January 5, 2009
ODi barayya / ಓಡಿ ಬಾರಯ್ಯ ವೈಕುಂಠಪತಿ ನಿನ್ನ
ರಚನೆ : ಪುರಂದರ ದಾಸ
ರಾಗ : ಭೈರವಿ
ತಾಳ : ಆದಿ
ಪಲ್ಲವಿ
ಓಡಿ ಬಾರಯ್ಯ ವೈಕುಂಠಪತಿ ನಿನ್ನ ನೋಡುವೆ ಮನದಣಿಯ
ಅನುಪಲ್ಲವಿ
ನೋಡಿ ಮುದ್ದಾಡಿ ಮಾತಾಡಿ ಸಂತೋಷದಿ ಕೂಡಿಪಾಡಿ ಪೊಗಳುವೇನು ಪರಮ ಪುರುಷ ಹರಿಯೆ
ಚರಣ
ಧಿಂ ಧಿಂ ಧಿಮಿಕೆಂದು ಕುಣಿಯುತಲಿ
ಅಂದುಗೆ ಕಿರುಗೆಜ್ಜೆ ಗಲುಗಲುರೆನ್ನಲು
ಕುಂದಣ ಉಡಿದಾರ ಝಣ ಝಣ ಎನ್ನಲು
ಮಂಗಳಾತ್ಮಕ ಮೋಹನಕಾಯ ರಂಗ
ಸಂಗೀತಲೋಲ ಸದ್ಗುಣ ಶೀಲ
ಅಂಗನೆಯರಿಗೆಲ್ಲ ಅತಿಪ್ರಿಯನಾದ
ಶುಭಾಂಗ ಶ್ರೀಪುರಂದರ ವಿಠಲರಾಯ
1.AudioLink - ಕರ್ನಾಟಕ ಸಂಗೀತ ಶೈಲಿಯಲ್ಲಿ ಕೇಳಿ.
2.AudioLink (song 43) - Anantha Kulkarni ಅವರು ಹಿಂದೂಸ್ತಾನಿ ಶೈಲಿಯಲ್ಲಿ ಹಾಡಿದ್ದಾರೆ.
2 comments:
Great song and Thank you for lyrics and Audio clip
ಕೋಟಿ ಸೂರ್ಯ ಪ್ರಭೆಯೋ ರಂಗ .. ಲಲಾಟದಿ ಕಸ್ತೂರಿ ತಿಲಕ ಇಡುವೆ ರಂಗ ಪುಟ್ಟಗೋಪಾಲರ ಆಟಸಾಕೋ ಈಗ .........
ಇದರಲ್ಲಿ ಹೀಗೆ ಒಂದು ಚರಣವಿದೆ
Post a Comment