Composer: Jagannatha Daasa ಪಲ್ಲವಿ ದಯಮಾಡೆ ದಯಮಾಡೆ ತಾಯೆ ವಾಗ್ದೇವಿ || ಅನುಪಲ್ಲವಿ ದಯದಿಂದ ನೀನೆನ್ನ ನೋಡೆ ವಾಗ್ದೇವಿ || ಚರಣ ಹಿತದಿ ಸನ್ಮತಿಯ ಶ್ರೀಮತಿದೇವಿ ನೀಡೆ ವ್ರತತಿಜನೇತ್ರೆ ಭಾರತಿ ನೀ ದಯಮಾಡೆ ||೧| ಸುಮುಖೀ ತ್ವಚ್ಚರಣಾಬ್ಜ ದ್ರುಮಛಾಯಶ್ರಿತರ ಸುಮತಿಗಳೊಳಗಿಟ್ಟು ಮಮತೆಯಿಂ ಸಲಹೆ||೨|| ಜಗನ್ನಾಥವಿಠಲನ ಅಂಘ್ರಿಗಳ ಸೇವೆಯೊಳು ಸುಗುಣೆ ಸನ್ಮತಿಕೊಟ್ಟು ಬೇಗೆನ್ನ ಸಲಹೆ||೩||1.Audio Link by Balamurali Krishna
Composer: Vadirajaru
ಪಲ್ಲವಿ ಮಾತು ಮಾತಿಗೆ ಕೇಶವ ನಾರಾಯಣ ಮಾಧವ ಎನಬಾರದೆ ಹೇ ಜಿಹ್ವೆ || ಅನುಪಲ್ಲವಿ ಪ್ರಾತಃಕಾಲದೊಳೆದ್ದು ಪಾರ್ಥಸಾರಥಿಯೆಂದು ಪ್ರೀತಿಲಿ ನೆನೆಯೆ ಸುಪ್ರೀತನಾಗುವ ಹರಿಯ ಏತಕ್ಕೆ ನೆನೆಬಾರದು ಹೇ ಜಿಹ್ವೆ || ಚರಣ ಜಲಜನಾಭನ ನಾಮವು ಈ ಜಗಕ್ಕೆಲ್ಲ ಜನನ ಮರಣಹರವು ಸುಲಭವಾಗಿಹುದು ಸುಖಕೆ ಕಾರಣವಿದು ಬಲಿದ ಪಾಪಗಳನ್ನೆಲ್ಲ ಪರಿಹರಿಸುವುದೆಂದು ತಿಳಿದು ತಿಳಿಯದಿಹರೇ ಹೇ ಜಿಹ್ವೆ ||೧|| ತರಳೆ ದ್ರೌಪದಿ ಸೀರೆಯ ಸೆಳೆಯುತಿರೆ ಹರಿ ನೀನೆ ಗತಿಯೆನಲು ಪರಮ ಪುರುಷ ಭವಭಂಜನ ಕೇಶವ ದುರುಳರ ಮರ್ದಿಸಿ ತರುಣಿಗೆ ವರವಿತ್ತ ಹರಿನಾಮ ಪ್ರಿಯವಲ್ಲವೇ ಹೇ ಜಿಹ್ವೆ||೨|| ಹೇಮ ಕಶ್ಯಪ ಸಂಭವ ಈ ಜಗಕ್ಕೆಲ್ಲ ನಾಮವೇ ಗತಿಯೆನಲು ಪ್ರೇಮದಿಂದಲಿ ಬಂದು ಕಾಮಿತಾರ್ಥಗಳಿತ್ತ ಸ್ವಾಮಿ ಹಯವದನನ ನಾಮವ ನೆನೆಯುತ್ತ ಯಾಮ ಯಮಕೆ ಬಿಡದೆ ಹೇ ಜಿಹ್ವೆ||೩||
1.Audio Link byJayalakshmi Srinivasan
2.Audio Link by VidyaBhushana
Composer: Vadirajaru ವೇಣುನಾದ ಪ್ರಿಯ ಗೋಪಾಲಕೃಷ್ಣ ವೇಣುನಾದ ವಿನೋದ ಮುಕುಂದ ಗಾನವಿನೋದ ಶೃಂಗಾರ ಗೋಪಾಲ ವಂದಿತ ಚರಣ ವಸುಧೆಯ ಆಭರಣ ಇಂದಿರ ರಮಣ ಇನ ಕೋಟಿ ತೇಜ ಮಂದರಧರ ಗೋವಿಂದ ಮುಕುಂದ ಸಿಂಧು ಶಯನ ಹರಿ ಕಂದರ್ಪ ಜನಕ ನವನೀತ ಚೋರ ನಂದ ಕುಮಾರ ಭುವನೇಕ ವೀರ ಬುದ್ಧಿ ವಿಸ್ತಾರ ರವಿಕೊಟಿ ತೇಜ ರಘುವಂಶ ರಾಜ ದಿವಿಜ ವಂದಿತ ಧನುಜಾರಿ ಗೋಪಾಲ ಪರಮ ದಯಾಳು ಪಾವನ ಮೂರ್ತಿ ವರಕೀರ್ತಿ ಹಾರ ಶೃಂಗಾರ ಲೋಲ ಉರಗೇಂದ್ರ ಶಯನ ವರಹಯವದನ ಶರಣು ರಕ್ಷಕ ಪಾಹಿ ಕೋದಂಡ ರಾಮ ----------------------------------vENunAda priya gopAlakrishna, vENunAda vinoda mukunda, gAnaviNoda shrungAra gopAla vandita charaNa vasudheya Abharana indira ramaNa inakoTi tEja mandaradhara govinda mukunda sindhu shayana hari kandarpa janaka navaneeta chora nanda kumara bhuvanEka veera buddhi vistaara ravikoTi teja raghuvamsha raja divija vandita dhanujaari gopaala parama dayALu pAvana moorti vara keerti hAra shrungara lola uragendra shayana varahayavadana sharaNu rakshaka pAhi kodanDa rama 1.Audio Link by Vidyabhushana 2.M.Venkatesh Kumar[song 6]
Raaga: kEdAragauLa. taala : tripuTa ಅರವಿಂದಾಲಯೇ ತಾಯೇ ಶರಣು ಹೊಕ್ಕೆನು ಕಾಯೇ ಸಿರಿ ರಮಣನ ಪ್ರಿಯೇ ಜಗನ್ಮಾತೇ|| ಕಮಲ ಸುಗಂಧಿಯೇ ಕಮಲದಳ ನೇತ್ರೆಯೆ ಕಮಲವಿಮಲ ಶೋಭಿತೇ ಕಮನೀಯ ಹಸ್ತಪಾದ ಕಮಲವಿರಾಜಿತೇ ಕಮಲೇ ಕಾಯೇ ಎನ್ನನು(ಶ್ರೀ ಲಕುಮಿಯೇ) ನಿನ್ನ ಕರುಣ ಕಟಾಕ್ಷ ವಿಕ್ಷಣದಿಂದಲಿ ತನುಮನಗಳನಿತ್ತೆ ಧನ್ಯ ವಿರಾಜಿತೇ ಅಜಭಾವಾದಿಗಳ ಪ್ರಸನ್ನೇ ಕಾಯೇ ಎನ್ನನು(ಶ್ರೀ ಲಕುಮಿಯೇ) ಹರಿ ನಿನ್ನ ಉರದಲ್ಲಿ ಧರಿಸಿದನೆಂಬಂತ ಕರುವದಿ ಮರೆಯದಿರೆ ನಿರತ ನಿನ್ನಯ ಮುದ್ದು ಪುರಂದರವಿಟ್ಟಲನ ಚರಣಕಮಲವ ತೋರಿಸೆ(ಶ್ರೀ ಲಕುಮಿಯೇ) --------------------------------------------------- aravindAlayE tAyE sharaNu hokkenu kAyE siri ramaNana priyE jaganmAtE kamala sugandhiyE kamaladaLa nEtreye kamala vimala shobhitE kamaneeya hastapAda kamala virAjitE kamalE kAyE ennanu ninna karuNA kaTAkSha vIkShaNadindali tanumanagaLanitte dhanya virAjitE ajabhavAdigaLa prasannE kAyE ennanu hari ninna uradalli dharisidanembantha karuvadi mareyadire nirata ninnaya muddu purandara viTTalana charaNa kamalava torise1.Audio Link by Vidyabhushana 2.Audio Link by Kiranmai
ಬೋಲೋ ನಾಥ ಉಮಾಪತೇ(ಪತಿ) ಶಂಭೋ ಶಂಕರ ಪಶುಪತೇ ನಾಂದಿ ವಾಹನ ನಾಗ ಭೂಷಣ ಚಂದ್ರಶೇಖರ ಜಟಾಧರ ಶೂಲಾಧಾರ ಜ್ಯೋತಿ ಪ್ರಕಾಶ ವಿಭೂತಿ ಸುಂದರ ಪರಮೇಶ ಸ್ಮಶಾನವಾಸ ಚಿದಂಬರೇಶ ನೀಲಕಂಠ ಮಹದೇವ ಕೈಲಾಸ ವಾಸ ಕನಕ ಸಭೇಷ ಗೌರಿ ಮನೋಹರ ವಿಶ್ವೇಶ ------------------------------------- Bolo Natha Uma Pathe Shambho Shankara Pashupathe Nandi Vahana Naga Bhooshana Chandrashekara Jatadhara Shooladhara Jyoti Prakasha Vibhooti Sundara Paramesha Smashaana Vaasa Chidambaresha Neelakanta Mahadeva Kailasa Vaasa Kanaka Sabhesha Gauri Manohara VishveshaAudio link by Udaiyalur Kalyanaraman
Composer: Purandara Daasa Language: KannaDa ಪಲ್ಲವಿ ಶರಣು ಸಕಲೋದ್ಧಾರ ಅಸುರ ಕುಲ ಸಂಹಾರ ಶರಣು ದಶರಥ ಬಾಲ ಜಾನಕೀಲೋಲ ಈ ಮುದ್ದು ಈ ಮುಖವು ಈ ತನುವಿನಾ ಕಾಂತಿ ಈ ಬಿಲ್ಲು ಈ ಬಾಣ ಈ ನಿಂತ ಈ ಭಾವ ಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯ ಯಾವ ದೇವರಿಗೆ ಉಂಟು ಮೂರುಲೋಕದೊಳಗೆ[1] ಉಟ್ಟ ಪೀತಾಂಬಾರವು ಉಡಿಗೆಜ್ಜೆ ಮಾಣಿಕವೂ ದೊಡ್ಡ ನವರತ್ನದ ಆಭರಣ ಇರಲು ಕೊಟ್ಟ ಭಾಷೆಗೆ ತಪ್ಪ ನಿಜಭಕ್ತರಿಗೆ ಒಲಿವ ಸೃಷ್ಟಿಯೊಳಗೆ ಕಾಣೆ ಕೌಸಲ್ಯರಾಮ[2] ಪಾಲಿಸಲು ಅಯೋಧ್ಯ ಪಟ್ಟಣದಲ್ಲಿ ಪುರವಾಸ ಬೇಡಿದ ಇಷ್ಟಾರ್ಥಗಳ ಕೊಡುವೆನೆನುತ ಭಾವ ಶುದ್ಧಿಯುಳ್ಳ ತನ್ನ ಭಕುತರ ಪೊರೆವ ಪುರಂದರ ವಿಟ್ಟಲನೆ ಅಯೋಧ್ಯ ರಾಮ[3] -----------------------------------------------------pallavi sharaNu sakaloddhAra asura kula samhAra sharaNu dasharatha bAlA jAnakilola charaNa 1 ee muddu ee mukhavu ee tanuvinaa kAnti ee billu ee bANa ee ninta ee bhAva ee tamma ee seete ee banTa ee bhAgya yAva dEvarige unTu moorulokadoLage[1] uTTa pItAmbaravu uDigejje mANikavu doDDa navaratnada AbharaNa iralu koTTa bhAshege tappa nija bhaktarige oliva sruShTiyoLageNe kANe kausalya rAma[2] paLisalu ayOdhya paTTaNadalli puravAsa bEDida iShTArthagaLa koDuvenenuta bhAva shuddhiyuLLa tanna bhakutara poreva purandara viTTalane ayodhya raama[3]1.Audio by Erode Rajamani 2.Audio Link by Rajkumar
Composer : Purandara Dasa ಪಲ್ಲವಿ ಯಾಕೆ ನಿರ್ದಯನಾದೆ(ಯೋ) ಎಲೊ ದೇವನೆ (ಹರಿಯೇ) ಶ್ರೀಕಾಂತ ಎನ್ನ ಮೇಲೆ ಎಳ್ಳಷ್ಟು ದಯವಿಲ್ಲ|| ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು ಹಿಂಗದೆ ಪ್ರಹ್ಲಾದನ ಅಪ್ಪಿಕೊಂಡೆ ಮಂಗಳಪದವಿತ್ತು ಮನ್ನಿಸಿದೆ ಅವ ನಿನಗೆ ಭಂಗಾರವೆಷ್ಟು ಕೊಟ್ಟನು ಪೇಳೊ ಹರಿಯೆ |1| ಸಿರಿ ದೇವಿಗೆ ಹೇಳದೆ ಸೆರಗು ಸಂವರಿಸದೆ ಗರುಡನ ಮೇಲೆ ಎರಗಿ ಗಮನವಾಗದೆ ಭರದಿಂದ ನೀ ಬಂದು ಆತನ ಸಲಹಿದೆ ಕರಿರಾಜ ಎಷ್ಟು ಕನಕವ ಕೊಟ್ಟನೋ ಹರಿಯೆ |2| ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೇ ನಿಜದಿ ರುಕ್ಮಾಂಗದನು ನಿನ್ನ ಮೊಮ್ಮಗನೆ ಭಜನೆಗೆ ಅವರೇ ಹಿತರೆ ನಾ ನಿನಗೆ ಅನ್ಯನೇ ತ್ರಿಜಗಪತಿ ಸಲಹೆನ್ನ ಪುರಂದರವಿಠಲ |3| 1.Audio by M.L.Vasantha Kumari 2.Audio by Roopa, Deepa Kasaravalli
ಹರಿನಾಮದರಗಿಣಿಯು ಹಾರುತಿದೆ ಜಗದಿ ಪರಮ ಭಾಗವತರು ಬಲೆಯ ಬೀಸುವರು ||ಪ|| ಕೋಪವೆಂಬ ಮಾರ್ಜಾಲ ಕಂಡರೆ ನುಂಗುವುದು ತಾಪವೆಂಬುವ ಹುಲಿಯ ಕೊಂಡೊಯ್ವುದು ಕಾಪಾಡಲದನೊಯ್ದು ಹೃದಯದೊಳಗಿಂಬಿಟ್ಟು ಆಪತ್ತಿಗೊದಗುವುದು ಆ ಮುದ್ದು ಅರಗಿಣಿಯು |1| ದಾರಿಯಲಿ ನಡೆವಾಗ ಚೋರರುಪಟಳವಿಲ್ಲ ಮಾರಿ ಬಂದರೆ ಅದನು ಹೊಡೆದು ನೂಕುವುದು ಕ್ರೂರ ಯಮಭಟರನು ಮೂಗು ರೆಕ್ಕಿಲಿ ಬಡಿದು ದಾರಿ ತೋರುವುದು ಮುರಾರಿ ಪಟ್ಟಣಕೆ |2| ಎಷ್ಟು ವರ್ಣಿಸಲಿ ನಾ ಈ ಮುದ್ದು ಅರಗಿಣಿಯ ಹೊಟ್ಟೆಯೊಳಗೀರೇಳು ಜಗವನಿಂಬಿಟ್ಟು ಸೃಷ್ಟೀಶ ಪುರಂದರ ವಿಠಲನ ನೆನೆ ನೆನೆದು ಮುಟ್ಟಿ ಭಜಿಸುವುದು ಈ ಮುದ್ದು ಅರಗಿಣಿಯು|3| 1.Audio by Roopa Deepa Kasaravalli 2.Audio by Narasimha Nayaka [song 16]
ಜಯ ಜನಾರ್ಧನ ಕೃಷ್ಣ ರಾಧಿಕಾಪತೇ
ಜನ ವಿಮೋಚನ ಕೃಷ್ಣ ಜನ್ಮ ಮೋಚನ
ಗರುಡ ವಾಹನ ಕೃಷ್ಣ ಗೋಪಿಕಾ ಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ
ಸುಜನ ಬಾಂಧವ ಕೃಷ್ಣ ಸುಂದರ ಕೃತೆ
ಮದನ ಕೋಮಲ ಕೃಷ್ಣ ಮಾಧವ ಹರೇ
ವಸುಮತಿ ಪತೇ ಕೃಷ್ಣ ವಾಸವಾನುಜ
ವರಗುಣಾಕರ ಕೃಷ್ಣ ವೈಷ್ಣವಾಕೃತೆ
ಸುರಚಿರಾನನ ಕೃಷ್ಣ ಶೌರ್ಯವಾರಿಧೆ
ಮುರಹರ ವಿಭೋ ಕೃಷ್ಣ ಮುಕ್ತಿದಾಯಕ
ವಿಮಲಪಾಲಕ ಕೃಷ್ಣ ವಲ್ಲಭಿಪತೆ
ಕಮಲಲೋಚನಾ ಕೃಷ್ಣ ಕಾಮ್ಯದಾಯಕ
ವಿಮಾಲಗಾತ್ರನೇ ಕೃಷ್ಣ ಭಕ್ತವತ್ಸಲ
ಚರಣ ಪಲ್ಲವಂ ಕೃಷ್ಣ ಕರುಣ ಕೋಮಲಮ್
ಕುವಲೈಕ್ಷಣ ಕೃಷ್ಣ ಕೋಮಲಾಕೃತೆ
ತವ ಪದಾಮ್ಬುಜಂ ಕೃಷ್ಣ ಶರಣಾಮಾಶ್ರಯೆ
ಭುವನ ನಾಯಕ ಕೃಷ್ಣ ಪಾವನಾಕೃತೆ
ಗುಣಗಣೋಜ್ವಲಾ ಕೃಷ್ಣ ನಳಿನಲೋಚನ
ಪ್ರಣಯವಾರಿಧೆ ಕೃಷ್ಣ ಗುಣಗಣಾಕರ
ದಾಮಸೋದರ ಕೃಷ್ಣ ದೀನ ವತ್ಸಲ
ಕಾಮಸುಂದರ ಕೃಷ್ಣ ಪಾಹಿ ಸರ್ವಾದಾ
ನರಕನಾಶನ ಕೃಷ್ಣ ನರಸಹಾಯಕ
ದೇವಕಿಸುತ ಕೃಷ್ಣ ಕಾರುಣ್ಯಾಂಭುದೇ
ಕಂಸಾನಾಶನ ಕೃಷ್ಣ ದ್ವಾರಕಾಸ್ಥಿತ
ಪಾವನಾತ್ಮಕ ಕೃಷ್ಣ ದೇಹಿ ಮಂಗಳಂ
ತ್ವತ್ ಪದಾಮ್ಬುಜಂ ಕೃಷ್ಣ ಶ್ಯಾಮ ಕೋಮಲಮ್
ಭಕ್ತವತ್ಸಲ ಕೃಷ್ಣ ಕಾಮ್ಯದಾಯಕ
ಪಾಲಿಸೆನ್ನನೂ ಕೃಷ್ಣ ಶ್ರೀಹರಿ ನಮೋ
ಭಕ್ತದಾಸ ನಾ ಕೃಷ್ಣ ಹರಸು ನೀ ಸದಾ
ಕಾದು ನಿಂತೇನಾ ಕೃಷ್ಣ ಸಲಹೆಯಾ ವಿಭೋ
ಗರುಡ ವಾಹನ ಕೃಷ್ಣ ಗೋಪಿಕಾ ಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ
Jaya Janardhana Krishna Radhika Pate
Jana vimochana Krishna Janma Mochana
Garuda Vahana Krishna Gopika Pathe
Nayana mohana Krishna Neerajekshana
Sujana Baandhava Krishna Sundara kruthe
Madana Komala Krishna Madhava Hare
vasumati Pathe Krishna vaasavaanuja
varaguNaakara Krishna vaishnavaakruthe
Surachiraanana Krishna Shouryavaaridhe
Murahara vibho Krishna muktidaayaka
vimalapaalaka Krishna vallabhipate
Kamalalochana Krishna kamyadaayaka
Vimalagaatrane Krishna Bhaktavatsala
Charana pallavam Krishna Karuna Komalam
KuvalaikshaNa Krishna komalaakruthe
tava padambujam Krishna sharanamaashraye
Bhuvana naayaka Krishna paavanaakruthe
GuNagaNojwala Krishna Nalinalochana
Pranayavaaridhe Krishna guNagaNaakara
daamasodara Krishna deena vatsala
Kaamasundara Krishna paahi sarvadaa
Narakanaashana Krishna Narasahaayaka
Devaki sutha Krishna KaruNyambhude
Kamsanaashana Krishna Dwarakasthitha
Paavanaatmaka Krishna dehi mangaLam
Tvatpadaambujam Krishna Shyama komalam
