Composer: Purandara Daasa ಕೃಷ್ಣ ಬಾರೊ ಕೃಷ್ಣ ಬಾರೋ ಕೃಷ್ಣಯ್ಯ ನೀ ಬಾರಯ್ಯ ||ಪ|| ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆನಾದಗಳಿಂದ ||ಅ|| ಮನ್ಮಥಜನಕನೆ ಬೇಗನೆ ಬಾರೊ ಕಮಲಾಪತಿ ನೀ ಬಾರೊ ಅಮಿತಪರಾಕ್ರಮ ಶಂಕರ ಬಾರೊ ಕಮನೀಯ ಗಾತ್ರನೆ ಬಾರಯ್ಯ ದೊರೆಯೆ ||1|| ಸುರುಳು ಕೇಶಗಳ ಒಲಿವ ಅಂದ ಭರದ ಕಸ್ತೂರಿ ತಿಲಕದ ಚಂದ ಶಿರದಿ ಒಪ್ಪುವ ನವಿಲುಕಣ್ಗಳಿಂದ ತರತರದ ಆಭರಣಗಳ ಧರಿಸಿ ನೀ ಬಾರೊ ||2|| ಹಾಲುಬೆಣ್ಣೆಗಳ ಕೈಯಲಿ ಕೊಡುವೆ ಮೇಲಾಗಿ ಭಕ್ಷ್ಯಗಳ ಮುಚ್ಚಿಟ್ಟು ತರುವೆ ಜಾಲ ಮಾಡದೆ ಬಾರಯ್ಯ ಮರಿಯೆ ಬಾಲ ಎನ್ನ ತಂದೆ ಪುರಂದರವಿಠಲ ||3|| ---------------------------------- krishna baaro krishna baro krishnayya nee baarayya ||pa|| saNNa hejjeyaniTTu gejjenaadagaLinda || manmathajanakane begane baaro kamalaapati nee baaro amitaparaakrama shankara baaro kamaniya gaatrane baarayya doreye ||1|| suruLu keshagaLa oliva anda bharada kasturi tilakada chanda shiradi oppuva navilukaNgaLinda taratarada aabharaNagaLa dharisi ni baaro ||2|| haalubeNNegaLa kaiyali koDuve melaagi bhakshyagaLa muchchiTTu taruve jaala maaDade baarayya mariye baala enna tande purandaraviThala ||3||1.Audio Link by Vidyabhushana 2.Audio Link by P.Susheela 3.Audio Link by P.Susheela
Composer: Purandara Daasa ಮನ್ನಾರು ಕೃಷ್ಣಗೆ ಮಂಗಳ ಜಗವ ಮನ್ನಿಸಿದೊಡೆಯಗೆ ಮಂಗಳ ||ಪಲ್ಲವಿ|| ಬೊಮ್ಮನ ಪಡೆದಗೆ ಭಕ್ತರುದ್ಧಾರಿಗೆ ಕಮ್ಮಗೋಲನಯ್ಯಗೆ ಮಂಗಳ ಧರ್ಮರಕ್ಷಕನಿಗೆ ದಾನವಶಿಕ್ಷಗೆ ನಮ್ಮ ರಕ್ಷಕನಿಗೆ ಮಂಗಳ ||1|| ತುರುಗಳ ಕಾಯ್ದಗೆ ಕರುಣಾಕರನಿಗೆ ಗಿರಿಯನೆತ್ತಿದವಗೆ ಮಂಗಳ ವರದ ತಿಮ್ಮಪ್ಪಗೆ ವಾರಿಜನಾಭಗೆ ಹರಿ ಸರ್ವೋತ್ತಮನಿಗೆ ಮಂಗಳ||2|| ದೇವಕಿದೇವಿಯ ತನಯಗೆ ಮಂಗಳ ದೇವ ತಿಮ್ಮಪ್ಪಗೆ ಮಂಗಳ ಮಾವನ ಕೊಂದು ಮಲ್ಲರ ಮಡುಹಿದ ಪುರಂದರವಿಠಲಗೆ ಮಂಗಳ||3|| [ಮನ್ನಾರು - ಮನೋಹರ, ಸುಂದರ]Audio Link by Roopa deepa
