Welcome to my Blog.I hope you enjoy the music.Please leave your comments and suggestions. Thankyou :)
All songs posted here have audio links!!

Bhagyada Lakshmi baramma / ಭಾಗ್ಯದ ಲಕ್ಷ್ಮಿ ಬಾರಮ್ಮ

December 13, 2008

ರಚನೆ : ಪುರಂದರದಾಸ
ರಾಗ: ಮಧ್ಯಮಾವತಿ
ತಾಳ : ಆದಿ

ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮಮ್ಮಾ ಶ್ರೀ

ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ


ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ
ಗೆಜ್ಜೆ ಕಾಲ್‌ಗಳ ಧ್ವನಿಯ ತೋರುತ
ಸಜ್ಜನ ಸಾಧು ಪೂಜೆಯ ವೇಳೆಗೆ
ಮಜ್ಜಿಗೆಯೊಳಗಿನ ಬೆಣ್ಣೆಯಂತೆ

ಕನಕ ವೃಷ್ಟಿಯ ಕರೆಯುತ ಬಾರೆ
ಮನಕಾಮನೆಯ ಸಿದ್ಧಿಯ ಅವರ
ದಿನಕರ ಕೋಟಿ ತೇಜದಿ ಹೊಳೆಯುವ
ಜನಕರಾಯನ ಕುಮಾರಿ ಬೇಗ

ಶಂಕೆ ಇಲ್ಲದ ಭಾಗ್ಯವ ಕೊಡಲು
ಕಂಕಣ ಕೈಯ ತಿರುವುತ ಬಾರೆ
ಕುಂಕುಮಾಂಕಿತೆ ಪಂಕಜ ಲೋಚನೆ
ವೆಂಕಟರಮಣನ ಬಿಂಕದ ರಾಣಿ

ಅತ್ತಿತ್ತಗಲದೆ ಭಕ್ತರ ಮನೆಯೊಳು
ನಿತ್ಯ ಮಹೋತ್ಸವ ನಿತ್ಯ ಸುಮಂಗಲ
ಸತ್ಯದಿ ತೋರುತ ಸಾಧು ಸಜ್ಜನರಾ
ಚಿತ್ತದಿ ಹೊಳೆಯುವ ಪುತ್ತಳಿ ಗೊಂಬೆ

ಸಕ್ಕರೆ ತುಪ್ಪದ ಕಾಲುವೆ ಹರಿಸಿ
ಶುಕ್ರವಾರದ ಪೂಜೆಯ ವೇಳೆಗೆ
ಅಕ್ಕರೆಯುಳ್ಳ ಆಳಗಿರಿ ರಂಗನ
ಚೊಕ್ಕ ಪುರಂದರವಿಠಲನ ರಾಣಿ

Audio by M.S.Subblakshmi

Audio by Vidyabhushana(song1)

Audio by Bhimsen Joshi


Datta Tumahi Maata Pita / ದತ್ತ ತುಮಹಿ ಮಾತ ಪಿತ

December 10, 2008

ರಚನೆ:ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ.

ದತ್ತ
ತುಮಹಿ ಮಾತಾ ಪಿತ
ತುಮಹಿ ಮೀರೆ ಬಂಧು ಸಖ
ಚರಣ ಶರಣ ಮುಜಕೋ ದೇನಾ
ಅಪನೀ ಕೃಪಾ ಸೇ||

ದತ್ತ ತುಮಹಿ ದೀನ ದಾತ
ಜಗಕೆ ಆದಿ ಜಗಕೆ ಅಂತ
ಚರಣ ಶರಣ ಮುಜಕೋ ದೇನಾ
ಅಪನೀ ಕೃಪಾ ಸೇ||

ಬ್ರಹ್ಮ ತುಮಹಿ ವಿಷ್ಣು ತುಮಹಿ
ಮಹಾದೇವ ತುಮಹಿ ಪ್ರಭೋ
ಚರಣ ಶರಣ ಮುಜಕೋ ದೇನಾ
ಅಪನೀ ಕೃಪಾ ಸೇ||

ಸಚ್ಚಿದಾನಂದ ಪತಿತ ಪಾವನ
ಭಕ್ತೋಂಕೆ ಜೀವನ ಧನ
ಚರಣ ಶರಣ ಮುಜಕೋ ದೇನಾ
ಅಪನೀ ಕೃಪಾ ಸೇ||

ಜೈ ಗುರು ದತ್ತ
ಶ್ರೀ ಗುರು ದತ್ತ||
================================

datta tumahi maataa pita
tumahi mere bandhu sakha
charana sharana mujhko dena
apni krupa se||

datta tumahi deena daata
jagake aadi jagake anta
charana sharana mujhko dena
apni krupa se||

brahm tumahi vishnu tumahi
mahaadeva tumahi prabhoo
charana sharana mujhko dena
apni krupase||

sachchidaananda patita paavana
bhaktonke jeevana dhana
charana sharana mujhko dena
apni krupa se||

jai guru datta
shri guru datta||

Listen to the song in Ganapathi Sachchidananda Swamiji's voice



Dasana MaDiko Enna / ದಾಸನ ಮಾಡಿಕೊ ಎನ್ನ

December 4, 2008

ರಾಗ: ನಾದನಾಮಕ್ರಿಯ
ತಾಳ: ಆದಿ

ರಚನೆ
: ಪುರಂದರ ದಾಸರು

ದಾಸನ ಮಾಡಿಕೊ ಎನ್ನ ಸ್ವಾಮಿ
ಸಾಸಿರ ನಾಮದ ವೆಂಕಟರಮಣ

ದುರ್ಬುದ್ಧಿಗಳನೆಲ್ಲ ಬಿಡಿಸೊ ನಿನ್ನ
ಕರುಣ-ಕವಚವೆನ್ನ ಹರಣಕೆ ತೊಡಿಸೊ
ಚರಣಸೇವೆ ಎನಗೆ ಕೊಡಿಸೊ ಅಭಯ
ಕರ ಪುಷ್ಪವ ಎನ್ನ ಶಿರದಲ್ಲಿ ಮುಡಿಸೊ ||೧||

