ರಚನೆ: ಜಗನ್ನಾಥ ದಾಸರು
ಅಂಬ ತನಯ ಹೇರಂಬ ಪೂರ್ಣ
ಕರುಣಾಂಬುಧೆ ತವ ಚರಣಕೆ ಎರಗುವೆ
ದಶನ ಮೋದಕ ಪಾಶಾಂಕುಶ ಪಾಣಿ
ಅಸಮಚಾರುದೇಷ್ಣ ಕುಸುಮನಾಭನ ಪುತ್ರ
ಬೃಂದಾರಕ ವೃಂದ ವಂದಿತ ಚರಣ
ಅರವಿಂದಯುಗಳ ದಯದಿಂದ ನೋಡೆನ್ನ
ಯೂಥಪ ವದನ ಪ್ರದ್ಯೋತ ಸನ್ನಿಭ
ಜಗನ್ನಾಥ ವಿಠಲನ ಸಂಪ್ರೀತಿ ವಿಷಯ ಜಯ
1.Audio Link by M.S.Sheela [song1]
2.Audio link by Parameshwara hegde [song4]
3.Audio Link by G.V.Athri[song7]
Composer :Purandara Daasa
Raaga: NaaTa
TaaLa : KhanDa chaapu
ವಂದಿಸುವದಾದಿಯಲಿ ಗಣನಾಥನ ||
ಸಂದೇಹ ಸಲ್ಲ ಶ್ರೀ ಹರಿಯಾಜ್ಞೆಯಿದಕುಂಟು ||
ಹಿಂದೆ ರಾವಣ ತಾನು ವಂದಿಸದೆ ಗಜಮುಖನ
ನಿಂದು ತಪವನು ಕೈದು ವರ ಪಡೆಯಲು
ಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿ
ತಂದ ವರಗಳನೆಲ್ಲ ಧರೆಗೆ ಇಳಿಸಿದನು ||
ಅಂದಿನಾ ಬಗೆಯರಿತು ಬಂದು ಹರಿ ಧರ್ಮಜಗೆ
ಮುಂದೆ ಗಣಪನ ಪೂಜಿಸೆಂದು ಪೇಳೆ
ಒಂದೇ ಮನದಲಿ ಬಂದು ಪೂಜಿಸಲು ಗಣನಾಥ
ಹೊಂದಿಸಿದ ನಿರ್ವಿಘ್ನದಿಂದ ರಾಜ್ಯವನು ||
ಇಂದು ಜಗವೆಲ್ಲ ಉಮೆನಂದನನ ಪೂಜಿಸಲು
ಚೆಂದದಿಂದಲಿ ಸಕಲ ಸಿದ್ಧಿಗಳನಿತ್ತು
ತಂದೆ ಸಿರಿಪುರಂದರವಿಠಲನ ಸೇವೆಯೊಳು
ಬಂದ ವಿಘ್ನವ ಕಳೆದಾನಂದವನು ಕೊಡುವ ||
------------------------------------------
pallavi
vandisuvadAdiyali gaNanAthana
anupallavi
sandEha salla SrI hariyAjneyidakuNTu
charaNa
hinde rAvaNa tAnu vandisade gajamukhana
nindu tapavanugaidu vara paDeyalu
ondu nimiShadi bandu vighnavanu Acharisi
tanda varagaLanella dharege iLisidanu[1]
andinA bageyaritu bandu hari dharmajage
munde gaNapana poojisendu pElE
ondE manadali bandu pUjisalu gaNanAtha
hondisida nirvighnadinda rAjyavanu[2]
indu jagavella ume nandanana poojisalu
chendadindali sakala siddhigaLanittu
tande siri purandara viTTalana sEveyoLu
banda vighnava kaLedAnandavanu koDuva[3]
-------------------------------------------------
1.Audio link by M. M.L.Vasantha kumari(song 1)[MI]
2.Audio link by Madhu balakrishna (song 33)[MI]
3.Audio Link by Sangeetha (song 1)[MI]
4.Audio link by Rajkumar bharati (song 2)[MI]
4.Audio link by R.K.Srikantan[Rg]
Composer :Muthiah Bhagavathar
Raaga: harinArAyaNi
ದೇವಿ ಶ್ರೀ ಮಹಾಲಕ್ಷ್ಮಿ ದೀನ ಪಾಲೆ ರಕ್ಷಿಸೆನ್ನ |ಪ|
ಭಾವ ಭಕ್ತಿಯಿಂದ ನಿನ್ನ ಭಜನೆಗೈವ ಭಾಗ್ಯವಿತ್ತು |ಅಪ|
ಚರಣ
ಅಷ್ಟಾದಶ ನಿಜ ಭುಜೆ ಅಮಿತ ದಯಾ ಶಾಲಿನಿ|
ದುಷ್ಟಾಸುರಮರ್ಧಿನಿ ಸುರವರ ಪರಿಪಾಲಿನಿ||
ಶಿಷ್ಟಾ ಜಿಷ್ಟಾರ್ತದೆ ದಿವ್ಯ ರತ್ನ ಭೂಷಣಿ|
ಅಷ್ಟಾಂಗದಿ ವಂದಿಸುವೆ ಹರಿಕೇಶ ಪುರವಾಸಿನಿ||
-----------------------------------------------
Devi shri mahaalakshmi deena pAle rakshisenna
bhAva bhaktiyinda ninna bhajanegaiva bhAgyavittu
aShTAdasha nija bhuje amita dayA shAlini
duShTAsura mardhini suravara paripAlini
shiShTA jiShTArtade divya ratna bhushaNi
ashTAngadi vandisuvE harikEshapura vAsini
1.Audio Link by M.S.Sheela (song1)
2.Audio Link by Prashanth, Shankar(does not work)
taaLa: Adi
Composer: Mahapatidasa
ನೀನೆ ಪರಮ ಪಾವನಿ ನಿರಂಜನಿ||
ಆದಿ ನಾರಾಯಣಿ ಸಾಧು ಜನ ವಂದಿನಿ
ಸದಾನಂದ ರೂಪಿಣಿ ಸದ್ಗತಿ ಸುಖ ದಾಯಿನಿ||
ಲಕ್ಷುಮಿ ರೂಪಿಣಿ ಸಾಕ್ಷಾತ್ಕರಿಣಿ
ರಕ್ಷ ರಕ್ಷಾತ್ಮಿಣಿ ಅಕ್ಷಯ ಪದ ದಾಯಿನಿ ||
ಅನಾಥ ರಕ್ಷಿಣಿ ದೀನೋದ್ಧಾರಿಣಿ
ಅನಂತಾನಂತ ಗುಣಿ ಮುನಿಜನ ಭೂಷಣಿ||
ದಾರಿದ್ರ ಭಂಜನಿ ದುರಿತ ವಿಧ್ವಂಸಿನಿ
ಪರಮ ಸಂಜೀವಿನಿ ಸುರ ಮುನಿ ರಂಜನಿ||
ಸ್ವಾಮಿ ಶ್ರೀ ಗುರುವಿನಿ ಬ್ರಹ್ಮಾನಂದ ರೂಪಿಣಿ
ಮಹಿಪತಿ ಕುಲ ಸ್ವಾಮಿನಿ ಪರಮ ಪಾವನಿ||
================================
nIne parama pAvani niranjani||
Adi narAyaNi sAdhu jana vandini
sadAnanda roopiNi sadgati sukha dAyini||
lakShmi roopiNi sAkShAtkAriNi
rakSha rakSAtmini akshaya pada daayini||
anAtha rakShiNi deenOddhAriNi
anantAnanta guNi munijana bhooShaNi||
dAridra bhanjani durita vidhvamsini
parama sanjeevini sura muni ranjani||
svAmi shri guruviNi brahmAnanda roopiNi
mahipati kula svAmini parama pAvani||
1.Audio link by M. Balamurali Krishna, Premalatha Diwakar(song5)
2.Audio link by Unnikrishnan (song7)
3.Audio Link by M.S.Sheela(song10)
ರಚನೆ :ಪುರಂದರ ದಾಸ ಶರಣು ಬೆನಕನೆ ಕನಕರೂಪನೆ ಕಾಮಿನಿ ಸಂಗದೂರನೇ
ಶರಣು ಸಾಂಬನ ಪ್ರೀತಿ ಪುತ್ರನೆ ಶರಣು ಜನರಿಗೆ ಮಿತ್ರನೆ
ಏಕದಂತನೆ ಲೋಕಖ್ಯಾತನೆ ಏಕವಾಕ್ಯ ಪ್ರವೀಣನೇ
ಏಕವಿಂಶತಿ ಪತ್ರಪೂಜಿತನೇಕ ವಿಘ್ನ ವಿನಾಯಕ [1]
ಲಂಬಕರ್ಣನೆ ನಾಸಿಕಾಧರನೆ ಗಾಂಭೀರ್ಯಯುತ ಗುಣಸಾರನೇ
ಕಂಬುಕಂಧರ ಇಂದುಮೌಳಿಜ ಚಂದನಚರ್ಚಿತಾಂಗನೇ [2]
ಚತುರ್ಬಾಹು ಚರಣ ತೊಡಲನೆ ಚತುರ ಆಯುಧ ಧಾರನೇ
ಮತಿಯವಂತನೆ ಮಲಿನ ಜಲಿತನೆ ಅತಿಯ ಮಧುರಾಹಾರನೇ [3]
ವಕ್ರತುಂಡನೆ ಮಹಾಕಾಯನೆ ಅರ್ಕಕೋಟಿ ಪ್ರದೀಪನೇ
ಚಕ್ರಧರ ಹರಬ್ರಹ್ಮಪೂಜಿತ ರಕ್ತ ವಸ್ತ್ರಾಧಾರನೇ [4]
ಮೂಷಿಕಾಸನ ಶೇಷಭೂಷಣ ಅಶೇಷ ವಿಘ್ನವಿನಾಯಕ
ದಾಸ ಪುರಂದರವಿಟ್ಠಲೇಶನ ಈಶಗುಣಗಳ ಪೊಗಳುವೆ [5]
1.Audio Link by Parameshwara hegde (song 6)
2.Audio Link by Vidya bhushana (song 18)
3.Audio Link by M.S.Sheela(song 1)
4. Audio by a group of singers