Composer: Purandara Daasa ಯಾದವ ನೀ ಬಾ ಯದುಕುಲನಂದನ | ಮಾಧವ ಮಧುಸೂಧನ ಬಾರೋ ||ಪಲ್ಲವಿ|| ಸೋದರ ಮಾವನ ಮಧುರೆಲಿ ಮಡುಹಿದ ಯಶೋದೆ ಕಂದ ನೀ ಬಾರೋ ||ಅನುಪಲ್ಲವಿ|| ಚರಣ ಶಂಖಚಕ್ರವು ಕೈಯಲಿ ಹೊಳೆಯುತ | ಬಿಂಕದ ಗೋವಳ ನೀ ಬಾರೋ || ಅಕಳಂಕ ಮಹಿಮನೆ ಆದಿನಾರಾಯಣ | ಬೇಕೆಂಬ ಭಕುತರಿಗೊಲಿಬಾರೋ ||1|| ಕಣಕಾಲಂದುಗೆ ಘಲುಘಲುರೆನುತಲಿ | ಝಣಝಣ ವೇಣುನಾದದಲಿ || ಚಿಣಿಕೋಲು ಚೆಂಡು ಬುಗುರಿಯನಾಡುತ | ಸಣ್ಣ ಸಣ್ಣ ಗೋವಳರೊಡಗೂಡಿ ಬಾರೋ||2|| ಖಗವಾಹನನೇ ಬಗೆಬಗೆ ರೂಪನೇ | ನಗುಮೊಗದರಸನೇ ನೀ ಬಾರೋ || ಜಗದೊಳು ನಿನ್ನಯ ಮಹಿಮೆಯ ಪೊಗಳುವೆ| ಪುರಂದರವಿಠಲ ನೀ ಬಾರೋ ||3|| --------------------------------------pallavi yAdava nI bA yadukula nandana mAdhava madhusudana baarO|| anupallavi sOdara mAvana madureli maDuhida yashOde kandA nee bArO|| charaNa shanka chakravu kaiyali hoLeyuta binkada gOvaLa nee bArO akaLanka mahimane Adi nArAyaNa bEkemba bhakutari golibArO||1|| kaNa kAlanduge ghalu ghalurenutali jhaNa jhaNa vENu nAdadali chiNikolu cheNDu buguriya nAduta sanna sanna gOvaLaroDa gUDi baaro||2|| khaga vAhananE bage bage rUpanE nagemogadarasane nI bArO jagadoLu ninnaya mahimeya pogaLuve purandara viThala nee bArO||3|| 1.Audio Link by Bhimsen Joshi [song 6] 2.Audio Link by Gayathri S [song 8] 3.Audio Link by Archana udupa [song 4] 4.Audio Link by PB Srinivas [song 8]
Composer: Purandara Daasa ಸ್ಮರಣೆ ಒಂದೇ ಸಾಲದೆ ಗೋವಿಂದನ ನಾಮ ಒಂದೇ ಸಾಲದೆ ||ಪಲ್ಲವಿ|| ಪರಮ ಪುರುಷನನ್ನು ನೆರೆ ನಂಬಿದವರಿಗೆ ದುರಿತ ಬಾಧೆಗಳ ಗುರುತು ತೋರುವುದೆ || ಕಡು ಮೂರ್ಖನಾದರೇನು ದುಷ್ಕರ್ಮದಿಂ ತೊಡೆದಾತನಾದರೇನು ಜಡನಾದರೇನಲ್ಪಜಾತಿಯಾದರೇನು ಬಿಡದೆ ಪ್ರಹ್ಲಾದನ್ನ ಸಲಹಿದ ಹರಿಯ || ಪಾತಕಿಯಾದರೇನು ಸರ್ವಪ್ರಾಣಿ ಘಾತಕಿಯಾದರೇನು ನೀತಿಯ ಬಿಟ್ಟು ದುಷ್ಕರ್ಮಿಯಾದರೇನು