ದೃಢಭಕ್ತಿ ನಿನ್ನಲ್ಲಿ ಬೇಡಿ ನಾ
ಅಡಿಗೆರಗುವೆನಯ್ಯ ಅನುದಿನ ಪಾಡಿ
ಕಡೆಗಣ್ಣಲೇಕೆನ್ನ ನೋಡಿ ಬಿಡುವೆ
ಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ ||||

ಮೊರೆಹೊಕ್ಕವರ ಕಾಯುವ ಬಿರುದು ಎನ್ನ
ಮರೆಯದೆ ರಕ್ಷಣೆ ಮಾಡಯ್ಯ ಪೊರೆದು
ದುರಿತಗಳೆಲ್ಲವ ತರಿದು ಸಿರಿ
ಪುರಂದರ ವಿಠಲ ಎನ್ನನು ಪೊರೆದು ||೩||

M.S.Subbalakshmi ಅವರು ಸುಮಧುರವಾಗಿ ಹಾಡಿರುವುದನ್ನು ಕೇಳಿ, ನೋಡಿ , ಆನಂದಿಸಿ.

Satyavantara Sangaviralu / ಸತ್ಯವಂತರ ಸಂಗವಿರಲುd

November 27, 2008

ರಚನೆ: ಕನಕದಾಸರು

ಸತ್ಯವಂತರ ಸಂಗವಿರಲು ತೀರ್ಥವೇತಕೆ
ನಿತ್ಯ ಜ್ಞಾನಿಯಾದ ಮೇಲೆ ಚಿಂತೆ ಯಾತಕೆ||||

ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ
ಮಾನ ಹೀನನಾಗಿ ಬಾಳ್ವ ಮನುಜನೇತಕೆ
ಜ್ಞಾನವಿಲ್ಲದೇ ನೂರು ಕಾಲ ಬದುಕಲೇತಕೆ
ಮಾನಿನಿಯ ತೊರೆದವಗೆ ಭೋಗವೇತಕೆ||||

ಮಾತು ಕೇಳದೆ ಮಲತು ನಡೆವ ಮಕ್ಕಳೇತಕೆ
ಪ್ರೀತಿ ಇಲ್ಲದೆ ಎಡೆಯನಿಕ್ಕಿದ ಅನ್ನವೇತಕೆ
ನೀತಿಯರಿತು ನಡೆಯದಿರುವ ಬಂಟನೇತಕೆ
ಸೋತು ಹೆಣ್ಣಿಗೆ ಹೆದರಿ ನಡೆವ ಪುರುಷನೇತಕೆ||||

ಸಂಜ್ಞೆಯರಿತು ನಡೆಯದಿರುವ ಸತಿ ಇದ್ದೇತಕೆ
ಮುನ್ನ ಕೊಟ್ಟು ಪಡೆಯದನ್ನು ಬಯಸಲೇತಕೆ
ಮನ್ನಣೆಯ ನಡೆಸದಿರುವ ದೊರೆಯು ಏತಕೆ
ಚೆನ್ನ ಆದಿ ಕೇಶವನಲ್ಲದ ದೈವವೇತಕೆ ||||



AudioLink by Sri VidyaBhushana(song 7)

Narayana Ninna / ನಾರಾಯಣ ನಿನ್ನ ನಾಮದ

November 23, 2008


ರಾಗ : ಶುದ್ಧಧನ್ಯಾಸಿ
ತಾಳ : ಖಂಡ ಛಾಪು
ರಚನೆ
: ಪುರಂದರ ದಾಸರು

ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವೆನ್ನ
ನಾಲಿಗೆಗೆ ಬರಲಿ||ಪ ||

ಕೂಡುವಾಗಲಿ ನಿಂತಾಡುವಾಗಲಿ ಮತ್ತೆ ಹಾಡುವಾಗಲಿ
ಹರಿದಾಡುವಾಗಲಿ
ಕೋಟಿ ವಿನೋದದಿ ನೋಡದೆ ನಾ ಮಾಡಿದ ಪಾಪ ಬಿಟ್ಟೋಡಿ ಹೋಗೊಹಾಗೆ||

ಊರಿಗೆ ಹೋಗಲಿ ಊರೊಳಗಿರಲಿ ಹಗೆಬಂದಗಲಿ ಕಾದಿರಲಿ
ವಾರಿಜನಾಭ ನರಸಾರಥಿ ಸನ್ನುತ ಸಾರಿ ಸಾರಿಗೆ ನಾ ಬೀಸರದಾಗೆ||

ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ ಎಷ್ಟಾದರೂ ಮತಿಕೆಟ್ಟು ಇರಲಿ
ಕೃಷ್ಣ
ಕೃಷ್ಣ ಎಂದು ಶಿಷ್ಟರು ಪೇಳುವ ಅಷ್ಟಾಕ್ಷರ ಮಹಾ ಮಂತ್ರದ ನಾಮವ ||

ಸಂತತ ಹರಿ ನಿನ್ನ ಸಾಸಿರ ನಾಮವು ಅಂತರಂಗದ ಒಳಗಿರಿಸಿ
ಎಂತೋ ಪುರಂದರ ವಿಠ್ಠಲ ರಾಯನ ಅಂತ್ಯ ಕಾಲದಲ್ಲಿ ಚಿಂತಿಸೋ ಹಾಗೆ
||

AudioLink by Bombay Jayashri

AudioLink by Sangeetha Sivakumar

Sudha Ragunathan - ಅವರು ಹಾಡಿರುವುದನ್ನು ಕೇಳಿ ,ನೋಡಿ.


