Welcome to my Blog.I hope you enjoy the music.Please leave your comments and suggestions. Thankyou :)
All songs posted here have audio links!!

Sharanu Siddhi Vinayaka / ಶರಣು ಸಿದ್ಧಿವಿನಾಯಕ

February 24, 2009




ರಚನೆ: ಪುರಂದರ ದಾಸ

ರಾಗ: ಸೌರಾಷ್ಟ್ರ

ತಾಳ
: ಮಿಶ್ರಛಾಪು



ಶರಣು ಸಿದ್ಧಿ ವಿನಾಯಕ ಶರಣು ವಿದ್ಯಾ ಪ್ರದಾಯಕ

ಶರಣು ಪಾರ್ವತಿ ತನಯ ಮೂರುತಿ
ಶರಣು ಮೂಷಕ ವಾಹನ

ನಿಟಿಲ ನೇತ್ರನ ದೇವಿ ಸುತನೆ ನಾಗಭೂಷಣ ಪ್ರಿಯನೆ
ತಟಿಲತಾಂಕಿತ ಕೋಮಲಾಂಗನೆ ಕರ್ಣಕುಂಡಲ ಧಾರನೆ||||

ಬಟ್ಟ ಮುತ್ತಿನ ಪದಕ ಹಾರನೆ ಬಾಹುಹಸ್ತ
ಚತುಷ್ಟನೆ
ಇಟ್ಟ ತೊಡುಗೆಯ ಹೇಮ ಕಂಕಣ ಪಾಶ ಅಂಕುಶ ಧರನೆ||||

ಕುಕ್ಷಿ ಮಹಾ ಲಂಬೋದರನೆ ಇಕ್ಷುಚಾಪನ ಗೆಲಿದನೆ
ಪಕ್ಷಿವಾಹನ ಸಿರಿ ಪುರಂದರ ವಿಠಲನ ನಿಜ ದಾಸನೆ||||

1.AudioLink by Balamurali Krishna

2.AudioLink by Maharajapuram Santhanam -

3.Audio link by Rajkumar (song 3)

Kaarunya Mooruthiye / ಕಾರುಣ್ಯ ಮೂರುತಿಯೆ

February 19, 2009

ರಚನೆ : ಪುರಂದರ ದಾಸರು
ತಾಳ : ಆದಿ

AudioLink - VidyaBhushana ಅವರು ಹಾಡಿದ್ದಾರೆ

Jai Shiva Shankar Jai Gangadhar / ಜೈ ಶಿವ ಶಂಕರ

February 15, 2009


1.Audio by Rajan and Sajan Mishra [song 1]



2.Audio by Rajan and Sajan Mishra [song 1]



Kailasavaasa Gowreesh Esha/ಕೈಲಾಸವಾಸ ಗೌರೀಶ ಈಶ

February 12, 2009

ರಚನೆ : ವಿಜಯ ದಾಸರು

ಪಲ್ಲವಿ

ಕೈಲಾಸ ವಾಸ ಗೌರೀಶ ಈಶ

ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ
||

ಅಹೋರಾತ್ರಿಯಲ್ಲಿ ನಾನು ಅನುಜರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೋ ಮಹದೇವನೇ
ಅಹಿಭೂಶಣನೆ ಎನ್ನ ಅವಗುಣಗಳೆಣಿಸದಲೇ
ವಿಹಿತಧರ್ಮದಲಿಡು ವಿಷ್ಣು ಭಕುತಿಯನು
ಕೊಡು ಶಂಭೋ|೧|

ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ
ಧನುಜಗತ ಮದಹಾರಿ ದಂಡ ಪ್ರಣಾಮವ ಮಾಡ್ಪೆ
ಮಣಿಸು ಈ ಶಿರವ ಸಜ್ಜನ ಚರಣ ಕಮಲದಲ್ಲಿ
ಶಂಭೋ|೨|


ಭಾಗೀರಥಿಧರನೆ ಭಯವ ಪರಿಹರಿಸಯ್ಯ
ಲೇಸಾಗಿ ನೀ ಸಲಹೊ ಸಂತತ ಸರ್ವದೇವ
ಭಾಗವತಗಳ ಪ್ರಿಯ ವಿಜಯ ವಿಠಲನಂಘ್ರಿ
ಜಾಡು ಮಾಡದೆ ಭಜಿಪ ಭಾಗ್ಯವನು
ಕೊಡು ಶಂಭೋ|೩|

1.AudioLink by Vidya Bhushana

2.AudioLink by Balamuralikrishna(song 1)

