ರಚನೆ : ಕನಕದಾಸರು
ಭಾಷೆ : ಕನ್ನಡ
ಲಾಲಿ ಪಾವನ ಚರಣ ಲಾಲಿ ಅಘ ಹರಣ
ಲಾಲಿ ವೆಂಕಟರಮಣ ಲಲಿತ ಕಲ್ಯಾಣ [ಪ]
ವನಜಾಕ್ಷ ಮಾಧವ ವಸುದೇವ ತನಯ
ಸನಕಾದಿ ಮುನಿವಂದ್ಯ ಸಾಧು ಜನಪ್ರಿಯ
ಇನ ಕೋಟಿ ಶತ ತೇಜ ಮುನಿ ಕಲ್ಪ ಭೂಜ
ಕನಕಾದ್ರಿ ನಿಲಯ ವೆಂಕಟರಾಯ[೧]
ಜಗದೇಕ ನಾಯಕ ಜಲಜದಳ ನೇತ್ರ
ಖಗರಾಜ ವಾಹನ ಕಲ್ಯಾಣ ಚರಿತ
ಸಗರ ತನಯಾರ್ಚಿತ ಸನಕಾದಿ ವಿನುತ
ರಘುವಂಶ ಕುಲ ತಿಲಕ ರಮಣೀಯ ಗಾತ್ರ[೨]
ನಂದಗೋಪ ಕುಮಾರ ನವನೀತ ಚೋರ
ಮಂದಾಕಿನಿ ಜನಕ ಮೋಹನಾಕಾರ
ಇಂದುಧರ ಸತಿ ವಿನುತ ವಿಶ್ವ ಸಂಚಾರ
ನಂದ ಗೋವಿಂದ ಮುಚುಕುಂದ ನುತ ಸಾರ[೩]
ನರ ಮೃಗಾಕಾರಿ ಹಿರಣ್ಯಕ ವೈರಿ
ಕರಿರಾಜ ರಕ್ಷಕ ಕಾರುಣ್ಯ ಮೂರ್ತಿ
ಹರಿ ಆದಿಕೇಶವ ಗುರು ಅಪ್ರಮೇಯ
ಶ್ರೀಧರ ಶೇಷಗಿರಿ ವರ ತಿಮ್ಮರಾಯ [೪]
---------------------------------------------------
laali paavana charaNa laali agha haraNa
laali venkataramaNa lalita kalyaaNa
vanajaaksha maadhava vasudeva tanaya
sanakaadi munivandya saadhu janapriya
ina kOTi shata tEja muni kalpa bhooja
kanakaadri nilaya venkataraaya[1]
jagadEka naayaka jalajadaLa nEtra
khagaraaja vaahana kalyaaNa charita
sagara tanayaarchita sanakaadi vinuta
raghuvansha kula tilaka ramaNeeya gaatra[2]
nandagopa kumaara navaneeta chOra
mandaakini janaka mohanaakaara
indudhara sati vinuta vishva sanchaara
nanda govinda muchukunda nuta saara[3]
nara mrigaakaari hiranyaka vairi
kariraaja rakshaka kaarunya moorti
hari aadikEshava guru apramEya
shreedhara shEshagiri vara timmaraaya[4]
1.AudioLink - by M.S.Sheela
2.AudioLink - by Pallavi Arun
3.AudioLink - by Vidya Bhushana
ರಚನೆ : ಪುರಂದರ ದಾಸರು
ಭಾಷೆ : ಕನ್ನಡ
ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು ||ಪ||
ಮುಕ್ತರಾದರು ಎನ್ನ ನೂರೊಂದು ಕುಲದವರು
ಮುಕ್ತಿ ಮಾರ್ಗಕೆ ಯೋಗ್ಯ ನಾನಾದೆನು
ಮುಕ್ತಿದಾಯಕನ ಭಕ್ತಿಗೆ ಮನವು ನೆಲೆಸಿತು
