Welcome to my Blog.I hope you enjoy the music.Please leave your comments and suggestions. Thankyou :)
All songs posted here have audio links!!

Beleguvenaarathi Taaye / Belaguve aarati taaye / ಬೆಳಗುವೆನಾರತಿ ತಾಯೆ

July 27, 2009


ಬೆಳಗುವೆ ಆರುತಿ ತಾಯೆ - ದೇವಿಯ ಆರತಿ ಹಾಡು
ರಾಗ : ಸುರಟಿ

ತಾಳ : ಆದಿ

ಶ್ರೀವಿದ್ಯಂ ಜಗತಾಂ ಧಾತ್ರೀಂ ಸ್ವರ್ಗ ಸ್ಥಿತಿ ಲಯೇಶ್ವರೀಂ
ನಮಾಮಿ ಲಲಿತಾಂ ನಿತ್ಯಂ ಮಹಾ ತ್ರಿಪುರಸುಂದರೀಂ

ಬೆಳಗುವೆನಾರುತಿ ತಾಯೆ
ಮಂಗಳಕರ
ಮೂರುತಿ ಕಾಯೆ||

ಜಲರುಹ ಲೋಚನೆ ಸುಲಲಿತೆ ಸುಂದರಿ
ತಾಯೆ ಘನ ಮಾಯೆ||

ವೀಣಾ ಪುಸ್ತಕ ಪಾಣಿ ಗೀರ್ವಾಣಿ ತ್ರಿಭುವನ ಜನನಿ
ಮಾನುನಿ ಭಗವತಿ ಜಾಣೆ ಕಮಲೆ ಭವೆ
ವಾಣಿಗೆ ಬೆಳಗಿರೆ ಆರತಿಯ||

ಆಗಮ ವಿನುತೆ ಸುನೀತೆ ವರ ನಾಗಶಯನ ಸುಪ್ರೀತೆ
ಯೋಗಿಜನಾಭಾನ ಸಾಗರನುತೆ ಭವೆ
ಮಾತೆ ಜಗನ್ಮಾತೆ ಸುಜನಾ ಸಂಪ್ರೀತೆ||

Audio by Bellur Sisters

1.AudioLink-song 12(musicindiaonline)

2.AudioLink(kannadaaudio)

Jaya Jaya Sri Lakshmi / Lakshmi Aarati haadu / ಲಕ್ಷ್ಮಿ ಆರತಿ ಹಾಡು

July 23, 2009



ಕನ್ನಡದಲ್ಲಿ ಲಕ್ಷ್ಮಿ ಆರತಿ ಹಾಡು, ಹಿಂದಿಯ ಜನಪ್ರಿಯ ಆರತಿ ಹಾಡುಗಳ ರಾಗದಲ್ಲಿದೆ.
(Jaya Jaya Sri Lakshmi in Kannada)

ಜಯ ಜಯ ಶ್ರೀ ಲಕ್ಷ್ಮಿ, ಶ್ರೀ ಜಯ ಜಯ ಮಹಾ ಲಕ್ಷ್ಮಿ

ಅಹಿ ಕಲಿ ಕಲ್ಮಶ ನಾಶಿನಿ, ಮಧುಸೂದನ ಮನ ಕಾಮಿನಿ
ಆರತಿ ಬೆಳಗುವೆವು, ಶ್ರೀ ಮಂಗಳೆ ಮಹಾಲಕ್ಷ್ಮಿ

ಶ್ರೀ ಹರಿ ಭಾಮಿನಿ ಸುಂದರಿ, ಶರಧಿ ರಾಜನ ತನಯೇ
ಚಂದ್ರ ಸಹೋದರಿ ಕೋಮಲೆ, ಜಯ ಧನಲಕ್ಷ್ಮಿ ನಮೋ

ಪ್ರಣತ ಸುರೇಶ್ವರಿ ಭಾರತಿ, ಕಾಮಿತ ಫಲ ದಾತೆ
ನವನಿಧಿ ದಾಯಿನಿ ಶ್ರೀಕರಿ, ಜಯ ಗಜಲಕ್ಷ್ಮಿ ನಮೋ

ದಿನಕರ ತೇಜದಿ ಹೊಳೆವ ಮಹಾಲಕ್ಷ್ಮಿ ಬಾರೆ
ಕಲಶ ಕನ್ನಡಿ ಇರಿಸಿ, ಕಾದಿಹೆ ಶ್ರೀ ಲಕ್ಷ್ಮಿ

ಕನಕವೃಷ್ಟಿಯ ಸುರಿಯುತ ಬಾರಮ್ಮ ಶ್ರೀ ಲಕ್ಷ್ಮಿ
ಮರುಗ ಮಲ್ಲಿಗೆ ಮುಡಿಸಿ ಪೂಜಿಪೆ ಮಹಾಲಕ್ಷ್ಮಿ

ಶುಕ್ರವಾರದ ಪೂಜೆ ಪಡೆಯಲು ಬಾರಮ್ಮ (ನಿನ್ನ ದರುಶನ ನೀಡಮ್ಮ)
ಕುಂಕುಮದಾರತಿ ಬೆಳಗಿ ನಮಿಸುವೆ ಶ್ರೀ ಲಕ್ಷ್ಮಿ

