Welcome to my Blog.I hope you enjoy the music.Please leave your comments and suggestions. Thankyou :)
All songs posted here have audio links!!

Anandamayage Chinmayage aarati ettire / ಆನಂದಮಯಗೆ ಚಿನ್ಮಯಗೆ

November 29, 2009


ರಚನೆ : ವಾದಿರಾಜರು

ಆನಂದಮಯಗೆ ಚಿನ್ಮಯಗೆ
ಶ್ರೀಮನ್ನಾರಾಯಣಗೆ ಆರತಿ ಎತ್ತಿರೆ

ವೇದವ ತಂದು ಬೆಟ್ಟವ ಪೊತ್ತು ಧರಣೀಯ
ಸಾಧಿಸಿ ಕಂಭದಿ ಬಂದವಗೆ
ಭೂದಾನವ ಬೇಡಿ ನೃಪರ ಸಂಹರಿಸಿದ
ಆದಿ ಮೂರುತಿಗೆ ಆರತಿ ಎತ್ತಿರೆ

ಇಂದುವದನೆ ಸೀತೆ ಸಹಿತಲರಣ್ಯದಿ
ನಂದಗೋಕುಲದಲ್ಲಿ ನಲಿದವಗೆ
ಮಂದಗಮನೆಯರ ಮುಂದೆ ನಿರ್ವಾಣದಿ
ನಿಂದ ಮೂರುತಿಗೆ ಆರತಿ ಎತ್ತಿರೆ

ತುರಗವನೇರಿ ದೈತ್ಯರ ಸೀಳಿ ಸುಜನರ
ಪೊರೆವ ಮಂಗಳ ಹಯವದನನಿಗೆ
ವರದ ಯಾದವಗಿರಿ ಆದಿ ನಾರಾಯಣ
ಚರಣ ಕಮಲಕೆ ಆರತಿ ಎತ್ತಿರೆ


1.Audio Link by Vidya Bhushana

2.Audio Link by Narasimha Nayak (song 4)

Pankaja Mukhiyarellaru bandu / ಲಕ್ಷ್ಮೀ ವೆಂಕಟರಮಣಗೆ ಆರತಿ

November 20, 2009


ರಚನೆ : ಪುರಂದರ ದಾಸರು
(ಲಕ್ಷ್ಮೀ ವೆಂಕಟರಮಣ/ದಶಾವತಾರ ಆರತಿ)


ಪಲ್ಲವಿ:
ಪಂಕಜ ಮುಖಿಯರೆಲ್ಲರು ಬಂದು ಲಕ್ಷ್ಮೀ ವೇಂಕಟರಮಣಗಾರತಿ ಎತ್ತಿರೆ

ಚರಣ:
ಮತ್ಸ್ಯಾವತಾರಗೆ ಮಂದರೋದ್ಧಾರಗೆ ಅಚ್ಚರಿಯಿಂದ ಭೂಮಿ ತಂದವಗೆ
ಹೆಚ್ಚಾದ ಉಕ್ಕಿನ ಕಂಭದಿಂದಲಿ ಬಂದ ಲಕ್ಷ್ಮೀ ನರಸಿಂಹಗಾರತಿ ಎತ್ತಿರೆ(1)


ವಾಮನ ರೂಪಲಿ ದಾನ ಬೇಡಿದವಗೆ ಪ್ರೇಮದಿ ಕೊಡಲಿಯ ಪಿಡಿದವಗೆ

ರಾಮಚಂದ್ರನಾಗಿ ದಶ ಶಿರನನು ಕೊಂದ ಸ್ವಾಮಿ ಶ್ರೀ ಕೃಷ್ಣಗಾರತಿ ಎತ್ತಿರೆ(2)


ಬತ್ತಲೆ ನಿಂತಗೆ ಬೌದ್ಧಾವತಾರಗೆ ಉತ್ತಮ ಅಶ್ವನೇರಿದಗೆ
ಭಕ್ತರ ಸಲಹುವ ಪುರಂದರ ವಿಠಲಗೆ ಮುತ್ತೈದೆಯರಾರತಿ ಎತ್ತಿರೆ(3)

Lakshmi Venkataramana aarati / Dashavatara aarti

1.Audio link by Balamurali Krishna

2.Audio Link by Vidya Bhushana

Jagadoddharana adisidalu yashoda / ಜಗದೋದ್ಧಾರನ ಆಡಿಸಿದಳು ಯಶೋದ

November 12, 2009


Composer : Purandara Daasa
Language : Kannada
Raaga : Kaapi


1.Audio Link by M.S.Subbalakshmi
2.Audio Link by Unnikrishnan
3.Audio Link by Rajkumar Bharati


