Composer: Purandara Daasa ಪಲ್ಲವಿ ಅಂಬಿಗ ನಾ ನಿನ್ನ ನಂಬಿದೆ ಜಗದಂಬಾರಮಣನ ನಿನ್ನ ನಂಬಿದೆ|| ಚರಣ ತುಂಬಿದ ಹರಿಗೋಲಂಬಿಗ ಅದಕೊಂಭತ್ತು ಛಿದ್ರವು ಅಂಬಿಗ ಸಂಭ್ರಮದಿಂ ನೋಡಂಬಿಗ ಅದರಿಂಬು ನೋಡಿ ನಡೆಸಂಬಿಗ||1|| ಹೊಳೆಯ ಭರವ ನೋಡಂಬಿಗ ಅದಕೆ ಸೆಳವು ಘನವಯ್ಯ ಅಂಬಿಗ ಸುಳಿಯೊಳು ಮುಳುಗಿದೆ ಅಂಬಿಗ ಎನ್ನ ಸೆಳೆದು ಕೊಂಡೊಯ್ಯೊ ನೀನಂಬಿಗ||2|| ಆರು ತೆರೆಯ ನೋಡಂಬಿಗ ಅದು ಮೀರಿ ಬರುತಲಿದೆ ಅಂಬಿಗ ಯಾರಿಂದಲಾಗದು ಅಂಬಿಗ ಅದ ನಿವಾರಿಸಿ ದಾಟಿಸೋ ಅಂಬಿಗ||3|| ಸತ್ಯವೆಂಬುದೆ ಹುಟ್ಟು ಅಂಬಿಗ ಸದಾ ಭಕ್ತಿಯೆಂಬುದೆ ಪಥ ಅಂಬಿಗ ನಿತ್ಯ ಮೂರುತಿ ಪುರಂದರ ವಿಟ್ಠಲ ನಮ್ಮ ಮುಕ್ತಿ ಮಂಟಪಕೊಯ್ಯೊ ಅಂಬಿಗ||4|| OR ಸತ್ವ ಪಥದೊಳಗೆ ಅಂಬಿಗ ಪರಾ ಭಕ್ತಿ ಹುಟ್ಟನು ಹಾಕಿ ಅಂಬಿಗ ಮುಕ್ತಿದಾಯಕ ನಮ್ಮ ಪುರಂದರ ವಿಟ್ಠಲನ ಮುಕ್ತಿ ಮಂಟಪಕೊಯ್ಯೋ ಅಂಬಿಗ||4||1.Audio Link by Vidya Bhushana[song1] 2.Audio Link by M.S.Sheela 3.Audio Link by a group
Composer: Vadirajaru ಬಾರೋ ಮುರಾರಿ ಬಾಲಕ ಶೌರಿ ಸಾರ ವಿಚಾರಿ ಸಂತೋಷಕಾರಿ ಆಟ ಸಾಕೇಳೋ ಮೈಯೆಲ್ಲ ಧೂಳೋ ಊಟ ಮಾಡೇಳೊ ಕೃಷ್ಣ ಕೃಪಾಳೊ ಅರುಣಾಬ್ಜಚರಣ ಮಂಜುಳಾಭರಣ ಪರಮ ವಿತರಣ ಪನ್ನಗಶಯನ ಮನೆಗೆದ್ದು ಬಾರೋ ಕೊನೆಗಯ್ಯ ತೋರೋ ಚಿನ್ಮಯ ಬಾರೋ ನಗೆಮುಗ ತೋರೋ ವೆಂಕಟರಮಣ ಸಂಕಟಹರಣ ಕಿಂಕರಾಮರಗಣ ವಂದಿತಚರಣ ಅರವಿಂದನಯನ ಶರದೇಂದುವದನ ವರಯದುಸದನ ಸಿರಿ ಹಯವದನ ---------------------------------- bArO murAri bAlaka shauri saara vichAri santoShakAri aaTa sAkELO maiyella dhULO ooTa mADELo kriShNa krupALO aruNAbja charaNa manjulA bharaNa parama vitaraNa pannaga shayana manegeddu baro konegayya tOro chinmaya bAro nagemuga tOro vEnkatarAmana sAnkaTaharaNa kinkara amaragaNa vanDitha charaNa aravinda nayana sharadinduvadana varayadusadana siri hayavadana1.Audio Link by Sudha Raghunathan 2.Audio Link by Ranjani Nagaraj 3.Audio Link by Ramya
Raaga: kEdAragauLa. taala : tripuTa ಅರವಿಂದಾಲಯೇ ತಾಯೇ ಶರಣು ಹೊಕ್ಕೆನು ಕಾಯೇ ಸಿರಿ ರಮಣನ ಪ್ರಿಯೇ ಜಗನ್ಮಾತೇ|| ಕಮಲ ಸುಗಂಧಿಯೇ ಕಮಲದಳ ನೇತ್ರೆಯೆ ಕಮಲವಿಮಲ ಶೋಭಿತೇ ಕಮನೀಯ ಹಸ್ತಪಾದ ಕಮಲವಿರಾಜಿತೇ ಕಮಲೇ ಕಾಯೇ ಎನ್ನನು(ಶ್ರೀ ಲಕುಮಿಯೇ) ನಿನ್ನ ಕರುಣ ಕಟಾಕ್ಷ ವಿಕ್ಷಣದಿಂದಲಿ ತನುಮನಗಳನಿತ್ತೆ ಧನ್ಯ ವಿರಾಜಿತೇ ಅಜಭಾವಾದಿಗಳ ಪ್ರಸನ್ನೇ ಕಾಯೇ ಎನ್ನನು(ಶ್ರೀ ಲಕುಮಿಯೇ) ಹರಿ ನಿನ್ನ ಉರದಲ್ಲಿ ಧರಿಸಿದನೆಂಬಂತ ಕರುವದಿ ಮರೆಯದಿರೆ ನಿರತ ನಿನ್ನಯ ಮುದ್ದು ಪುರಂದರವಿಟ್ಟಲನ ಚರಣಕಮಲವ ತೋರಿಸೆ(ಶ್ರೀ ಲಕುಮಿಯೇ) --------------------------------------------------- aravindAlayE tAyE sharaNu hokkenu kAyE siri ramaNana priyE jaganmAtE kamala sugandhiyE kamaladaLa nEtreye kamala vimala shobhitE kamaneeya hastapAda kamala virAjitE kamalE kAyE ennanu ninna karuNA kaTAkSha vIkShaNadindali tanumanagaLanitte dhanya virAjitE ajabhavAdigaLa prasannE kAyE ennanu hari ninna uradalli dharisidanembantha karuvadi mareyadire nirata ninnaya muddu purandara viTTalana charaNa kamalava torise1.Audio Link by Vidyabhushana 2.Audio Link by Kiranmai