ಪ್ರೀತಿಯಿಂದಜಾಮಿಳನ ಸಲಹಿದ ಹರಿಯ || ಸಕಲ ತೀರ್ಥಯಾತ್ರೆಯ ಮಾಡಿದಂಥ ನಿಖಿಲ ಪುಣ್ಯದ ಫಲವು ಭಕುತಿ ಪೂರ್ವಕವಾಗಿ ಬಿಡದನುದಿನದಲ್ಲಿ ಪ್ರಕಟ ಪುರಂದರ ವಿಠಲನ ನಾಮದ ||1.Audio Link by Balamuralikrishna [song 6] 2.Audio Link by Roopa Deepa 3.Audio Link by Kurudi Venkannachar 4.Audio Link by Sangeetha Swaminathan [song 2] 5.Audio Link by PB Srinivas [song 4]
Composer: Purandara Daasa ಪಲ್ಲವಿ ಅಂಬಿಗ ನಾ ನಿನ್ನ ನಂಬಿದೆ ಜಗದಂಬಾರಮಣನ ನಿನ್ನ ನಂಬಿದೆ|| ಚರಣ ತುಂಬಿದ ಹರಿಗೋಲಂಬಿಗ ಅದಕೊಂಭತ್ತು ಛಿದ್ರವು ಅಂಬಿಗ ಸಂಭ್ರಮದಿಂ ನೋಡಂಬಿಗ ಅದರಿಂಬು ನೋಡಿ ನಡೆಸಂಬಿಗ||1|| ಹೊಳೆಯ ಭರವ ನೋಡಂಬಿಗ ಅದಕೆ ಸೆಳವು ಘನವಯ್ಯ ಅಂಬಿಗ ಸುಳಿಯೊಳು ಮುಳುಗಿದೆ ಅಂಬಿಗ ಎನ್ನ ಸೆಳೆದು ಕೊಂಡೊಯ್ಯೊ ನೀನಂಬಿಗ||2|| ಆರು ತೆರೆಯ ನೋಡಂಬಿಗ ಅದು ಮೀರಿ ಬರುತಲಿದೆ ಅಂಬಿಗ ಯಾರಿಂದಲಾಗದು ಅಂಬಿಗ ಅದ ನಿವಾರಿಸಿ ದಾಟಿಸೋ ಅಂಬಿಗ||3|| ಸತ್ಯವೆಂಬುದೆ ಹುಟ್ಟು ಅಂಬಿಗ ಸದಾ ಭಕ್ತಿಯೆಂಬುದೆ ಪಥ ಅಂಬಿಗ ನಿತ್ಯ ಮೂರುತಿ ಪುರಂದರ ವಿಟ್ಠಲ ನಮ್ಮ ಮುಕ್ತಿ ಮಂಟಪಕೊಯ್ಯೊ ಅಂಬಿಗ||4|| OR ಸತ್ವ ಪಥದೊಳಗೆ ಅಂಬಿಗ ಪರಾ ಭಕ್ತಿ ಹುಟ್ಟನು ಹಾಕಿ ಅಂಬಿಗ ಮುಕ್ತಿದಾಯಕ ನಮ್ಮ ಪುರಂದರ ವಿಟ್ಠಲನ ಮುಕ್ತಿ ಮಂಟಪಕೊಯ್ಯೋ ಅಂಬಿಗ||4||1.Audio Link by Vidya Bhushana[song1] 2.Audio Link by M.S.Sheela 3.Audio Link by a group
Composer: Purandara Daasa ಒಂದೇ ನಾಮವು ಸಾಲದೆ ಶ್ರೀ ಹರಿಯೆಂಬ ಒಂದೇ ನಾಮವು ಸಾಲದೆ ||ಪ|| ಒಂದೇ ನಾಮವು ಭವಬಂಧನ ಬಿಡಿಸುವುದೆಂದು ವೇದಂಗಳ ಆನಂದದಿ ಸ್ತುತಿಸುವ ||ಅಪ|| ಉಭಯರಾಯರು ಸೇರಿ ಸಮ್ಮತದಿ ಲೆತ್ತವನಾಡಿ ಸಭೆಯೊಳು ಧರ್ಮಜ ಸತಿಯ ಸೋಲೆ ನಭಕೆ ಕೈಯೆತ್ತಿ ದ್ರೌಪದಿ ಕೃಷ್ಣಾ ಎನ್ನಲು ಇಭರಾಜ ಗಮನೆಗೆ ಅಕ್ಷಯ ವಸ್ತ್ರವನಿತ್ತ |1| ಹಿಂದೊಬ್ಬ ಋಶಿ ಪುತ್ರನಂದು ದಾಸಿಯ ಕೂಡೆ ಸಂದೇಹವಿಲ್ಲದೆ ಹಲವು ಕಾಲ ದಂದುಗದೊಳು ಸಿಲುಕಿ ನಿಂದಂತ್ಯ ಕಾಲದಿ ಕಂದ ನಾರಗನೆಂದು ಕರೆಯಲಭಯವಿತ್ತ |2| ಕಾಶಿಯಪುರದೊಳಗೆ ಈಶ ಭಕುತಿಯಿಂದ ಸಾಸಿರ ನಾಮದ ರಾಮನೆಂಬ ಶ್ರೀಶನ ನಾಮದ ಉಪದೇಶ ಸತಿಗಿತ್ತ ವಾಸುದೇವ ಶ್ರೀ ಪುರಂದರ ವಿಠಲನ್ನ |3|1.Audio Link by Vidya Bhushana 2.Audio Link by Vidya Bhushana 3.Audio Link by Balamuralikrishna [song 10]