Kanakadasa Jayanthi / ಕನಕದಾಸ ಜಯಂತಿd

November 15, 2008

ಇಂದು ಕನಕದಾಸರ ಜಯಂತಿ. ಕನಕ ದಾಸರ ಹೆಸರು ಕನ್ನಡಿಗರಿಗೇನು ಹೊಸದಲ್ಲ. ಇವರ ಕೀರ್ತನೆಗಳನ್ನು ನಾವೆಲ್ಲ ಕೇಳಿಯೇ ಇರುತ್ತೀವಿ. ಕನಕದಾಸರು ಹಾಗು ಅವರ ಅಮೂಲ್ಯ ಕೊಡುಗೆಯ ಸ್ಮರಣೆಯಲ್ಲಿ ಈ ಲೇಖನವನ್ನು ಬರೆದಿದ್ದೀನಿ.

ಕನಕದಾಸರು (1509-1609) ಕರ್ಣಾಟಕದ ಹೆಸರಾಂತ ಕವಿ, ಸಂಗೀತಗಾರ, ವಾಗ್ಗೇಯಕಾರರು, ವೇದಾಂತಿಗಳು. ಇವರುದ್ವೈತ ಮದ್ವ ತತ್ವವನ್ನು ತಮ್ಮ ರಚನೆಗಳಲ್ಲಿ ಅಳವಡಿಸಿ , ಹಾಡಿ ಜನರಿಗೆ ಪ್ರಚಾರ ಮಾಡಿದರು. ಇವರು ಸುಮಾರು ೨೫೦ ಕೃತಿಗಳನ್ನು ರಚಿಸಿದ್ದಾರೆ. ನಳಚರಿತ್ರೆ , ಹರಿಭಕ್ತಿಸಾರ, ರಾಮಧಾನ್ಯಚರಿತೆ, ಮೋಹನತರ೦ಗಿಣಿ,ನೃಸಿ೦ಹಾಷ್ಟವ- ಇವು ಪ್ರಮುಖರಚನೆಗಳು. ಕನಕದಾಸರ ಊರು ಹಾವೇರಿ ಜಿಲ್ಲೆಯ ಕಾಗಿನೆಲೆ. ಇವರ ಕಾಗಿನೆಲೆ ಆದಿಕೇಶವ ಎಂಬ ಅಂಕಿತವನ್ನು ತಮ್ಮಕೀರ್ತನೆಗಳಲ್ಲಿ ಉಪಯೋಗಿಸಿದ್ದಾರೆ.

ತಿಮ್ಮಪ್ಪನಾಯಕ ಇವರ ಮೊದಲಿನ ಹೆಸರು. ಇವರು ದಂಡನಾಯಕನಾಗಿದ್ದು ಯಾವುದೋ ಯುಧ್ಧದಲ್ಲಿ ತೀವ್ರ ಗಾಯವಾದರೂ ,ಬದುಕುಳಿದರಂತೆ. ಇದಾದ ನಂತರ ಅವರು ಯುದ್ಧವನ್ನು ಬಿಟ್ಟು , ದೇವರ ಧ್ಯಾನದಲ್ಲಿ ತೊಡಗಿದರು ಎಂದು ಹೇಳುತ್ತಾರೆ. ಸೋತ ಶ್ರೀ ವ್ಯಾಸರಾಯರು ಇವರನ್ನು ತಮ್ಮ ಶಿಷ್ಯನಾಗಿ ಮಾಡಿಕೊಂಡು ಕನಕದಾಸಎಂದು ಹೆಸರಿಟ್ಟರು. ಇವರ ಕೀರ್ತನೆಗಳು ಆ ಕಾಲದ ದಿನ ನಿತ್ಯ ಜೀವನದ ಸಂಗತಿಗಳನ್ನು ನಿರೂಪಿಸುತ್ತದೆ. ಜಾತಿಪದ್ಧತಿಯ ತಾರತಮ್ಯಗಳನ್ನು ಖಂಡಿಸಿದ್ದಾರೆ.ಬರೀ ಸಂಪ್ರದಾಯದ ಆಚರಣೆಗಳು ನಿಷ್ಪ್ರಯೋಜಕ, ನೈತಿಕ ಮೌಲ್ಯಗಳನ್ನು ಬೆಲೆಸಿಕೊಳ್ಳುವುದುಮುಖ್ಯ ಎಂದು ಕನಕದಾಸರು ಹೇಳುತ್ತಾರೆ.