ಬೋಲೋ ನಾಥ ಉಮಾಪತೇ(ಪತಿ) ಶಂಭೋ ಶಂಕರ ಪಶುಪತೇ ನಾಂದಿ ವಾಹನ ನಾಗ ಭೂಷಣ ಚಂದ್ರಶೇಖರ ಜಟಾಧರ ಶೂಲಾಧಾರ ಜ್ಯೋತಿ ಪ್ರಕಾಶ ವಿಭೂತಿ ಸುಂದರ ಪರಮೇಶ ಸ್ಮಶಾನವಾಸ ಚಿದಂಬರೇಶ ನೀಲಕಂಠ ಮಹದೇವ ಕೈಲಾಸ ವಾಸ ಕನಕ ಸಭೇಷ ಗೌರಿ ಮನೋಹರ ವಿಶ್ವೇಶ ------------------------------------- Bolo Natha Uma Pathe Shambho Shankara Pashupathe Nandi Vahana Naga Bhooshana Chandrashekara Jatadhara Shooladhara Jyoti Prakasha Vibhooti Sundara Paramesha Smashaana Vaasa Chidambaresha Neelakanta Mahadeva Kailasa Vaasa Kanaka Sabhesha Gauri Manohara VishveshaAudio link by Udaiyalur Kalyanaraman
Composer: Purandara Daasa Language: KannaDa ಪಲ್ಲವಿ ಶರಣು ಸಕಲೋದ್ಧಾರ ಅಸುರ ಕುಲ ಸಂಹಾರ ಶರಣು ದಶರಥ ಬಾಲ ಜಾನಕೀಲೋಲ ಈ ಮುದ್ದು ಈ ಮುಖವು ಈ ತನುವಿನಾ ಕಾಂತಿ ಈ ಬಿಲ್ಲು ಈ ಬಾಣ ಈ ನಿಂತ ಈ ಭಾವ ಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯ ಯಾವ ದೇವರಿಗೆ ಉಂಟು ಮೂರುಲೋಕದೊಳಗೆ[1] ಉಟ್ಟ ಪೀತಾಂಬಾರವು ಉಡಿಗೆಜ್ಜೆ ಮಾಣಿಕವೂ ದೊಡ್ಡ ನವರತ್ನದ ಆಭರಣ ಇರಲು ಕೊಟ್ಟ ಭಾಷೆಗೆ ತಪ್ಪ ನಿಜಭಕ್ತರಿಗೆ ಒಲಿವ ಸೃಷ್ಟಿಯೊಳಗೆ ಕಾಣೆ ಕೌಸಲ್ಯರಾಮ[2] ಪಾಲಿಸಲು ಅಯೋಧ್ಯ ಪಟ್ಟಣದಲ್ಲಿ ಪುರವಾಸ ಬೇಡಿದ ಇಷ್ಟಾರ್ಥಗಳ ಕೊಡುವೆನೆನುತ ಭಾವ ಶುದ್ಧಿಯುಳ್ಳ ತನ್ನ ಭಕುತರ ಪೊರೆವ ಪುರಂದರ ವಿಟ್ಟಲನೆ ಅಯೋಧ್ಯ ರಾಮ[3] -----------------------------------------------------pallavi sharaNu sakaloddhAra asura kula samhAra sharaNu dasharatha bAlA jAnakilola charaNa 1 ee muddu ee mukhavu ee tanuvinaa kAnti ee billu ee bANa ee ninta ee bhAva ee tamma ee seete ee banTa ee bhAgya yAva dEvarige unTu moorulokadoLage[1] uTTa pItAmbaravu uDigejje mANikavu doDDa navaratnada AbharaNa iralu koTTa bhAshege tappa nija bhaktarige oliva sruShTiyoLageNe kANe kausalya rAma[2] paLisalu ayOdhya paTTaNadalli puravAsa bEDida iShTArthagaLa koDuvenenuta bhAva shuddhiyuLLa tanna bhakutara poreva purandara viTTalane ayodhya raama[3]1.Audio by Erode Rajamani 2.Audio Link by Rajkumar
ಜಯ ಜನಾರ್ಧನ ಕೃಷ್ಣ ರಾಧಿಕಾಪತೇ
ಜನ ವಿಮೋಚನ ಕೃಷ್ಣ ಜನ್ಮ ಮೋಚನ
ಗರುಡ ವಾಹನ ಕೃಷ್ಣ ಗೋಪಿಕಾ ಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ
ಸುಜನ ಬಾಂಧವ ಕೃಷ್ಣ ಸುಂದರ ಕೃತೆ
ಮದನ ಕೋಮಲ ಕೃಷ್ಣ ಮಾಧವ ಹರೇ
ವಸುಮತಿ ಪತೇ ಕೃಷ್ಣ ವಾಸವಾನುಜ
ವರಗುಣಾಕರ ಕೃಷ್ಣ ವೈಷ್ಣವಾಕೃತೆ
ಸುರಚಿರಾನನ ಕೃಷ್ಣ ಶೌರ್ಯವಾರಿಧೆ
ಮುರಹರ ವಿಭೋ ಕೃಷ್ಣ ಮುಕ್ತಿದಾಯಕ
ವಿಮಲಪಾಲಕ ಕೃಷ್ಣ ವಲ್ಲಭಿಪತೆ
ಕಮಲಲೋಚನಾ ಕೃಷ್ಣ ಕಾಮ್ಯದಾಯಕ
ವಿಮಾಲಗಾತ್ರನೇ ಕೃಷ್ಣ ಭಕ್ತವತ್ಸಲ
ಚರಣ ಪಲ್ಲವಂ ಕೃಷ್ಣ ಕರುಣ ಕೋಮಲಮ್
ಕುವಲೈಕ್ಷಣ ಕೃಷ್ಣ ಕೋಮಲಾಕೃತೆ
ತವ ಪದಾಮ್ಬುಜಂ ಕೃಷ್ಣ ಶರಣಾಮಾಶ್ರಯೆ
ಭುವನ ನಾಯಕ ಕೃಷ್ಣ ಪಾವನಾಕೃತೆ
ಗುಣಗಣೋಜ್ವಲಾ ಕೃಷ್ಣ ನಳಿನಲೋಚನ
ಪ್ರಣಯವಾರಿಧೆ ಕೃಷ್ಣ ಗುಣಗಣಾಕರ
ದಾಮಸೋದರ ಕೃಷ್ಣ ದೀನ ವತ್ಸಲ
ಕಾಮಸುಂದರ ಕೃಷ್ಣ ಪಾಹಿ ಸರ್ವಾದಾ
ನರಕನಾಶನ ಕೃಷ್ಣ ನರಸಹಾಯಕ
ದೇವಕಿಸುತ ಕೃಷ್ಣ ಕಾರುಣ್ಯಾಂಭುದೇ
ಕಂಸಾನಾಶನ ಕೃಷ್ಣ ದ್ವಾರಕಾಸ್ಥಿತ
ಪಾವನಾತ್ಮಕ ಕೃಷ್ಣ ದೇಹಿ ಮಂಗಳಂ
ತ್ವತ್ ಪದಾಮ್ಬುಜಂ ಕೃಷ್ಣ ಶ್ಯಾಮ ಕೋಮಲಮ್