ಜಗದೋದ್ಧಾರನ ಆಡಿಸಿದಳೆಶೋದಾ
ಜಗದೋದ್ಧಾರನ (ಪ)

ಜಗದೋದ್ಧಾರನ ಮಗನೆಂದು ತಿಳಿಯುತ
ಸುಗುಣಾಂತ ರಂಗನ ಆಡಿಸಿದಳೆಶೋದೆ (ಅ ಪ)

ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆಡಿಸಿದಳೆ
ಯಶೋದೆ (1)

ಅಣೋರಣೀಯನ ಮಹತೋ ಮಹಿಮನ
ಅಪ್ರಮೇಯನ ಆಡಿಸಿದಳೆಶೋದಾ (2)

ಪರಮ ಪುರುಷನ ಪರವಾಸುದೇವನ
ಪುರಂದರ ವಿಠಲನ ಆಡಿಸಿದಳೆಶೋದಾ (3)

------------------------------------------------------------
Pallavi
jagadoddhArana aaDisidaLu yashode

Anupallavi
jagadodhArana maganendu tiLiyuta
suguNAnta ranganA AdisidaLe yashoda

charaNa
nigamakE silukada agaNita mahimana
magugaLa mANikyana ADisidaLu yashoda (1)

aNOraNIyana mahato mahimana
apramEyana ADisidaLeshoda (2)

parama puruShana paravAsudEvana
purandara vittalana ADisidaLu yashode (3)

Kanakadasa Jayanti / ಕನಕದಾಸರ ಜಯಂತಿ

November 5, 2009

ಇಂದು ಕನಕದಾಸರ ಜಯಂತಿ. ಕನಕ ದಾಸರ ಬಗ್ಗೆ ಹೋದ ವರುಷ ಬರೆದ ಬರಹ ಮತ್ತು ಹಾಡುಗಳು ಕೆಳಗಿವೆ.

1.Kanakadasa Jayanthi

2.Songs by Kanaka Daasaru with lyrics

ಇನ್ನಷ್ಟು ಕನಕದಾಸರ ದೇವರನಾಮಗಳು :

ಮರೆಯದಿರು
ನೀ ಮಾಯೆಯೊಳಗೋ
ಜಪವ ಮಾಡಿದರೇನು
ಕುಲ ಕುಲ ಎನ್ನುತಿಹರು
ಮುತ್ತು ಬಂದಿದೆ ಕೇರಿಗೆ
ಏಳು ನಾರಾಯಣನೇ
ಎಲ್ಲಾರು ಮಾಡುವುದು
ಭಜಿಸಿ ಬದುಕೆಲೊ ಮಾನವ
ಹೂವ ತರುವರ ಮನೆಗೆ
ಏನೆಂದು ಕೊಂಡಾಡಿ ಸ್ತುತಿಸಲೋ
ಈಶ ನಿನ್ನ ಚರಣ ಭಜನೆ

ಸಂಗೀತವನ್ನು ಆನಂದಿಸಿ :)

First Anniversary of Bhakthi Geetha / ಭಕ್ತಿ ಗೀತ ಬ್ಲಾಗಿಗೆ ಈಗ 1 ವರ್ಷ!!

November 1, 2009

ಸ್ನೇಹಿತರೇ ,

ನನ್ನ ಬ್ಲಾಗ್ ಶುರು ಮಾಡಿ ಇವತ್ತಿಗೆ 1 ವರ್ಷ ಆಯಿತು. ಈ ಸಂದರ್ಭದಲ್ಲಿ ಓದುಗರಿಗೆಲ್ಲ ಧನ್ಯವಾದ ಹೇಳಕ್ಕೆ ಇಷ್ಟ ಪಡ್ತೀನಿ.

ಭಕ್ತಿ ಗೀತ ಬ್ಲಾಗಿಗೆ ಭೇಟಿ ನೀಡಿದ ಎಲ್ಲರಿಗೂ ನನ್ನ ಅನಂತ ಧನ್ಯವಾದಗಳು!!!
ಇಲ್ಲಿಗೆ ಮತ್ತೆ ಬರುತ್ತಾ ಇರಿ, ನಿಮ್ಮ ಅಭಿಪ್ರಾಯ , ಸಲಹೆಗಳನ್ನ ನನಗೆ ಖಂಡಿತ ತಿಳಿಸಿ.
ಮತ್ತೊಮ್ಮೆ ಧನ್ಯವಾದಗಳು:)

Some numbers for you:
  • 70 songs - both lyrics and audio links
  • 15000 Hits


Thanks a lot for your support and appreciation :)

stat

Counter

Blog Widget by LinkWithin
 
Bhakthi Geetha / ಭಕ್ತಿ ಗೀತೆಗಳು - by Templates blogger