ಕುರುಬ ಜನಾಂಗಕ್ಕೆ ಸೇರಿದ ಇವರಿಗೆ ಉಡುಪಿಯ ದೇವಸ್ಥಾನದಲ್ಲಿ ಅವರಿಗೆ ಪ್ರವೇಶ ದೊರೆಯದಿದ್ದಾಗ, ದೇವಸ್ಥಾನದ ಹಿ೦ದೆ ನಿ೦ತು "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ" ಎಂದು ಹಾಡತೊಡಗಿದರ೦ತೆ . ಆಗ ದೇವಸ್ಥಾನದ ಹಿಂದಿನ ಗೋಡೆ ಒಡೆದು ಶ್ರೀ ಕೃಷ್ಣನು ದರ್ಶನ ಕೊಟ್ಟನಂತೆ. ಈ ಬಿರುಕಾದ ಗೋಡೆಯನ್ನು ಕನಕನ ಕಿಂಡಿ ಎ೦ದು ಕರೆಯಲಾಗಿದೆ. ಈಗಲೂ ಉಡುಪಿ ಕೃಷ್ಣನ ದೇವಸ್ಥಾನದಲ್ಲಿ ಇದನ್ನು ನೋಡಬಹುದು.

ಇವರ ದೇವರನಾಮಗಳು ಕರ್ನಾಟಕ ಸಂಗೀತ ಹಾಗು ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಹಾಡನ್ನು ಇಂದಿಗೂ ನಾವೆಲ್ಲಕೇಳುತ್ತೀವಿ, ಹಾಡುತ್ತೀವಿ. ಇವರು ಕೊಟ್ಟಿರುವ ಸಂದೇಶ ಇಂದಿಗೂ ಪ್ರಸ್ತುತ.

ಕನಕದಾಸ ಜಯಂತಿ ಪ್ರಯುಕ್ತ ನನ್ನ
ಬ್ಲಾಗಿನಲ್ಲಿ ಕನಕದಾಸರ ಕೆಲವು ದೇವರನಾಮಗಳನ್ನು, ಸಾಹಿತ್ಯ ಹಾಗು ಸಂಗೀತ ಎರಡನ್ನೂ ಹಾಕಿದ್ದೀನಿ.

ಕನಕದಾಸರ ದೇವರನಾಮಗಳನ್ನು ಸಂಗೀತಗಾರರು ಸುಮುಧುರವಾಗಿ ಹಾಡಿದ್ದಾರೆ. ಕೆಲವು ಹಾಡುಗಳ ಧ್ವನಿ ಮುದ್ರಣ ಕೆಳಗಿದೆ. ಹಾಡನ್ನು ಕೇಳಲು ಹಾಡಿನ ಹೆಸರಿನ ಮೇಲೆ ಕ್ಲಿಕ್ ಮಾಡಿ.


ಇಂತಹ ಮಹನೀಯರ ಜನ್ಮ ದಿನವನ್ನು ಇಂದು ಆಚರಿಸುವುದಕ್ಕೆ ಹೆಮ್ಮೆ ಆಗುತ್ತೆ ಅಲ್ಲವೇ:)

Keshavanolumeyu / ಕೇಶವನೊಲುಮೆಯುd

November 14, 2008

ಕೇಶವನೊಲುಮೆಯು ಆಗುವ ತನಕ
ಹರಿ
ದಾಸರೊಳಿರುತಿರು ಹೇ ಮನುಜ||ಪ||

ಕ್ಲೇಶಪಾಶಂಗಳ ಹರಿದು ವಿಲಾಸದಿ
ಶ್ರೀಶನ ನುತಿಗಳ ಪೋಗಳುತ ಮನದೊಳು||ಅ.ಪ.||

ಮೋಸದಿ ಜೀವರ ಘಾಸಿ ಮಾಡಿದ ಪಾಪ ಕಾಶಿಗೆ ಹೋದರೆ ಹೋದೀತೇ
ಶ್ರೀಶನ ಭಕುತರ ದೂಷಿಸಿದ ಫಲ ಕಾಸು ಕೊಟ್ಟರೆ ಬಿಟ್ಟೀತೆ
ಭಾಷೆಯ ಕೊಟ್ಟು ನಿರಾಶೆಯ ಮಾಡಿದ ಫಲ ಕ್ಲೇಶವ ಗೊಳಿಸದೆ ಇಟ್ಟೀತೆ
ಭೂಸುರ ಸ್ವವ ಕ್ರಾಸ ಮಾಡಿದ ಫಲ ಏಸೇಸು ಜನುಮಕು ಬಿಟ್ಟೀತೆ||1||

ಜೀನನ ವಶದೊಳು ನಾನಾ ದ್ರವ್ಯವಿರೆ ದಾನ ಧರ್ಮಕೆ ಮನಸಾದೀತೇ
ಹೀನ ಮನುಜನಿಗೆ ಜ್ಞಾನವ ಭೋಧಿಸೆ ಹೀನ ವಿಷಯವಳಿ ಹೋದೀತೇ
ಮಾನಿನಿ ಮನಸು ನಿಧಾನವಿರದಿರೆ ಮಾನಾಭಿ ಮಾನಗಳು ಉಳಿದೀತೇ
ಭಾನುಪ್ರಕಾಶನ ಭಜನೆಯ ಮಾಡದ ಹೀನಗೆ ಮುಕುತಿಯು ದೊರಕೀತೆ||2||

ಕರುಣಾಮ್ರುತದಾಭರಣವ ಧರಿಸಿದ ಪರಮಗೆ ಸಿರಿಯು ತಪ್ಪೀತೆ
ಕರುಣಾ ಪಾಶದ ಉರವಣೆ ತೊರೆದಾತಗೆ ಶರಣರ ಕರುಣವು ತಪ್ಪೀತೆ
ಅರಿತು ಶಾಸ್ತ್ರವನು ಆಚರಿಪ ಯೋಗ್ಯಗೆ ಗುರು ಉಪದೇಶವು ತಪ್ಪೀತೆ
ವರವೇಲಾಪುರ ದಾದಿಕೇಶವನ ಸ್ಮರಿಸುವವನಿಗೆ ಮೋಕ್ಷ ತಪ್ಪೀತೆ||3||