ಅಷ್ಟಲಕ್ಷ್ಮಿಯ ರೂಪದಿ ಮುಸ್ಸಂಜೆ ಬಾರಮ್ಮ (ನಮ್ಮ ಬವಣೆಯ ನೀಗಮ್ಮ)
ವೆಂಕಟ ರಮಣನ ರಾಣಿ ಶೋಕವ ಕಳೆಯಮ್ಮ

ಭವಭಯ ಹಾರಿಣಿ ಲಕುಮಿ ಪಾಪವ ನೀಗಮ್ಮ
ಸಾಧುಜನಾಶ್ರಿತ ಮಂಗಳೆ ಪಾಪವ ಅಳಿಸಮ್ಮ

ನೋವಿನ ಇರುಳನ್ನು ನೀಗಿ ಹರುಷವ ತುಂಬಮ್ಮ
ಪಾಲ್ಗಡಲೊಡೆಯನ ಅರಸಿ ಸಿರಿಯನ್ನು ಸುರಿಯಮ್ಮ

ಕಲಿಯುಗ ದರ್ಶಿತೆ ಲಕುಮಿ ಕಾಮಿತ ಸಲಿಸಮ್ಮ
ಅಷ್ಟಲಕ್ಷ್ಮಿಯ ರೂಪೆ ಆನಂದ ನೀಡಮ್ಮ



Audio Link - Nanditha (song5)




Jaya Gowri Jagadeeshwari / ಜಯ ಗೌರಿ ಜಗದೀಶ್ವರಿ

July 15, 2009

This is a popular devotional song from an old Kannada film.

ಚಲನ ಚಿತ್ರ: ಸ್ವರ್ಣ ಗೌರಿ
ಸಾಹಿತ್ಯ: ಕರೀಂ ಖಾನ್
ಗಾಯಕಿ : ಎಸ್.ಜಾನಕಿ


ಜಯ
ಗೌರಿ ಜಗದೀಶ್ವರಿ
ಕಾವುದೆನ್ನ ಕಲಾ ಸಾಗರಿ||

ಸುಮುಧರ ಗಾನ ಸುಲಲಿತ ತಾನ
ಬೇಡುವೆನು ನಾ ಸುಧಾಮಯಿದಾನ
ಧಿಮಿ ಕೀಟ ತಾಳ ಸ್ವರಾವಳಿ ಮೇಳ
ಮಂಜುಳ ಮಂಗಳ ನಾದ ನೀ||

ಲಯ ಭಯ ಹಾರಿ ಕರುಣೆಯ ತೋರೆ
ವರವೀಯೆ ನಿರಾಮಯೆ ಮಾಯೆ
ಪರಶಿವ ಜಾಯೆ ಪ್ರಭಾವದಿ ಕಾಯೆ
ತಾಯೆ ಮಾಯೆ ದೇವಿಯೆ||



AudioLink by S.Janaki


Below is a video clip from the movie


Dattatreya Trimurti Rupa / ದತ್ತಾತ್ರೇಯ ತ್ರಿಮೂರ್ತಿ ರೂಪ

July 6, 2009

ರಚನೆ:ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ.

ದತ್ತಾತ್ರೇಯ ತ್ರಿಮೂರ್ತಿ ರೂಪ ತ್ರಿಭುವನ ಲೋಕ ರಕ್ಷಕ||

ಕಾಮಧೇನು ಕಲ್ಪವೃಕ್ಷ ಕಾಮಿತ ಫಲ ದಾಯಕ||

ದಂಡ ಕಮಂಡಲ ಶೂಲ ಡಮರುಗ ಶಂಖ ಚಕ್ರ ಶೋಭಿತ ||

ಉತ್ತಮೋತ್ತಮ ಪುರುಷೋತ್ತಮ ಪೂರ್ಣಚಂದ್ರ ಪ್ರಕಟಿತ ||

ಭಾವ ಬಂಧನ ಭವ ಭಯ ದೂರ ಭಕ್ತ ಕರುಣಾ ಸಾಗರ||

ಕೃತಿಕ ತಾರಾ ಸಿದ್ಧಾನು ಸಾರ ಸಿದ್ಧ ಧೂತ ಮನೊಹರ||

ಸಹ್ಯಾದ್ರಿವಾಸ ಸಚ್ಚಿದಾನಂದ ಶ್ರೀ ಗುರು ದತ್ತ ಸ್ವರೂಪ||



================================

Dattatreya trimurti rupa Tribhuvana loka rakshaka||


Kamadhenu kalpavriksha Kaamita phala daayaka||


Danda Kamandala shoola damaruga Shankha chakra shobitha||


Uttamottama purushottama Poornachandra prakatitha||


Bhaava bhandhana bhava bhaya dura bhaktha karuna sagara||


Krithika tara siddhanu saara Siddha dhootha manohara||


Sahyadrivasa Sachidananda Sri guru datta swarupa||


1.AudioLink - by Ganapti Sachchidananda Swamiji(youtube)



2.AudioLink - by Ganapti Sachchidananda Swamiji(yahoo)



3.AudioLink - by Narayanaswamy


stat

Counter

Blog Widget by LinkWithin
 
Bhakthi Geetha / ಭಕ್ತಿ ಗೀತೆಗಳು - by Templates blogger