ಬಿಡುವೇನೇನಯ್ಯ ಹನುಮ, ಸುಮ್ಮನೆ ಬಿಡುವೇನೇನಯ್ಯ||
ಬಿಡುವೆನೇನೋ ಹನುಮ ನಿನ್ನ ಆಡಿಗಳಿಗೆ ಶಿರವ ಬಾಗಿ
ಒಡೆಯನಲ್ಲಿ ಜ್ಞಾನ ಭಕುತಿಯ ಕೊಡುವ ತನಕ ಸುಮ್ಮನೇ ನಿನ್ನ||
ಹಸ್ತವನ್ನು ಎತ್ತಿದರೇನು ಹಾರಗಳನ್ನು ಇಟ್ಟರೆ (ಹಾರಗಾಲ ಹಾಕಿದರೆ)ಏನು ಭೃತ್ಯನು ನಿನ್ನವನು ನಾನು ಹಸ್ತಿವರ್ಧನ ತೋರುವ ತನಕ|| ಹಲ್ಲುಮುಡಿಯ ಕಚ್ಚಿದರೇನು ಅಂಜುವೆನೇನೋ ನಿನಗೆ ನಾನು ಫುಲ್ಲನಾಭ ನಲ್ಲಿ ಎನ್ನ ಮನಸಾ ನೀ ನಿಲ್ಲಿಸುವ ತನಕ||
ಡೊಂಕು ಮೋರೆಯ ಬಾಲವ ತಿದ್ದಿ ಹೂಂಕರಿಸಿದರೆ ಅಂಜುವನಲ್ಲ ಕಿಂಕರ ನಿನ್ನವನು ನಾನು ಪುರಂಧರ ವಿಠಲನ ತೋರುವ ತನಕ|| ------------------------------------------------------------------------------- biDuvenenayya hanuma, summane biDuvenenayya|| biDuvenEno hanuma ninna aDigaLige shirava bAgi oDeyanalli jnana bhakutiya koDuva tanaka summane ninna|| hastavannu ettidarenu hAragaLannu iTTare(hAragAla hAkidare) enu bhRutyanu ninnavanu naanu hastivardhana thoruva thanaka|| hallumuDiya kacchidarEnu anjuveneno ninage naanu phulla nabhanalli enna manasa ni nillisuva tanaka|| Donku moreya bAlava tiddi hunkarisidare anjuvanallA kinkara ninnavanu naanu purandara Vittalana toruva tanaka||
1.Audio Link by Vidya Bhushana 2.Audio link by Narasimha Nayak
Composer: Purandara Daasa Raaga: Kalyani ಪಲ್ಲವಿ ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ ಅನುಪಲ್ಲವಿ ವಾಗಭಿಮಾನಿ ವರ ಬ್ರಹ್ಮಾಣಿ ಸುಂದರವೇಣಿ ಸುಚರಿತ್ರಾಣಿ ಚರಣ ಜಗದೊಳು ನಿಮ್ಮ ಪೊಗಳುವೆನಮ್ಮ ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ(1) ಪಾಡುವೆ ಶ್ರುತಿಯ ಬೇಡುವೆ ಮತಿಯ ಪುರಂದರವಿಠಲನ ಸೋದರ ಸೊಸೆಯ(2) ------------------------------------------------------------------------ Pallavi sharaNembe vaaNi poreye kalyANi Anupalalvi vAgabhimAni vara brahmANi sundara vENi sucaritrANi Charana jagadoLu nimma pogaLuvenamma hariya torisendu prArthipenamma (1) pADuve shrutiya bEDuve matiya purandara viTTalana sodara soseya(2) Audio Link by R.S.Ramakanth
ರಚನೆ : ಪುರಂದರ ದಾಸರು (ದಶಾವತಾರ ಆರತಿ)
ಜಯ ಮಂಗಳಂ ನಿತ್ಯ ಶುಭ ಮಂಗಳಂ ||ಪ|| ಮುಕುಟಕ್ಕೆ ಮಂಗಳ ಮತ್ಸ್ಯವತಾರಗೆ ಮುಖಕ್ಕೆ ಮಂಗಳ ಮುದ್ದು ಕೂರ್ಮಗೆ ಸುಕಂಠಕೆ ಮಂಗಳ ಸೂಕರ ರೂಪಗೆ ನಖಕ್ಕೆ ಮಂಗಳ ನರಸಿಂಹಗೆ || ವಕ್ಷಕ್ಕೆ ಮಂಗಳ ವಟು ವಾಮನಗೆ ಪಕ್ಷಕ್ಕೆ ಮಂಗಳ ಪರಶುರಾಮಗೆ ಕಕ್ಷಕ್ಕೆ ಮಂಗಳ ಕಾಕುತ್ಸ್ಥರಾಮಗೆ ಕುಕ್ಷಿಗೆ ಮಂಗಳ ಶ್ರೀಕೃಷ್ಣಗೆ || ಊರುಗಳಿಗೆ ಮಂಗಳ ಉತ್ತಮಬೌದ್ಧಗೆ ಚರಣಕ್ಕೆ ಮಂಗಳ ಚೆಲುವ ಕಲ್ಕಿಗೆ ಪರಿಪರಿ ರೂಪಗೆ ಪರಮಾನಂದಗೆ ಪುರಂದರವಿಠಲಗೆ ಜಯಮಂಗಳಂ || Audio Link by Bombay Sisters