ಭಕ್ತವತ್ಸಲ ಕೃಷ್ಣ ಕಾಮ್ಯದಾಯಕ
ಪಾಲಿಸೆನ್ನನೂ ಕೃಷ್ಣ ಶ್ರೀಹರಿ ನಮೋ
ಭಕ್ತದಾಸ ನಾ ಕೃಷ್ಣ ಹರಸು ನೀ ಸದಾ
ಕಾದು ನಿಂತೇನಾ ಕೃಷ್ಣ ಸಲಹೆಯಾ ವಿಭೋ
ಗರುಡ ವಾಹನ ಕೃಷ್ಣ ಗೋಪಿಕಾ ಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ
Jaya Janardhana Krishna Radhika Pate
Jana vimochana Krishna Janma Mochana
Garuda Vahana Krishna Gopika Pathe
Nayana mohana Krishna Neerajekshana
Sujana Baandhava Krishna Sundara kruthe
Madana Komala Krishna Madhava Hare
vasumati Pathe Krishna vaasavaanuja
varaguNaakara Krishna vaishnavaakruthe
Surachiraanana Krishna Shouryavaaridhe
Murahara vibho Krishna muktidaayaka
vimalapaalaka Krishna vallabhipate
Kamalalochana Krishna kamyadaayaka
Vimalagaatrane Krishna Bhaktavatsala
Charana pallavam Krishna Karuna Komalam
KuvalaikshaNa Krishna komalaakruthe
tava padambujam Krishna sharanamaashraye
Bhuvana naayaka Krishna paavanaakruthe
GuNagaNojwala Krishna Nalinalochana
Pranayavaaridhe Krishna guNagaNaakara
daamasodara Krishna deena vatsala
Kaamasundara Krishna paahi sarvadaa
Narakanaashana Krishna Narasahaayaka
Devaki sutha Krishna KaruNyambhude
Kamsanaashana Krishna Dwarakasthitha
Paavanaatmaka Krishna dehi mangaLam
Tvatpadaambujam Krishna Shyama komalam
Bhaktavatsala Krishna Kaamyadayaka
Paalisennanu Krishna Srihari namo
Bhaktadaasa naa Krishna Harasu Nee sadaa
Kaadu ninthenaa Krishna Salaheyaa Vibho
Garuda vaahana Krishna Gopika Pathe
Nayana mohana Krishna Neerajekshana
Raaga: nagagandhaari Taala : roopaka Composer: Muthuswamy Dikshitar ಪಲ್ಲವಿ ಸರಸಿಜನಾಭ ಸೋದರಿ ಶಂಕರಿ ಪಾಹಿಮಾಂ ಅನುಪಲ್ಲವಿ ವರದ ಅಭಯಕರ ಕಮಲೇ ಶರಣಾಗತ ವತ್ಸಲೇ ಚರಣ ಪರಂಧಾಮ ಪ್ರಕೀರ್ತಿತೆ ಪಶುಪಾಶ ವಿಮೋಚಿತೆ ಪನ್ನಗಾಭರಣಯುತೆ ನಾಗಗಾಂಧಾರಿ ಪುಜಿತಾಬ್ಜಪದೆ ಸದಾ ನಂದಿತೆ ಸಂಪದೆ ವರ ಗುರುಗುಹ ಜನನಿ ಮದಶಮನಿ ಮಹಿಷಾಸುರ ಮರ್ಧಿನಿ ಮಂದಗಮನಿ ಮಂಗಳ ವರ ಪ್ರದಾಯಿನಿ ---------------------------------------------------------------- pallavi sarasijanAbha sodari shankari pAhimAm anupallavi varada abhayakara kamaLe sharaNAgata vatsaLe charana parandham prakirthite pashupash vimochite pannagA bharaNayute nAgagAndhAri poojitAbjapade sadA nandite sampade varaguruguha janani madashamani mahishAsura mardhini mandagamani mangala varapradAyini 1.Audio by Priya Sisters 2.Audio by Chitra 3.Audio by a group
raaga : kEdaara gowLa
taaLa : aadi
Composer: Purandara Daasa
ಪಲ್ಲವಿ
ಸಿಂಹರೂಪನಾದ ಶ್ರೀ ಹರಿ ಹೇ ನಾಮಗಿರೀಶನೇ
ಅನುಪಲ್ಲವಿ
ಒಮ್ಮನದಿಂದ ನಿಮ್ಮನು ಭಜಿಸಲು ಸಮ್ಮತದಿಂದಲಿ ಕಾಯುವೆನೆಂದ ಹರಿ
ತರಳನು ಕರೆಯೆ ಸ್ಥಂಭವು ಬಿರಿಯೇ
ತುಂಬಾ ಉಗ್ರವನು ತೋರಿದನು
ಕರುಳನು ಬಗೆದು ಕೊರಳೊಳಗಿಟ್ಟು
ತರಳನ ಸಲಹಿದ ಶ್ರೀ ನರಸಿಂಹನೆ