AudioLink by Vidya Bhushana(song 8)

Daasa Daasara Maneya / ದಾಸದಾಸರ ಮನೆಯ

November 13, 2008

ರಾಗ : ಹಿಂದೋಳ
ರಚನೆ: ಕನಕದಾಸರು

ದಾಸದಾಸರ ಮನೆಯ ದಾಸಾನುದಾಸ ನಾನು

ಶ್ರೀಶ ಶ್ರೀರಂಗ ನಿಮ್ಮ ಮನೆಯ ದಾಸ ||ಪ||

ಕಾಳುದಾಸರ ಮನೆಯ ಆಳು ದಾಸ ನಾನಯ್ಯ
ಕೀಳುದಾಸನು ನಾನು ಕಿರಿಯ ದಾಸ
ಭಾಳಾಕ್ಷ ಮುಂತಾಗಿ ಭಜಿಪ ದೇವರ ಮನೆಯ
ಆಳಿನ ಆಳಿನ ಆಳಿನಡಿದಾಸ ನಾನು||೧||

ಪಂಕಜನಾಭನ ಮನೆಯ ಮುಂಕುದಾಸನಯ್ಯ
ಕೊಂಕುದಾಸನು ನಾನು ಕುರುಡು ದಾಸ
ಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ
ಬಂಕದ ಬಾಗಿಲ ಕಾಯ್ವ ಬಡದಾಸ ನಾನು ||೨||

ಹಲವು ದಾಸರ ಮನೆಯ ಹೊಲೆದಾಸ ನಾನಯ್ಯ
ಕುಲವಿಲ್ಲದ ದಾಸ ಕುನ್ನಿದಾಸ
ಮಲಹರ ರಂಗ ನಿನ್ನ ಮನೆಯ ಮಾದಿಗ ದಾಸ
ಸಲೆಮುಕ್ತಿ ಪಾಲಿಸೊ ಆದಿಕೇಶವರಾಯ| |೩||

AudioLink - by Kasaravalli Sisters

AudioLink - by S.Gayathri

AudioLink -
Sheshagirdas Raichur

Tallanisadiru / ತಲ್ಲಣಿಸದಿರು

ರಚನೆ : ಕನಕದಾಸರು

ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೆ ಸಂಶಯ ಬೇಡ ||

ಬೆಟ್ಟದ ತುದಿಯಲ್ಲಿ ಬೆಳದ ವೃಕ್ಷಗಳಿಗೆ
ಕಟ್ಟೆಯನು
ಕಟ್ಟಿ ನೀರೆರೆದವರು ಯಾರು
ಹುಟ್ಟಿಸಿದ ದೇವನು ತಾ ಹೊಣೆಗಾರನಾಗಿರಲು
ಗಟ್ಯಾಗಿ
ಸಲಹುವನು ಸಂಶಯವಿಲ್ಲ||1||

ಕಲ್ಲಿನೋಳ ಹುಟ್ಟಿರುವ ಕ್ರಿಮಿ ಕೀಟಗಳಿಗೆ
ಅಲ್ಲೇ
ಆಹಾರವನ್ನು ತಂದಿತ್ತವರು ಯಾರು
ಪುಲ್ಲಲೋಕಾನ ನಮ್ಮ ನೆಲಯಾದಿ ಕೇಶವನು
ಎಲ್ಲರನು
ಸಲಹುವನು ಇದಕೆ ಸಂಶಯವಿಲ್ಲ||2||

Sri VidyaBhushana ಅವರು ಹಾಡಿರುವುದನ್ನು ಕೇಳಿ - Audio link

Yadavaraya / ಯಾದವರಾಯ ಬೃಂದಾವನದೊಳುd

November 12, 2008

ರಚನೆ : ಕನಕದಾಸರು
ರಾಗ : ರಾಗಮಾಲಿಕೆ


ಯಾದವರಾಯ ಬೃಂದಾವನದೊಳು
ವೇಣು ನಾದವ ಮಾಡುತಿರೆ ಪ

ರಾಧಾ ಮುಂತಾದ ಗೋಪಿಯರೆಲ್ಲ
ಮಧುಸೂದನ ನಿನ್ನನು ಸೇವಿಸುತಿರೆ
ಸುರರು ಅಂಬರದಿ ಸಂದಣಿಸಿರೆ
ಅಪ್ಸರ ಸ್ತ್ರೀಯರು ಮೈ ಮರೆತಿರೇಅನುಪಲ್ಲವಿ

ಕರದಲಿ ಕೊಳಲನು ಊದುತ ಪಾಡುತ
ಸ ರಿ ಗ ಮ ಪ ದ ನಿ ಸ್ವರಗಳ ನುಡಿಸುತ
ಹರಿ ಹರ ಬ್ರಹ್ಮರು ನಲಿದಾಡುತಿರೆ
ತುಂಬುರು ನಾರದರು ಪಾಡುತಿರೆಚರಣ ೧

ಕರುಗಳ ಸಹಿತಲೇ ಗೋಕುಲವೆಲ್ಲಸಿರಿ ಕಾಗಿನೆಲೆಯಾದಿ ಕೇಶವ ರಾಯ
ತರುಗಳ ಸಹಿತಲೇ ವರಗೋಪಾಲಚರಣ ೨

1.AudioLink -M.L Vasantha Kumari ಅವರ ಧ್ವನಿಯಲ್ಲಿ ಕೇಳಿ
2.AudioLink - Sudha Raghunathan ಹಾಡಿದ್ದಾರೆ

