Welcome to my Blog.I hope you enjoy the music.Please leave your comments and suggestions. Thankyou :)
All songs posted here have audio links!!

Alli Nodalu Rama / ಅಲ್ಲಿ ನೋಡಲು ರಾಮ

March 29, 2009

ರಚನೆ : ಪುರಂದರ ದಾಸರು
ರಾಗ : ನಾಟ ಕುರಂಜಿ
ತಾಳ : ಆದಿ
ಭಾಷೆ : ಕನ್ನಡ


ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ
ಎಲ್ಲಿಲ್ಲಿ ನೋಡಿದರೂ ಅಲ್ಲಿ ಶ್ರೀರಾಮ||ಪಲ್ಲವಿ||


ರಾವಣನ ಮೂಲಬಲ ಕಂಡು ಕಪಿಸೇನೆ
ಆವಾಗಲೇ ಬೆದರಿ ಓಡಿದವು
ಈವೇಳೆ ನರನಾಗಿ ಇರಬಾರದೆಂದೆಣಿಸಿ
ದೇವ ರಾಮಚಂದ್ರ ಜಗವೆಲ್ಲ ತಾನಾದ||೧||

ಅವನಿಗೆ ಇವ ರಾಮ ಇವನಿಗೆ ಅವ ರಾಮ
ಅವನಿಯೊಳೀಪರಿ ರುಪ ಉಂಟೆ
ಲವ ಮಾತ್ರದಿ ಅಸುರ ದುರುಳರೆಲ್ಲರು
ಅವರವರು ಹೊಡೆದಾಡಿ ಹತರಾಗಿ ಹೋದರು ||೨||

ಹನುಮದಾದಿ ಸಾಧು ಜನರು ಅಪ್ಪಿಕೊಂಡು
ಕುಣಿಕುಣಿದಾಡಿದರು ಹರುಷದಿಂದ
ಕ್ಷಣದಲ್ಲಿ ಪುರಂದರ ವಿಠಲರಾಯನು
ಕೊನೆಗೊಡೆಯನು ತಾನೊಬ್ಬನಾಗಿ ನಿಂತ||೩||


1.AudioLink - by Balamurali Krishna

2.AudioLink- by Nagavalli Nagaraja below


Rama Mantrava Japiso / ರಾಮ ಮಂತ್ರವ ಜಪಿಸೋ

March 27, 2009

I found 2 versions of this song. Giving both of them here.

ರಚನೆ :
ಪುರಂದರ ದಾಸರು
ರಾಗ:
ಜೌನ್ ಪುರಿ
ತಾಳ :ಆದಿ



ಪಲ್ಲವಿ

ರಾಮ ಮಂತ್ರವ ಜಪಿಸೋ ಹೇ
ಮನುಜ


ಅನುಪಲ್ಲವಿ
ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ
ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ


ಚರಣ
ಕುಲಹೀನನಾದರು ಕೂಗಿ ಜಪಿಸುವ ಮಂತ್ರ

ಸಲೆ ಬೀದಿ ಬೀದಿಯೊಳು ನುಡಿವ ಮಂತ್ರ
ಹಲವು ಪಾಪಂಗಳ ಹತಗೊಳಿಸುವ ಮಂತ್ರ
ಸುಲಭದಿಂದಲಿ ಸ್ವರ್ಗ ಸೂರೆ ಕೊಂಬುವ ಮಂತ್ರ ೧



ಜ್ಞಾನನಿಧಿ ನಮ್ಮ ಆನಂದತೀರ್ಥರು
ಸಾನುರಾಗದಿ ನಿತ್ಯ ಸೇವಿಪ ಮಂತ್ರ
ಭಾನುಕುಲಾಂಬುಧಿ ಸೋಮನೆನಿಪ ನಮ್ಮ
ದೀನರಕ್ಷಕ ಪುರಂದರವಿಠಲನ ಮಂತ್ರ ೨

--------------------------------------------------------------
Alternate Version
ಪಲ್ಲವಿ
ರಾಮ ಮಂತ್ರವ ಜಪಿಸೋ
ಹೇ ಮನುಜ

ಅನುಪಲ್ಲವಿ
ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ
ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ

ಸ್ನಾನ ಮೌನಂಗಳಿಗೆ ಸಾಧನದ ಮಂತ್ರ
ಜ್ಞಾನಿಗಳು ಮನದಿ ಧ್ಯಾನಿಪ ಮಂತ್ರ

ಹೀನ ಗುಣಂಗಳ ಹಿಂಗಿಸುವ ಮಂತ್ರ

ಏನೆಂಬೆ ವಿಭೀಷಣಗೆ ಪಟ್ಟ ಕಟ್ಟಿದ ಮಂತ್ರ೧

ಸಕಲ ವೇದಗಳಿಗೆ ಸಾರವೆನಿಪ ಮಂತ್ರ

ಮುಕ್ತಿ ಮಾರ್ಗಕ್ಕೆ ಇದೆ ಮೂಲ ಮಂತ್ರ

ಭಕ್ತಿ ರಸಕೆ ಒಮ್ಮೆ ಬಟ್ಟೆ ತೋರುವ ಮಂತ್ರ

ಸುಖನಿಧಿ ಪುರಂದರ ವಿಠಲನ ಮಹಾ ಮಂತ್ರ೨

1.AudioLink by Vidya Bhushana (song 20)


2.AudioLink - Nedunuri Krishnamurthy ಅವರು ಹಾಡಿದ್ದಾರೆ




3.AudioLink - Nagavalli Nagaraj ಅವರು ಹಾಡಿರುವುದನ್ನು ಕೆಳಗೆ ನೋಡಿ




Rama Embuva Eradu / ರಾಮ ಎಂಬುವ ಎರಡು

March 24, 2009


ರಚನೆ : ಪುರಂದರ ದಾಸರು
ಭಾಷೆ : ಕನ್ನಡ


ಪಲ್ಲವಿ
ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು
ಪಾಮರರು ತಾವೇನು ಬಲ್ಲಿರಯ್ಯ

ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ
ಆಯಸ್ಥಿತಗತವಾದ ಅತಿ ಪಾಪವನ್ನು
ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ
ದಾಯವನು ವಾಲ್ಮೀಕಿ ಮುನಿರಾಯ ಬಲ್ಲ ೧


ಮತ್ತೆ ಮಾ ಎಂದೆನಲು ಹೊರಬಿದ್ದ ಪಾಪಗಳು
ಒತ್ತಿ ಒಳ ಪೋಗದಂತೆ ಕವಾಟವಾಗಿ
ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ
ಭಕ್ತವರ ಹನುಮಂತನೊಬ್ಬ ತಾ ಬಲ್ಲ ೨


ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು
ಪರಮ ವೇದಗಳೆಲ್ಲ ಪೊಗಳುತಿಹವು
ಸಿರಿಯರಸ ಸನ್ಸ್ಕ್ರಿತ ನಾಮವನು
ಸಿರಿ ಕಾಶಿಯೊಳಗಿಪ್ಪ ಶಿವನು ತಾ ಬಲ್ಲ ೩



1.AudioLink by Vidyabhushana

2.AudioLink by Vidyabhushana(song 27)

PS: I am giving 2 links - in case one does not work you can use the other one:)

stat

Counter

Blog Widget by LinkWithin
 
Bhakthi Geetha / ಭಕ್ತಿ ಗೀತೆಗಳು - by Templates blogger