July 23, 2009
ಕನ್ನಡದಲ್ಲಿ ಲಕ್ಷ್ಮಿ ಆರತಿ ಹಾಡು, ಹಿಂದಿಯ ಜನಪ್ರಿಯ ಆರತಿ ಹಾಡುಗಳ ರಾಗದಲ್ಲಿದೆ.
(Jaya Jaya Sri Lakshmi in Kannada)
ಜಯ ಜಯ ಶ್ರೀ ಲಕ್ಷ್ಮಿ, ಶ್ರೀ ಜಯ ಜಯ ಮಹಾ ಲಕ್ಷ್ಮಿ
ಅಹಿ ಕಲಿ ಕಲ್ಮಶ ನಾಶಿನಿ, ಮಧುಸೂದನ ಮನ ಕಾಮಿನಿ
ಆರತಿ ಬೆಳಗುವೆವು, ಶ್ರೀ ಮಂಗಳೆ ಮಹಾಲಕ್ಷ್ಮಿ
ಶ್ರೀ ಹರಿ ಭಾಮಿನಿ ಸುಂದರಿ, ಶರಧಿ ರಾಜನ ತನಯೇ
ಚಂದ್ರ ಸಹೋದರಿ ಕೋಮಲೆ, ಜಯ ಧನಲಕ್ಷ್ಮಿ ನಮೋ
ಪ್ರಣತ ಸುರೇಶ್ವರಿ ಭಾರತಿ, ಕಾಮಿತ ಫಲ ದಾತೆ
ನವನಿಧಿ ದಾಯಿನಿ ಶ್ರೀಕರಿ, ಜಯ ಗಜಲಕ್ಷ್ಮಿ ನಮೋ
ದಿನಕರ ತೇಜದಿ ಹೊಳೆವ ಮಹಾಲಕ್ಷ್ಮಿ ಬಾರೆ
ಕಲಶ ಕನ್ನಡಿ ಇರಿಸಿ, ಕಾದಿಹೆ ಶ್ರೀ ಲಕ್ಷ್ಮಿ
ಕನಕವೃಷ್ಟಿಯ ಸುರಿಯುತ ಬಾರಮ್ಮ ಶ್ರೀ ಲಕ್ಷ್ಮಿ
ಮರುಗ ಮಲ್ಲಿಗೆ ಮುಡಿಸಿ ಪೂಜಿಪೆ ಮಹಾಲಕ್ಷ್ಮಿ
ಶುಕ್ರವಾರದ ಪೂಜೆ ಪಡೆಯಲು ಬಾರಮ್ಮ (ನಿನ್ನ ದರುಶನ ನೀಡಮ್ಮ)
ಕುಂಕುಮದಾರತಿ ಬೆಳಗಿ ನಮಿಸುವೆ ಶ್ರೀ ಲಕ್ಷ್ಮಿ
ಅಷ್ಟಲಕ್ಷ್ಮಿಯ ರೂಪದಿ ಮುಸ್ಸಂಜೆ ಬಾರಮ್ಮ (ನಮ್ಮ ಬವಣೆಯ ನೀಗಮ್ಮ)
ವೆಂಕಟ ರಮಣನ ರಾಣಿ ಶೋಕವ ಕಳೆಯಮ್ಮ
ಭವಭಯ ಹಾರಿಣಿ ಲಕುಮಿ ಪಾಪವ ನೀಗಮ್ಮ
ಸಾಧುಜನಾಶ್ರಿತ ಮಂಗಳೆ ಪಾಪವ ಅಳಿಸಮ್ಮ
ನೋವಿನ ಇರುಳನ್ನು ನೀಗಿ ಹರುಷವ ತುಂಬಮ್ಮ
ಪಾಲ್ಗಡಲೊಡೆಯನ ಅರಸಿ ಸಿರಿಯನ್ನು ಸುರಿಯಮ್ಮ
ಕಲಿಯುಗ ದರ್ಶಿತೆ ಲಕುಮಿ ಕಾಮಿತ ಸಲಿಸಮ್ಮ
ಅಷ್ಟಲಕ್ಷ್ಮಿಯ ರೂಪೆ ಆನಂದ ನೀಡಮ್ಮ
Audio Link - Nanditha (song5)
3 comments:
Dear Ms.Lakshmi,
I not able to open this link (Jaya jaya shree lakshmi song ) can you please resend the same.
Regards
Jyothi Girish
Same here, the link turns over an error page.
The audio link has been updated.
Post a Comment