Bhaktavatsala Krishna Kaamyadayaka
Paalisennanu Krishna Srihari namo
Bhaktadaasa naa Krishna Harasu Nee sadaa
Kaadu ninthenaa Krishna Salaheyaa Vibho
Garuda vaahana Krishna Gopika Pathe
Nayana mohana Krishna Neerajekshana
Raaga: nagagandhaari Taala : roopaka Composer: Muthuswamy Dikshitar ಪಲ್ಲವಿ ಸರಸಿಜನಾಭ ಸೋದರಿ ಶಂಕರಿ ಪಾಹಿಮಾಂ ಅನುಪಲ್ಲವಿ ವರದ ಅಭಯಕರ ಕಮಲೇ ಶರಣಾಗತ ವತ್ಸಲೇ ಚರಣ ಪರಂಧಾಮ ಪ್ರಕೀರ್ತಿತೆ ಪಶುಪಾಶ ವಿಮೋಚಿತೆ ಪನ್ನಗಾಭರಣಯುತೆ ನಾಗಗಾಂಧಾರಿ ಪುಜಿತಾಬ್ಜಪದೆ ಸದಾ ನಂದಿತೆ ಸಂಪದೆ ವರ ಗುರುಗುಹ ಜನನಿ ಮದಶಮನಿ ಮಹಿಷಾಸುರ ಮರ್ಧಿನಿ ಮಂದಗಮನಿ ಮಂಗಳ ವರ ಪ್ರದಾಯಿನಿ ---------------------------------------------------------------- pallavi sarasijanAbha sodari shankari pAhimAm anupallavi varada abhayakara kamaLe sharaNAgata vatsaLe charana parandham prakirthite pashupash vimochite pannagA bharaNayute nAgagAndhAri poojitAbjapade sadA nandite sampade varaguruguha janani madashamani mahishAsura mardhini mandagamani mangala varapradAyini 1.Audio by Priya Sisters 2.Audio by Chitra 3.Audio by a group
ಪಾಲಿಸೆಮ್ಮ ಮುದ್ದು ಶಾರದೆ ಎನ್ನ ನಾಲಿಗೆಯಲಿ ನಿಲ್ಲ ಬಾರದೆ || ಪಲ್ಲವಿ || ಲೋಲಲೋಚನೆ ತಾಯೆ ನಿರುತ ನಂಬಿದೆ ನಿನ್ನ || ಅನುಪಲ್ಲವಿ || ಅಕ್ಷರಕ್ಷರ ವಿವೇಕವಾ ನಿನ್ನ ಕುಕ್ಷಿಯೊಳಿರೆ ಏಳು ಲೋಕವ ಸಾಕ್ಷಾತ್ ರೂಪದಿಂದ ಒಲಿದು ರಕ್ಷಿಸು ತಾಯೆ || ೧ || ಶೃಂಗಾರಪುರ ನೆಲೆವಾಸಿನೀ ದೇವಿ ಸಂಗೀತಗಾನ ವಿಲಾಸಿನೀ ಮಂಗಳಗಾತ್ರೆ ತಾಯೆ ಭಳಿರೆ ಬ್ರಹ್ಮನ ರಾಣಿ || ೨ || ಸರ್ವಾಲಂಕಾರ ದಯಾಮೂರುತಿ ನಿನ್ನ ಚರಣವ ಸ್ಮರಿಸುವೆ ಕೀರುತಿ ಗುರುಮೂರ್ತಿ ಪುರಂದರ ವಿಠಲನ್ನ ಸ್ಮರಿಸುವೆ || ೩ || 1.Audio Link by M.S.Sheela (song6) 2.Audio Link by Upendra Bhat 3.Audio Link by H.K.Narayana 4.Audio link by Narasimha nayak[song 39]
raaga : kEdaara gowLa
taaLa : aadi
Composer: Purandara Daasa
ಪಲ್ಲವಿ
ಸಿಂಹರೂಪನಾದ ಶ್ರೀ ಹರಿ ಹೇ ನಾಮಗಿರೀಶನೇ
ಅನುಪಲ್ಲವಿ
ಒಮ್ಮನದಿಂದ ನಿಮ್ಮನು ಭಜಿಸಲು ಸಮ್ಮತದಿಂದಲಿ ಕಾಯುವೆನೆಂದ ಹರಿ
ತರಳನು ಕರೆಯೆ ಸ್ಥಂಭವು ಬಿರಿಯೇ
ತುಂಬಾ ಉಗ್ರವನು ತೋರಿದನು
ಕರುಳನು ಬಗೆದು ಕೊರಳೊಳಗಿಟ್ಟು
ತರಳನ ಸಲಹಿದ ಶ್ರೀ ನರಸಿಂಹನೆ
ಭಕ್ತರೆಲ್ಲ ಕೂಡಿ ಬಹು ದೂರ ಓಡಿ
ಪರಮ ಶಾಂತವನು ಬೇಡಿದರು
ಕರೆದು ತನ್ನ ಸಿರಿಯನು ತೊಡೆಯೊಳು ಕುಳಿಸಿದ
ಪರಮ ಹರುಷವನು ಹೊಂದಿದ ಶ್ರೀ ಹರಿ
ಜಯ ಜಯ ಜಯವೆಂದು ಹೂವನು ತಂದು
ಹರಿ ಹರಿ ಹರಿಯೆಂದು ಸುರರೆಲ್ಲ ಸುರಿಸೆ
ಭಯ ನಿವಾರಣ ಭಾಗ್ಯ ಸ್ವರೂಪನೇ
ಪರಮ ಪುರುಶ ಶ್ರೀ ಪುರಂದರ ವಿಟ್ಟಲನೆ
---------------------------------------------------
pallavi
simharupanAda shrI hari hE nAmagirishanE
anupallavi
ommanadinda nimmanu bhajisalu
sammatadindali kAyuvenenda hari
charaNa
taraLanu kareye sthambhavu biriyE
tumba ugravanu toridanu
karuLanu bagedu koraLoLagiTTu
taraLana salahida shri narasimhane
bhaktarella kooDi bahu dUra Odi
parama shAntavanu bEDidaru
karedu tanna siriyanu toDeyoLu kuLisida
parama haruShavanu hondida shrI hari
jaya jaya jayavendu huvanu tandu
hari hari hariyendu surarella surise
bhaya nivAraNa bhAgya svarUpanE
parama puruSa shrI purandara viTTalanE
1.Audio Link by Vishakha Hari
2.Audio link by Another group (needs real player)
Composer : Vijayadaasa raaga : begade Language : Kannada ಪಲ್ಲವಿ ಗಜವದನ ಪಾಲಿಸೋ ತ್ರಿಜಗದೊಡೆಯ ಶ್ರೀ ಭುಜಗ ಭೂಷಣ|| ಏಸು ದಿನಕೆ ನಿನ್ನ ವಾಸವ ಪೊಗಳುವೆ ಲೇಸ ಪಾಲಿಸೊ ನಿತ್ಯ ವಾಸವನುತನೆ [1] ಭಕ್ತಿಯೊಳು ಭಜಿಪೆನು ರಕ್ತಾಂಬರಧರ ಮುಕ್ತಿ ಪಥವೀಯೋ ಶಕ್ತಿ ಸ್ವರೂಪ [2] ಪೊಡವಿಯೊಳಗೆ ನಿನ್ನ ಬಿಡುವರಾರೋ ರನ್ನ ಕಡು ಹರುಷದಿ ಕಾಯೋ ವಿಜಯ ವಿಟ್ಟಲ ದಾಸ [3] ------------------------------------------ gajavadana paaliso trijagadoDeya Shri bhujaga bhushaNa|| Esu dinake ninna vAsava pogaLuve lEsa pAliso nitya vAsavanutane[1] bhaktiyoLu bhajipenu raktAmbaradhara mukti pathaveeyo shakti swaroopa[2] poDaviyoLage ninna biDuvarAro ranna kaDu harushadi kaayo vijaya viTTaladAsa[3] 1.Audio Link by Sangeetha katti 2.Audio link by Sudha Raghunathan[song1]
ವನಮಾಲಿ ರಾಧ ರಮಣ ಗಿರಿಧಾರಿ ಗೋವಿಂದ ನೀಲ ಮೇಘ ಸುಂದರ ನಾರಾಯಣ ಗೋವಿಂದ ಭಕ್ತ ಹೃದಯ ಮಂದಾರ ಬಾನು ಕೋಟಿ ಸುಂದರ ನಂದ ನಂದ ಗೋಪ ಬೃಂದ ನಾರಾಯಣ ಗೋವಿಂದ ನಾರಾಯಣ ಗೋವಿಂದ (x4) Vanamaali Radha Ramana Giridhari Govinda Neela Megha Sundara Narayana Govinda Bhakta Hrudaya Mandara Bhanu Koti Sundara Nanda Nanda Gopa Brinda Narayana Govinda Narayana Govinda (x4) 1.Audio Link by Usha Sethuraman 2.Audio Link by Vishakha hari[song starts at 2mins] 3.Audio link by another artist