ರಚನೆ : ವಾದಿರಾಜರು
ಆನಂದಮಯಗೆ ಚಿನ್ಮಯಗೆ ಶ್ರೀಮನ್ನಾರಾಯಣಗೆ ಆರತಿ ಎತ್ತಿರೆ ವೇದವ ತಂದು ಬೆಟ್ಟವ ಪೊತ್ತು ಧರಣೀಯ ಸಾಧಿಸಿ ಕಂಭದಿ ಬಂದವಗೆ ಭೂದಾನವ ಬೇಡಿ ನೃಪರ ಸಂಹರಿಸಿದ ಆದಿ ಮೂರುತಿಗೆ ಆರತಿ ಎತ್ತಿರೆ ೧ ಇಂದುವದನೆ ಸೀತೆ ಸಹಿತಲರಣ್ಯದಿ ನಂದಗೋಕುಲದಲ್ಲಿ ನಲಿದವಗೆ ಮಂದಗಮನೆಯರ ಮುಂದೆ ನಿರ್ವಾಣದಿ ನಿಂದ ಮೂರುತಿಗೆ ಆರತಿ ಎತ್ತಿರೆ ೨ ತುರಗವನೇರಿ ದೈತ್ಯರ ಸೀಳಿ ಸುಜನರ ಪೊರೆವ ಮಂಗಳ ಹಯವದನನಿಗೆ ವರದ ಯಾದವಗಿರಿ ಆದಿ ನಾರಾಯಣ ಚರಣ ಕಮಲಕೆ ಆರತಿ ಎತ್ತಿರೆ ೩ 1.Audio Link by Vidya Bhushana 2.Audio Link by Narasimha Nayak (song 4)
ರಚನೆ : ಪುರಂದರ ದಾಸರು (ಲಕ್ಷ್ಮೀ ವೆಂಕಟರಮಣ/ದಶಾವತಾರ ಆರತಿ) ಪಲ್ಲವಿ: ಪಂಕಜ ಮುಖಿಯರೆಲ್ಲರು ಬಂದು ಲಕ್ಷ್ಮೀ ವೇಂಕಟರಮಣಗಾರತಿ ಎತ್ತಿರೆ ಚರಣ: ಮತ್ಸ್ಯಾವತಾರಗೆ ಮಂದರೋದ್ಧಾರಗೆ ಅಚ್ಚರಿಯಿಂದ ಭೂಮಿ ತಂದವಗೆ ಹೆಚ್ಚಾದ ಉಕ್ಕಿನ ಕಂಭದಿಂದಲಿ ಬಂದ ಲಕ್ಷ್ಮೀ ನರಸಿಂಹಗಾರತಿ ಎತ್ತಿರೆ(1) ವಾಮನ ರೂಪಲಿ ದಾನ ಬೇಡಿದವಗೆ ಪ್ರೇಮದಿ ಕೊಡಲಿಯ ಪಿಡಿದವಗೆ ರಾಮಚಂದ್ರನಾಗಿ ದಶ ಶಿರನನು ಕೊಂದ ಸ್ವಾಮಿ ಶ್ರೀ ಕೃಷ್ಣಗಾರತಿ ಎತ್ತಿರೆ(2) ಬತ್ತಲೆ ನಿಂತಗೆ ಬೌದ್ಧಾವತಾರಗೆ ಉತ್ತಮ ಅಶ್ವನೇರಿದಗೆ ಭಕ್ತರ ಸಲಹುವ ಪುರಂದರ ವಿಠಲಗೆ ಮುತ್ತೈದೆಯರಾರತಿ ಎತ್ತಿರೆ(3) Lakshmi Venkataramana aarati / Dashavatara aarti 1.Audio link by Balamurali Krishna 2.Audio Link by Vidya Bhushana
Composer : Purandara Daasa Language : Kannada Raaga : Kaapi 1.Audio Link by M.S.Subbalakshmi 2.Audio Link by Unnikrishnan 3.Audio Link by Rajkumar Bharati ಜಗದೋದ್ಧಾರನ ಆಡಿಸಿದಳೆಶೋದಾ ಜಗದೋದ್ಧಾರನ (ಪ) ಜಗದೋದ್ಧಾರನ ಮಗನೆಂದು ತಿಳಿಯುತ ಸುಗುಣಾಂತ ರಂಗನ ಆಡಿಸಿದಳೆಶೋದೆ (ಅ ಪ) ನಿಗಮಕೆ ಸಿಲುಕದ ಅಗಣಿತ ಮಹಿಮನ ಮಗುಗಳ ಮಾಣಿಕ್ಯನ ಆಡಿಸಿದಳೆ ಯಶೋದೆ (1) ಅಣೋರಣೀಯನ ಮಹತೋ ಮಹಿಮನ ಅಪ್ರಮೇಯನ ಆಡಿಸಿದಳೆಶೋದಾ (2) ಪರಮ ಪುರುಷನ ಪರವಾಸುದೇವನ ಪುರಂದರ ವಿಠಲನ ಆಡಿಸಿದಳೆಶೋದಾ (3) ------------------------------------------------------------ Pallavi jagadoddhArana aaDisidaLu yashode Anupallavi jagadodhArana maganendu tiLiyuta suguNAnta ranganA AdisidaLe yashoda charaNa nigamakE silukada agaNita mahimana magugaLa mANikyana ADisidaLu yashoda (1) aNOraNIyana mahato mahimana apramEyana ADisidaLeshoda (2) parama puruShana paravAsudEvana purandara vittalana ADisidaLu yashode (3)
ಸ್ನೇಹಿತರೇ ,ನನ್ನ ಬ್ಲಾಗ್ ಶುರು ಮಾಡಿ ಇವತ್ತಿಗೆ 1 ವರ್ಷ ಆಯಿತು. ಈ ಸಂದರ್ಭದಲ್ಲಿ ಓದುಗರಿಗೆಲ್ಲ ಧನ್ಯವಾದ ಹೇಳಕ್ಕೆ ಇಷ್ಟ ಪಡ್ತೀನಿ.
