
ಬೆಳಗುವೆ ಆರುತಿ ತಾಯೆ - ದೇವಿಯ ಆರತಿ ಹಾಡು
ರಾಗ : ಸುರಟಿತಾಳ : ಆದಿಶ್ರೀವಿದ್ಯಂ ಜಗತಾಂ ಧಾತ್ರೀಂ ಸ್ವರ್ಗ ಸ್ಥಿತಿ ಲಯೇಶ್ವರೀಂ
ನಮಾಮಿ ಲಲಿತಾಂ ನಿತ್ಯಂ ಮಹಾ ತ್ರಿಪುರಸುಂದರೀಂ
ಬೆಳಗುವೆನಾರುತಿ ತಾಯೆ
ಮಂಗಳಕರ ಮೂರುತಿ ಕಾಯೆ||
ಜಲರುಹ ಲೋಚನೆ ಸುಲಲಿತೆ ಸುಂದರಿ
ತಾಯೆ ಘನ ಮಾಯೆ||
ವೀಣಾ ಪುಸ್ತಕ ಪಾಣಿ ಗೀರ್ವಾಣಿ ತ್ರಿಭುವನ ಜನನಿ
ಮಾನುನಿ ಭಗವತಿ ಜಾಣೆ ಕಮಲೆ ಭವೆ
ವಾಣಿಗೆ ಬೆಳಗಿರೆ ಆರತಿಯ||
ಆಗಮ ವಿನುತೆ ಸುನೀತೆ ವರ ನಾಗಶಯನ ಸುಪ್ರೀತೆ
ಯೋಗಿಜನಾಭಾನ ಸಾಗರನುತೆ ಭವೆ
ಮಾತೆ ಜಗನ್ಮಾತೆ ಸುಜನಾ ಸಂಪ್ರೀತೆ||Audio by Bellur Sisters
1.AudioLink-song 12(musicindiaonline)
2.AudioLink(kannadaaudio)
ಕನ್ನಡದಲ್ಲಿ ಲಕ್ಷ್ಮಿ ಆರತಿ ಹಾಡು, ಹಿಂದಿಯ ಜನಪ್ರಿಯ ಆರತಿ ಹಾಡುಗಳ ರಾಗದಲ್ಲಿದೆ.
(Jaya Jaya Sri Lakshmi in Kannada)
ಜಯ ಜಯ ಶ್ರೀ ಲಕ್ಷ್ಮಿ, ಶ್ರೀ ಜಯ ಜಯ ಮಹಾ ಲಕ್ಷ್ಮಿ
ಅಹಿ ಕಲಿ ಕಲ್ಮಶ ನಾಶಿನಿ, ಮಧುಸೂದನ ಮನ ಕಾಮಿನಿ
ಆರತಿ ಬೆಳಗುವೆವು, ಶ್ರೀ ಮಂಗಳೆ ಮಹಾಲಕ್ಷ್ಮಿ
ಶ್ರೀ ಹರಿ ಭಾಮಿನಿ ಸುಂದರಿ, ಶರಧಿ ರಾಜನ ತನಯೇ
ಚಂದ್ರ ಸಹೋದರಿ ಕೋಮಲೆ, ಜಯ ಧನಲಕ್ಷ್ಮಿ ನಮೋ
ಪ್ರಣತ ಸುರೇಶ್ವರಿ ಭಾರತಿ, ಕಾಮಿತ ಫಲ ದಾತೆ
ನವನಿಧಿ ದಾಯಿನಿ ಶ್ರೀಕರಿ, ಜಯ ಗಜಲಕ್ಷ್ಮಿ ನಮೋ
ದಿನಕರ ತೇಜದಿ ಹೊಳೆವ ಮಹಾಲಕ್ಷ್ಮಿ ಬಾರೆ
ಕಲಶ ಕನ್ನಡಿ ಇರಿಸಿ, ಕಾದಿಹೆ ಶ್ರೀ ಲಕ್ಷ್ಮಿ
ಕನಕವೃಷ್ಟಿಯ ಸುರಿಯುತ ಬಾರಮ್ಮ ಶ್ರೀ ಲಕ್ಷ್ಮಿ
ಮರುಗ ಮಲ್ಲಿಗೆ ಮುಡಿಸಿ ಪೂಜಿಪೆ ಮಹಾಲಕ್ಷ್ಮಿ
ಶುಕ್ರವಾರದ ಪೂಜೆ ಪಡೆಯಲು ಬಾರಮ್ಮ (ನಿನ್ನ ದರುಶನ ನೀಡಮ್ಮ)
ಕುಂಕುಮದಾರತಿ ಬೆಳಗಿ ನಮಿಸುವೆ ಶ್ರೀ ಲಕ್ಷ್ಮಿ
ಅಷ್ಟಲಕ್ಷ್ಮಿಯ ರೂಪದಿ ಮುಸ್ಸಂಜೆ ಬಾರಮ್ಮ (ನಮ್ಮ ಬವಣೆಯ ನೀಗಮ್ಮ)
ವೆಂಕಟ ರಮಣನ ರಾಣಿ ಶೋಕವ ಕಳೆಯಮ್ಮ
ಭವಭಯ ಹಾರಿಣಿ ಲಕುಮಿ ಪಾಪವ ನೀಗಮ್ಮ
ಸಾಧುಜನಾಶ್ರಿತ ಮಂಗಳೆ ಪಾಪವ ಅಳಿಸಮ್ಮ
ನೋವಿನ ಇರುಳನ್ನು ನೀಗಿ ಹರುಷವ ತುಂಬಮ್ಮ
ಪಾಲ್ಗಡಲೊಡೆಯನ ಅರಸಿ ಸಿರಿಯನ್ನು ಸುರಿಯಮ್ಮ
ಕಲಿಯುಗ ದರ್ಶಿತೆ ಲಕುಮಿ ಕಾಮಿತ ಸಲಿಸಮ್ಮ
ಅಷ್ಟಲಕ್ಷ್ಮಿಯ ರೂಪೆ ಆನಂದ ನೀಡಮ್ಮ
Audio Link - Nanditha (song5)
This is a popular devotional song from an old Kannada film.
ಚಲನ ಚಿತ್ರ: ಸ್ವರ್ಣ ಗೌರಿ
ಸಾಹಿತ್ಯ: ಕರೀಂ ಖಾನ್
ಗಾಯಕಿ : ಎಸ್.ಜಾನಕಿ
ಜಯ ಗೌರಿ ಜಗದೀಶ್ವರಿ
ಕಾವುದೆನ್ನ ಕಲಾ ಸಾಗರಿ||
ಸುಮುಧರ ಗಾನ ಸುಲಲಿತ ತಾನ
ಬೇಡುವೆನು ನಾ ಸುಧಾಮಯಿದಾನ
ಧಿಮಿ ಕೀಟ ತಾಳ ಸ್ವರಾವಳಿ ಮೇಳ
ಮಂಜುಳ ಮಂಗಳ ನಾದ ನೀ||
ಲಯ ಭಯ ಹಾರಿ ಕರುಣೆಯ ತೋರೆ
ವರವೀಯೆ ನಿರಾಮಯೆ ಮಾಯೆ
ಪರಶಿವ ಜಾಯೆ ಪ್ರಭಾವದಿ ಕಾಯೆ
ತಾಯೆ ಮಾಯೆ ದೇವಿಯೆ||
AudioLink by S.Janaki
Below is a video clip from the movie