February 22, 2010
Composer : Vijaya Daasa
ಪವಮಾನ ಪವಮಾನ ಜಗದಾ ಪ್ರಾಣಾ
ಸಂಕರುಷಣ ಭವಭಯಾರಣ್ಯ ದಹನ |ಪ|
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಗಳ ಪ್ರಿಯ ||
ಹೇಮ ಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿ ವರ್ಗ ರಹಿತ
ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ ರಾಮಚಂದ್ರನ ನಿಜದೂತ
ಯಾಮ ಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರ ಮತಿಯನು ನೀ ಮಾಣಿಪುದು |1|
ವಜ್ರ ಶರೀರ ಗಂಭೀರ ಮುಕುಟಧರ ದುರ್ಜನವನ ಕುಠಾರ
ನಿರ್ಜರ ಮಣಿದಯಾ ಪಾರ ವಾರ ಉದಾರ ಸಜ್ಜನರಘವ ಪರಿಹಾರ
ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು
ಮೂರ್ಜಗವರಿವಂತೆ ಗರ್ಜನೆ ಮಾಡಿದಿ
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ
ಮಾರ್ಜನದಲಿ ಭವ ವರ್ಜಿತನೆನಿಸೊ |2|
ಪ್ರಾಣ ಅಪಾನ ವ್ಯಾನೋದಾನ ಸಮಾನ ಆನಂದ ಭಾರತಿ ರಮಣ
ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ ಜ್ಞಾನಧನ ಪಾಲಿಪ ವರೇಣ್ಯ
ನಾನು ನಿರುತದಲಿ ಏನೇನೆಸಗಿದೆ
ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ
ಪ್ರಾಣನಾಥ ಸಿರಿವಿಜಯವಿಠಲನ
ಕಾಣಿಸಿ ಕೊಡುವದು ಭಾನು ಪ್ರಕಾಶ |3|
------------------------------------------------------------------------------------
pavamAna pavamAna jagadaa prANA sankaruShaNa
bhavabhayAraNya dahana ||
shravaNave modalAda navavidha bhakutiya
tavakadindali koDu kavigaLa priya ||
hEma kachchuTa upavIta dharipa mAruta
kAmAdi varga rahita
vyOmAdi sarvavyAputa satata nirbhIta
rAmachaMdrana nijadUta
yAma yAmake ninnArAdhipudake
kAmipe enagidu nEmisi pratidina
ee manasige suKastOmava tOruta
pAmara matiyanu nI mANipudu
vajra sharIra gaMbhIra mukuTadhara durjanavana kuThAra
nirjara maNidayA pAra vAra udAra sajjanaraghava parihAra
arjunagolidandu dhvajavAnisi nindu
mUrjagavarivante garjane mADidi
hejje hejjege ninna abja pAdada dhULi
mArjanadali bhava varjitaneniso
prANa apAna vyAnOdAna samAna Ananda bhArati ramaNa
neene sharvAdi gIrvANAdyamararige gnAnadhana pAlipa vareNya
nAnu nirutadali yenenesagide
mAnasAdi karma ninagoppisideno
prANanAtha sirivijayaviThalana
kANisi koDuvadu bhAnu prakAsha
1.Audio Link by RajKumar Bharati
2.Audio Link by Anantha Kulkarni
4 comments:
ತುಂಬಾ ಚೆನ್ನಾಗಿದೆ. ಹಾಡುಗಳು ಸೊಗಸಾಗಿವೆ. ಹೀಗೆಯೇ ಇನ್ನೂ ಹಲವು ಭಕ್ತಿಗೀತೆಗಳನ್ನು ಹಾಕಿ. ನನ್ನ ಬ್ಲಾಗ್ vedasudhe.blogspot.com ಯಲ್ಲಿ ಕೆಲವು ವೇದ ಮಂತ್ರಗಳನ್ನು ಹಾಗೂ ಉಪನ್ಯಾಸಗಳನ್ನು ಹಾಕಬೇಕಿದೆ . ಅದರ ವಿಧಾನ ತಿಳಿಸುವ ಕೃಪೆಮಾಡುವಿರಾ?
ನಮಸ್ತೆ
ಹರಿಹರಪುರಶ್ರೀಧರ್
ಶ್ರೀಧರ್ ಅವರೇ,
ನಿಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದ್ದಕ್ಕೆ ಧನ್ಯವಾದಗಳು.ನಿಮ್ಮ ಬ್ಲಾಗಿನಲ್ಲಿ ವೇದ ಮಂತ್ರಗಳನ್ನು ಪ್ರಕಟಿಸಲು,ನನ್ನಿಂದ ಏನು ವಿವರ ಬೇಕು ಅಂತ ನನಗೆ ಸರಿಯಾಗಿ ಗೊತ್ತಾಗುತ್ತಿಲ್ಲ.ನಿಮಗೆ ಏನು ಮಾಹಿತಿ,ವಿವರ ಬೇಕು ಎಂದು ಇನ್ನೊಮ್ಮೆ ಸ್ಪಷ್ಟ ಪಡಿಸಿ.ನಾನು ನಿಮಗೆ ಆ ಮಾಹಿತಿಯನ್ನು ಕಳಿಸುತ್ತೀನಿ. ನಿಮ್ಮ ಹೊಸ ಬ್ಲಾಗಿಗೆ ನನ್ನ ಶುಭ ಹಾರೈಕೆಗಳು.
ಧನ್ಯವಾದ.
I Need word to word translation of this song.
Mahesh Ramaswamy
ಎಂಥ ಸೊಗಸಾದ ಹಾಡು,ಈ ಹಾಡನ್ನು ಪ್ರಕಟಿಸಿದಕ್ಕಾಗಿ ಧನ್ಯವಾದಗಳು.
Post a Comment