3.Audio link by Vidya Bhushana

eetaneega vasudevanu / ಈತನೀಗ ವಾಸುದೇವನುd

November 10, 2008

ರಚನೆ: ಕನಕದಾಸರು

ಈತನೀಗ ವಾಸುದೇವನು ಲೋಕದೊಡೆಯ

ಈತನೀಗ ವಾಸುದೇವ ಸಮಸ್ತ
ಲೋಕದೊಡೆಯ

ದಾಸಗೊಲಿದು ತೇರಾ ನೇರಿ ತೇಜಿ ಪಿಡಿದು ನಡೆಸಿದಾತ


ಧನುಜೆಯಾಳ್ದನಣ್ಣನಯ್ಯನ
ಪಿತನ ಮುoದೆ ಕೌರವೇಂದ್ರನ
ಅನುಜೆಯಾಳಿದವನ ಶಿರವ
ಕತ್ತರಿಸುತಾ
ಅನುಜೆಯಾಳಿದವನ ಬೆಂಕಿ ಮುಟ್ಟದoತೆ
ಕಾಯ್ದ ರುಕ್ಮನ
ಅನುಜೆಯಾಳಿದವನ ಮೂರ್ತಿಯನ್ನು ನೋಡಿರೋ1

ಕ್ರೂರನಾದ
ಫಣಿಪ ಬಾಣ ತರಣಿಜನು ನಿರೀಕ್ಷಿಸಿ ಆಗ
ವೀರನೆಚ್ಚೆಯಸುಗೆ ಒಪ್ಪುತನ್ನು ವೀಕ್ಷಿಸಿ
ಧಾರಿಣಿಯ ಪದದೊಳoಗಿ ಚರಣ ಭಜಕ ನರನ
ಕಾಯ್ದ
ಭಾವಕಲ್ಪನಾದದೇವ ಈತ ನೋಡಿರೋ2


ವ್ಯೋಮಕೇಶಯಿಪ್ಪದೆಸೆಯ ಆ ಮಹಾಮಹಿಮೆಯುಳ್ಳ
ಸಾಮಜವನು ಏರಿ ಬರುವ ಶಕ್ತಿಯನೀಕ್ಷಿಸಿ
ಪ್ರೇಮದಿಂದ ಉರವನೊಡ್ಡಿ ಡಿoಗರಿಗನ ಕಾಯ್ದಾ
ಸಾರ್ವಭೌಮ ಬಡದಾದಿಕೇಶವನ್ನ
ನೋಡಿರೋ3


Sri VidyaBhushana ಅವರು ಹಾಡಿರುವುದನ್ನು ಕೇಳಿ
- Audio link(song 1)

ಕನ್ನಡ ಚಲನಚಿತ್ರ "ಭಕ್ತ ಕನಕದಾಸ" ದಲ್ಲಿ ಈ ಹಾಡನ್ನು ಚಿತ್ರ ಗೀತೆಯಾಗಿ ಅಳವಡಿಸಿದ್ದಾರೆ. P.B.Srinivas ಅವರ ಧ್ವನಿಯಲ್ಲಿ ಈ ಹಾಡನ್ನು ಕೇಳಿ.



Varava Kodu Enage Vagdevi / ವರವ ಕೊಡು ಎನಗೆ

November 9, 2008

ರಾಗ : ರಂಜನಿ
ರಚನೆ
: ಕನಕ ದಾಸರು


ವರವ ಕೊಡು ಎನಗೆ ವಾಗ್ದೇವಿ ನಿನ್ನ
ಚರಣ
ಕಮಲಂಗಳ ದಯಮಾಡು ದೇವಿ || ಪಲ್ಲವಿ ||

ಶಶಿ ಮುಖದ ನಸು ನಗೆಯ ಬಾಲೆ
ಎಸೆವ
ಕರ್ಣದ ಮುತ್ತಿನ ಓಲೆ

ನಸು
ವ ಸುಪಲ್ಲ ಗುಣಶೀಲೇ ದೇವಿ

ಬಿಸಜಾಕ್ಷಿ
ಎನ್ನ ಹೃದಯದೊಳು ನಿಂದು || ೧ ||

ಇಂಪು ಸೊಂಪಿನ ಚಂದ್ರ ಬಿಂಬೆ
ಕೆಂಪು ತುಟಿ ನಾಸಿಕದ ರಂಭೆ
ಜೋಂಪು ಮದನನ ಪೂರ್ಣ ಶಕ್ತಿ ಗೊಂಬೆ
ಸಂಪಿಗೆಯ ಮುಡಿದಿಟ್ಟ ವಿದ್ಯಾ || ೨ ||

ರವಿ ಕೋಟಿ ತೇಜ ಪ್ರಕಾಶೇ ಮಹಾ
ಕವಿಜನ
ಹ್ರಿತ್ಕಮಲ ವಾಸೇ

ಅವಿರಳ
ಪುರಿ ಕಾಗಿನೆಲೆಯಾದಿ

ಕೇಶವನ
ಸುತನಿಗೆ ಸನ್ನುತ ರಾಣಿವಾಸೆ || ೩ ||


Audio Link - ವಿದ್ಯಾಭೂಷಣರು ಕಲ್ಯಾಣಿ ರಾಗದಲ್ಲಿ ಹಾಡನ್ನು ಹಾಡಿದ್ದಾರೆ.

