ್ದಾರೆ.


(Album link)

2.AudioLink by Sri Vidya Bhushana

3.Audio by M L Vasantha Kumari [song 10]

3.Audio by M S Sheela [song 9]


2 comments:

Anonymous said...

Hi Shree,
Thanks for posting this song. I was searching for this song and lyrics. Here I found both together. Thanks again. Keep up the good work :)

Shree said...

Malini,

Thanks a lot for your compliments :)

stat

Counter

Blog Widget by LinkWithin
 
Bhakthi Geetha / ಭಕ್ತಿ ಗೀತೆಗಳು - by Templates blogger