November 6, 2008
ರಚನೆ: ಕನಕದಾಸರು
ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ
ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ
ಪರಮಪದದೊಳಗೆ ವಿಷಧರನ ತಲ್ಪದಲಿ ನೀ
ಸಿರಿಸಹಿತ ಕ್ಷೀರವಾರುಧಿಯೊಳಿರಲು
ಕರಿರಾಜ ಕಷ್ಟದಲಿ ಆದಿಮೂಲಾ ಎಂದು
ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೇ ೧
ಕಡು ಕೋಪದಲಿ ಖಳನು ಖಡುಗವನು ಹಿಡಿದು
ನಿನ್ನೊಡೆಯನೆಲ್ಲಿಹನು ಎಂದು ನುಡಿಯೇ
ದೃಢ ಭಕಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆ
ಸಡಗರದಿ ಕಂಭದಿಂದೊಡೆದೆಯೋ ನರಹರಿಯೇ೨
ಯಮಸುತನ ರಾಣಿಗೆ ಅಕ್ಷಯವಸನವಿತ್ತೆ
ಸಮಯದಲಿ ಅಜಮಿಳನ ಪೊರೆದೆ
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ
ಕಮಲಾಕ್ಷ ಕಾಗಿನೆಲೆಯಾದಿ ಕೇಶವನೆ೩
1.Audio link (song 19) - Vidya Bhushana ಅವರು ಹಾಡಿದ್ದಾರೆ
2.ಕನ್ನಡದ ಚಲನಚಿತ್ರ "ಕನಕದಾಸ" ದಲ್ಲಿ ಈ ಹಾಡನ್ನು P.B.Srinivas ಅವರು ಸುಮಧುರವಾಗಿ ಹಾಡಿದ್ದಾರೆ, ಡಾ.ರಾಜ್ ಅವರು ಸುಂದರವಾಗಿ ಅಭಿನಯಿಸಿದ್ದಾರೆ. ಅದನ್ನು ನೋಡಿ ಆನಂದಿಸಿ :)
1 comments:
kannadada bhakthi geethegalalli ajaramaravagi uliyaliruva ee haadu kannadigara mana gelluthairali endu haraisuva matthu ee haadannu website alli upload madida punya rige nanna hrudaya poorvaka abhinandanegalu
dr.bharamagouda.b.m
Post a Comment