ನಾಗವಲ್ಲಿ ನಾಗರಾಜ್ ಅವರು ರಂಜನಿ ರಾಗದಲ್ಲಿ ಹಾಡಿರುವುದನ್ನು ಇಲ್ಲಿ ನೋಡಬಹುದು.


Baaro Krishnayya / ಬಾರೋ ಕೃಷ್ಣಯ್ಯ

November 8, 2008

ರಾಗ: ರಾಗಮಾಲಿಕ
ರಚನೆ : ಕನಕದಾಸರು
ತಾಳ: ಆದಿ

ಬಾರೋ
ಕೃಷ್ಣಯ್ಯ ಕೃಷ್ಣಯ್ಯ ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ ||ಪಲ್ಲವಿ||

ಬಾರೋ ನಿನ್ನ ಮುಖ ತೋರೋ ನಿನ್ನ ಸರಿ ಯಾರೋ ಜಗಧಾರ ಶೀಲನೇ ||ಅನುಪಲ್ಲವಿ||

ಅಂದುಗೆ ಪಾದವು ಕಾಲಂದುಗೆ ಕಿರು ಗೆಜ್ಜೆ ಧಿಂ ಧಿಮಿ ಧಿಮಿ ಧಿಮಿ ಧಿಮಿ ಎನುತ
ಪೊಂಗೊಳನುದುತ್ತ ಬರಿಯ ಬಾರಯ್ಯ || ||

ಕಂಕಣ ಕರದಲ್ಲಿ ಪೊನ್ನುಂಗುರ ಹೊಳೆಯುತ ಕಿಂಕಿಣಿ ಕಿಣಿ ಕಿಣಿ ಕಿಣಿ ಎನುತ
ಪೊಂಗೊಳಲನೂದುತ್ತ ಬಾರಯ್ಯ ಬಾರೋ ಕೃಷ್ಣಯ್ಯ || ೨ ||

ವಾಸ ಉಡುಪೀಲಿ ನೆಲೆಯಾದಿ ಕೇಶವನೇ ದಾಸ ನಿನ್ನ ಪದ ದಾಸ ನಿನ್ನ ಪದ
ದಾಸ ನಿನ್ನ ಪದ ದಾಸ ಕರೆವೆನು ಬಾರಯ್ಯ || ೩ ||

Audio Link - M.L.Vasantha kumari ಅವರು ಹಾಡಿದ್ದಾರೆ



Audio link - Nithyashree [song 2] ಹಾಡಿದ್ದಾರೆ

Baagilanu Teredu / ಬಾಗಿಲನು ತೆರೆದುd

November 6, 2008

ರಚನೆ: ಕನಕದಾಸರು

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ
ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ

ಪರಮಪದದೊಳಗೆ ವಿಷಧರನ ತಲ್ಪದಲಿ ನೀ
ಸಿರಿಸಹಿತ ಕ್ಷೀರವಾರುಧಿಯೊಳಿರಲು
ಕರಿರಾಜ ಕಷ್ಟದಲಿ ಆದಿಮೂಲಾ ಎಂದು
ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೇ ೧

ಕಡು ಕೋಪದಲಿ ಖಳನು ಖಡುಗವನು ಹಿಡಿದು
ನಿನ್ನೊಡೆಯನೆಲ್ಲಿಹನು ಎಂದು ನುಡಿಯೇ
ದೃಢ ಭಕಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆ
ಸಡಗರದಿ
ಕಂಭದಿಂದೊಡೆದೆಯೋ ನರಹರಿಯೇ೨

ಯಮಸುತನ ರಾಣಿಗೆ ಅಕ್ಷಯವಸನವಿತ್ತೆ
ಸಮಯದಲಿ ಅಜಮಿಳನ ಪೊರೆದೆ
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ
ಕಮಲಾಕ್ಷ ಕಾಗಿನೆಲೆಯಾದಿ ಕೇಶವನೆ೩

1.
Audio link (song 19) - Vidya Bhushana ಅವರು ಹಾಡಿದ್ದಾರೆ

2.ಕನ್ನಡದ ಚಲನಚಿತ್ರ "ಕನಕದಾಸ" ದಲ್ಲಿ ಹಾಡನ್ನು P.B.Srinivas ಅವರು ಸುಮಧುರವಾಗಿ ಹಾಡಿದ್ದಾರೆ,
ಡಾ.ರಾಜ್ ಅವರು ಸುಂದರವಾಗಿ ಅಭಿನಯಿಸಿದ್ದಾರೆ. ಅದನ್ನು ನೋಡಿ ಆನಂದಿಸಿ :)



Contact

If you have any requests, suggestions or comments, please email me or fill in the contact form below. I will reply as soon as possible.