Composer : G N Balasubramaniam raaga : saraswati taaLa : roopaka Language : Sanskrit ಪಲ್ಲವಿ ಸರಸ್ವತಿ ನಮೋಸ್ತುತೇ ಶಾರದೆ ವಿದ್ಯಾಪ್ರದೆ ಅನುಪಲ್ಲವಿ ಕರಧೃತ ವೀಣಾ ಪುಸ್ತಕ ವರಮಣಿ ಮಾಲಾಲಂಕೃತ ಚರಣ ನರಹರಿ ಸುತ ವಿಧಿ ಲಾಲಿತ ನವಮಣಿಯುತ ಕಂಭುಗಳೇ ಸುರ ಸೇವಿತ ಪದಯುಗಳೇ ಸುಧಾಕರ ಸಮಧವಳೇ --------------------------------------------------- pallavi saraswathi namOsthuthe shArade vidyAprade anupallavi karadhruta veeNA pustaka varamaNi mAlAlankruta charaNa naraharisuta vidhilAlita navamaNiyuta kambhugaLe surasEvita padayugaLE sudhAkara samadhavaLE 1.Audio Link by Priya Sisters 2.Audio link by S.Janaki 3.Audio Link by Chandrika Pai
Raaga: valachi taaLa: roopaka Composer: Muthaiah Bhaagavatar Language: Sanskrit ಪಲ್ಲವಿ ಜಾಲಂಧರ ಸುಪೀಠಸ್ತೇ ಜಪಾಕುಸುಮ ಭಾಸುರೆ ಅನುಪಲ್ಲವಿ ಬಾಲಾರ್ಕ ಕೋಟಿ ಪ್ರಭೆ ಬಾಲೆ ಪರಿಪಾಲಿಸೌ ಚಿಟ್ಟೆಸ್ವರ ಗ ,ಗಪ ದ,ದನಿ ಸ,ಸನಿ |ನಿದದಪ ಗ,ಗಪ ಗಪಗಸ|| ಗ,ಗಪ ಗಪಗಪ ದನಿದಪ |ದಪಗಸ ನಿದಪಗ ಸನಿದಪ|| ಗಪದನಿ ಸಗಪಗ ಸಗಸ, |ಸನಿದನಿ ಪದಗಪ ದಪಗಸ|| ಚರಣ ಭವರೋಗ ನಿವಾರಿಣಿಭಕ್ತಜನ ಪರಿಪಾಲಿನಿ ನವಶಕ್ತಿ ಸ್ವರೂಪಿಣಿನಾದ ಹರಿಕೇಶ ರಾಜ್ಞಿ (ಚಿಟ್ಟೆಸ್ವರ) ---------------------------------------- pallavi jaalandhara supeeThaste jApAkusuma bhAsurE anupallavi bAlArkka koTi prabhE bAlE paripAlisau chiTTe swara g,gp d,dn S,Sn|nddp g,gp gpgs|| g,gp gpgp dndp|dpgs ndpg Sndp|| gpdn SGPG SGS,|Sndn pdgp dpgs|| charaNa bhavaroga nivAriNi bhaktajana paripAlini navashakti svaroopiNinAda harikEsha rAgni (chiTTeswara) 1.Audio Link by Group of Artists 2.Audio link by Another Artist
1. Audio Link by Bala Brundam 2.Audio Link by M.L.Vasantha Kumari 3.Audio By another group 4.Audio by Narasimha Nayak (song 27) raaga: Arabhi taaLa: Adi ಆಡಿದನೋ ರಂಗ ಅದ್ಭುತದಿಂದಲಿ ಕಾಳಿಂಗನ ಫಣೆಯಲಿ [ಪ] ಪಾಡಿದವರಿಗೆ ಬೇಡಿದ ವರಗಳ ನೀಡುತಲಿ ದಯ ಮಾಡುತಲಿ ನಲಿದಾಡುತಲಿ ಬೆಣ್ಣೆ ಬೇಡುತಲಿ ಕೃಷ್ಣ [ಅ ಪ] ಅಂಬುರುಹೋದ್ಭವ ಅಖಿಳ ಸುರರು ಕೂಡಿ ಅಂಬರದಲಿ ನಿಂತು ಅವರ ಸ್ತುತಿಸೆ ರಂಭೆ ಊರ್ವಶಿ ರಮಣಿಯರೆಲ್ಲರು ಚಂದದಿಂ ಭರತನಾಟ್ಯವ ನಟಿಸೆ ಝಂತಟ ತಕಧಿಮಿ ತಧಿಗಿಣಿ ತೋಂ ಎಂದು ಝಂಪೆ ತಾಳದಿ ತುಂಬುರುನೊಪ್ಪಿಸೆ ಧಾ ಮ ಪ ಧ ಸ ರೀ ಎಂದು ಧ್ವನಿಯಿಂದ ನಾರದ ತುಂಬುರು ಗಾನವ ಮಾಡಲು ನಂದಿಯು ಮದ್ದಲೆ ಚೆಂದದಿ ಹಾಕಲು[1] ಫಣವ ಮೆಟ್ಟಿ ಬಾಲವ ಕೈಯಲಿ ಪಿಡಿದು ಫಳಫಳಿಸುತ್ತ ನಾಟ್ಯವನಾಡೆ ಚಂದ್ರಮಂಡಲದಂತೆ ಪೊಳೆಯುವ ಮುಖದೊಳು ಚಲಿಸುವ ನೀಲಕೇಶಗಳಾಡೆ ಕಾಲಲಂದುಗೆ ಗೆಜ್ಜೆ ಘಲು ಘಲು ಘಲುರೆನುತ ಉಡಿಗೆಜ್ಜೆ ಘಂಟೆಗಳಾಡೆ ದುಷ್ಟ ಕಾಳಿಂಗನ ಮೆಟ್ಟಿ ಭರದಿಂದ ಪುಟ್ಟ ಪಾದವ ಇಟ್ಟು ಶ್ರೀ ಕೃಷ್ಣನು ಮೆಟ್ಟಿದನು ತಕ ಧಿಮಿ ತಧಿಕೆನುತ[2] ಸುರರು ಪುಷ್ಪದ ವೃಷ್ಟಿಯ ಕರೆಯಲು ಸುದತಿಯರೆಲ್ಲರು ಪಾಡಲು ನಾಗಕನ್ನಿಕೆಯರು ನಾಥನ ಬೇಡಲು ನಾನಾ ವಿಧದಿ ಸ್ತುತಿ ಮಾಡಲು ರಕ್ಕಸರೆಲ್ಲರು ಕಕ್ಕಸವನೆ ಕಂಡು ದಿಕ್ಕು ದಿಕ್ಕುಗಳಿಗೆ ಓಡಲು ಚಿಕ್ಕವನಿವನಲ್ಲ ಪುರಂದರ ವಿಠ್ಠಲ ವೆಂಕಟರಮಣ ಬೇಗ ಯಶೋದೆ ಬಿಂಕದೊಳೆತ್ತಿ ಮುದ್ದಾಡೆ ಶ್ರೀ ಕೃಷ್ಣನ[3] ---------------------------------------------------------------Aadidano ranga adbhutadindali kALingana phaNeyali pADidavarige bEDida varagaLa neeDutali daya mADutali nalidADutali beNNe bEDutali krishna amburuhodbhava akhila suraru kooDi ambaradali nintu avara stutise rambe Urvashi ramaNiyarellaru chendadim bharata nATyava naTise jhamtaTa takadhimi tadhigiNi tom endu jhampe tALadi tumburanoppise da ma pa da sa ri endu dvaniyinda nArada tumbura gAnava mADalu nandiyu maddaLe chendadi hAkalu[1] phaNava meTTi bAlava kaiyali piDidu phaLa phaLisutta nATyavanADe chandra maNDaladante poLeyuva mukhadoLu chalisuva neela kEshagaLADe kAlalanduge gejje ghalu ghalu ghalurenuta uDi gejje ghaNTegaLADe dushTa kALingana meTTi bharadinda puTTa pAdava iTTu shrI krishNanu meTTidanu taka dhimi tadhikenuta[2] suraru pushpada vrushTiya kareyalu sudatiyarellaru pADalu nAga kannikeyaru nAthana bEDalu nAnA vidhadi stuti mADalu rakkasarellaru kakkasavane kaNDu dikku dikkugaLige Odalu chikkavanivanalla purandara viTTala vEnkaTaramaNa bEga yashOde binkadoLetti muddADe shrI krishNana[3]
ರಚನೆ: ಜಗನ್ನಾಥ ದಾಸರುಅಂಬ ತನಯ ಹೇರಂಬ ಪೂರ್ಣ ಕರುಣಾಂಬುಧೆ ತವ ಚರಣಕೆ ಎರಗುವೆ ದಶನ ಮೋದಕ ಪಾಶಾಂಕುಶ ಪಾಣಿ ಅಸಮಚಾರುದೇಷ್ಣ ಕುಸುಮನಾಭನ ಪುತ್ರ ಬೃಂದಾರಕ ವೃಂದ ವಂದಿತ ಚರಣ ಅರವಿಂದಯುಗಳ ದಯದಿಂದ ನೋಡೆನ್ನ ಯೂಥಪ ವದನ ಪ್ರದ್ಯೋತ ಸನ್ನಿಭ ಜಗನ್ನಾಥ ವಿಠಲನ ಸಂಪ್ರೀತಿ ವಿಷಯ ಜಯ 1.Audio Link by M.S.Sheela [song1] 2.Audio link by Parameshwara hegde [song4] 3.Audio Link by G.V.Athri[song7]