ಭಕ್ತಿ ಗೀತ ಬ್ಲಾಗಿಗೆ ಭೇಟಿ ನೀಡಿದ ಎಲ್ಲರಿಗೂ ನನ್ನ ಅನಂತ ಧನ್ಯವಾದಗಳು!!! ಇಲ್ಲಿಗೆ ಮತ್ತೆ ಬರುತ್ತಾ ಇರಿ, ನಿಮ್ಮ ಅಭಿಪ್ರಾಯ , ಸಲಹೆಗಳನ್ನ ನನಗೆ ಖಂಡಿತ ತಿಳಿಸಿ. ಮತ್ತೊಮ್ಮೆ ಧನ್ಯವಾದಗಳು:)
Some numbers for you:
70 songs - both lyrics and audio links 15000 Hits
Thanks a lot for your support and appreciation :)
---------------------------------------------------------------
Composer : Purandara Daasa
Language : Kannada
click on the image below to enlarge. Kalyanam thulasi kalyanam / ಕಲ್ಯಾಣಂ ತುಳಸೀ ಕಲ್ಯಾಣಂ
Audio Link by Nityashree Mahadevan ------------------------------------------------------------- Composer : Purandara Daasa raaga: Bheempalasi taaLa : KhanDachapu ಪಲ್ಲವಿ ನಂದ ತನಯ ಗೋವಿಂದನ ಭಜಿಪುದು ಆನಂದವಾದ ಮಿಠಾಯಿ ಅನುಪಲ್ಲವಿ ಬಂಧಗಳನು ಭವ ರೋಗಗಳೆಲ್ಲನು ನಿಂದಿಪುದು ಈ ಮಿಠಾಯಿ ಚರಣ ದಧಿ ಘೃತ ಕ್ಷೀರಂಗಳಿಗಿಂತಲೂ ಬಹು ಅಧಿಕವಾದ ಮಿಠಾಯಿ ಕದಳೀ ದ್ರಾಕ್ಷಿ ಖರ್ಜೂರ ರಸಗಳನು ಮೀರುವುದು ಈ ಮಿಠಾಯಿ ೧ ಪಂಚ ಭಕ್ಷ್ಯಂಗಳ ಷಡ್ರಸಾನ್ನಗಳ ಮಿಂಚಿದಂಥ ಮಿಠಾಯಿ ಕಂಚೀಶನೆ ರಕ್ಷಿಸು ಎಂದುಸಿರುವರ ಅಂಜಿಕೆ ಬಿಡಿಪ ಮಿಠಾಯಿ ೨ ಜಪ ತಪ ಸಾಧನಗಳಿಗಿಂತಲೂ ಬಹು ಅಪರೂಪದ ಮಿಠಾಯಿ ಜಿಪುಣ ಮತಿಗಳಿಗೆ ಸಧ್ಯವಲ್ಲದಿಹ ಪುರಂದರ ವಿಠಲ ಮಿಠಾಯಿ ೩ ---------------------------------------------------------------- Pallavi Nanda thanaya govindana bhajipudu AnandavAda miThAyi Anupallavi bandhagaLanu bhava rogagaLellanu nindipudu ee miThAyi Charana dadhi ghruta ksheerangaLigintalu bahu adhikavAda miThAyi kadaLi drAkshi kharjura rasagaLanu meeruvudu ee miThAyi (1) pancha bhakshyangaLa shaD rasAnnagaLa minchidanta miThAyi kanchishane rakshisu endusiruvara anjike biDipa miThAyi (2) japa tapa sAdhanagaLigintalu bahu aparoopada miThAyi jipuNa matigaLige sAdhyavalladiha purandara viThala miThAyi (3)
--------------------------------------------------------------------- Composer: purandara daasa
raaga: Chandrakauns
taala : aadi
ಕಂಡೆ ನಾ ಗೋವಿಂದನಾ ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ (ಪ) ಕೇಶವ ನಾರಾಯಣ ಶ್ರೀಕೃಷ್ಣನ ವಾಸುದೇವ ಅಚ್ಯುತಾನಂತನ ಸಾಸಿರ ನಾಮದ ಶ್ರೀಹೃಷೀಕೇಶನ ಶೇಷಶಯನ ನಮ್ಮ ವಸುದೇವಸುತನ (೧)ಮಾಧವ ಮಧುಸೂದನ ತ್ರಿವಿಕ್ರಮ ಯಾದವಕುಲವಂದ್ಯನ ವೇದಾಂತವೇದ್ಯನ ಇಂದಿರಾರಮಣನ ಆದಿಮೂರುತಿ ಪ್ರಹ್ಲಾದವರದನ (೨) ಪುರುಷೋತ್ತಮ ನರಹರಿ ಶ್ರೀಕೃಷ್ಣನ ಶರಣಾಗತರಕ್ಷಕನ ಕರುಣಾಕರ ನಮ್ಮ ಪುರಂದರವಿಠಲನ ನೆರೆ ನಂಬಿದೆನು ಬೇಲೂರ ಚೆನ್ನಿಗನ (೩) -------------------------------------------------------- kanDenA gOvindanA punDarikAkshana pANDava paksha krishNana keshava nArAyaNa shrI krishNana vAsudeva achyuta anantana sAsira nAmada shri hrishikeshana sesha shayana namma vasudeva sutana 1 madhava madhusudana trivikramana yadavakula vandyana vEdantavEdyan indira ramaNana aadimuruti prahlaada varadana 2 purushottama narahari shri krishNana sharaNAgata rakshakanA karuNAkara namma purandara viThalanA nerenambidenu belura channigana 3