ಭಕ್ತರೆಲ್ಲ ಕೂಡಿ ಬಹು ದೂರ ಓಡಿ
ಪರಮ ಶಾಂತವನು ಬೇಡಿದರು
ಕರೆದು ತನ್ನ ಸಿರಿಯನು ತೊಡೆಯೊಳು ಕುಳಿಸಿದ
ಪರಮ ಹರುಷವನು ಹೊಂದಿದ ಶ್ರೀ ಹರಿ
ಜಯ ಜಯ ಜಯವೆಂದು ಹೂವನು ತಂದು
ಹರಿ ಹರಿ ಹರಿಯೆಂದು ಸುರರೆಲ್ಲ ಸುರಿಸೆ
ಭಯ ನಿವಾರಣ ಭಾಗ್ಯ ಸ್ವರೂಪನೇ
ಪರಮ ಪುರುಶ ಶ್ರೀ ಪುರಂದರ ವಿಟ್ಟಲನೆ
---------------------------------------------------
pallavi
simharupanAda shrI hari hE nAmagirishanE
anupallavi
ommanadinda nimmanu bhajisalu
sammatadindali kAyuvenenda hari
charaNa
taraLanu kareye sthambhavu biriyE
tumba ugravanu toridanu
karuLanu bagedu koraLoLagiTTu
taraLana salahida shri narasimhane
bhaktarella kooDi bahu dUra Odi
parama shAntavanu bEDidaru
karedu tanna siriyanu toDeyoLu kuLisida
parama haruShavanu hondida shrI hari
jaya jaya jayavendu huvanu tandu
hari hari hariyendu surarella surise
bhaya nivAraNa bhAgya svarUpanE
parama puruSa shrI purandara viTTalanE
1.Audio Link by Vishakha Hari
2.Audio link by Another group (needs real player)
ವನಮಾಲಿ ರಾಧ ರಮಣ ಗಿರಿಧಾರಿ ಗೋವಿಂದ ನೀಲ ಮೇಘ ಸುಂದರ ನಾರಾಯಣ ಗೋವಿಂದ ಭಕ್ತ ಹೃದಯ ಮಂದಾರ ಬಾನು ಕೋಟಿ ಸುಂದರ ನಂದ ನಂದ ಗೋಪ ಬೃಂದ ನಾರಾಯಣ ಗೋವಿಂದ ನಾರಾಯಣ ಗೋವಿಂದ (x4) Vanamaali Radha Ramana Giridhari Govinda Neela Megha Sundara Narayana Govinda Bhakta Hrudaya Mandara Bhanu Koti Sundara Nanda Nanda Gopa Brinda Narayana Govinda Narayana Govinda (x4) 1.Audio Link by Usha Sethuraman 2.Audio Link by Vishakha hari[song starts at 2mins] 3.Audio link by another artist
Composer : G N Balasubramaniam raaga : saraswati taaLa : roopaka Language : Sanskrit ಪಲ್ಲವಿ ಸರಸ್ವತಿ ನಮೋಸ್ತುತೇ ಶಾರದೆ ವಿದ್ಯಾಪ್ರದೆ ಅನುಪಲ್ಲವಿ ಕರಧೃತ ವೀಣಾ ಪುಸ್ತಕ ವರಮಣಿ ಮಾಲಾಲಂಕೃತ ಚರಣ ನರಹರಿ ಸುತ ವಿಧಿ ಲಾಲಿತ ನವಮಣಿಯುತ ಕಂಭುಗಳೇ ಸುರ ಸೇವಿತ ಪದಯುಗಳೇ ಸುಧಾಕರ ಸಮಧವಳೇ --------------------------------------------------- pallavi saraswathi namOsthuthe shArade vidyAprade anupallavi karadhruta veeNA pustaka varamaNi mAlAlankruta charaNa naraharisuta vidhilAlita navamaNiyuta kambhugaLe surasEvita padayugaLE sudhAkara samadhavaLE 1.Audio Link by Priya Sisters 2.Audio link by S.Janaki 3.Audio Link by Chandrika Pai
Raaga: valachi taaLa: roopaka Composer: Muthaiah Bhaagavatar Language: Sanskrit ಪಲ್ಲವಿ ಜಾಲಂಧರ ಸುಪೀಠಸ್ತೇ ಜಪಾಕುಸುಮ ಭಾಸುರೆ ಅನುಪಲ್ಲವಿ ಬಾಲಾರ್ಕ ಕೋಟಿ ಪ್ರಭೆ ಬಾಲೆ ಪರಿಪಾಲಿಸೌ ಚಿಟ್ಟೆಸ್ವರ ಗ ,ಗಪ ದ,ದನಿ ಸ,ಸನಿ |ನಿದದಪ ಗ,ಗಪ ಗಪಗಸ|| ಗ,ಗಪ ಗಪಗಪ ದನಿದಪ |ದಪಗಸ ನಿದಪಗ ಸನಿದಪ|| ಗಪದನಿ ಸಗಪಗ ಸಗಸ, |ಸನಿದನಿ ಪದಗಪ ದಪಗಸ|| ಚರಣ ಭವರೋಗ ನಿವಾರಿಣಿಭಕ್ತಜನ ಪರಿಪಾಲಿನಿ ನವಶಕ್ತಿ ಸ್ವರೂಪಿಣಿನಾದ ಹರಿಕೇಶ ರಾಜ್ಞಿ (ಚಿಟ್ಟೆಸ್ವರ) ---------------------------------------- pallavi jaalandhara supeeThaste jApAkusuma bhAsurE anupallavi bAlArkka koTi prabhE bAlE paripAlisau chiTTe swara g,gp d,dn S,Sn|nddp g,gp gpgs|| g,gp gpgp dndp|dpgs ndpg Sndp|| gpdn SGPG SGS,|Sndn pdgp dpgs|| charaNa bhavaroga nivAriNi bhaktajana paripAlini navashakti svaroopiNinAda harikEsha rAgni (chiTTeswara) 1.Audio Link by Group of Artists 2.Audio link by Another Artist