Composer :Purandara Daasa Raaga: NaaTa TaaLa : KhanDa chaapu ವಂದಿಸುವದಾದಿಯಲಿ ಗಣನಾಥನ || ಸಂದೇಹ ಸಲ್ಲ ಶ್ರೀ ಹರಿಯಾಜ್ಞೆಯಿದಕುಂಟು || ಹಿಂದೆ ರಾವಣ ತಾನು ವಂದಿಸದೆ ಗಜಮುಖನ ನಿಂದು ತಪವನು ಕೈದು ವರ ಪಡೆಯಲು ಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿ ತಂದ ವರಗಳನೆಲ್ಲ ಧರೆಗೆ ಇಳಿಸಿದನು || ಅಂದಿನಾ ಬಗೆಯರಿತು ಬಂದು ಹರಿ ಧರ್ಮಜಗೆ ಮುಂದೆ ಗಣಪನ ಪೂಜಿಸೆಂದು ಪೇಳೆ ಒಂದೇ ಮನದಲಿ ಬಂದು ಪೂಜಿಸಲು ಗಣನಾಥ ಹೊಂದಿಸಿದ ನಿರ್ವಿಘ್ನದಿಂದ ರಾಜ್ಯವನು || ಇಂದು ಜಗವೆಲ್ಲ ಉಮೆನಂದನನ ಪೂಜಿಸಲು ಚೆಂದದಿಂದಲಿ ಸಕಲ ಸಿದ್ಧಿಗಳನಿತ್ತು ತಂದೆ ಸಿರಿಪುರಂದರವಿಠಲನ ಸೇವೆಯೊಳು ಬಂದ ವಿಘ್ನವ ಕಳೆದಾನಂದವನು ಕೊಡುವ || ------------------------------------------pallavi vandisuvadAdiyali gaNanAthana anupallavi sandEha salla SrI hariyAjneyidakuNTu charaNa hinde rAvaNa tAnu vandisade gajamukhana nindu tapavanugaidu vara paDeyalu ondu nimiShadi bandu vighnavanu Acharisi tanda varagaLanella dharege iLisidanu[1] andinA bageyaritu bandu hari dharmajage munde gaNapana poojisendu pElE ondE manadali bandu pUjisalu gaNanAtha hondisida nirvighnadinda rAjyavanu[2] indu jagavella ume nandanana poojisalu chendadindali sakala siddhigaLanittu tande siri purandara viTTalana sEveyoLu banda vighnava kaLedAnandavanu koDuva[3] ------------------------------------------------- 1.Audio link by M. M.L.Vasantha kumari(song 1)[MI] 2.Audio link by Madhu balakrishna (song 33)[MI] 3.Audio Link by Sangeetha (song 1)[MI] 4.Audio link by Rajkumar bharati (song 2)[MI] 4.Audio link by R.K.Srikantan[Rg]
Composer :Muthiah Bhagavathar
Raaga: harinArAyaNi
ದೇವಿ ಶ್ರೀ ಮಹಾಲಕ್ಷ್ಮಿ ದೀನ ಪಾಲೆ ರಕ್ಷಿಸೆನ್ನ |ಪ|
ಭಾವ ಭಕ್ತಿಯಿಂದ ನಿನ್ನ ಭಜನೆಗೈವ ಭಾಗ್ಯವಿತ್ತು |ಅಪ|
ಚರಣ
ಅಷ್ಟಾದಶ ನಿಜ ಭುಜೆ ಅಮಿತ ದಯಾ ಶಾಲಿನಿ|
ದುಷ್ಟಾಸುರಮರ್ಧಿನಿ ಸುರವರ ಪರಿಪಾಲಿನಿ||
ಶಿಷ್ಟಾ ಜಿಷ್ಟಾರ್ತದೆ ದಿವ್ಯ ರತ್ನ ಭೂಷಣಿ|
ಅಷ್ಟಾಂಗದಿ ವಂದಿಸುವೆ ಹರಿಕೇಶ ಪುರವಾಸಿನಿ||
-----------------------------------------------
Devi shri mahaalakshmi deena pAle rakshisenna
bhAva bhaktiyinda ninna bhajanegaiva bhAgyavittu
aShTAdasha nija bhuje amita dayA shAlini
duShTAsura mardhini suravara paripAlini
shiShTA jiShTArtade divya ratna bhushaNi
ashTAngadi vandisuvE harikEshapura vAsini
1.Audio Link by M.S.Sheela (song1)
2.Audio Link by Prashanth, Shankar(does not work)
taaLa: Adi
Composer: Mahapatidasa
ನೀನೆ ಪರಮ ಪಾವನಿ ನಿರಂಜನಿ||
ಆದಿ ನಾರಾಯಣಿ ಸಾಧು ಜನ ವಂದಿನಿ
ಸದಾನಂದ ರೂಪಿಣಿ ಸದ್ಗತಿ ಸುಖ ದಾಯಿನಿ||
ಲಕ್ಷುಮಿ ರೂಪಿಣಿ ಸಾಕ್ಷಾತ್ಕರಿಣಿ
ರಕ್ಷ ರಕ್ಷಾತ್ಮಿಣಿ ಅಕ್ಷಯ ಪದ ದಾಯಿನಿ ||
ಅನಾಥ ರಕ್ಷಿಣಿ ದೀನೋದ್ಧಾರಿಣಿ
ಅನಂತಾನಂತ ಗುಣಿ ಮುನಿಜನ ಭೂಷಣಿ||
ದಾರಿದ್ರ ಭಂಜನಿ ದುರಿತ ವಿಧ್ವಂಸಿನಿ
ಪರಮ ಸಂಜೀವಿನಿ ಸುರ ಮುನಿ ರಂಜನಿ||
ಸ್ವಾಮಿ ಶ್ರೀ ಗುರುವಿನಿ ಬ್ರಹ್ಮಾನಂದ ರೂಪಿಣಿ
ಮಹಿಪತಿ ಕುಲ ಸ್ವಾಮಿನಿ ಪರಮ ಪಾವನಿ||
================================
nIne parama pAvani niranjani||
Adi narAyaNi sAdhu jana vandini
sadAnanda roopiNi sadgati sukha dAyini||
lakShmi roopiNi sAkShAtkAriNi
rakSha rakSAtmini akshaya pada daayini||
anAtha rakShiNi deenOddhAriNi
anantAnanta guNi munijana bhooShaNi||
dAridra bhanjani durita vidhvamsini
parama sanjeevini sura muni ranjani||
svAmi shri guruviNi brahmAnanda roopiNi
mahipati kula svAmini parama pAvani||
1.Audio link by M. Balamurali Krishna, Premalatha Diwakar(song5)
2.Audio link by Unnikrishnan (song7)
3.Audio Link by M.S.Sheela(song10)
ರಚನೆ :ಪುರಂದರ ದಾಸ ಶರಣು ಬೆನಕನೆ ಕನಕರೂಪನೆ ಕಾಮಿನಿ ಸಂಗದೂರನೇ ಶರಣು ಸಾಂಬನ ಪ್ರೀತಿ ಪುತ್ರನೆ ಶರಣು ಜನರಿಗೆ ಮಿತ್ರನೆ ಏಕದಂತನೆ ಲೋಕಖ್ಯಾತನೆ ಏಕವಾಕ್ಯ ಪ್ರವೀಣನೇ ಏಕವಿಂಶತಿ ಪತ್ರಪೂಜಿತನೇಕ ವಿಘ್ನ ವಿನಾಯಕ [1] ಲಂಬಕರ್ಣನೆ ನಾಸಿಕಾಧರನೆ ಗಾಂಭೀರ್ಯಯುತ ಗುಣಸಾರನೇ ಕಂಬುಕಂಧರ ಇಂದುಮೌಳಿಜ ಚಂದನಚರ್ಚಿತಾಂಗನೇ [2] ಚತುರ್ಬಾಹು ಚರಣ ತೊಡಲನೆ ಚತುರ ಆಯುಧ ಧಾರನೇ ಮತಿಯವಂತನೆ ಮಲಿನ ಜಲಿತನೆ ಅತಿಯ ಮಧುರಾಹಾರನೇ [3] ವಕ್ರತುಂಡನೆ ಮಹಾಕಾಯನೆ ಅರ್ಕಕೋಟಿ ಪ್ರದೀಪನೇ ಚಕ್ರಧರ ಹರಬ್ರಹ್ಮಪೂಜಿತ ರಕ್ತ ವಸ್ತ್ರಾಧಾರನೇ [4] ಮೂಷಿಕಾಸನ ಶೇಷಭೂಷಣ ಅಶೇಷ ವಿಘ್ನವಿನಾಯಕ ದಾಸ ಪುರಂದರವಿಟ್ಠಲೇಶನ ಈಶಗುಣಗಳ ಪೊಗಳುವೆ [5] 1.Audio Link by Parameshwara hegde (song 6) 2.Audio Link by Vidya bhushana (song 18) 3.Audio Link by M.S.Sheela(song 1) 4. Audio by a group of singers
