ರಚನೆ : ಪುರಂದರ ದಾಸ ರಾಗ : ಮೋಹನ ತಾಳ : ಖಂಡ ಛಾಪು ಭಾಷೆ : ಕನ್ನಡ ಕಂಡು ಕಂಡು ನೀ ಎನ್ನ ಕೈ ಬಿಡುವರೇ ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ಹರಿ || ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ ನಿಂದೆಯಲಿ ನೊಂದೆನೈ ನೀರಜಾಕ್ಷ ತಂದೆತಾಯಿಯು ನೀನೆ ಬಂಧುಬಳಗವು ನೀನೆ ಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ||1|| ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ ಎಣಿಸಲಾರದ ಭವದಿ ಕಡುನೊಂದೆ ನಾನು ಸನಕಾದಿಮುನಿವಂದ್ಯ ವನಜಸಂಭವ ಜನಕ ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಕೃಷ್ಣಾ ||2|| ಭಕ್ತವತ್ಸಲನೆಂಬೊ ಬಿರುದು ಪೊತ್ತಾ ಮೇಲೆ ಭಕ್ತರಾಧೀನನಾಗಿರಬೇಡವೆ ಮುಕ್ತಿದಾಯಕ ನೀನು ಹೊನ್ನೂರುಪುರವಾಸ ಶಕ್ತಗುರು ಪುರಂದರವಿಠಲ ಶ್ರೀಕೃಷ್ಣಾ ||3|| -----------------------------------------------------------------------composer: Purandara Daasa raaga: Mohana taala :khanda chaapu kanDu kanDu nee enna kai biDuvare punDarikaaksha shri purushOttam hari|| bandhugaLu yenagilla badukinali sukhavilla nindeyali nondenai nirajaaksha tandetaayiyu neene bandhubaLagavu neene yendendigu ninna nanbidenO krishna||1|| kshanavondu yugavaagi truNakinta kaDeyaagi yeNisalaarada bhavadi kaDunonde naanu sanakaadi munivandya vanajasambhava janaka phaNishaayi prahlaada golida shrikrishna||2|| bhaktavatsalanembo birudu potta mele bhaktara adheenanaagirabeDave muktidaayaka neenu honnuuru puravaasa shaktaguru purandara viThala shrikrishna||3||1. Audio link by Vidya Bhushana 2. Audio link by S.Janaki (from kannada movie)
ರಚನೆ : ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಜಿಪಲ್ಲವಿ ಹೇ ವಾಣಿ ಹೇ ವಾಣಿ ಹೇ ವಾಣಿ ಹೇ ವಾಣಿ ಹೇ ವಾಣಿ ಚರಣ 1. ಐಂ ಬೀಜ ವಾಸೇ ಹೇ ವಾಣಿ , ಆನಂದ ಧಾರೆ ಹೇ ವಾಣಿ ಶ್ರೀ ಕಾಳಿದಾಸ ನೇತ್ರಿ ಹೇ ವಾಣಿ , ಕಾವ್ಯ ಪ್ರಕಾಶೆ ಹೇ ವಾಣಿ 2. ಓಂಕಾರ ವೆದ್ಯೇ ಹೇ ವಾಣಿ , ಭವರೋಗ ವೈದ್ಯೆ ಹೇ ವಾಣಿ ಸುಶ್ವೇತ ವರ್ಣೆ ಹೇ ವಾಣಿ , ಅಮೃತ ಪ್ರಕಾಶೆ ಹೇ ವಾಣಿ 3. ಪುಸ್ತಕ ಹಸ್ತೆ ಹೇ ವಾಣಿ , ವೇದ ಸ್ವರೂಪಿಣಿ ಹೇ ವಾಣಿ ಲಸದಕ್ಷ ಮಾಲೆ ಹೇ ವಾಣಿ , ನಾದ ಪ್ರಕಾಶೆ ಹೇ ವಾಣಿ 4. ಹಂಸಾದಿ ರೂಡೆ ಹೇ ವಾಣಿ , ಹಂಸೈ ರುಪಾಸ್ಯೆ ಹೇ ವಾಣಿ ವಿವೇಕ ಹಂಸೆ ಹೇ ವಾಣಿ , ಸೋಹಂ ಪ್ರಕಾಶೆ ಹೇ ವಾಣಿ 5. ವೀಣಾ ವಿನೋದಿನಿ ಹೇ ವಾಣಿ , ಯೋಗ ಪ್ರಕಾಶೆ ಹೇ ವಾಣಿ ವರಸಿದ್ಧಿ ದಾಯಿನಿ ಹೇ ವಾಣಿ , ಶ್ರೀ ಸಚ್ಚಿದಾನಂದಿ ಹೇ ವಾಣಿ ------------------------------------------------------------------- Composer : Sri Ganapati Sacchidananda Swamiji Pallavi:
Hey vaNi, hey vaNi, hey vaNi, Hey vaaNi ,hey vaaNi. Charana: 1. Aim beeja vaase hey vani ,Ananda dhaare hey vani Sri Kalidasa nethri hey vani, Kavya prakashe hey vani 2. Omkara vEdye hey vani, Bhavaroga vaidye hey vani Suswetha varNe hey vani, Amritha prakashe hey vani 3. Pusthaka hasthe hey Vani, Veda swarupini hey Vani Lasadaksha maale hey Vani, Naada prakashe hey Vani 4. Hamsadi ruDhe he Vani, Hamsai rupasye hey Vani Viveka hamse hey Vani, Soham prakashe hey Vani 5. Veena vinodini hey Vani, Yoga prakashe hey Vani Varasiddhi daayini hey Vani, Sri Sacchidanandi hey Vani
ರಚನೆ: ಶ್ರೀ ಗೋಪಾಲ ದಾಸರು ಭಾಷೆ : ಕನ್ನಡ ಪಾರ್ವತಿ ಪಾಲಿಸೆನ್ನ ಮಾನಿನಿ ರನ್ನೆ || ಪಾರ್ವತಿ ಭಕ್ತರ ಸಾರಥಿ ( ಸುರಜನ ) ವಂದಿತೆ ಸುರಪತಿ ಗಜಮುಖ ಮೂರುತಿ ಮಾತೆ|| ಮನದಭಿಮಾನಿಯೇ ನೆನೆವೆನು ನಿನ್ನ ಅನುಸರಿಸೆನ್ನನು (ಕನಿಕರಿಸೆನ್ನನು) ಅಂಬುಜ ಪಾಣಿ|| ಮಂಗಳೆ ಮೃಡನ ಅಂತರಂಗಳೇ ಹರಿಪದ ಭೃಂಗಳೆ ತೊಂಗಳೇ ಪನ್ನಗ ವೇಣಿ|| ಗುಣ ಪೂರ್ಣ ವೇಣು ಗೋಪಾಲ ವಿಠಲನ್ನ ಕಾಣಿಸಿ ಕೊಡುವಂತ ಶೂಲಿಯ ರಾಣಿ|| -----------------------------------------------------------------Composer: Sri Gopala Daasa Language : Kannada Parvati paalisenna maanini ranne || Paarvati bhaktara saarathi (surajana) vandite surapati gajamukha muruti maate|| manadabhimaaniye nenevenu ninna anusarisennanu (kanikarisennanu) ambuja paaNi|| mangaLe mriDana antarangaLe haripada bhringaLe tongaLe pannaga vENi|| guNa purNa veNu gopala viTalanna kaaNisi koDuvanta shooliya raaNi || 1 . Audio Link by S P Balasubramanya 2 . Audio Link by M Venkatesh Kumar 3.Audio Link by VidyaBhushana [song 35]