Welcome to my Blog.I hope you enjoy the music.Please leave your comments and suggestions. Thankyou :)
All songs posted here have audio links!!

Bhaja Govindam by Shankaracharya / ಭಜ ಗೋವಿಂದಂ ಶಂಕರಾಚಾರ್ಯರ ರಚನೆ

April 25, 2009

ವಾರ ಶಂಕರಾಚಾರ್ಯರ ಜಯಂತಿ ಬರುತ್ತಾ ಇದೆ. ಆದಿ ಶಂಕರಾಚಾರ್ಯರು ಹಿಂದೂ ಧರ್ಮದ ಅದ್ವೈತ ವೇದಾಂತ ತತ್ವವನ್ನು ಉಪದೇಶಿಸಿ ಪ್ರಚಾರ ಮಾಡಿದರು. ಬ್ರಹ್ಮಸೂತ್ರ ಭಾಷ್ಯವನ್ನು ರಚಿಸಿದರು. ಉಪನಿಷತ್ತುಗಳಿಗೆ ವ್ಯಾಖ್ಯಾನ ನೀಡಿದರು. ಹಲವಾರು ಸ್ತೋತ್ರಗಳನ್ನು ರಚಿಸಿದಾರೆ. ಅವರ ರಚಿಸಿರುವ "ಭಜ ಗೋವಿಂದಂ" ಕೃತಿ ಎಲ್ಲರೂ ಕೇಳಿದ್ದೀವಿ. ಚಿಕ್ಕ ಕೃತಿಯಲ್ಲಿ ಅದ್ವೈತದ ಸಾರಾಂಶ ಅಡಗಿದೆ. ಸ್ತೋತ್ರದ ಸಾಹಿತ್ಯ ಕೆಳಗಿದೆ. ಇದರಲ್ಲಿ 12 ಪಂಕ್ತಿಗಳನ್ನು (verse) ಶಂಕರರು ರಚಿಸಿದ್ದಾರೆ, 14 ಪಂಕ್ತಿಗಳನ್ನು ಅವರ ಶಿಷ್ಯರು ರಚಿಸಿದ್ದಾರೆ. ನಾನೂ M.S.Subbalakshmi ಅವರು ಹಾಡಿರುವ 10 ಪಂಕ್ತಿಗಳನ್ನು ಮಾತ್ರ ಬರೆದಿದ್ದೀನಿ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ



Audio Link by M.S.Subbulakshmi below.



Related Link:

