February 3, 2009
ರಚನೆ: ಪುರಂದರ ದಾಸರು
ರಾಗ: ರಾಗಮಾಲಿಕೆ
ತಾಳ : ಆದಿ
(ರಾಗ : ಕುರುಂಜಿ)
ಪಲ್ಲವಿ
ಕ್ಷೀರಾಬ್ಧಿ ಕನ್ನಿಕೆ ಶ್ರೀಮಹಾಲಕ್ಷ್ಮಿ ಯಾರಿಗೆ ವಧುವಾಗುವೇ ನೀನು ||
ಚರಣ
ಶರಧಿ ಬಂಧನ ರಾಮಚಂದ್ರ ಮೂರ್ತಿಗೋ
ಪರಮಾತ್ಮ ಅನಂತ ಪದ್ಮನಾಭಗೋ
ಸರಸಿಜನಾಭ ಶ್ರೀ ಜನಾರ್ಧನ ಮೂರ್ತಿಗೋ
ಉಭಯಕಾವೇರಿ ರಂಗ ಪಟ್ಟಣದರಸಗೋ ||೧||
(ರಾಗ : ಯಮನ್ ಕಲ್ಯಾಣಿ )
ಚೆಲುವ ಮೂರುತಿ ಬೇಲೂರ ಚೆನ್ನಿಗರಾಯನಿಗೋ
ಗೆಳತಿ ಹೇಳು ಉಡುಪಿ ಶ್ರೀ ಕ್ರಿಷ್ಣರಾಯನಿಗೋ
ಇಳೆಯೊಳು ಪಾಂಡುರಂಗ ವಿಠಲ ರಾಯಗೋ
ನಳಿನಾಕ್ಷಿ ಹೇಳಮ್ಮ ಬದರಿ ನಾರಾಯಣಗೋ ||೨||
(ರಾಗ : ದರ್ಬಾರಿ ಕಾನಡ )
ಮಲಯಜ ಗಂಧೀ ಬಿಂದು ಮಾಧವರಾಯಗೋ
ಸುಲಭ ದೇವರು ಪುರುಷೋತ್ತಮಗೋ
ಫಲದಾಯಕ ನಿತ್ಯ ಮಂಗಳದಾಯಕಗೋ
ಚೆಲುವೆ ನಾಚದೆ ಪೇಳು ಶ್ರೀವೆಂಕಟೇಶಗೋ ||೩||
(ರಾಗ : ಸಿಂಧುಭೈರವಿ )
ವಾಸವಾರ್ಚಿತ ಕಂಚಿ ವರದರಾಜನಿಗೋ
ಆ ಶ್ರೀಮುಷ್ಣದಲ್ಲಿ ಆದೀವರಾಯನಿಗೋ
ಶೇಷಶಾಯಿಯಾದ ಶ್ರೀಮನ್ ನಾರಾಯಣಗೋ
ಸಾಸಿರ ನಾಮದೊಡೆಯ ಅಳಗಿರಿಶಗೋ ||೪||
(ರಾಗ : ಮಣಿರಂಗು )
ಶರಣಾಗತ ರಕ್ಷಕ ಸಾರಂಗ ಪಾಣಿಗೋ
ವರಗಳ ನೀಡುವ ಶ್ರೀನಿವಾಸಗೋ
ಕುರುಕುಲಾಂತಕ ರಾಜಗೋಪಾಲ ಮೂರ್ತಿಗೋ
ಸ್ಥಿರವಾಗಿ ಪುರಂದರ ವಿಟ್ಟಲರಾಯನಿಗೋ ||೫||
1.AudioLink by Maharajapuram Santhanam (musicindia)
2.AudioLink by Maharajapuram Santhanam (raaga)
2 comments:
Nice blog. I liked the mentioning of the ragas in this ragamalike!
A minor correction.
ಗುರುಕುಲಾಂತಕ ರಾಜಗೋಪಾಲ ಮೂರ್ತಿಗೋ
should be
ಕುರುಕುಲಾಂತಕ ರಾಜಗೋಪಾಲ ಮೂರ್ತಿಗೋ
ಅಂತಕ = yama, the death god.
shrI kRuShNa is described as the one that put an end to the "kurukula" ie., kaurava clan.
Also:
ಮಲಯ ಜಗದಿ
should be:
ಮಲಯಜಗಂಧೀ
(meaning fragrance of shrIgaMdha)
Thanks for reminding this kRuti that mentions so many holy places all over India and the forms of shrI vishNu worshipped there.
Prabhu
Thanks Prabhu for your comments and meanings, I have made the changes.
Post a Comment