March 31, 2009
ರಚನೆ : ಪುರಂದರ ದಾಸರು
ತಾಳ : ಆದಿ
ಭಾಷೆ : ಕನ್ನಡ
ರಾಮ ರಾಮ ರಾಮ ಎನ್ನಿರೋ ಇಂಥ
ಸ್ವಾಮಿಯ ನಾಮವ ಮರೆಯದಿರೋ ಪ
ತುಂಬಿದ ಪಟ್ಟಣಕೊಂಭತ್ತು ಭಾಗಿಲು
ಸಂಭ್ರಮದರಸರು ಐದು ಮಂದಿ
ಡಂಭಕತನದಿಂದ ತಿರುಗುವ ಕಾಯವ
ನಂಬಿ ನೆಚ್ಚಿ ನೀವು ಕೆಡಬೇಡಿರೊ ೧
ನೆಲೆ ಇಲ್ಲದ ಕಾಯ ಎಲುವಿನ ಪಂಜರ
ಬಲಿದು ಸುತ್ತಿದ ಚರ್ಮದ ಹೊದಿಕೆ
ಮಲಮೂತ್ರಂಗಳು ಕೀವು ಕ್ರಿಮಿಗಳಿಂದ
ಭರಿತ ದೇಹವ ನೆಚ್ಚಿ ಕೆಡಬೇಡಿರೊ ೨
ಹರಿ ಬ್ರಹ್ಮ ಸುರರಿಂದ ವಂದಿತ ಆಗಿಪ್ಪ
ಹರಿ ಸರ್ವೋತ್ತಮನೆಂದೆನ್ನಿರೊ
ಪುರಂದರವಿಠಲನ ಚರಣವ ಭಜಿಸಿರೊ
ದುರಿತ ಭಯಗಳಿಂದ ದೂರಾಗಿರೊ ೩
2.AudioLink by Vidya Bhushana
3.AudioLink by Group of artists