Stotras by Guru Shankaracharya at PoojaVidhana


Bhaja Govindam - Full lyrics with meaning

Smariso Sarvada Hariya / ಸ್ಮರಿಸೋ ಸರ್ವದ ಹರಿಯ

April 18, 2009

ರಚನೆ : ಪುರಂದರ ದಾಸರು
ರಾಗ:
ಹಮೀರ್ ಕಲ್ಯಾಣಿ
ತಾಳ :ಆದಿ


ಸ್ಮರಿಸೊ ಸರ್ವದ ಹರಿಯ ||
ಸುರವರ ದೊರೆಯ ಕರುಣಾನಿಧಿಯ ||
 


ಮುನಿಜನ ವಂದ್ಯನ ಮನಸಿಜನಯ್ಯನ
ಮನದಲಿ ಅನುದಿನ ನೆನೆಯೊ ಹರಿಯ ||೧||


ವರಗುಣಪೂರ್ಣನ ಸರಸಿಜನೇತ್ರನ
ಪರವಾಸುದೇವನ ಪ್ರಾಣದ ಪ್ರಿಯನ ||೨||


ವೆಂಕಟರಮಣನ ಸಂಕಟಹರಣನ
ಲಕ್ಷ್ಮೀರಮಣನ ಪುರಂದರವಿಠಲನ ||೩||

-----------------------------------------------------------

smariso sarvada hariya ||
suravara doreya karuNAnidhiya ||

munijana vandyana manasijanayyana
manadali anudina neneyo hariya ||1||

varaguNa poorNana sarasijanetrana
paravasudevana praaNada priyana ||2||

venkaTaramaNana sankaTaharaNana
lakshmiramaNana purandara viTalana ||3||



AudioLink - by Malladi Brothers

AudioLink - Shruthi & Shriya Raj ಅವರು ಹಾಡಿರುವುದನ್ನು ಕೆಳಗೆ ನೋಡಿ

Bhuvaneshwariya / bhuvaneshwaria / ಭುವನೇಶ್ವರಿಯ

April 7, 2009

ರಚನೆ : ಮುತ್ತಯ್ಯ ಭಾಗವತರ್
ರಾಗ : ಮೋಹನ ಕಲ್ಯಾಣಿ
ತಾಳ : ಆದಿ
ಭಾಷೆ
: ಕನ್ನಡ


ಪಲ್ಲವಿ

ಭುವನೇಶ್ವರಿಯ ನೆನೆ ಮಾನಸವೇ
ಭವ ಬಂಧಗಳ ಭೀತಿಯ ಬಿಡುವೆ


ಅನುಪಲ್ಲವಿ
ಭವದಲಿ ಬರಿದೇ ನವೆಯದೇ ನೋಯದೇ
ತವ ಸುವಿಲಾಸದಿ ತಣಿಯುವೆ ಸುಖಿಸುವೆ


ಚರಣ
ವೃಜಿನಂಗಳನು ವಿದಲಿಪ ಮಾತೆಯ
ತ್ರಿಜಗಜ್ಜನನಿಯ ತ್ರಿಗುಣಾತೀತೆಯ

ನಿಜ ಭಕ್ತಾವನ ಸುರವರ ಸುರಭಿಯ
ಅಜ ಸನ್ನುತೆ ಶ್ರೀ ಹರಿಕೇಶಾಂಗಿಯ

-----------------------------------------------------

Composer : Muttaiah Bhagavatar

pallavi
bhuvaneshvariya nene maanasave
bhava bandhagaLa bheetiya biDuve

anupallavi
bhavadali baridE naveyade nOyade
tava suvilaasadi taNiyuve sukhisuve

charaNa
vrijinangaLanu vidalipa maateya
trijagajjananiya triguNaateeteya
nija bhaktAvana suravara surabhiya
aja sannute shri harikEshAngiya


1.AudioLink - by Sowmya

2.AudioLink - by Nityashree

Jayatu KodandaRama / ಜಯತು ಕೋದಂಡರಾಮ

April 1, 2009




ರಚನೆ : ಪುರಂದರ ದಾಸರು
ರಾಗ : ಶಹನ
ತಾಳ : ಖಂಡ ಛಾಪು



ಜಯತು ಕೋದಂಡರಾಮ ಜಯತು ದಶರಥರಾಮ
ಜಯತು ಸೀತಾರಾಮ ಜಯತು ರಘುರಾಮ ಜಯತು ಜಯತು|ಪ|

ತಮದೈತ್ಯನನು ಮಡುಹಿ ಮಂದರಾಚಲ ನೆಗಹಿ
ಪ್ರೀತಿಯಿಂದಲಿ ತಂದು ಸಕಲ ಭೂತಳವ
ಕ್ಷೇತ್ರದಿಂದುದ್ಭವಿಸಿ ಮೊರೆಯಿಡುವ ಬಾಲಕನ
ಭೀತಿಯನು ಬಿಡಿಸಿ ನೆರೆಕಾಯ್ದ ರಘುರಾಮ |1|

ಬಲಿಯೊಳ್ ದಾನವ ಮಾಡಿ ನೆಲನ ಈರಡಿ ಮಾಡಿ
ಛಲದಿಂದ ಕ್ಷತ್ರಿಯರ ಕುಲವ ಹೋಗಾಡಿ
ಲಲನೆಗೋಸುಗ ಬಂದ ನೆವದಿಂದ ರಾವಣನ
ತಲೆಗಳನು ಚೆಂಡಾದಿ ಮೆರೆದ ರಘುರಾಮ|2|


ವಸುದೇವಸುತನೆನಿಸಿ ವನಿತೆಯರ ವ್ರತಗೆಡಿಸಿ
ಎಸೆವ ತುರಗವನೇರಿ ಮಲ್ಲರನು ಸವರಿ
ವಸುಧೆಯೊಳು ಪುರಂದರವಿಠಲ ನೀ ಪಾಲಿಸೈ
ಬಿಸಜಾಕ್ಷಯೋಧ್ಯಪುರವಾಸ ರಘುರಾಮ
|3|

AudioLink - sung by M.S.Sheela

stat

Counter

Blog Widget by LinkWithin
 
Bhakthi Geetha / ಭಕ್ತಿ ಗೀತೆಗಳು - by Templates blogger