Welcome to my Blog.I hope you enjoy the music.Please leave your comments and suggestions. Thankyou :)
All songs posted here have audio links!!

Rama Rama Rama Enniro / ರಾಮ ರಾಮ ರಾಮ ಎನ್ನಿರೋ

March 31, 2009



ರಚನೆ : ಪುರಂದರ ದಾಸರು
ತಾಳ :
ಆದಿ
ಭಾಷೆ : ಕನ್ನಡ

ರಾಮ ರಾಮ ರಾಮ
ಎನ್ನಿರೋ ಇಂಥ
ಸ್ವಾಮಿಯ ನಾಮವ ಮರೆಯದಿರೋ

ತುಂಬಿದ ಪಟ್ಟಣಕೊಂಭತ್ತು ಭಾಗಿಲು
ಸಂಭ್ರಮದರಸರು ಐದು ಮಂದಿ
ಡಂಭಕತನದಿಂದ ತಿರುಗುವ ಕಾಯವ
ನಂಬಿ ನೆಚ್ಚಿ ನೀವು ಕೆಡಬೇಡಿರೊ


ನೆಲೆ ಇಲ್ಲದ ಕಾಯ ಎಲುವಿನ ಪಂಜರ
ಬಲಿದು ಸುತ್ತಿದ ಚರ್ಮದ ಹೊದಿಕೆ
ಮಲಮೂತ್ರಂಗಳು ಕೀವು ಕ್ರಿಮಿಗಳಿಂದ
ಭರಿತ ದೇಹವ ನೆಚ್ಚಿ ಕೆಡಬೇಡಿರೊ ೨

ಹರಿ ಬ್ರಹ್ಮ ಸುರರಿಂದ ವಂದಿತ ಆಗಿಪ್ಪ
ಹರಿ ಸರ್ವೋತ್ತಮನೆಂದೆನ್ನಿರೊ
ಪುರಂದರವಿಠಲನ ಚರಣವ ಭಜಿಸಿರೊ
ದುರಿತ ಭಯಗಳಿಂದ ದೂರಾಗಿರೊ ೩


1.AudioLink by Vidya Bhushana(song 9)

2.AudioLink by Vidya Bhushana


3.AudioLink by Group of artists

Alli Nodalu Rama / ಅಲ್ಲಿ ನೋಡಲು ರಾಮ

March 29, 2009

ರಚನೆ : ಪುರಂದರ ದಾಸರು
ರಾಗ : ನಾಟ ಕುರಂಜಿ
ತಾಳ : ಆದಿ
ಭಾಷೆ : ಕನ್ನಡ


ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ
ಎಲ್ಲಿಲ್ಲಿ ನೋಡಿದರೂ ಅಲ್ಲಿ ಶ್ರೀರಾಮ||ಪಲ್ಲವಿ||


ರಾವಣನ ಮೂಲಬಲ ಕಂಡು ಕಪಿಸೇನೆ
ಆವಾಗಲೇ ಬೆದರಿ ಓಡಿದವು
ಈವೇಳೆ ನರನಾಗಿ ಇರಬಾರದೆಂದೆಣಿಸಿ
ದೇವ ರಾಮಚಂದ್ರ ಜಗವೆಲ್ಲ ತಾನಾದ||||

ಅವನಿಗೆ ಇವ ರಾಮ ಇವನಿಗೆ ಅವ ರಾಮ
ಅವನಿಯೊಳೀಪರಿ ರುಪ ಉಂಟೆ
ಲವ ಮಾತ್ರದಿ ಅಸುರ ದುರುಳರೆಲ್ಲರು
ಅವರವರು ಹೊಡೆದಾಡಿ ಹತರಾಗಿ ಹೋದರು ||||

ಹನುಮದಾದಿ ಸಾಧು ಜನರು ಅಪ್ಪಿಕೊಂಡು
ಕುಣಿಕುಣಿದಾಡಿದರು ಹರುಷದಿಂದ
ಕ್ಷಣದಲ್ಲಿ ಪುರಂದರ ವಿಠಲರಾಯನು
ಕೊನೆಗೊಡೆಯನು ತಾನೊಬ್ಬನಾಗಿ ನಿಂತ||||


1.AudioLink - by Balamurali Krishna

2.AudioLink- by Nagavalli Nagaraja below


Rama Mantrava Japiso / ರಾಮ ಮಂತ್ರವ ಜಪಿಸೋ

March 27, 2009

I found 2 versions of this song. Giving both of them here.