Raaga: kEdAragauLa. taala : tripuTa ಅರವಿಂದಾಲಯೇ ತಾಯೇ ಶರಣು ಹೊಕ್ಕೆನು ಕಾಯೇ ಸಿರಿ ರಮಣನ ಪ್ರಿಯೇ ಜಗನ್ಮಾತೇ|| ಕಮಲ ಸುಗಂಧಿಯೇ ಕಮಲದಳ ನೇತ್ರೆಯೆ ಕಮಲವಿಮಲ ಶೋಭಿತೇ ಕಮನೀಯ ಹಸ್ತಪಾದ ಕಮಲವಿರಾಜಿತೇ ಕಮಲೇ ಕಾಯೇ ಎನ್ನನು(ಶ್ರೀ ಲಕುಮಿಯೇ) ನಿನ್ನ ಕರುಣ ಕಟಾಕ್ಷ ವಿಕ್ಷಣದಿಂದಲಿ ತನುಮನಗಳನಿತ್ತೆ ಧನ್ಯ ವಿರಾಜಿತೇ ಅಜಭಾವಾದಿಗಳ ಪ್ರಸನ್ನೇ ಕಾಯೇ ಎನ್ನನು(ಶ್ರೀ ಲಕುಮಿಯೇ) ಹರಿ ನಿನ್ನ ಉರದಲ್ಲಿ ಧರಿಸಿದನೆಂಬಂತ ಕರುವದಿ ಮರೆಯದಿರೆ ನಿರತ ನಿನ್ನಯ ಮುದ್ದು ಪುರಂದರವಿಟ್ಟಲನ ಚರಣಕಮಲವ ತೋರಿಸೆ(ಶ್ರೀ ಲಕುಮಿಯೇ) --------------------------------------------------- aravindAlayE tAyE sharaNu hokkenu kAyE siri ramaNana priyE jaganmAtE kamala sugandhiyE kamaladaLa nEtreye kamala vimala shobhitE kamaneeya hastapAda kamala virAjitE kamalE kAyE ennanu ninna karuNA kaTAkSha vIkShaNadindali tanumanagaLanitte dhanya virAjitE ajabhavAdigaLa prasannE kAyE ennanu hari ninna uradalli dharisidanembantha karuvadi mareyadire nirata ninnaya muddu purandara viTTalana charaNa kamalava torise1.Audio Link by Vidyabhushana 2.Audio Link by Kiranmai
Composer: Purandara Daasa Language: KannaDa ಪಲ್ಲವಿ ಶರಣು ಸಕಲೋದ್ಧಾರ ಅಸುರ ಕುಲ ಸಂಹಾರ ಶರಣು ದಶರಥ ಬಾಲ ಜಾನಕೀಲೋಲ ಈ ಮುದ್ದು ಈ ಮುಖವು ಈ ತನುವಿನಾ ಕಾಂತಿ ಈ ಬಿಲ್ಲು ಈ ಬಾಣ ಈ ನಿಂತ ಈ ಭಾವ ಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯ ಯಾವ ದೇವರಿಗೆ ಉಂಟು ಮೂರುಲೋಕದೊಳಗೆ[1] ಉಟ್ಟ ಪೀತಾಂಬಾರವು ಉಡಿಗೆಜ್ಜೆ ಮಾಣಿಕವೂ ದೊಡ್ಡ ನವರತ್ನದ ಆಭರಣ ಇರಲು ಕೊಟ್ಟ ಭಾಷೆಗೆ ತಪ್ಪ ನಿಜಭಕ್ತರಿಗೆ ಒಲಿವ ಸೃಷ್ಟಿಯೊಳಗೆ ಕಾಣೆ ಕೌಸಲ್ಯರಾಮ[2] ಪಾಲಿಸಲು ಅಯೋಧ್ಯ ಪಟ್ಟಣದಲ್ಲಿ ಪುರವಾಸ ಬೇಡಿದ ಇಷ್ಟಾರ್ಥಗಳ ಕೊಡುವೆನೆನುತ ಭಾವ ಶುದ್ಧಿಯುಳ್ಳ ತನ್ನ ಭಕುತರ ಪೊರೆವ ಪುರಂದರ ವಿಟ್ಟಲನೆ ಅಯೋಧ್ಯ ರಾಮ[3] -----------------------------------------------------pallavi sharaNu sakaloddhAra asura kula samhAra sharaNu dasharatha bAlA jAnakilola charaNa 1 ee muddu ee mukhavu ee tanuvinaa kAnti ee billu ee bANa ee ninta ee bhAva ee tamma ee seete ee banTa ee bhAgya yAva dEvarige unTu moorulokadoLage[1] uTTa pItAmbaravu uDigejje mANikavu doDDa navaratnada AbharaNa iralu koTTa bhAshege tappa nija bhaktarige oliva sruShTiyoLageNe kANe kausalya rAma[2] paLisalu ayOdhya paTTaNadalli puravAsa bEDida iShTArthagaLa koDuvenenuta bhAva shuddhiyuLLa tanna bhakutara poreva purandara viTTalane ayodhya raama[3]1.Audio by Erode Rajamani 2.Audio Link by Rajkumar
Composer : Purandara Dasa ಪಲ್ಲವಿ ಯಾಕೆ ನಿರ್ದಯನಾದೆ(ಯೋ) ಎಲೊ ದೇವನೆ (ಹರಿಯೇ) ಶ್ರೀಕಾಂತ ಎನ್ನ ಮೇಲೆ ಎಳ್ಳಷ್ಟು ದಯವಿಲ್ಲ|| ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು ಹಿಂಗದೆ ಪ್ರಹ್ಲಾದನ ಅಪ್ಪಿಕೊಂಡೆ ಮಂಗಳಪದವಿತ್ತು ಮನ್ನಿಸಿದೆ ಅವ ನಿನಗೆ ಭಂಗಾರವೆಷ್ಟು ಕೊಟ್ಟನು ಪೇಳೊ ಹರಿಯೆ |1| ಸಿರಿ ದೇವಿಗೆ ಹೇಳದೆ ಸೆರಗು ಸಂವರಿಸದೆ ಗರುಡನ ಮೇಲೆ ಎರಗಿ ಗಮನವಾಗದೆ ಭರದಿಂದ ನೀ ಬಂದು ಆತನ ಸಲಹಿದೆ ಕರಿರಾಜ ಎಷ್ಟು ಕನಕವ ಕೊಟ್ಟನೋ ಹರಿಯೆ |2| ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೇ ನಿಜದಿ ರುಕ್ಮಾಂಗದನು ನಿನ್ನ ಮೊಮ್ಮಗನೆ ಭಜನೆಗೆ ಅವರೇ ಹಿತರೆ ನಾ ನಿನಗೆ ಅನ್ಯನೇ ತ್ರಿಜಗಪತಿ ಸಲಹೆನ್ನ ಪುರಂದರವಿಠಲ |3| 1.Audio by M.L.Vasantha Kumari 2.Audio by Roopa, Deepa Kasaravalli
