Welcome to my Blog.I hope you enjoy the music.Please leave your comments and suggestions. Thankyou :)
All songs posted here have audio links!!

Sakala Graha Bala Neene / ಸಕಲ ಗ್ರಹಬಲ ನೀನೇ

May 25, 2009

ರಚನೆ : ಪುರಂದರ ದಾಸರು
ರಾಗ:
ಅಟಾಣ
ತಾಳ : ಆದಿ

ಭಾಷೆ : ಕನ್ನಡ

ಸಕಲ ಗ್ರಹ ಬಲ ನೀನೇ ಸರಸಿಜಾಕ್ಷ
ನಿಖಿಲ ರಕ್ಷಕ ನೀನೆ ವಿಶ್ವವ್ಯಾಪಕನೇ ||ಪ||

ರವಿಚಂದ್ರ ಬುಧ ನೀನೇ ರಾಹು ಕೇತುವು ನೀನೇ
ಕವಿ ಗುರುವು ಶನಿಯು ಮಂಗಳನು ನೀನೇ
ದಿವ ರಾತ್ರಿಯು ನೀನೇ ನವ ವಿಧಾನವು ನೀನೇ
ಭವರೋಗ ಹರ ನೀನೇ ಭೇಷಜನು ನೀನೇ ||೧||

ಪಕ್ಷಮಾಸವು ನೀನೇ ಪರ್ವ ಕಾಲವು ನೀನೇ
ನಕ್ಷತ್ರ ಯೋಗ ತಿಥಿ ಕರಣಗಳು ನೀನೇ
ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ
ಪಕ್ಷಿವಾಹನ ದೀನರಕ್ಷಕನು ನೀನೆ ||೨||

ಋತುವತ್ಸರವು ನೀನೆ ಮತ್ತೆ ಯುಗಾದಿಯು ನೀನೇ
ಕ್ರತುವು ಹೋಮ ಯಜ್ಞ ಸದ್ಗತಿಯು ನೀನೇ
ಜಿತವಾಗಿ ಎನ್ನೊಡೆಯ
ಪುರಂದರ ವಿಟ್ಟಲನೆ
ಶ್ರುತಿಗೇ ಸಿಲುಕದ ಮಹಾಮಹಿಮನು ನೀನೇ ||೩||
------------------------------------------------

sakala graha bala neenE sarasijAksha ||
nikhila rakshaka neenE vishwavyApakanE |p|

ravi chandra budha neenE rAhu kEtuvu neenE
kavi guru shaniyu mangaLanu neenE
divarAthriyu neenE nava vidhAnavu neenE
bhavarOgahara neenE bhEshajanu neenE |1|

pakshamAsavu neenE parva kAlavu neenE
nakshatra yOga tithi karaNagaLu neenE
akshayavendu draupdtiya mAnava kAyda
pakshivAhana deena rakshakanu neenE |2|

rutu vatsaravu neenE matte yugAdiyu neenE
kratu hOma yagna sadgatiyu neenE
jitavAgi yennoDeya purandara viTalane
shrutige silukada mahAmahimanu neenE |3|



1.AudioLink - by SP Ramh

2.AudioLink - by VidyaBhushana

Jagatpate Hari Sai Gopala / ಜಗತ್ಪತೆ ಹರಿ ಸಾಯಿ ಗೋಪಾಲ

May 17, 2009

This is a popular Sai Bhajan


ಜಗತ್ಪತೇ ಹರಿ ಸಾಯಿ ಗೋಪಾಲ
ಜಗದೋದ್ಧಾರ ಸಾಯಿ ನಂದ ಲಾಲ ||

ಮಧುರಾದಿ ಪತೆ ಕೃಷ್ಣ ಗೋಪಾಲ
ಮಧುರ ಮಧುರ ಹೇ ಗಾನ ವಿಲೋಲ
ಜಗದೋದ್ಧಾರ ಸಾಯಿ ನಂದ ಲಾಲ ||

ಸಾಯಿ ನಂದ ಲಾಲ ಜೈ ಜೈ ಗೋಪಾಲ
-------------------------------------------------------------------------------

Jagat Pate Hari Sai Gopaala
Jagadoddhaara Sai Nanda Laala||

Madhuraadhi Pate Krishna Gopaala
Madhura Madhura Hey Gaana Vilolaa
Jagaddhodhaaraa Sai Nandalaala ||

Sai nanda laala jai jai gopala

Listen to the audio below

Namo Namaste Narasimha Deva / ನಮೋ ನಮಸ್ತೆ ನರಸಿಂಹ ದೇವ

May 6, 2009

ನಮೋ ನಮಸ್ತೆ ನರಸಿಂಹ ದೇವಾ
ರಚನೆ
:
ಜಗನ್ನಾಥ ದಾಸರು

ಭಾಷೆ : ಕನ್ನಡ

Click on the image to enlarge it.


AudioLink - Vidyabhushana ಹಾಡಿರುವುದನ್ನು ಕೆಳಗೆ ಕೇಳಿ. ಇದನ್ನು esnips.com ಇಂದ KiranKn ಅವರ ಸಂಗ್ರಹದಿಂದ ತೆಗೆದುಕೊಂಡಿದ್ದೀನಿ



| Track details |

stat

Counter

Blog Widget by LinkWithin
 
Bhakthi Geetha / ಭಕ್ತಿ ಗೀತೆಗಳು - by Templates blogger