ಕಂಡೆ ಕಂಡೆ ಸ್ವಾಮಿಯ ಬೇಡಿಕೊಂಡೆ || ಕಂಡೆ ತಿರುಪತಿ ವೆಂಕಟೇಶನ ಕಾರಣಾತ್ಮಕ ಸಾರ್ವಭೌಮನ ಕಾಮಿತಾರ್ಥಗಳೀವ ದೇವನ ಕರುಣಾನಿಧಿ ಎಂದೆನಿಸಿ ಮೆರೆವನ || ಕೋಟಿಸೂರ್ಯ ಪ್ರಕಾಶವೆನಿಪ ಕಿರೀಟವನು ಮಸ್ತಕದಿ ಕಂಡೆನು ನೋಟಕಾಶ್ಚರ್ಯವಾದ ನಗೆಮುಖನೊಸಲಿನಲಿ ತಿರುಮಣಿಯ ಕಂಡೆನು ಸಾಟಿಯಿಲ್ಲದೆ ಚತುರ ಹಸ್ತದಿ ಶಂಖಚಕ್ರಗದಾಬ್ಜ ಕಂಡೆನು ಬೂಟಕದ ಮಾತಲ್ಲ ಕೇಳಿರೋ ಭೂರಿದೈವರ ಗಂಡನಂಘ್ರಿಯ|| ತಪ್ಪುಕಾಣಿಕೆ ಕಪ್ಪವನು ಸಮಸ್ತದ್ವೀಪಗಳಿಂದಲಿ ತರಿಸುವ ಉಪ್ಪು ಓಗರಗಳನೆ ಮಾರಿಸಿ ಉಚಿತದಿಂದಲಿ ಹಣವ ಗಳಿಸುವ ಇಪ್ಪತ್ತು ದುಡ್ಡಿಗೆ ಸೇರು ತೀರ್ಥ ಒಪ್ಪದಲಿ ಕ್ರಯ ಮಾಡಿ ಕೊಡಿಸುವ ಸರ್ಪಶಯನ ಸಾರ್ವಭೌಮನ ಅಪ್ಪ ವೆಂಕಟರಮಣನಂಘ್ರಿಯ || ಉರದಿ ಶ್ರೀ ದೇವಿಯಳ ಕಂಡೆನು ಉನ್ನತದ ಕೌಸ್ತುಭವ ಕಂಡೆನು ಗರುಡ ಕಿನ್ನರನಾರದಾದಿ ಗಂಧರ್ವರ ಎಡಬಲದಲಿ ಕಂಡೆನು ತರತರದಿ ಭಕ್ತರಿಗೆ ವರಗಳ ಕರೆದು ಕೊಡುವುದ ನಿರತ ಕಂಡೆನು ಶರಧಿಶಯನನ ಶೇಷಗಿರಿಯ ವರದ ಪುರಂದರವಿಠಲನಂಘ್ರಿಯ ||1. Audio Link by Balamurali Krishna (song 5) 2.Audio Link by Vidya Bhushana ಕೆಲವು ಪದಗಳ ಅರ್ಥ: ನೊಸಲು - ಹಣೆ,ನೆತ್ತಿ,ತಲೆಯ ಮಧ್ಯಭಾಗ, ಬೂಟ - ಮೋಸ, ಕಪಟ ಅಂಘ್ರಿ - ಹೆಜ್ಜೆ, ಪಾದ,ಕಾಲು ಭೂರಿ - ಹೆಚ್ಚು, ಅಧಿಕ,ಚಿನ್ನ, ಹೊನ್ನು,ವಿಸ್ತಾರವಾದ, ವಿಶಾಲವಾದ ಕ್ರಯ - ಬೆಲೆ, ಕಿಮ್ಮತ್ತು ಓಗರ - ಬೇಯಿಸಿದ ಆಹಾರ, ಅನ್ನ ತರ - ಸಾಲು,ಕ್ರಮ,ಯೋಗ್ಯವಾದುದು
ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ ನೀ ದೇಹದೊಳಗೊ ನಿನ್ನೊಳು ದೇಹವೊ|| ಬಯಲು ಆಲಯದೊಳಗೊ ಆಲಯವು ಬಯಲೊಳಗೊ ಬಯಲು ಆಲಯವೆರಡು ನಯನದೊಳಗೊ ನಯನ ಬುದ್ಧಿಯೊಳಗೊ ಬುದ್ಧಿ ನಯನದೊಳಗೊ ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ || 1 || ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ ಸವಿಯು ಸಕ್ಕರೆಗಳೆರಡು ಜಿಹ್ವೆಯೊಳಗೊ ಜಿಹ್ವೆ ಮನಸಿನೊಳಗೊ ಮನಸು ಜಿಹ್ವೆಯೊಳಗೊ ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ || 2 || ಕುಸುಮದೊಳು ಗಂಧವೊ ಗಂಧದೊಳು ಕುಸುಮವೊ ಕುಸುಮ ಗಂಧಗಳೆರಡು ಆಘ್ರಾಣದೊಳಗೊ ಅಸಮಭವ ಕಾಗಿನೆಲೆಯಾದಿಕೇಶವರಾಯ ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ ಹರಿಯೆ || 3 || ----------------------------------------------------------- nee maayeyoLago, ninnoLu maayeyo nee dEhadhoLago, ninnoLu dEhavo || bayalu aalayadoLago, aalayavu bayaloLago bayalu aalayaveraDu nayanadoLago nayana buddhiyoLago, buddhi nayanadoLago nayana buddhigaLeraDu ninnoLago hariye||1|| saviyu sakkareyoLago, sakkareyu saviyoLago saviyu sakkareyaraDu jihveyoLago jihve manasinoLago, manasu jihveyoLago jihve manasugaLeraDu ninnoLago hariye||2|| kusumadoLu gandhavo, gandhadoLu kusumavo kusuma gandhagaLeraDu aaghraaNadoLago asamabhava kaagineleyaadi kEshavarAya usuralennaLavalla ella ninnoLago hariye||3||1. Audio Link by Bellur Sisters (song 33) 2. Audio Link by Vidya Bhushana (song 8)
raaga: bowLi taaLa: khanDa caapu Composer: Kanaka Daasa Language: KannaDa ಏಳು ನಾರಾಯಣ ಏಳು ಲಕ್ಷ್ಮೀರಮಣ ಏಳು ಶ್ರೀಗಿರಿ ಒಡೆಯ ಶ್ರೀವೆಂಕಟೇಶ ಏಳಯ್ಯ ಬೆಳಗಾಯಿತು ||ಪಲ್ಲವಿ|| ಕಾಸಿದ್ದ ಹಾಲನ್ನು ಕಾವಡಿಯೊಳು ಹೆಪ್ಪಿಟ್ಟು ಲೇಸಾಗಿ ಕಡೆದು ಹೊಸಬೆಣ್ಣೆ ಕೊಡುವೆ ಶೇಷಶಯನನೆ ಏಳು ಸಮುದ್ರ ಮಥನವ ಮಾಡು ದೇಶ ಕೆಂಪಾಯಿತು ಏಳಯ್ಯ ಹರಿಯೇ ||1|| ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ ಸುರರು ತಂದಿದ್ದಾರೆ ಬಲು ಭಕುತಿಯಿಂದ ಅರವಿಂದನಾಭ ಸಿರಿ ವಿಧಿಭವಾದಿಗಳೊಡೆಯ ಹಿರಿದಾಗಿ ಕೋಳಿ ಕೂಗಿತೇಳಯ್ಯ ಹರಿಯೇ ||2|| ದಾಸರೆಲ್ಲರು ಬಂದು ಧೂಳಿ ದರ್ಶನ ಗೊಂಡು ಲೇಸಾಗಿ ತಾಳ ದಂಡಿಗೆಯ ಪಿಡಿದು ಶ್ರೀಶನೆಲೆಯಾದಿ ಕೇಶವ ನಿಮ್ಮ ಪಾದವನು ಲೇಸಾಗಿ ಸ್ಮರಿಸಿ ಪೊಗಳುವರು ಹರಿಯೇ ||3|| ------------------------------------------------- pallavi YeLu narayanane, elu lakshmimi ramana, elu shri giriyoDeya, venkatesha,
Elayya belagayitu. kaasidda haalannu kaavaDiyoLu heppiTTu
lesaagi kaDedu hosabeNNe koDuve
shesha shayanane ELu samudra mathanava maaDu
desha kempaayitu ELayya hariye (1)
araLu mallige jaaji, parimaLada pushpagaLa suraru tandiddaare, balu bhakutiyinda Aravindanaabha siri vidhi bhavaadigaLoDeya lochana madhanagoplalakrishna hiridaagi koLi koogitu, elayya hariye (2) dasarellaru bandu, dhooLi darshana gonDu lesaagi taaLa danDigeyanu piDidu shreesha neleyaadi keshava nimma paadavanu lesaagi smarisi pogaLuvaru hariye (3)1. Audio Link by Vidya Bhushana (song 1) 2.Audio Link by Vidya Bhushana
Composer : Hariram acharya
ಜಯ ಜಯ ಹೇ ಭಗವತಿ ಸುರ ಭಾರತಿ, ತವ ಚರಣೌ ಪ್ರಣಮಾಮಹ
ನಾದ ಬ್ರಹ್ಮಮಯಿ ಜಯ ವಾಗೀಶ್ವರಿ, ಶರಣಂ ತೇ ಗಚ್ಚಾಮಹ
ತ್ವಮಸಿ ಶರಣ್ಯ ತ್ರಿಭುವನ ಧನ್ಯಾ, ಸುರ ಮುನಿ ವಂಧಿತ ಚರಣ
ನವ ರಸ ಮಧುರ ಕವಿತಾ ಮುಖರ, ಸ್ಮಿತ ರುಚಿ ರುಚಿರಾ ಭರಣ
ಆಸಿನಾ ಭವ ಮಾನಸ ಹಂಸೆ, ಕುಂದ ತುಹಿನ ಶಶಿ ಧವಳೇ
ಹರ ಜಗತ್ ಗುರು ಬೋಧಿ ವಿಕಾಸಂ, ಸ್ತಿತ ಪಂಕಜ ತನು ವಿಮಲೆ
ಲಲಿತ ಕಲಾಮಯಿ ಜ್ಞಾನ ವಿಭಾಮಯಿ ವೀಣಾ ಪುಸ್ತಕ ಧಾರಿಣಿ
ಮಥಿರ ಸ್ತಾಮ್ನೋ ತವ ಪದ ಕಮಲ, ಅಯಿ ಕುಂಟ ವಿಷ ಹಾರಿಣಿ
---------------------------------------------------------------