ರಚನೆ :ಪುರಂದರ ದಾಸ ಶರಣು ಬೆನಕನೆ ಕನಕರೂಪನೆ ಕಾಮಿನಿ ಸಂಗದೂರನೇ ಶರಣು ಸಾಂಬನ ಪ್ರೀತಿ ಪುತ್ರನೆ ಶರಣು ಜನರಿಗೆ ಮಿತ್ರನೆ ಏಕದಂತನೆ ಲೋಕಖ್ಯಾತನೆ ಏಕವಾಕ್ಯ ಪ್ರವೀಣನೇ ಏಕವಿಂಶತಿ ಪತ್ರಪೂಜಿತನೇಕ ವಿಘ್ನ ವಿನಾಯಕ [1] ಲಂಬಕರ್ಣನೆ ನಾಸಿಕಾಧರನೆ ಗಾಂಭೀರ್ಯಯುತ ಗುಣಸಾರನೇ ಕಂಬುಕಂಧರ ಇಂದುಮೌಳಿಜ ಚಂದನಚರ್ಚಿತಾಂಗನೇ [2] ಚತುರ್ಬಾಹು ಚರಣ ತೊಡಲನೆ ಚತುರ ಆಯುಧ ಧಾರನೇ ಮತಿಯವಂತನೆ ಮಲಿನ ಜಲಿತನೆ ಅತಿಯ ಮಧುರಾಹಾರನೇ [3] ವಕ್ರತುಂಡನೆ ಮಹಾಕಾಯನೆ ಅರ್ಕಕೋಟಿ ಪ್ರದೀಪನೇ ಚಕ್ರಧರ ಹರಬ್ರಹ್ಮಪೂಜಿತ ರಕ್ತ ವಸ್ತ್ರಾಧಾರನೇ [4] ಮೂಷಿಕಾಸನ ಶೇಷಭೂಷಣ ಅಶೇಷ ವಿಘ್ನವಿನಾಯಕ ದಾಸ ಪುರಂದರವಿಟ್ಠಲೇಶನ ಈಶಗುಣಗಳ ಪೊಗಳುವೆ [5] 1.Audio Link by Parameshwara hegde (song 6) 2.Audio Link by Vidya bhushana (song 18) 3.Audio Link by M.S.Sheela(song 1) 4. Audio by a group of singers
Composer : Hariram acharya
ಜಯ ಜಯ ಹೇ ಭಗವತಿ ಸುರ ಭಾರತಿ, ತವ ಚರಣೌ ಪ್ರಣಮಾಮಹ
ನಾದ ಬ್ರಹ್ಮಮಯಿ ಜಯ ವಾಗೀಶ್ವರಿ, ಶರಣಂ ತೇ ಗಚ್ಚಾಮಹ
ತ್ವಮಸಿ ಶರಣ್ಯ ತ್ರಿಭುವನ ಧನ್ಯಾ, ಸುರ ಮುನಿ ವಂಧಿತ ಚರಣ
ನವ ರಸ ಮಧುರ ಕವಿತಾ ಮುಖರ, ಸ್ಮಿತ ರುಚಿ ರುಚಿರಾ ಭರಣ
ಆಸಿನಾ ಭವ ಮಾನಸ ಹಂಸೆ, ಕುಂದ ತುಹಿನ ಶಶಿ ಧವಳೇ
ಹರ ಜಗತ್ ಗುರು ಬೋಧಿ ವಿಕಾಸಂ, ಸ್ತಿತ ಪಂಕಜ ತನು ವಿಮಲೆ
ಲಲಿತ ಕಲಾಮಯಿ ಜ್ಞಾನ ವಿಭಾಮಯಿ ವೀಣಾ ಪುಸ್ತಕ ಧಾರಿಣಿ
ಮಥಿರ ಸ್ತಾಮ್ನೋ ತವ ಪದ ಕಮಲ, ಅಯಿ ಕುಂಟ ವಿಷ ಹಾರಿಣಿ
---------------------------------------------------------------
Jaya jaya hein bhagawati sura bharati,
tav charaNau praNamamaha
Naada brahmamayi jaya vageeshwari,
sharaNam te gacchaamaha
Twamasi sharaNya tribhuvana dhanya,
sura muni vandhita charaNa
Nav rasa madhura kavita mukhara,
smitha ruchi ruchira bharaNa
Aasinaa bhava maanasa hamse,
kunda tuhina shashi dhavale
Hara jagatguru bodhi vikaasam,
stita pankaja tanu vimale
Lalita kalaamayi gyana vibhaamayi
veena pustaka dhariNi
Mathira staamno tava pada kamala,
ayi kunta visha haariNi
1. Audio Link
2. Audio Link
3.Audio Link
4. Audio Link by Swagatalaxmi Dasgupta
Composer: Sri Raghavendra Swamy ಪಲ್ಲವಿ ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ ತೋರೋ ಮುಕುಂದನೆ || ಅನುಪಲ್ಲವಿ ಸುಂದರ ವದನನೆ ನಂದಗೋಪನ ಕಂದ ಮಂದರೋದ್ಧಾರ ಆನಂದ ಇಂದಿರಾ ರಮಣ || ಚರಣ ನೊಂದೆನಯ್ಯ ಭವಬಂಧನದೊಳು ಸಿಲುಕಿ ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು ಕಂದನಂತೆ ಎಂದೆನ್ನ ಕು೦ದುಗಳೆಣಿಸದೆ ತಂದೆ ಕಾಯೊ ಕೃಷ್ಣ ಕಂದರ್ಪಜನಕನೆ ||೧|| ಮೂಢತನದಿ ಬಹು ಹೇಡಿ ಜೀವ ನಾನಾಗಿ ದೃಢಭಕುತಿಯನು ಮಾಡಲಿಲ್ಲವೊ ಹರಿಯೆ ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ ಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ ||೨|| ಧಾರುಣಿಯೊಳು ಭೂಭಾರಜೀವ ನಾನಾಗಿ ದಾರಿತಪ್ಪಿ ನಡೆದೆ ಸೇರಿದೆ ಕುಜನರ ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯ ಧೀರವೇಣುಗೋಪಾಲ ಪಾರುಗಾಣಿಸೊ ಹರಿಯೆ ||೩|| -------------------------------------------------------------Indu Enage Govinda ninnaya padaaravindava toro mukundane|| Sundara vadanane nandagopana kanda mandarOddhara aananda indira ramaNa|| nondenayya bhavabandhanadoLu siluki munde daari kaaNade kundide jagadoLu kandanante endenna kundugaLeNisade tande kayo Krishna kandarpa janakane||1|| mooDatanadi balu hEDijeeva naanaagi dRuDhabhakutiyanu maadalillavo hariye noDalillavo ninna paaDalillavo mahime gaaDikaara Krishna bEDikombeno ninna||2|| dhaaruNiyoLu bhubhaara jeeva naanaagi daari tappi naDede seride kujanara aaru kaayuvarilla sEride ninagayya dheera veNugopala paarugaaNiso hariye||3|| 1. Audio Link by M.S.Sheela (song 8) 2.Audio Link by Bhimsen Joshi (song4) 3.Audio Link by P.B.Sreenivas 4.Audio Link by S.Janaki
ಹರಿ ಕುಣಿದಾ ನಮ್ಮ ಹರಿ ಕುಣಿದ ||ಪ ||ಅರಳೆಲೆಮಾಗಾಯಿ ಕೊರಳ ಮುತ್ತಿನ ಸರ ತರಳೆಯರೊಡಗೂಡಿ ಹರಿ ಕುಣಿದ ||
ಅಂದುಗೆ ಅರಳೆಲೆ ಬಿಂದುಲ್ಲಿ ಬಾಪುರಿ ಚೆಂದದಿ ನಲಿಯುತ ಹರಿ ಕುಣಿದ ||
ಅಕಳಂಕಚರಿತ ಮಕರಕುಂಡಲಧರ ಸಕಲರ ಪಾಲಿಪ ಹರಿ ಕುಣಿದ ||
ಉಟ್ಟ ಪಟ್ಟೆಯ ದಟ್ಟಿ ಇಟ್ಟ ಕಾಂಚಿಯ ಧಾಮ ದಿಟ್ಟ ಮಲ್ಲರ ಗಂಡ ಹರಿ ಕುಣಿದ ||
ಪರಮಭಾಗವತರ ಕೇರಿಯೊಳಾಡುವ ಪುರಂದರವಿಠಲ ಹರಿ ಕುಣಿದ ||
1.Audio Link by Venkatesh Kumar (song 8) 2.Audio Link by Ranjani Nagaraj below
Composer: Purandara Daasa Raaga: Hamsanaada ಇನ್ನೂ ದಯ ಬಾರದೇ ದಾಸನ ಮೇಲೆ ಪನ್ನಗ ಶಯನ ಶ್ರೀ ಪರಮ ಪುರುಷ ನಾನಾ ದೇಶಗಳಲ್ಲಿ ನಾನಾ ಕಲಗಳಲ್ಲಿ ನಾನಾ ಯೋನಿಗಳಲ್ಲಿ ನೆಲಿದು ಹುಟ್ಟಿ ನಾನು ನನ್ನದು ಎಂಬ ನರಕದೊಳಗೆ ಬಿದ್ದುನೀನೆ ಗತಿ ಎಂದು ನಂಬಿದ ದಾಸನ ಮೇಲೆ ಮನೋವ ಕಾಯದಿಂದ ಮಾಡಿದ ಕರ್ಮಗಳೆಲ್ಲ ದಾನವಾಂತಕ ನಿನಗೆ ದಾನವಿತ್ತೆ ಏನು ಮಾಡಿದರೇನು ಪ್ರಾಣ ನಿನ್ನದು ಸ್ವಾಮಿಶ್ರೀನಾಥ ಪುರಂದರ ವಿಠಲನ ದಾಸನ ಮೇಲೆ --------------------------------------------------------- innu daya bArade dAsana mele pannaga shayana Sri parama purusha nAna deshagaLalli nAna kAlagaLalli nAna yOnigaLalli nalidu hutti nAnu nannadu emba narakadoLage biddu neene gathi endu nambida dAsana mEle manova kAyadinda mAdida karmagaLella dAnavantaka ninage dAna vitte yEnu mAdidarenu prAna ninnadu swami SrinAtha Puranadara Vittala na dAsa na mEle1.Audio link by Bombay Jayashree 2. Audio by Sudha Raghunathan below