ವ್ಯಕ್ತವಾಯಿತು ನಾಲಿಗೆಯೊಳು ಹರಿನಾಮ ||1||
ಹರಿಯ ತೀರ್ಥ ಪ್ರಸಾದವಿಂದೆನಗೆ ದೊರಕಿತು
ಹರಿಕಥಾಮೃತವೆನ್ನ ಕಿವಿಗೊದಗಿತೋ
ಹರಿದಾಸರು ಎನ್ನ ಬಂಧು ಬಳಗಾದರು
ಹರಿಮುದ್ರೆ ಎನಗಾಭರಣವಾಯಿತು ||2||
ಹಿಂದೆನ್ನ ಸಂತತಿಗೆ ಸಕಲ ಸಾಧನವಾಯಿತು
ಮುಂದೆನ್ನ ಜನ್ಮವು ಸಫಲವಾಯಿತು
ತಂದೆ ಪುರಂದರ ವಿಠಲನೆಂದೆಂಬ ಪರದೈವ
ಬಂದು ಹೃದಯದಲಿ ನೆಲೆಯಾಗಿ ನಿಂತ ||3||
1.AudioLink - by Balamurali Krishna
(musicindiaonline - song 12)
2.AudioLink - by Balamurali Krishna (kannadaaudio)
ರಚನೆ : ಮುತ್ತಯ್ಯ ಭಾಗವತರ್
ರಾಗ : ನವರಸ ಕನ್ನಡ
ತಾಳ : ಆದಿ
ಭಾಷೆ : ಸಂಸ್ಕೃತ
ಪಲ್ಲವಿ
ದುರ್ಗಾದೇವಿ ದುರಿತ ನಿವಾರಿಣಿ
ಅನುಪಲ್ಲವಿ
ಸ್ವರ್ಗಾಪವರ್ಗ ಸೌಖ್ಯದಾಯಿನೀ
ಸುರೇಶ ಪಾಲಿನಿ ಸಲಹು ಜನನಿ
ಚರಣ
ಪ್ರಾಣಾಗ್ನಿ ಸಂಯೋಗದಿ ಜನಿಸಿದ
ಪ್ರಣವ ನಾದ ಸಪ್ತ ಸ್ವರ ರೂಪಿಣಿ
ವೀಣಾದಿ ವಾದ್ಯ ನೃತ್ಯ ಗಾನ
ವಿನೋದಿನಿ ಹರಿಕೇಶ ಭಾಮಿನಿ
------------------------------------------------------------
pallavi
durgAdEvi durita nivAriNi
anupallavi
svargApavarga saukhya dAyini
surEsha pAlini salahu janani
charaNa
prANAgni samyogadi janisida
praNava nAda sapta svara roopiNI
veeNAdi vAdya nrutya gAna
vinOdini harikEsha bhAmini
1.AudioLink - by Nityashree(hummaa)
2.AudioLink - by Nityashree(raaga)
ರಚನೆ : ಪುರಂದರ ದಾಸರುಭಾಷೆ : ಕನ್ನಡ
ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ ||ಪ||
ಪಾಲಿಸೆ ಎನ್ನನು ಪಾಲಾಬ್ಧಿ ಸಂಜಾತೆ
ಲಲಿತಾಂಗಿ ಶುಭೆ ದೇವಿ ಮಂಗಳೆ ದೇವಿ ||ಅ||
ವೇದಾಭಿಮಾನಿ ಸಾರಸಾಕ್ಷಿ ಶ್ರೀಧರ ರಮಣಿ
ಕಾದುಕೋ ನಿನ್ನಯ ಪಾದ ಸೇವಕರನ್ನು
ಆದಿಶಕ್ತಿ ಸರ್ವಾಧಾರೆ ಗುಣಪೂರ್ಣೆ ||1||
ದಯದಿಂದ ನೋಡೆ ಭಜಿಪ ಭಕ್ತರ ಭಯ ದೂರ ಮಾಡೆ
ದಯ ಪಾಲಿಸೆ ಮಾತೆ ತ್ರೈಲೋಕ್ಯ ವಿಖ್ಯಾತೆ
ಜಯದೇವಿ ಸುವ್ರತೆ ಹಯವದನನ ಪ್ರೀತೆ ||2||
ನೀನಲ್ಲದನ್ಯ ರಕ್ಷಿಪರನ್ನು ಕಾಣೆ ನಾ ಮುನ್ನ
ದಾನವಾಂತಕ ಸಿರಿಪುರಂದರವಿಠಲನ
ಧ್ಯಾನಿಪ ಭಕುತರ ಮಾನ ನಿನ್ನದು ತಾಯೆ||3||
3. AudioLink by Roopa Deepa (song10)