Jaya jaya hein bhagawati sura bharati,
tav charaNau praNamamaha
Naada brahmamayi jaya vageeshwari,
sharaNam te gacchaamaha
Twamasi sharaNya tribhuvana dhanya,
sura muni vandhita charaNa
Nav rasa madhura kavita mukhara,
smitha ruchi ruchira bharaNa
Aasinaa bhava maanasa hamse,
kunda tuhina shashi dhavale
Hara jagatguru bodhi vikaasam,
stita pankaja tanu vimale
Lalita kalaamayi gyana vibhaamayi
veena pustaka dhariNi
Mathira staamno tava pada kamala,
ayi kunta visha haariNi
1. Audio Link
2. Audio Link
3.Audio Link
4. Audio Link by Swagatalaxmi Dasgupta
Composer: Sri Raghavendra Swamy ಪಲ್ಲವಿ ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ ತೋರೋ ಮುಕುಂದನೆ || ಅನುಪಲ್ಲವಿ ಸುಂದರ ವದನನೆ ನಂದಗೋಪನ ಕಂದ ಮಂದರೋದ್ಧಾರ ಆನಂದ ಇಂದಿರಾ ರಮಣ || ಚರಣ ನೊಂದೆನಯ್ಯ ಭವಬಂಧನದೊಳು ಸಿಲುಕಿ ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು ಕಂದನಂತೆ ಎಂದೆನ್ನ ಕು೦ದುಗಳೆಣಿಸದೆ ತಂದೆ ಕಾಯೊ ಕೃಷ್ಣ ಕಂದರ್ಪಜನಕನೆ ||೧|| ಮೂಢತನದಿ ಬಹು ಹೇಡಿ ಜೀವ ನಾನಾಗಿ ದೃಢಭಕುತಿಯನು ಮಾಡಲಿಲ್ಲವೊ ಹರಿಯೆ ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ ಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ ||೨|| ಧಾರುಣಿಯೊಳು ಭೂಭಾರಜೀವ ನಾನಾಗಿ ದಾರಿತಪ್ಪಿ ನಡೆದೆ ಸೇರಿದೆ ಕುಜನರ ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯ ಧೀರವೇಣುಗೋಪಾಲ ಪಾರುಗಾಣಿಸೊ ಹರಿಯೆ ||೩|| -------------------------------------------------------------Indu Enage Govinda ninnaya padaaravindava toro mukundane|| Sundara vadanane nandagopana kanda mandarOddhara aananda indira ramaNa|| nondenayya bhavabandhanadoLu siluki munde daari kaaNade kundide jagadoLu kandanante endenna kundugaLeNisade tande kayo Krishna kandarpa janakane||1|| mooDatanadi balu hEDijeeva naanaagi dRuDhabhakutiyanu maadalillavo hariye noDalillavo ninna paaDalillavo mahime gaaDikaara Krishna bEDikombeno ninna||2|| dhaaruNiyoLu bhubhaara jeeva naanaagi daari tappi naDede seride kujanara aaru kaayuvarilla sEride ninagayya dheera veNugopala paarugaaNiso hariye||3|| 1. Audio Link by M.S.Sheela (song 8) 2.Audio Link by Bhimsen Joshi (song4) 3.Audio Link by P.B.Sreenivas 4.Audio Link by S.Janaki
ನರಸಿಂಹನ ಪಾದ ಭಜನೆಯ ಮಾಡೋ ||ಪ || ದುರಿತ ಪರ್ವತವ ಖಂಡಿಸುವ ಕುಲಿಶದಂತೆ ||ಅ|| ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ ವರ ಕಂಭದಿಂ ಬಂದ ಸಿರಿ ನರಹರಿ ನಮ್ಮ || ತರಳನ ಮೊರೆ ಕೇಳಿ ತ್ವರಿತದಲಿ ಬಂದು ದುರುಳನ ಕರುಳ ತನ್ನ ಕೊರಳಲ್ಲಿ ಧರಿಸಿದ || ಹರಿ ವಿರಿಂಚಾರಾದ್ಯರು ಕರವೆತ್ತಿ ಮುಗಿಯಲು ಪರಮ ಶಾಂತನಾದ ಪುರಂದರವಿಠಲ || Audio Link by Vidya Bhushana
ಹರಿ ಕುಣಿದಾ ನಮ್ಮ ಹರಿ ಕುಣಿದ ||ಪ ||ಅರಳೆಲೆಮಾಗಾಯಿ ಕೊರಳ ಮುತ್ತಿನ ಸರ ತರಳೆಯರೊಡಗೂಡಿ ಹರಿ ಕುಣಿದ ||
ಅಂದುಗೆ ಅರಳೆಲೆ ಬಿಂದುಲ್ಲಿ ಬಾಪುರಿ ಚೆಂದದಿ ನಲಿಯುತ ಹರಿ ಕುಣಿದ ||
ಅಕಳಂಕಚರಿತ ಮಕರಕುಂಡಲಧರ ಸಕಲರ ಪಾಲಿಪ ಹರಿ ಕುಣಿದ ||
ಉಟ್ಟ ಪಟ್ಟೆಯ ದಟ್ಟಿ ಇಟ್ಟ ಕಾಂಚಿಯ ಧಾಮ ದಿಟ್ಟ ಮಲ್ಲರ ಗಂಡ ಹರಿ ಕುಣಿದ ||
ಪರಮಭಾಗವತರ ಕೇರಿಯೊಳಾಡುವ ಪುರಂದರವಿಠಲ ಹರಿ ಕುಣಿದ ||
1.Audio Link by Venkatesh Kumar (song 8) 2.Audio Link by Ranjani Nagaraj below
Composer: Purandara Dasa Language: Kannada
ಪಲ್ಲವಿ ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಅಚ್ಯುತ ಅನಂತನ ಅನುಪಲ್ಲವಿತೂಗಿರೆ ವರಗಿರಿಯಪ್ಪ ತಿಮ್ಮಪ್ಪನ ತೂಗಿರೆ ಕಾವೇರಿ ರಂಗಯ್ಯನ ಚರಣ ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ ನಾಗಕನ್ನಿಕೆಯರು ತೂಗಿರೇ ನಾಗವೇಣಿಯರು ನೇಣು ಪಿಡಿದುಕೊಂಡು ಬೇಗನೆ ತೊಟ್ಟಿಲ ತೂಗಿರೆ (೧) ಇಂದ್ರ ಲೋಕದಲ್ಲುಪೇಂದ್ರ ಮಲಗ್ಯಾನೆ ಇಂದು ಮುಖಿಯರೆಲ್ಲ ತೂಗಿರೆ ಇಂದ್ರ ಕನ್ನಿಕೆಯರು ಬಂದು ಮುಕುಂದನ ತೊಟ್ಟಿಲ ತೂಗಿರೆ (೨) ಆಲದೆಲೆಯ ಮೇಲೆ ಶ್ರೀಲೋಲ ಮಲಗ್ಯಾನೆ ನೀಲ ಕುಂತಳೆಯರು ತೂಗಿರೆ ವ್ಯಾಳ ಶಯನ ಹರಿ ಮಲಗು ಮಲಗು ಎಂದು ಬಾಲ ಕೃಷ್ಣಯ್ಯನ ತೂಗಿರೆ (೩) ಸಾಸಿರ ನಾಮದ ಸರ್ವೋತ್ತಮನೆಂದು ಸೂಸುತ್ತ ತೊಟ್ಟಿಲ ತೂಗಿರೆ ಲೇಸಾಗಿ ಮಡುವಿನೊಳು ಶೇಷನ ತುಳಿದಿಟ್ಟ ದೋಷ ವಿದೂರನ ತೂಗಿರೆ (೪) ಅರಳೆಲೆ ಮಾಗಾಯಿ ಕೊರಳ ಮುತ್ತಿನಹಾರ ತರಳನ ತೊಟ್ಟಿಲ ತೂಗಿರೇ ಸಿರಿದೇವಿ ರಮಣನ ಪುರಂದರ ವಿಠಲನೆ ಕರುಣದಿ ಮಲಗೆಂದು ತೂಗಿರೆ (೫)
----------------------------------------------------------------------------