ಸದಾ ಎನ್ನ ಹೃದಯದಲ್ಲಿ, ವಾಸ ಮಾಡೋ ಶ್ರೀ ಹರೀ ನಾದ ಮೂರ್ತಿ ನಿನ್ನ ಪಾದ, ಮೋದದಿಂದ ಭಜಿಸುವೆನೋ ಙ್ಞಾನವೆಂಬೋ ನವರತ್ನದ ಮಂಟಪದ ಮಧ್ಯದಲ್ಲಿ ವೇಣುಗಾನ ಲೋಲನ ಕುಳ್ಳಿರಿಸಿ ಧ್ಯಾನದಿಂದ ಭಜಿಸುವೇನೋ ಭಕ್ತಿರಸವೆಂಬೋ ಮುತ್ತು ಮಾಣಿಕ್ಯದಾ ಹರಿವಾಣದೀ ಮುಕ್ತನಾಗಬೇಕು ಎಂದುಮುತ್ತಿನ ಆರತಿ ಎತ್ತುವೇನೋ ನಿನ್ನ ನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ ಘನ ಮಹಿಮ ವಿಜಯ ವಿಠಲ ನಿನ್ನ ಭಕುತರ ಕೇಳೋ ಸೊಲ್ಲ ------------------------------------------------------------------- pallavi sadaa enna hrdayadalli vAsamADO shri hari anupallavi nAda murti ninna pAda mOdadinda bhajisuveno jnAnavembo navaratna maNTapada madhyadali vENugAna lOlana kuLLirisi dhYanadinda bhajisuveno bhakti rasavembO mttuu mANikyada harivANAdi muktanAga bEku endu muttinArati ettuveno ninna nAnu biDuvanalla enna neenu bidalu salla ghana mahima vijayavithala ninna bhakutara kELO solla 1.Audio Link by Bombay Sisters 2. Audio link by Bhimsen Joshi below
Composer : Vijaya Daasa ಪವಮಾನ ಪವಮಾನ ಜಗದಾ ಪ್ರಾಣಾ ಸಂಕರುಷಣ ಭವಭಯಾರಣ್ಯ ದಹನ |ಪ| ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರಿಯ || ಹೇಮ ಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿ ವರ್ಗ ರಹಿತ ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ ರಾಮಚಂದ್ರನ ನಿಜದೂತ ಯಾಮ ಯಾಮಕೆ ನಿನ್ನಾರಾಧಿಪುದಕೆ ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ ಈ ಮನಸಿಗೆ ಸುಖಸ್ತೋಮವ ತೋರುತ ಪಾಮರ ಮತಿಯನು ನೀ ಮಾಣಿಪುದು |1| ವಜ್ರ ಶರೀರ ಗಂಭೀರ ಮುಕುಟಧರ ದುರ್ಜನವನ ಕುಠಾರ ನಿರ್ಜರ ಮಣಿದಯಾ ಪಾರ ವಾರ ಉದಾರ ಸಜ್ಜನರಘವ ಪರಿಹಾರ ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು ಮೂರ್ಜಗವರಿವಂತೆ ಗರ್ಜನೆ ಮಾಡಿದಿ ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ ಮಾರ್ಜನದಲಿ ಭವ ವರ್ಜಿತನೆನಿಸೊ |2| ಪ್ರಾಣ ಅಪಾನ ವ್ಯಾನೋದಾನ ಸಮಾನ ಆನಂದ ಭಾರತಿ ರಮಣ ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ ಜ್ಞಾನಧನ ಪಾಲಿಪ ವರೇಣ್ಯ ನಾನು ನಿರುತದಲಿ ಏನೇನೆಸಗಿದೆ ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ ಪ್ರಾಣನಾಥ ಸಿರಿವಿಜಯವಿಠಲನ ಕಾಣಿಸಿ ಕೊಡುವದು ಭಾನು ಪ್ರಕಾಶ |3| ------------------------------------------------------------------------------------pavamAna pavamAna jagadaa prANA sankaruShaNa bhavabhayAraNya dahana || shravaNave modalAda navavidha bhakutiya tavakadindali koDu kavigaLa priya || hEma kachchuTa upavIta dharipa mAruta kAmAdi varga rahita vyOmAdi sarvavyAputa satata nirbhIta rAmachaMdrana nijadUta yAma yAmake ninnArAdhipudake kAmipe enagidu nEmisi pratidina ee manasige suKastOmava tOruta pAmara matiyanu nI mANipudu vajra sharIra gaMbhIra mukuTadhara durjanavana kuThAra nirjara maNidayA pAra vAra udAra sajjanaraghava parihAra arjunagolidandu dhvajavAnisi nindu mUrjagavarivante garjane mADidi hejje hejjege ninna abja pAdada dhULi mArjanadali bhava varjitaneniso prANa apAna vyAnOdAna samAna Ananda bhArati ramaNa neene sharvAdi gIrvANAdyamararige gnAnadhana pAlipa vareNya nAnu nirutadali yenenesagide mAnasAdi karma ninagoppisideno prANanAtha sirivijayaviThalana kANisi koDuvadu bhAnu prakAsha 1.Audio Link by RajKumar Bharati 2.Audio Link by Anantha Kulkarni