Nammamma Sharade / ನಮ್ಮಮ್ಮ ಶಾರದೆ

November 5, 2008


ರಚನೆ:ಕನಕದಾಸರು

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಾರಮ್ಮಾ [ಪಲ್ಲವಿ]

ಕಮ್ಮಗೋಲನ ವೈರಿ ಸುತನಾದ ಸೊಂಡಿಲ
ಹೆಮ್ಮೆಯ ಗಣನಾಥನೇ [ಅನುಪಲ್ಲವಿ]

ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ ಕೋರೆದಾಡೆಯನಾರಮ್ಮಾ
ಮೂರುಕಣ್ಣನ ಸುತ ಮುರಿದಿಟ್ಟ ಚಂದ್ರನ ಧೀರ ತಾ ಗಣನಾಥನೇ [೧]

ಉಟ್ಟದಟ್ಟಿಯು ಬಿಗಿದುಟ್ಟ ಚೆಲ್ಲಣದ ದಿಟ್ಟ ತಾ ನಿವನಾರಮ್ಮ
ಪಟ್ಟದ ರಾಣಿ ಪಾರ್ವತಿಯ ಕುಮಾರನು ಹೊಟ್ಟೆಯ ಗಣನಾಥನೇ[ ೨]

ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಭಾಷಿಗನಿವನಾರಮ್ಮ
ಲೇಸಾಗಿ ಜನರ ಸಲಹುವ ಕಾಗಿನೆಲೆ ಆದಿಕೇಶವ ದಾಸ ಕಣೇ [೩ ]


1.Audio Link by Vidya Bhushana(song 5)

2.Audio Link by Parameshwara hegde (song 5)

3.Audio Link by M.S.Sheela(song 1)

Sangita samrajya / ಸಂಗೀತ ಸಾಮ್ರಾಜ್ಯ ಸಂಚಾರಿಣಿ

November 4, 2008

ರಾಗ : ಮೋಹನ ಕಲ್ಯಾಣಿ
ರಚನೆ : ಬೆಂಗಳೂರು ರಾಮಮೂರ್ತಿ

ಸಂಗೀತ ಸಾಮ್ರಾಜ್ಯ ಸಂಚಾರಿಣಿ ಶೃಂಗಾರ ಶ್ರಿಂಗೇರಿ ಪುರವಾಸಿನಿ|ಪಲ್ಲವಿ|


ಉನ್ನತ ಪಾಂಡ್ಯ ಕೇರಳ ವಾಸಿನಿ ಸನ್ನುತ ಶ್ರೀಚಕ್ರ ಮಧ್ಯ ನಿವಾಸಿನಿ
ಕಾಲಡಿ ಶಂಕರ ಹೃದಯ ನಿವಾಸಿನಿ ಕಾಲ ಪಾಲಕ ಬ್ರಹ್ಮ ವಿಶ್ವಾಸಿನಿ|ಅ.ಪ.|


ಗಾಂಧಾರ ಪಂಚಮ ದೈವತ ರೂಪಿಣಿ
ನಿಷಾದ
ಮಧ್ಯಮ ಸಪ್ತ ಸ್ವರೂಪಿಣಿ
ಮಂದಾರ ಕುಸುಮ ಮಣಿಮಯ ತೇಜೋ
ಮಾಧುರ್ಯ
ಮೋಹನಕಲ್ಯಾಣಿ ಸ್ವರೂಪಿಣಿ||
ಚರಣ||


Charulatha Mani ಅವರು ಸುಮಧುರವಾಗಿ ಹಾಡಿದ್ದಾರೆ.


Pillangoviya cheluva / ಪಿಳ್ಳಂಗೋವಿಯ ಚೆಲುವ ಕೃಷ್ಣನ

November 3, 2008

ರಚನೆ : ಪುರಂದರ ದಾಸರು

ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ರಂಗನ ಎಲ್ಲಿ ನೋಡಿದಿರಿ|| ||

ಎಲ್ಲಿ ನೋಡಿದರಲ್ಲಿ ತನಿಲ್ಲ ದಿಲ್ಲವೆಂದು ಬಲ್ಲ ಜಾಣರು
|| . ||

ನಂದಗೋಪನ ಮಂದಿರಗಳ ಸಂದುಗೊಂದಿನಲಿ
ಚಂದ
ಚಂದದ ಗೋಪ ಬಾಲರ ವೃಂದ
ವೃಂದದಲಿ
ಸುಂದರಾಂಗದ
ಸುಂದರೀಯರ ಹಿಂದು ಮುಂದಿನಲಿ
ಅಂದದಾಕಳ ಕಂದ ಕರುಗಳ ಮಂದೆ ಮಂದೆಯಲಿ
||||

ಶ್ರೀ
ಗುರುಕ್ತ ಸದಾ ಸುಮಂಗಳ ಯೋಗ ಯೋಗದಲಿ
ಅಗಮಾರ್ಥದೊಳಗೆ
ಮಾಡುವ ಯಾಗ ಯಾಗದಲಿ
ಶ್ರೀಗೆ ಭಾಗ್ಯನಾಗಿ ವರ್ತಿಪ ಭೋಗ ಭೋಗದಲಿ
ಭಾಗವತರು
ಸದಾ ಬಾಗಿ ಪಡುವ ರಾಗ ರಾಗದಲಿ
||||

ಚರಾಚರದೊಳಗೆ ಜನಂಗಳ ಆಚೆ ಈಚೆಯಲಿ
ಕೆಚರೇಂದ್ರನ
ಸುತನ ರಥದ ಚೌಕ ಪೀಠದಲಿ
ನಾಚದೆ
ಮಾಧವ ಎಂಬ ಭಕ್ತರ ವಾಚಕಂಗಳಲಿ
ವೀಚುಕೊಂಡದ
ಪುರಂದರ ವಿಠಲನ ಲೋಚನಾಗ್ರದಲಿ
||||

Audio Link - ವಿದ್ಯಾ ಭೂಷಣ ಅವರು ಹಾಡಿದ್ದಾರೆ

stat

Counter

Blog Widget by LinkWithin
 
Bhakthi Geetha / ಭಕ್ತಿ ಗೀತೆಗಳು - by Templates blogger