1.Audio link by Vidya Bhushana
2.Audio link by Vidya Bhushana (song30)
3.Audio link by Mahalakshmi Shenoy
ರಚನೆ : ಪುರಂದರ ದಾಸರು
ತಾಳ : ರೂಪಕ
ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ
ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡು ತಿಹಳು||ಪ||
ಕೋಟಿ ಕೋಟಿ ಭೃತ್ಯರಿರಲು | ಹಾಟಕಾಂಬರನ ಸೇವೆ |
ಸಾಟಿಯಿಲ್ಲದೆ ಮಾಡಿ | ಪೂರ್ಣ ನೋಟದಿಂದ ಸುಖಿಸುತಿಹಳು || ೧||
ಛತ್ರ ಚಾಮರ ವ್ಯಜನ ಪರಿಯಂಕ | ಪಾತ್ರ ರೂಪದಲ್ಲಿ ನಿಂತು |
ಚಿತ್ರ ಚರಿತನಾದ ಹರಿಯ | ನಿತ್ಯ ಸೇವೆ ಮಾಡುತಿಹಳು || ೨||
ಸರ್ವತ್ರದಿ ವ್ಯಾಪ್ತನಾದ | ಸರ್ವ ದೋಷರಹಿತನಾದ |
ಸರ್ವ ವಂದ್ಯನಾದ ಪುರಂದರ ವಿಟಲನ್ನ ಸೀವಿಸುವಳೋ ||೩||
--------------------------------------------------------------------------------
enu dhanyaLo lakumi yentha maanyaLo
saanuraagadinda hariya taane seve maadu tihalu||p||
koTi koTi bhrityariralu | haaTakaambarana seve |
saaTiyillade maadi | puurn nootadind sukhisutihaLu ||1||
chhatra chaamara vyajana pariyanka | paatra roopadalli nintu |
chitra charitanaada hariya | nitya seve maadutihaLu ||2||
sarvatradi vyaaptanaada | sarva dosharahitanaada |
sarva vandyanaada purandara vittalanna sevisuvaLo ||3||
ರಚನೆ : ಪುರಂದರ ದಾಸ ರಾಗ : ಮೋಹನ ತಾಳ : ಖಂಡ ಛಾಪು ಭಾಷೆ : ಕನ್ನಡ ಕಂಡು ಕಂಡು ನೀ ಎನ್ನ ಕೈ ಬಿಡುವರೇ ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ಹರಿ || ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ ನಿಂದೆಯಲಿ ನೊಂದೆನೈ ನೀರಜಾಕ್ಷ ತಂದೆತಾಯಿಯು ನೀನೆ ಬಂಧುಬಳಗವು ನೀನೆ ಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ||1|| ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ ಎಣಿಸಲಾರದ ಭವದಿ ಕಡುನೊಂದೆ ನಾನು ಸನಕಾದಿಮುನಿವಂದ್ಯ ವನಜಸಂಭವ ಜನಕ ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಕೃಷ್ಣಾ ||2|| ಭಕ್ತವತ್ಸಲನೆಂಬೊ ಬಿರುದು ಪೊತ್ತಾ ಮೇಲೆ ಭಕ್ತರಾಧೀನನಾಗಿರಬೇಡವೆ ಮುಕ್ತಿದಾಯಕ ನೀನು ಹೊನ್ನೂರುಪುರವಾಸ ಶಕ್ತಗುರು ಪುರಂದರವಿಠಲ ಶ್ರೀಕೃಷ್ಣಾ ||3|| -----------------------------------------------------------------------composer: Purandara Daasa raaga: Mohana taala :khanda chaapu kanDu kanDu nee enna kai biDuvare punDarikaaksha shri purushOttam hari|| bandhugaLu yenagilla badukinali sukhavilla nindeyali nondenai nirajaaksha tandetaayiyu neene bandhubaLagavu neene yendendigu ninna nanbidenO krishna||1|| kshanavondu