Composer : Purandara Daasa Language : Kannada Raaga : Kaapi 1.Audio Link by M.S.Subbalakshmi 2.Audio Link by Unnikrishnan 3.Audio Link by Rajkumar Bharati ಜಗದೋದ್ಧಾರನ ಆಡಿಸಿದಳೆಶೋದಾ ಜಗದೋದ್ಧಾರನ (ಪ) ಜಗದೋದ್ಧಾರನ ಮಗನೆಂದು ತಿಳಿಯುತ ಸುಗುಣಾಂತ ರಂಗನ ಆಡಿಸಿದಳೆಶೋದೆ (ಅ ಪ) ನಿಗಮಕೆ ಸಿಲುಕದ ಅಗಣಿತ ಮಹಿಮನ ಮಗುಗಳ ಮಾಣಿಕ್ಯನ ಆಡಿಸಿದಳೆ ಯಶೋದೆ (1) ಅಣೋರಣೀಯನ ಮಹತೋ ಮಹಿಮನ ಅಪ್ರಮೇಯನ ಆಡಿಸಿದಳೆಶೋದಾ (2) ಪರಮ ಪುರುಷನ ಪರವಾಸುದೇವನ ಪುರಂದರ ವಿಠಲನ ಆಡಿಸಿದಳೆಶೋದಾ (3) ------------------------------------------------------------ Pallavi jagadoddhArana aaDisidaLu yashode Anupallavi jagadodhArana maganendu tiLiyuta suguNAnta ranganA AdisidaLe yashoda charaNa nigamakE silukada agaNita mahimana magugaLa mANikyana ADisidaLu yashoda (1) aNOraNIyana mahato mahimana apramEyana ADisidaLeshoda (2) parama puruShana paravAsudEvana purandara vittalana ADisidaLu yashode (3)
ರಚನೆ : ಪುರಂದರ ದಾಸ ರಾಗ : ಮೋಹನ ತಾಳ : ಖಂಡ ಛಾಪು ಭಾಷೆ : ಕನ್ನಡ ಕಂಡು ಕಂಡು ನೀ ಎನ್ನ ಕೈ ಬಿಡುವರೇ ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ಹರಿ || ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ ನಿಂದೆಯಲಿ ನೊಂದೆನೈ ನೀರಜಾಕ್ಷ ತಂದೆತಾಯಿಯು ನೀನೆ ಬಂಧುಬಳಗವು ನೀನೆ ಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ||1|| ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ ಎಣಿಸಲಾರದ ಭವದಿ ಕಡುನೊಂದೆ ನಾನು ಸನಕಾದಿಮುನಿವಂದ್ಯ ವನಜಸಂಭವ ಜನಕ ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಕೃಷ್ಣಾ ||2|| ಭಕ್ತವತ್ಸಲನೆಂಬೊ ಬಿರುದು ಪೊತ್ತಾ ಮೇಲೆ ಭಕ್ತರಾಧೀನನಾಗಿರಬೇಡವೆ ಮುಕ್ತಿದಾಯಕ ನೀನು ಹೊನ್ನೂರುಪುರವಾಸ ಶಕ್ತಗುರು ಪುರಂದರವಿಠಲ ಶ್ರೀಕೃಷ್ಣಾ ||3|| -----------------------------------------------------------------------composer: Purandara Daasa raaga: Mohana taala :khanda chaapu kanDu kanDu nee enna kai biDuvare punDarikaaksha shri purushOttam hari|| bandhugaLu yenagilla badukinali sukhavilla nindeyali nondenai nirajaaksha tandetaayiyu neene bandhubaLagavu neene yendendigu ninna nanbidenO krishna||1|| kshanavondu yugavaagi truNakinta kaDeyaagi yeNisalaarada bhavadi kaDunonde naanu sanakaadi munivandya vanajasambhava janaka phaNishaayi prahlaada golida shrikrishna||2|| bhaktavatsalanembo birudu potta mele bhaktara adheenanaagirabeDave muktidaayaka neenu honnuuru puravaasa shaktaguru purandara viThala shrikrishna||3||1. Audio link by Vidya Bhushana 2. Audio link by S.Janaki (from kannada movie)