November 13, 2008
ರಚನೆ : ಕನಕದಾಸರು
ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೆ ಸಂಶಯ ಬೇಡ ||
ಬೆಟ್ಟದ ತುದಿಯಲ್ಲಿ ಬೆಳದ ವೃಕ್ಷಗಳಿಗೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರು
ಹುಟ್ಟಿಸಿದ ದೇವನು ತಾ ಹೊಣೆಗಾರನಾಗಿರಲು
ಗಟ್ಯಾಗಿ ಸಲಹುವನು ಸಂಶಯವಿಲ್ಲ||1||
ಕಲ್ಲಿನೋಳ ಹುಟ್ಟಿರುವ ಕ್ರಿಮಿ ಕೀಟಗಳಿಗೆ
ಅಲ್ಲೇ ಆಹಾರವನ್ನು ತಂದಿತ್ತವರು ಯಾರು
ಪುಲ್ಲಲೋಕಾನ ನಮ್ಮ ನೆಲಯಾದಿ ಕೇಶವನು
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ||2||
Sri VidyaBhushana ಅವರು ಹಾಡಿರುವುದನ್ನು ಕೇಳಿ - Audio link
1 comments:
One more stanza is thereI think,.adaviyolagaaduva mruga pakshi galigella allalli aahara vittawaru yaaru, hadeda jananiya teradi honegaara naagiralu, nammelaranu salahuwanu edake samshaya villaa.
Post a Comment