yugavaagi truNakinta kaDeyaagi yeNisalaarada bhavadi kaDunonde naanu sanakaadi munivandya vanajasambhava janaka phaNishaayi prahlaada golida shrikrishna||2|| bhaktavatsalanembo birudu potta mele bhaktara adheenanaagirabeDave muktidaayaka neenu honnuuru puravaasa shaktaguru purandara viThala shrikrishna||3||1. Audio link by Vidya Bhushana 2. Audio link by S.Janaki (from kannada movie)
ರಚನೆ : ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಜಿಪಲ್ಲವಿ ಹೇ ವಾಣಿ ಹೇ ವಾಣಿ ಹೇ ವಾಣಿ ಹೇ ವಾಣಿ ಹೇ ವಾಣಿ ಚರಣ 1. ಐಂ ಬೀಜ ವಾಸೇ ಹೇ ವಾಣಿ , ಆನಂದ ಧಾರೆ ಹೇ ವಾಣಿ ಶ್ರೀ ಕಾಳಿದಾಸ ನೇತ್ರಿ ಹೇ ವಾಣಿ , ಕಾವ್ಯ ಪ್ರಕಾಶೆ ಹೇ ವಾಣಿ 2. ಓಂಕಾರ ವೆದ್ಯೇ ಹೇ ವಾಣಿ , ಭವರೋಗ ವೈದ್ಯೆ ಹೇ ವಾಣಿ ಸುಶ್ವೇತ ವರ್ಣೆ ಹೇ ವಾಣಿ , ಅಮೃತ ಪ್ರಕಾಶೆ ಹೇ ವಾಣಿ 3. ಪುಸ್ತಕ ಹಸ್ತೆ ಹೇ ವಾಣಿ , ವೇದ ಸ್ವರೂಪಿಣಿ ಹೇ ವಾಣಿ ಲಸದಕ್ಷ ಮಾಲೆ ಹೇ ವಾಣಿ , ನಾದ ಪ್ರಕಾಶೆ ಹೇ ವಾಣಿ 4. ಹಂಸಾದಿ ರೂಡೆ ಹೇ ವಾಣಿ , ಹಂಸೈ ರುಪಾಸ್ಯೆ ಹೇ ವಾಣಿ ವಿವೇಕ ಹಂಸೆ ಹೇ ವಾಣಿ , ಸೋಹಂ ಪ್ರಕಾಶೆ ಹೇ ವಾಣಿ 5. ವೀಣಾ ವಿನೋದಿನಿ ಹೇ ವಾಣಿ , ಯೋಗ ಪ್ರಕಾಶೆ ಹೇ ವಾಣಿ ವರಸಿದ್ಧಿ ದಾಯಿನಿ ಹೇ ವಾಣಿ , ಶ್ರೀ ಸಚ್ಚಿದಾನಂದಿ ಹೇ ವಾಣಿ ------------------------------------------------------------------- Composer : Sri Ganapati Sacchidananda Swamiji Pallavi:
Hey vaNi, hey vaNi, hey vaNi, Hey vaaNi ,hey vaaNi. Charana: 1. Aim beeja vaase hey vani ,Ananda dhaare hey vani Sri Kalidasa nethri hey vani, Kavya prakashe hey vani 2. Omkara vEdye hey vani, Bhavaroga vaidye hey vani Suswetha varNe hey vani, Amritha prakashe hey vani 3. Pusthaka hasthe hey Vani, Veda swarupini hey Vani Lasadaksha maale hey Vani, Naada prakashe hey Vani 4. Hamsadi ruDhe he Vani, Hamsai rupasye hey Vani Viveka hamse hey Vani, Soham prakashe hey Vani 5. Veena vinodini hey Vani, Yoga prakashe hey Vani Varasiddhi daayini hey Vani, Sri Sacchidanandi hey Vani
ರಚನೆ: ಶ್ರೀ ಗೋಪಾಲ ದಾಸರು ಭಾಷೆ : ಕನ್ನಡ ಪಾರ್ವತಿ ಪಾಲಿಸೆನ್ನ ಮಾನಿನಿ ರನ್ನೆ || ಪಾರ್ವತಿ ಭಕ್ತರ ಸಾರಥಿ ( ಸುರಜನ ) ವಂದಿತೆ ಸುರಪತಿ ಗಜಮುಖ ಮೂರುತಿ ಮಾತೆ|| ಮನದಭಿಮಾನಿಯೇ ನೆನೆವೆನು ನಿನ್ನ ಅನುಸರಿಸೆನ್ನನು (ಕನಿಕರಿಸೆನ್ನನು) ಅಂಬುಜ ಪಾಣಿ|| ಮಂಗಳೆ ಮೃಡನ ಅಂತರಂಗಳೇ ಹರಿಪದ ಭೃಂಗಳೆ ತೊಂಗಳೇ ಪನ್ನಗ ವೇಣಿ|| ಗುಣ ಪೂರ್ಣ ವೇಣು ಗೋಪಾಲ ವಿಠಲನ್ನ ಕಾಣಿಸಿ ಕೊಡುವಂತ ಶೂಲಿಯ ರಾಣಿ|| -----------------------------------------------------------------Composer: Sri Gopala Daasa Language : Kannada Parvati paalisenna maanini ranne || Paarvati bhaktara saarathi (surajana) vandite surapati gajamukha muruti maate|| manadabhimaaniye nenevenu ninna anusarisennanu (kanikarisennanu) ambuja paaNi|| mangaLe mriDana antarangaLe haripada bhringaLe tongaLe pannaga vENi|| guNa purNa veNu gopala viTalanna kaaNisi koDuvanta shooliya raaNi || 1 . Audio Link by S P Balasubramanya 2 . Audio Link by M Venkatesh Kumar 3.Audio Link by VidyaBhushana [song 35]