3.AudioLink by Pt.Bhimsen Joshi

Kande Karunanidhiya / ಕಂಡೆ ಕರುಣಾನಿಧಿಯ

February 10, 2009

ರಚನೆ : ಪುರಂದರದಾಸರು
ತಾಳ : ಆದಿ


1.AudioLink - Balamuralikrishna (song 6)

2.Audio link by Upendra Bhat


ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ





















Ksheerabdhi Kannike / ಕ್ಷೀರಾಬ್ಧಿ ಕನ್ನಿಕೆ ಶ್ರೀಮಹಾಲಕ್ಷ್ಮಿ

February 3, 2009

ರಚನೆ: ಪುರಂದರ ದಾಸರು
ರಾಗ: ರಾಗಮಾಲಿಕೆ
ತಾಳ : ಆದಿ


(ರಾಗ : ಕುರುಂಜಿ)
ಪಲ್ಲವಿ
ಕ್ಷೀರಾಬ್ಧಿ ಕನ್ನಿಕೆ ಶ್ರೀಮಹಾಲಕ್ಷ್ಮಿ ಯಾರಿಗೆ ವಧುವಾಗುವೇ ನೀನು ||

ಚರಣ
ಶರಧಿ ಬಂಧನ ರಾಮಚಂದ್ರ ಮೂರ್ತಿಗೋ
ಪರಮಾತ್ಮ ಅನಂತ ಪದ್ಮನಾಭಗೋ
ಸರಸಿಜನಾಭ ಶ್ರೀ ಜನಾರ್ಧನ ಮೂರ್ತಿಗೋ
ಉಭಯಕಾವೇರಿ ರಂಗ ಪಟ್ಟಣದರಸಗೋ ||||

(ರಾಗ : ಯಮನ್ ಕಲ್ಯಾಣಿ )
ಚೆಲುವ ಮೂರುತಿ ಬೇಲೂರ ಚೆನ್ನಿಗರಾಯನಿಗೋ
ಗೆಳತಿ ಹೇಳು ಉಡುಪಿ ಶ್ರೀ ಕ್ರಿಷ್ಣರಾಯನಿಗೋ
ಇಳೆಯೊಳು ಪಾಂಡುರಂಗ ವಿಠಲ ರಾಯಗೋ
ನಳಿನಾಕ್ಷಿ ಹೇಳಮ್ಮ ಬದರಿ ನಾರಾಯಣಗೋ ||||

(ರಾಗ : ದರ್ಬಾರಿ ಕಾನಡ )
ಮಲಯಜ ಗಂಧೀ ಬಿಂದು ಮಾಧವರಾಯಗೋ
ಸುಲಭ ದೇವರು ಪುರುಷೋತ್ತಮಗೋ
ಫಲದಾಯಕ ನಿತ್ಯ ಮಂಗಳದಾಯಕಗೋ
ಚೆಲುವೆ ನಾಚದೆ ಪೇಳು ಶ್ರೀವೆಂಕಟೇಶಗೋ ||||

(ರಾಗ : ಸಿಂಧುಭೈರವಿ )
ವಾಸವಾರ್ಚಿತ ಕಂಚಿ ವರದರಾಜನಿಗೋ
ಶ್ರೀಮುಷ್ಣದಲ್ಲಿ ಆದೀವರಾಯನಿಗೋ
ಶೇಷಶಾಯಿಯಾದ ಶ್ರೀಮನ್ ನಾರಾಯಣಗೋ
ಸಾಸಿರ ನಾಮದೊಡೆಯ ಅಳಗಿರಿಶಗೋ ||||

(ರಾಗ : ಮಣಿರಂಗು )
ಶರಣಾಗತ ರಕ್ಷಕ ಸಾರಂಗ ಪಾಣಿಗೋ
ವರಗಳ ನೀಡುವ ಶ್ರೀನಿವಾಸಗೋ
ಕುರುಕುಲಾಂತಕ ರಾಜಗೋಪಾಲ ಮೂರ್ತಿಗೋ
ಸ್ಥಿರವಾಗಿ ಪುರಂದರ ವಿಟ್ಟಲರಾಯನಿಗೋ ||||



1.AudioLink by Maharajapuram Santhanam (musicindia)

2.AudioLink by Maharajapuram Santhanam
(raaga)

stat

Counter

Blog Widget by LinkWithin
 
Bhakthi Geetha / ಭಕ್ತಿ ಗೀತೆಗಳು - by Templates blogger