ರಚನೆ :
ಪುರಂದರ ದಾಸರು
ರಾಗ:
ಜೌನ್ ಪುರಿ
ತಾಳ :ಆದಿ



ಪಲ್ಲವಿ

ರಾಮ ಮಂತ್ರವ ಜಪಿಸೋ ಹೇ
ಮನುಜ


ಅನುಪಲ್ಲವಿ
ಮಂತ್ರ ಮಂತ್ರ ನೆಚ್ಚಿ ನೀ ಕೆಡಬೇಡ
ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ


ಚರಣ
ಕುಲಹೀನನಾದರು ಕೂಗಿ ಜಪಿಸುವ ಮಂತ್ರ

ಸಲೆ ಬೀದಿ ಬೀದಿಯೊಳು ನುಡಿವ ಮಂತ್ರ
ಹಲವು ಪಾಪಂಗಳ ಹತಗೊಳಿಸುವ ಮಂತ್ರ
ಸುಲಭದಿಂದಲಿ ಸ್ವರ್ಗ ಸೂರೆ ಕೊಂಬುವ ಮಂತ್ರ



ಜ್ಞಾನನಿಧಿ ನಮ್ಮ ಆನಂದತೀರ್ಥರು
ಸಾನುರಾಗದಿ ನಿತ್ಯ ಸೇವಿಪ ಮಂತ್ರ
ಭಾನುಕುಲಾಂಬುಧಿ ಸೋಮನೆನಿಪ ನಮ್ಮ
ದೀನರಕ್ಷಕ ಪುರಂದರವಿಠಲನ ಮಂತ್ರ ೨

--------------------------------------------------------------
Alternate Version
ಪಲ್ಲವಿ
ರಾಮ ಮಂತ್ರವ ಜಪಿಸೋ
ಹೇ ಮನುಜ

ಅನುಪಲ್ಲವಿ
ಮಂತ್ರ ಮಂತ್ರ ನೆಚ್ಚಿ ನೀ ಕೆಡಬೇಡ
ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ

ಸ್ನಾನ ಮೌನಂಗಳಿಗೆ ಸಾಧನದ ಮಂತ್ರ
ಜ್ಞಾನಿಗಳು ಮನದಿ ಧ್ಯಾನಿಪ ಮಂತ್ರ

ಹೀನ ಗುಣಂಗಳ ಹಿಂಗಿಸುವ ಮಂತ್ರ

ಏನೆಂಬೆ ವಿಭೀಷಣಗೆ ಪಟ್ಟ ಕಟ್ಟಿದ ಮಂತ್ರ

ಸಕಲ ವೇದಗಳಿಗೆ ಸಾರವೆನಿಪ ಮಂತ್ರ

ಮುಕ್ತಿ ಮಾರ್ಗಕ್ಕೆ ಇದೆ ಮೂಲ ಮಂತ್ರ

ಭಕ್ತಿ ರಸಕೆ ಒಮ್ಮೆ ಬಟ್ಟೆ ತೋರುವ ಮಂತ್ರ

ಸುಖನಿಧಿ ಪುರಂದರ ವಿಠಲನ ಮಹಾ ಮಂತ್ರ

1.AudioLink by Vidya Bhushana (song 20)


2.AudioLink - Nedunuri Krishnamurthy ಅವರು ಹಾಡಿದ್ದಾರೆ




3.AudioLink - Nagavalli Nagaraj ಅವರು ಹಾಡಿರುವುದನ್ನು ಕೆಳಗೆ ನೋಡಿ




Rama Embuva Eradu / ರಾಮ ಎಂಬುವ ಎರಡು

March 24, 2009


ರಚನೆ : ಪುರಂದರ ದಾಸರು
ಭಾಷೆ : ಕನ್ನಡ


ಪಲ್ಲವಿ
ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು
ಪಾಮರರು ತಾವೇನು ಬಲ್ಲಿರಯ್ಯ

ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ
ಆಯಸ್ಥಿತಗತವಾದ ಅತಿ ಪಾಪವನ್ನು
ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ
ದಾಯವನು ವಾಲ್ಮೀಕಿ ಮುನಿರಾಯ ಬಲ್ಲ ೧


ಮತ್ತೆ ಮಾ ಎಂದೆನಲು ಹೊರಬಿದ್ದ ಪಾಪಗಳು
ಒತ್ತಿ ಒಳ ಪೋಗದಂತೆ ಕವಾಟವಾಗಿ
ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ
ಭಕ್ತವರ ಹನುಮಂತನೊಬ್ಬ ತಾ ಬಲ್ಲ ೨


ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು
ಪರಮ ವೇದಗಳೆಲ್ಲ ಪೊಗಳುತಿಹವು
ಸಿರಿಯರಸ ಸನ್ಸ್ಕ್ರಿತ ನಾಮವನು
ಸಿರಿ ಕಾಶಿಯೊಳಗಿಪ್ಪ ಶಿವನು ತಾ ಬಲ್ಲ ೩



1.AudioLink by Vidyabhushana

2.AudioLink by Vidyabhushana(song 27)

PS: I am giving 2 links - in case one does not work you can use the other one:)

Himagiri Thanaye / ಹಿಮಗಿರಿ ತನಯೇ ಹೇಮಲತೆ

March 16, 2009

ರಚನೆ : ಮುತ್ತಯ್ಯ ಭಾಗವತರ್
ರಾಗ : ಶುದ್ಧ ಧನ್ಯಾಸಿ
ತಾಳ : ಆದಿ
ಭಾಷೆ : ಸಂಸ್ಕೃತ


ಪಲ್ಲವಿ
ಹಿಮಗಿರಿ ತನಯೇ ಹೇಮಲತೆ ಅಂಬ
ಈಶ್ವರಿ
ಶ್ರೀಲಲಿತೆ ಮಾಮವ

ಅನುಪಲ್ಲವಿ
ರಮಾ ವಾಣಿ ಸಂಸೇವಿತ ಸಕಲೇ
ರಾಜರಾಜೇಶ್ವರಿ
ರಾಮ ಸಹೋದರಿ

ಚರಣ
ಪಾಶಾಂಕುಶೇಶು ದಂಡಕರೇ ಅಂಬ
ಪರಾತ್ಪರೆ
ನಿಜ ಭಕ್ತಪರೇ
ಅಚಾಂಬರೇ ಹರಿಕೇಶ ವಿಲಾಸೇ
ಆನಂದ
ರೂಪೇ ಅಮಿತ ಪ್ರತಾಪೇ

----------------------------------------------------------
pallavi
himagiri tanayE hEmalate ambA Ishvari shri lalitE mAmava

anupallavi
ramA vANi samsEvita sakalE rAjarAjEshvari rAma sahOdari

charaNa
pAshAnkushEshu danDakarE ambA parAtparE nija bhaktaparE
achAmbarE harikEsha vilAsE Ananda roopE amita pratApE


1.AudioLink by Soumya

2.AudioLink by Nityashree

Satyanarayana Aarti / ಸತ್ಯನಾರಾಯಣ ಆರತಿ

March 10, 2009

A popular aarti song. click on the image to enlarge.



1.AudioLink - by Anuradha Paudwal

2.AudioLink -
by a group of artists

Rama Nama Payasakke / ರಾಮ ನಾಮ ಪಾಯಸಕ್ಕೆ

March 3, 2009

ರಚನೆ : ಪುರಂದರ ದಾಸರು
ರಾಗ: ಆನಂದಭೈರವಿ
ತಾಳ : ಏಕ

ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ
ವಿಠಲ ನಾಮ ತುಪ್ಪವ ಕಲಸಿ ಬಾಯ ಚಪ್ಪರಿಸಿರೋ||

ಒಮ್ಮಾನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮಾನೆ ಸಜ್ಜಿಗೆಯ ತೆಗೆದು ಸಣ್ಣ ಶಾವಿಗೆಯ ಹೊಸೆದು||

ಹೃದಯವೆಂಬೊ ಮಡಕೆಯಲಿ ಭಾವವೆಂಬೊ ಎಸರನಿಟ್ಟು
ಬುದ್ಧಿಯಿಂದ ಪಾಕ ಮಾಡಿ ಹರಿವಾಣಕೆ ಬಡಿಸಿಕೊಂಡು||

ಆನಂದ ಆನಂದವೆಂಬೊ ತೇಗು ಬಂದಿತು ಕಾಣಿರೊ
ಆನಂದ ಮೂರುತಿ ನಮ್ಮ ಪುರಂದರ ವಿಠಲನ ನೆನೆಯಿರೊ||


1.AudioLink - Priya sisters ಅವರು ಹಾಡಿದ್ದಾರೆ

2.AudioLink - Sudha Raghunathan ಅವರು ಹಾಡಿದ್ದಾರೆ

stat

Counter

Blog Widget by LinkWithin
 
Bhakthi Geetha / ಭಕ್ತಿ ಗೀತೆಗಳು - by Templates blogger