ಹರಿನಾಮದರಗಿಣಿಯು ಹಾರುತಿದೆ ಜಗದಿ ಪರಮ ಭಾಗವತರು ಬಲೆಯ ಬೀಸುವರು ||ಪ|| ಕೋಪವೆಂಬ ಮಾರ್ಜಾಲ ಕಂಡರೆ ನುಂಗುವುದು ತಾಪವೆಂಬುವ ಹುಲಿಯ ಕೊಂಡೊಯ್ವುದು ಕಾಪಾಡಲದನೊಯ್ದು ಹೃದಯದೊಳಗಿಂಬಿಟ್ಟು ಆಪತ್ತಿಗೊದಗುವುದು ಆ ಮುದ್ದು ಅರಗಿಣಿಯು |1| ದಾರಿಯಲಿ ನಡೆವಾಗ ಚೋರರುಪಟಳವಿಲ್ಲ ಮಾರಿ ಬಂದರೆ ಅದನು ಹೊಡೆದು ನೂಕುವುದು ಕ್ರೂರ ಯಮಭಟರನು ಮೂಗು ರೆಕ್ಕಿಲಿ ಬಡಿದು ದಾರಿ ತೋರುವುದು ಮುರಾರಿ ಪಟ್ಟಣಕೆ |2| ಎಷ್ಟು ವರ್ಣಿಸಲಿ ನಾ ಈ ಮುದ್ದು ಅರಗಿಣಿಯ ಹೊಟ್ಟೆಯೊಳಗೀರೇಳು ಜಗವನಿಂಬಿಟ್ಟು ಸೃಷ್ಟೀಶ ಪುರಂದರ ವಿಠಲನ ನೆನೆ ನೆನೆದು ಮುಟ್ಟಿ ಭಜಿಸುವುದು ಈ ಮುದ್ದು ಅರಗಿಣಿಯು|3| 1.Audio by Roopa Deepa Kasaravalli 2.Audio by Narasimha Nayaka [song 16]
ಪಾಲಿಸೆಮ್ಮ ಮುದ್ದು ಶಾರದೆ ಎನ್ನ ನಾಲಿಗೆಯಲಿ ನಿಲ್ಲ ಬಾರದೆ || ಪಲ್ಲವಿ || ಲೋಲಲೋಚನೆ ತಾಯೆ ನಿರುತ ನಂಬಿದೆ ನಿನ್ನ || ಅನುಪಲ್ಲವಿ || ಅಕ್ಷರಕ್ಷರ ವಿವೇಕವಾ ನಿನ್ನ ಕುಕ್ಷಿಯೊಳಿರೆ ಏಳು ಲೋಕವ ಸಾಕ್ಷಾತ್ ರೂಪದಿಂದ ಒಲಿದು ರಕ್ಷಿಸು ತಾಯೆ || ೧ || ಶೃಂಗಾರಪುರ ನೆಲೆವಾಸಿನೀ ದೇವಿ ಸಂಗೀತಗಾನ ವಿಲಾಸಿನೀ ಮಂಗಳಗಾತ್ರೆ ತಾಯೆ ಭಳಿರೆ ಬ್ರಹ್ಮನ ರಾಣಿ || ೨ || ಸರ್ವಾಲಂಕಾರ ದಯಾಮೂರುತಿ ನಿನ್ನ ಚರಣವ ಸ್ಮರಿಸುವೆ ಕೀರುತಿ ಗುರುಮೂರ್ತಿ ಪುರಂದರ ವಿಠಲನ್ನ ಸ್ಮರಿಸುವೆ || ೩ || 1.Audio Link by M.S.Sheela (song6) 2.Audio Link by Upendra Bhat 3.Audio Link by H.K.Narayana 4.Audio link by Narasimha nayak[song 39]
raaga : kEdaara gowLa
taaLa : aadi
Composer: Purandara Daasa
ಪಲ್ಲವಿ
ಸಿಂಹರೂಪನಾದ ಶ್ರೀ ಹರಿ ಹೇ ನಾಮಗಿರೀಶನೇ
ಅನುಪಲ್ಲವಿ
ಒಮ್ಮನದಿಂದ ನಿಮ್ಮನು ಭಜಿಸಲು ಸಮ್ಮತದಿಂದಲಿ ಕಾಯುವೆನೆಂದ ಹರಿ
ತರಳನು ಕರೆಯೆ ಸ್ಥಂಭವು ಬಿರಿಯೇ
ತುಂಬಾ ಉಗ್ರವನು ತೋರಿದನು
ಕರುಳನು ಬಗೆದು ಕೊರಳೊಳಗಿಟ್ಟು
ತರಳನ ಸಲಹಿದ ಶ್ರೀ ನರಸಿಂಹನೆ
ಭಕ್ತರೆಲ್ಲ ಕೂಡಿ ಬಹು ದೂರ ಓಡಿ
ಪರಮ ಶಾಂತವನು ಬೇಡಿದರು
ಕರೆದು ತನ್ನ ಸಿರಿಯನು ತೊಡೆಯೊಳು ಕುಳಿಸಿದ
ಪರಮ ಹರುಷವನು ಹೊಂದಿದ ಶ್ರೀ ಹರಿ
ಜಯ ಜಯ ಜಯವೆಂದು ಹೂವನು ತಂದು
ಹರಿ ಹರಿ ಹರಿಯೆಂದು ಸುರರೆಲ್ಲ ಸುರಿಸೆ
ಭಯ ನಿವಾರಣ ಭಾಗ್ಯ ಸ್ವರೂಪನೇ
ಪರಮ ಪುರುಶ ಶ್ರೀ ಪುರಂದರ ವಿಟ್ಟಲನೆ
---------------------------------------------------
pallavi
simharupanAda shrI hari hE nAmagirishanE
anupallavi