This is a devi bhajan composed by Sri Sachchidananda Swamiji of Dattapeetham in Mysore. ಭುವನಗಳ ಪಾಲಿಸುವ ತ್ರಿಪುರೇಶ್ವರಿ ಸದ್ಬುದ್ಧಿ ಕೊಡು ನಮಗೆ ಮಾಹೇಶ್ವರಿ ||ಪಲ್ಲವಿ ||ಶ್ರೀ ಮಾತೆ ಸಿಂಹಾಸನಾಧೀಶ್ವರಿ ಚಿದ -ರೂಪಿ ಚಿತ್ -ಸುಖಾ ನಂದೇಶ್ವರಿ ವಾಚಾಮ ಗೋಚರಿ ವಾಗೀಶ್ವರಿ ಷಟ್ಚಕ್ರ ವಾಸಿನಿ ಯೋಗೀಶ್ವರಿ ||1||ಶುಭ ಮತಿಯ ನೀಡೆಮಗೆ ಶಿವಶಂಕರಿ ಅಭಯವನು ಕೊಡು ನಮಗೆ ಅಭಯಂಕರಿ ಉಭಯಾರ್ಥ ಪಾಲಿಸುತ ಸರ್ವೇಶ್ವರಿ ಕಾಪಾಡು ಸಚ್ಚಿದಾನಂದೇಶ್ವರಿ ||2|| ---------------------------------------------------------- Bhuvanagala paalisuva tripureshwari sadbuddhi koDu namage maahEshwari shri maate simhaasanaadheeshwari chid-roopi chit-sukha nandEshwari vaachama gochari vaagishwari shaTchakra vaasini ygishwari ||1|| shubha matiya neeDemage shivashankari abhayavanu kodu namage abhayankari ubhayaartha paalisuta sarveshwari kaapaaDu sachchidanandEshwari ||2|| Audio Link of Bhajan sung by Swamiji : 1.Audio Link (from dattapeetham website) 2.Audio Link (from last.fm)
One of the popular kannada song on Goddess Saraswati
ಇವಳೇ ವೀಣಾ ಪಾಣಿ ವಾಣಿ
ತುಂಗಾ ತೀರ ವಿಹಾರಿಣಿ ಶೃಂಗೇರಿ ಪುರ ವಾಸಿನಿ||
ಶಾರದಾ ಮಾತೆ ಮಂಗಳದಾತೆ ಸುರ ಸಂಸೇವಿತೆ ಪರಮ ಪುನೀತೆ
ವಾರಿಜಾಸನ ಹೃದಯ ವಿರಾಜಿತೆ ನಾರದ ಜನನಿ ಸುಜನ ಸಂಪ್ರಿತೇ||1||
ಆದಿ ಶಂಕರ ಅರ್ಚಿತೇ ಮಧುರೆ ನಾದ ಪ್ರಿಯೆ ನವಮಣಿ ಮಯ ಹಾರೆ
ವೇದ ಅಖಿಲ ಶಾಸ್ತ್ರಾ ಆಗಮ ಸಾರೆ ವಿದ್ಯಾ ದಾಯಿನಿ ಯೋಗ ವಿಚಾರೆ||2||
-------------------------------------------------------------------------------
ivaLe veeNa paaNi vaaNi
tunga teera vihaariNi sringeri pura vaasini||
shaarada maate mangala daate
sura samsevita parama puneete
vaarijaasana hrudaya viraajite
narada janani sujana sampreete||1||
adi shankara archite madhure
naada priye navamaNi maya haare
veda akhila shaastra aagama saare
vidya daayini yoga vichaare||2||
Audio by S.Janaki
A popular Ganapati Bhajan, composed by Tulsi Das. Gayiye Ganapati Jaga vandana Shankar suvan bhavaani nandana || Siddhi sadan Gaj vadan vinayak Krupa sindhu sundar sab daayak || Modak priya muda mangal daata Vidya varidhi buddhi vidhaata || Mangat tulsi das kar jore Bas hi raam siya maanas more || ----------------------------------------------------------------------- ಗಾಯಿಯೇ ಗಣಪತಿ ಜಗ ವಂದನ ಶಂಕರ್ ಸುವನ ಭವಾನಿ ನಂದನ || ಸಿದ್ಧಿ ಸದನ ಗಜ ವದನ ವಿನಾಯಕ ಕೃಪಾ ಸಿಂಧು ಸುಂದರ ಸಬ್ ದಾಯಕ || ಮೋದಕ ಪ್ರಿಯ ಮುದ ಮಂಗಳ ದಾತ ವಿದ್ಯಾ ವಾರಿಧಿ ಬುದ್ಧಿ ವಿಧಾತಾ || ಮಾಂಗ ತ ತುಲಸಿ ದಾಸ ಕರ್ ಜೋರೆ ಬಸ ಹಿ ರಾಮ ಸಿಯ ಮಾನಸ ಮೋರೆ || Audio renditions by various artists: 1. Audio Link by Chandrakantha Courtney 2. Audio Link by Chitra 3. Audio Link by Ashwini Bhide Deshpande 4. Another Audio Link by a group
ರಚನೆ : ಪುರಂದರ ದಾಸರು ರಾಗ : ವಸಂತ ತಾಳ : ಆದಿ ಭಾಷೆ : ಕನ್ನಡ ಪಲ್ಲವಿ ಕೊಡು ಬೇಗ ದಿವ್ಯಮತಿ ಸರಸ್ವತಿ || ಅನುಪಲ್ಲವಿ ಮೃಡ ಹರಿಹರ ಮುಖರೊಡೆಯಳೆ ನಿನ್ನಯ ಅಡಿಗೆರಗುವೆ ಅಮ್ಮ ಬ್ರಹ್ಮನ ರಾಣಿ || ಚರಣ ಇಂದಿರಾ ರಮಣನ ಹಿರಿಯ ಸೋಸಯು ನಿನು ಬಂದೆನ್ನ ವದನದಿ ನಿಂದು ನಾಮವ ನುಡಿಸೆ ||1|| ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದರಾಣಿ ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ ||2|| ಪತಿತ ಪಾವನೆ ನೀ ಗತಿಯೆಂದು ನಂಬಿದೆ ಸತತ ಪುರಂದರ ವಿಠಲನ ತೋರೆ ||3|| ------------------------------------------------------------------------------Composer : Purandara DaasaRaaga : Vasantha Taala : Adi pallavi koDu bEga divyamati saraswati anupallavi mruDa harihara mukharoDayaLe ninnaya adigeraguve amma brahmana rANi charaNa indirA ramaNana hiriya sosayu nInu bandenna vadanadi nindu nAmava nuDise||1|| akhila vidyAbhimAni ajana paTTadaraNi sukhavittu pAlise sujana shirOmaNi ||2|| patita pAvane nI gatiyendu nambide satata purandara viTalana tOre||3|| 1.Audio by Erode Rajamani 2.Audio by SriSangita below: Ugabhoga followed by the song
ರಾಗ : ಶಂಕರಾಭರಣ ತಾಳ : ಏಕ ರಚನೆ : ಮುತ್ತುಸ್ವಾಮಿ ದೀಕ್ಷಿತರು ಶಕ್ತಿ ಸಹಿತ ಗಣಪತಿಂ ಶಂಕರಾದಿ ಸೇವಿತಂ ವಿರಕ್ತ ಸಕಲ ಮುನಿವರ ಸುರ ರಾಜ ವಿನುತ ಗುರುಗುಹಂ ಭಕ್ತಾದಿ ಪೋಷಕಂ ಭವಸುತಂ ವಿನಾಯಕಂ ಭುಕ್ತಿ ಮುಕ್ತಿ ಪ್ರದಂ ಭೂಷಿ ತಾಂಗಂ ರಕ್ತ ಪಾದಂಬುಜ ಭಾವಯಾಮಿ -------------------------------------------------------------------------raaga : shankarabharana taala : Eka Composer : Muttuswami Dikshitir shakti sahita gaNapatim shankaraadi sEvitam virakta sakala munivara sura rAja vinuta guruguham bhaktAdi pOShakam bhavasutam vinayakam bhukti mukti pradam bhooshitaangam rakta padAmbujam bhAvayAmi
ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯುವಾಗ ಹೇಳಿಕೊಡುವ ಮೊದಲ ಹಾಡು / ಗೀತೆ ಇದು . ಇದು ಚಿಕ್ಕದಾಗಿದ್ದು ಕಲಿಯಲು ಸುಲಭವಾಗಿದೆ. ಮೊದಲು ಗಣಪತಿಗೆ ವಂದಿಸಿ ಮುಂದೆ ಅಮೇಲೆ ಹೋಗಬೇಕು ಅಲ್ಲವೇ :) ರಾಗ : ಮಲಹರಿ ತಳ : ರೂಪಕ ರಚನೆ ಪುರಂದರದಾಸ ಪಲ್ಲವಿ : ಲಂಬೋದರ ಲಕುಮಿ ಕರಾ ಅಂಬಾ ಸುತ ಅಮರ ವಿನುತ ಚರಣ : ಶ್ರೀ ಗಣನಾಥ ಸಿಂಧೂರ ವರ್ಣ ಕರುಣ ಸಾಗರ ಕರಿ ವಾದನ || ೧ || ಸಿದ್ಧ ಚರಣ ಗಣ ಸೇವಿತ ಸಿದ್ಧಿ ವಿನಾಯಕ ತೇ ನಮೋ ನಮೋ || ೨ || ಸಕಲ ವಿದ್ಯಾ ಆದಿ ಪೂಜಿತ ಸರ್ವೋತ್ತಮ ತೇ ನಮೋ ನಮೋ || ೩ || ------------------------------------------------------------- Raaga:Malahari Taala : Roopaka Composer : Purandara Dasa Pallavi: LambOdara Lakumi karaa Ambaa Sutha Amara Vinutha|| CharaNa: Sri Gananatha Sindhoora VarNa KaruNa Saagara Kari Vadana ||1|| Siddha CharaNa GaNa Sevitha Siddhi Vinayaka tE Namo Namo||2|| Sakala Vidya aadi Poojitha Sarvottama tE Namo Namo ||3||
ಪಲ್ಲವಿ
ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ
ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನು
ತರಳ ಪ್ರಹ್ಲಾದ ಹರಿ ವಿಶ್ವಮಯನೆಂದು
ಭರದೊದೆಯಲವನಪಿತ ಕೋಪದಿಂದ
ಸ್ಥಿರವಾದೊಳಿ ಕಂಭದಲಿ ತೋರು ತೋರೆನಲು
ಭರದಿಂದ ಬರಲದಕೆ ವೈಕುಂಠ ನೆರೆಮನೆಯೇ ೧
ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆ
ತರುಣಿ ಹಾ ಕೃಷ್ಣ ಎಂದರೆ ಕೇಳ್ದು
ಭರದಿಂದ ಅಕ್ಷಯಾಂಬರವೀಯೆ ಹಸ್ತಿನಾ
ಪುರಿಗೆ ದ್ವಾರಾವತಿಯು ಕೂಗಳತೆಯೇ ೨
ಅಣುಹೊತ್ತಿನೊಳೆಲ್ಲ ಪರಿಪೂರ್ಣ ವಿಶ್ವಮಯ
ಗಣನೆಯಿಲ್ಲದ ಮಹಾಮಹಿಮನೆನಿಪ
ಘನ ಕೃಪಾನಿಧಿ ನಮ್ಮ ಪುರಂದರ ವಿಠಲನ
ನೆನೆವರ ಮನದೊಳಿಹನೆಂಬ ಬಿರುದುಂಟಾಗಿ ೩
1.Audio Link -Vidya Bhushana (musicindiaonline - song 5)
2.Audio Link - Vidya Bhushana (rediff)
ರಚನೆ : ವ್ಯಾಸರಾಯರು
ರಾಗ : ಯಮನ್ ಕಲ್ಯಾಣಿ
ತಾಳ : ಮಿಶ್ರ ಛಾಪು
ಭಾಷೆ : ಕನ್ನಡ
ಪಲ್ಲವಿ
ಕೃಷ್ಣ ನೀ ಬೇಗನೇ ಬಾರೋ
ಅನುಪಲ್ಲವಿ
ಬೇಗನೆ ಬಾರೋ ಮುಖವನ್ನು ತೋರೋ
ಕಾಲಾಲಂದುಗೆ ಗೆಜ್ಜೆ ನೀಲದ ಭಾವುಲಿ
ನೀಲವರ್ಣನೆ ನಾಟ್ಯವಾಡುತ್ತ ಬಾರೋ ೧
ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರ
ಕೊರಳಲ್ಲಿ ಹಾಕಿದ ವೈಜಯಂತಿಮಾಲ ೨
ಕಾಶಿ ಪೀತಾಂಬರ ಕೈಯಲ್ಲಿ ಕೊಳಲು
ಪೂಶಿದ ಶ್ರೀ ಗಂಧ ಮೈಯೊಳು ಗಮ್ಮ ೩
ತಾಯಿಗೆ ಬಾಯಲ್ಲಿ ಜಗವನ್ನು ತೋರಿದ
ಜಗದೋದ್ಧಾರಕ ನಮ್ಮ ಉಡುಪಿ ಶ್ರೀ ಕೃಷ್ಣ ೪
1. Audio Link - by Bombay Jayashri
2. Audio Link - by Yesudas
ರಚನೆ : ಪುರಂದರ ದಾಸರು ಭಾಷೆ : ಕನ್ನಡ
ಮೂರುತಿಯೆನೆ ನಿಲ್ಲಿಸೋ , ಮಾಧವ ನಿನ್ನ ಮೂರುತಿಯೆನೆ ನಿಲ್ಲಿಸೋ ||ಪ||
ಎಳೆ ತುಳಸಿಯ ವನಮಾಲೆಯು ಕೊರಳೊಳು ಹೊಳೆವ ಪೀತಾಂಬರದಿಂದಲೊಪ್ಪುವ ನಿನ್ನ ||
ಮುತ್ತಿನ ಸರ ನವರತ್ನದುಂಗುರವಿಟ್ಟು ಮತ್ತೆ ಶ್ರೀ ಲಕುಮಿಯ ಉರದೊಳೊಪ್ಪುವ ನಿನ್ನ||
ಭಕ್ತರ ಕಲ್ಪತರು ಭಾಗ್ಯದ ಸುರಧೇನು ಮುಕ್ತಿದಾಯಕ ಸಿರಿ ಪುರಂದರ ವಿಠಲ ನಿನ್ನ|| 1.Audio Link - M.S.Sheela [song6]
2.Audio Link - Bhimsen Joshi
ರಚನೆ : ಶ್ರೀಪಾದ ರಾಯರು ( ಶ್ರೀ ಪಾದರಾಜರು ) ಭಾಷೆ : ಕನ್ನಡ ವಂದಿಪೆ ನಿನಗೆ ಗಣನಾಥ ಮೊದಲೊಂದಿಪೆ ನಿನಗೆ ಗಣನಾಥ ಬಂದ ವಿಘ್ನ ಕಳೆಯೋ ಗಣನಾಥ || ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ ಸಂದ ರಣದಲ್ಲಿ ಗಣನಾಥ || ಮಾಧವನ ಆಜ್ಞೆಯಿಂದ ( ಆದಿಯಲ್ಲಿ ನಿನ್ನ ಪಾದ ) ಪೂಜಿಸಿದ ಧರ್ಮರಾಯ ಸಾಧಿಸಿದ ರಾಜ್ಯ ಗಣನಾಥ || ಮಂಗಳ ಮೂರುತಿ ಗುರು ರಂಗ ವಿಠಲನ ಪಾದ ಭೃಂಗನೆ ( ಹಿಂಗದೆ ) ಪಾಲಿಸೋ ಗಣನಾಥ || 1. Audio Link - Vidya Bhushana 2.Audio Link - Shashidhar Kote (song 18) 3. Audio Link by Parameshwara Hegde (song 23) 4. Audio & Video - Gopal Bhat Jogimane below