toogire rangana toogire krishnana toogire achuta anantana toogire varagiriyappa timmappana toogire kaveri rangayyanaa nagalokadalli narayana malagyane nagakannikeyaru thoogire nagaveniyaru neNu piDidukonDu begane tottila tugire [1] indra lokadalli upendra malagyane indu mukhiyarella toogire indra kannikeyaru bandu mukundana tottila thugire [2] aaladeleya mele shreelola malagyane neela kuntaLeyaru toogire vyalshayana hari malagu malagu endu bala krishnnayyana toogire [3] sasira namada sarvottamanendu soosutta tottila toogire lesaagi maDuvinoLu sheshana tuLiditta dosha vidoorana toogire [4] araLele magayi koraLa muttinahaara taraLana tottila toogire siridevi ramaNana purandara viThalane karuNadi malagendu toogire [5]1. Audio Link by Vidya Bhushana (song 24) 2.Audio Link by Pallavi Arun 3.Audio Link by Pushpa Jagadeesh 4.Audio Link by Kavitha Subramaniam
Raaga: reeti gowLa taaLa: aadi Composer: Tyagaraja Language: Sanskrit --------------------ಪಲ್ಲವಿ ಜೋ ಜೋ ರಾಮ ಆನಂದ ಘನ ಅನುಪಲ್ಲವಿ ಜೋ ಜೋ ದಶರಥ ಬಲ ರಾಮ ಜೋ ಜೋ ಭೂಜ ಲೋಲ ರಾಮ ಚರಣ ಜೋ ಜೋ ರಘುಕುಲ ತಿಲಕ ರಾಮ ಜೋ ಜೋ ಕುಟಿಲ ತರಲಕ ರಾಮ (1) ಜೋ ಜೋ ನಿರ್ಗುಣ ರೂಪ ರಾಮ ಜೋ ಜೋ ಸುಗುಣ ಕಲ್ಪ ರಾಮ (2) ಜೋ ಜೋ ರವಿ ಶಶಿ ನಯನ ರಾಮ ಜೋ ಜೋ ಫಣಿವರ ಶಯನ ರಾಮ (3) ಜೋ ಜೋ ಮೃದುತರ ಭಾಷ ರಾಮ ಜೋ ಜೋ ಮಂಜುಳಾ ವೇಷ ರಾಮ (4) ಜೋ ಜೋ ತ್ಯಾಗರಾಜಾರ್ಚಿತ ರಾಮ ಜೋ ಜೋ ಭಕ್ತ ಸಮಾಜ ರಾಮ (5) -------------------------------------------------------------------------------------pallavi jo jo rAma Ananda ghana anupallavi jo jo dasharatha bAla rAma jo jo bhuja lola rAma charaNa jo jo raghukula tilaka rAma jo jo kuTila taralaka rAma(1) jo jo nirguNa roopa rAma jo jo suguNa kalpa rAma(2) jo jo ravi shashi nayana rAma jo jo phaNivara shayana rAma(3) jo jo mruduthara bhASha rAma jo jo manjuLa vEsha rAma(4) jo jo tyAgarAjArchita rAma jo jo bhakta samAja rAma(5) 1.Audio Link by Sowmya 2. Audio link by Bombay Sisters
Composer: Purandara Daasa Raaga: Hamsanaada ಇನ್ನೂ ದಯ ಬಾರದೇ ದಾಸನ ಮೇಲೆ ಪನ್ನಗ ಶಯನ ಶ್ರೀ ಪರಮ ಪುರುಷ ನಾನಾ ದೇಶಗಳಲ್ಲಿ ನಾನಾ ಕಲಗಳಲ್ಲಿ ನಾನಾ ಯೋನಿಗಳಲ್ಲಿ ನೆಲಿದು ಹುಟ್ಟಿ ನಾನು ನನ್ನದು ಎಂಬ ನರಕದೊಳಗೆ ಬಿದ್ದುನೀನೆ ಗತಿ ಎಂದು ನಂಬಿದ ದಾಸನ ಮೇಲೆ ಮನೋವ ಕಾಯದಿಂದ ಮಾಡಿದ ಕರ್ಮಗಳೆಲ್ಲ ದಾನವಾಂತಕ ನಿನಗೆ ದಾನವಿತ್ತೆ ಏನು ಮಾಡಿದರೇನು ಪ್ರಾಣ ನಿನ್ನದು ಸ್ವಾಮಿಶ್ರೀನಾಥ ಪುರಂದರ ವಿಠಲನ ದಾಸನ ಮೇಲೆ --------------------------------------------------------- innu daya bArade dAsana mele pannaga shayana Sri parama purusha nAna deshagaLalli nAna kAlagaLalli nAna yOnigaLalli nalidu hutti nAnu nannadu emba narakadoLage biddu neene gathi endu nambida dAsana mEle manova kAyadinda mAdida karmagaLella dAnavantaka ninage dAna vitte yEnu mAdidarenu prAna ninnadu swami SrinAtha Puranadara Vittala na dAsa na mEle1.Audio link by Bombay Jayashree 2. Audio by Sudha Raghunathan below
ಪಲ್ಲವಿ ವೆಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ ಬ್ರಹ್ಮಶಂಕರಾದಿ ವಂದ್ಯ ಎನಗೆ ಮುಕ್ತಿ ತೋರಿಸೊ ಚರಣ ನಷ್ಟ ಮೊದಲಾದಂಥ ಕಷ್ಟ ಬಿಡಿಸೊ ನಿನ್ನ ಪಟ್ಟದ ರಾಣಿಗೆ ಹೇಳಿ ಪದವಿ ಕೊಡಿಸೊ ಇಷ್ಟ ಭಕ್ತಜನರೊಳು ಎನ್ನ ಸೇರಿಸೊ ಈ ಸೃಷ್ಟಿಯೊಳು ನಿನ್ನ ದಾಸಾನು ದಾಸನೆನಿಸೊ [೧] ಉಟ್ಟು ಉಂಡು ಮಿಕ್ಕಿದ್ದೆಲ್ಲ ಎನಗೆ ಹಾಕಿಸೊ ಪೊಂಬಟ್ಟಲೊಳಗಿನ ಹಾಲು ಉಚ್ಚಿಷ್ಟ ಹಾಕಿಸೊ ಗಟ್ಯಾಗಿ ಸಕ್ಕರೆ ತುಪ್ಪ ರೊಟ್ಟಿ ಉಣ್ಣಿಸೊ ಮುಂದೆ ಹುಟ್ಟಿ ಇಹ ಜನ್ಮಂಗಳ ಎನಗೆ ಬಿಡಿಸೊ [೨] ಕಿಟ್ಟಗಟ್ಟಿದ ಕಬ್ಬಿಣಕ್ಕೆ ಪುಟವ ಹಾಕಿಸೊ ಉತ್ಕೃಷ್ಟ ಬಂಗಾರದೊಳು ಎನ್ನ ಸೇರಿಸೊ ಬೆಟ್ಟಿಗೆ ಉಂಗುರ ಮಾಡಿ ಎನ್ನ ಧರಿಸೊ ಸ್ವಾಮಿ ದಿಟ್ಟ ಪುರಂದರ ವಿಠಲನೆ ದಯದಿ ಪಾಲಿಸೊ [೩] Audio Link by Balamurali Krishna
Composer: Dayananda Saraswati raaga: Durga taaLa: aadi Language: Sanskrit ಪಲ್ಲವಿ ರಾಮಂ ಭಜೆ ಶ್ಯಾಮಂ ಮನಸಾ ರಾಮಂ ಭಜೆ ಶ್ಯಾಮಂ ವಚಸ ಸರ್ವ ವೇದ ಸಾರ ಭೂತಂ ಸರ್ವ ಭೂತ ಹೇತು ನಾತಂ ಅನುಪಲ್ಲವಿ ವಿಭೀಷಣ ಅಂಜನೇಯ ಪೂಜಿತ ಚರಣಂ ವಸಿಷ್ಟಾದಿ ಮುನಿಗಣ ವೇದಿತ ಹೃದಯಂ ವಶೀಕೃತ ಮಾಯಾಕಾರಿತ ವೇಷಂ ಈಶಂ ಪುರೇಶಂ ಸರ್ವೇಶಂ ಚರಣ ನೀಲ ಮೇಘ ಶ್ಯಾಮಲಂ ನಿತ್ಯ ಧರ್ಮಚಾರಿಣಂ ದಂಡಿನಂ ಕೋ ದಂಡಿನಂ ದುರಾಚಾರ ಖಂಡನಮ್ ಜನ್ಮ ಮೃತ್ಯು ಜರವ್ಯಾಧಿ ದುಖ ದೋಷ ಭವಹರಂ ======================================= pallavi rAmam bhajE shyAmama manasA rAmam bhajE shyAmam bhajE vachasA sarva veda saara bhootam sarva bhoota hetu naatam anupallavi vibhIShaNa AnjanEya pUjita charaNam vasiShTAdi munigaNa vEdita hrudayam vashIkrita mayAkaarita vESham Esham purEsham sarvEsham charaNa nIla mEgha shyAmalam nitya dharmachAriNam daNDinam kOdaNDinam durAchAra khaNDanam janma mrutyu jarAvyAdhi dukha dOSha bhavaharam1. Audio Link by Maharajapuram Santhanam (Raaga) 2. Audio Link by Maharajapuram Santhanam (esnips)