ommanadinda nimmanu bhajisalu
sammatadindali kAyuvenenda hari
charaNa
taraLanu kareye sthambhavu biriyE
tumba ugravanu toridanu
karuLanu bagedu koraLoLagiTTu
taraLana salahida shri narasimhane
bhaktarella kooDi bahu dUra Odi
parama shAntavanu bEDidaru
karedu tanna siriyanu toDeyoLu kuLisida
parama haruShavanu hondida shrI hari
jaya jaya jayavendu huvanu tandu
hari hari hariyendu surarella surise
bhaya nivAraNa bhAgya svarUpanE
parama puruSa shrI purandara viTTalanE
1.Audio Link by Vishakha Hari
2.Audio link by Another group (needs real player)
1. Audio Link by Bala Brundam 2.Audio Link by M.L.Vasantha Kumari 3.Audio By another group 4.Audio by Narasimha Nayak (song 27) raaga: Arabhi taaLa: Adi ಆಡಿದನೋ ರಂಗ ಅದ್ಭುತದಿಂದಲಿ ಕಾಳಿಂಗನ ಫಣೆಯಲಿ [ಪ] ಪಾಡಿದವರಿಗೆ ಬೇಡಿದ ವರಗಳ ನೀಡುತಲಿ ದಯ ಮಾಡುತಲಿ ನಲಿದಾಡುತಲಿ ಬೆಣ್ಣೆ ಬೇಡುತಲಿ ಕೃಷ್ಣ [ಅ ಪ] ಅಂಬುರುಹೋದ್ಭವ ಅಖಿಳ ಸುರರು ಕೂಡಿ ಅಂಬರದಲಿ ನಿಂತು ಅವರ ಸ್ತುತಿಸೆ ರಂಭೆ ಊರ್ವಶಿ ರಮಣಿಯರೆಲ್ಲರು ಚಂದದಿಂ ಭರತನಾಟ್ಯವ ನಟಿಸೆ ಝಂತಟ ತಕಧಿಮಿ ತಧಿಗಿಣಿ ತೋಂ ಎಂದು ಝಂಪೆ ತಾಳದಿ ತುಂಬುರುನೊಪ್ಪಿಸೆ ಧಾ ಮ ಪ ಧ ಸ ರೀ ಎಂದು ಧ್ವನಿಯಿಂದ ನಾರದ ತುಂಬುರು ಗಾನವ ಮಾಡಲು ನಂದಿಯು ಮದ್ದಲೆ ಚೆಂದದಿ ಹಾಕಲು[1] ಫಣವ ಮೆಟ್ಟಿ ಬಾಲವ ಕೈಯಲಿ ಪಿಡಿದು ಫಳಫಳಿಸುತ್ತ ನಾಟ್ಯವನಾಡೆ ಚಂದ್ರಮಂಡಲದಂತೆ ಪೊಳೆಯುವ ಮುಖದೊಳು ಚಲಿಸುವ ನೀಲಕೇಶಗಳಾಡೆ ಕಾಲಲಂದುಗೆ ಗೆಜ್ಜೆ ಘಲು ಘಲು ಘಲುರೆನುತ ಉಡಿಗೆಜ್ಜೆ ಘಂಟೆಗಳಾಡೆ ದುಷ್ಟ ಕಾಳಿಂಗನ ಮೆಟ್ಟಿ ಭರದಿಂದ ಪುಟ್ಟ ಪಾದವ ಇಟ್ಟು ಶ್ರೀ ಕೃಷ್ಣನು ಮೆಟ್ಟಿದನು ತಕ ಧಿಮಿ ತಧಿಕೆನುತ[2] ಸುರರು ಪುಷ್ಪದ ವೃಷ್ಟಿಯ ಕರೆಯಲು ಸುದತಿಯರೆಲ್ಲರು ಪಾಡಲು ನಾಗಕನ್ನಿಕೆಯರು ನಾಥನ ಬೇಡಲು ನಾನಾ ವಿಧದಿ ಸ್ತುತಿ ಮಾಡಲು ರಕ್ಕಸರೆಲ್ಲರು ಕಕ್ಕಸವನೆ ಕಂಡು ದಿಕ್ಕು ದಿಕ್ಕುಗಳಿಗೆ ಓಡಲು ಚಿಕ್ಕವನಿವನಲ್ಲ ಪುರಂದರ ವಿಠ್ಠಲ ವೆಂಕಟರಮಣ ಬೇಗ ಯಶೋದೆ ಬಿಂಕದೊಳೆತ್ತಿ ಮುದ್ದಾಡೆ ಶ್ರೀ ಕೃಷ್ಣನ[3] ---------------------------------------------------------------Aadidano ranga adbhutadindali kALingana phaNeyali pADidavarige bEDida varagaLa neeDutali daya mADutali nalidADutali beNNe bEDutali krishna amburuhodbhava akhila suraru kooDi ambaradali nintu avara stutise rambe Urvashi ramaNiyarellaru chendadim bharata nATyava naTise jhamtaTa takadhimi tadhigiNi tom endu jhampe tALadi tumburanoppise da ma pa da sa ri endu dvaniyinda nArada tumbura gAnava mADalu nandiyu maddaLe chendadi hAkalu[1] phaNava meTTi bAlava kaiyali piDidu phaLa phaLisutta nATyavanADe chandra maNDaladante poLeyuva mukhadoLu chalisuva neela kEshagaLADe kAlalanduge gejje ghalu ghalu ghalurenuta uDi gejje ghaNTegaLADe dushTa kALingana meTTi bharadinda puTTa pAdava iTTu shrI krishNanu meTTidanu taka dhimi tadhikenuta[2] suraru pushpada vrushTiya kareyalu sudatiyarellaru pADalu nAga kannikeyaru nAthana bEDalu nAnA vidhadi stuti mADalu rakkasarellaru kakkasavane kaNDu dikku dikkugaLige Odalu chikkavanivanalla purandara viTTala vEnkaTaramaNa bEga yashOde binkadoLetti muddADe shrI krishNana[3]
Composer :Purandara Daasa Raaga: NaaTa TaaLa : KhanDa chaapu ವಂದಿಸುವದಾದಿಯಲಿ ಗಣನಾಥನ || ಸಂದೇಹ ಸಲ್ಲ ಶ್ರೀ ಹರಿಯಾಜ್ಞೆಯಿದಕುಂಟು || ಹಿಂದೆ ರಾವಣ ತಾನು ವಂದಿಸದೆ ಗಜಮುಖನ ನಿಂದು ತಪವನು ಕೈದು ವರ ಪಡೆಯಲು ಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿ ತಂದ ವರಗಳನೆಲ್ಲ ಧರೆಗೆ ಇಳಿಸಿದನು || ಅಂದಿನಾ ಬಗೆಯರಿತು ಬಂದು ಹರಿ ಧರ್ಮಜಗೆ ಮುಂದೆ ಗಣಪನ ಪೂಜಿಸೆಂದು ಪೇಳೆ ಒಂದೇ ಮನದಲಿ ಬಂದು ