February 12, 2009
ರಚನೆ : ವಿಜಯ ದಾಸರು
ಪಲ್ಲವಿ
ಕೈಲಾಸ ವಾಸ ಗೌರೀಶ ಈಶ
ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ||
ಅಹೋರಾತ್ರಿಯಲ್ಲಿ ನಾನು ಅನುಜರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೋ ಮಹದೇವನೇ
ಅಹಿಭೂಶಣನೆ ಎನ್ನ ಅವಗುಣಗಳೆಣಿಸದಲೇ
ವಿಹಿತಧರ್ಮದಲಿಡು ವಿಷ್ಣು ಭಕುತಿಯನು ಕೊಡು ಶಂಭೋ|೧|
ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ
ಧನುಜಗತ ಮದಹಾರಿ ದಂಡ ಪ್ರಣಾಮವ ಮಾಡ್ಪೆ
ಮಣಿಸು ಈ ಶಿರವ ಸಜ್ಜನ ಚರಣ ಕಮಲದಲ್ಲಿ ಶಂಭೋ|೨|
ಭಾಗೀರಥಿಧರನೆ ಭಯವ ಪರಿಹರಿಸಯ್ಯ
ಲೇಸಾಗಿ ನೀ ಸಲಹೊ ಸಂತತ ಸರ್ವದೇವ
ಭಾಗವತಗಳ ಪ್ರಿಯ ವಿಜಯ ವಿಠಲನಂಘ್ರಿ
ಜಾಡು ಮಾಡದೆ ಭಜಿಪ ಭಾಗ್ಯವನು ಕೊಡು ಶಂಭೋ|೩|
2.AudioLink by Balamuralikrishna(song 1)
3.AudioLink by Pt.Bhimsen Joshi
4 comments:
Thanks for the lyrics. I was wanting to sing this song badly one night, but cud not find the lyrics elsewhere, but here.
May GOWREESHA bless you with appropriate punya. Thanks again.
Bahala thanks for the lyrics...I have been searching for this in Kannada as it has to be read in Kannada get the essence of the beauty...
thanks a ton for d song kailasavasa.To know which raaga it is ,what do i do
Thanks. At every age, you can love these bhajans for different reasons. I used to just the music and Bhimsen Joshi's aggressive rendition and the fact that it inspired me to study well, when I was younger. Now, with middle age around the corner, I am appreciating the timeless words spoken by Vijaya Daasaru. I am able to sense the overflowing bhakti rasa in Pt. Bhimsen Joshi's rendition.
Post a Comment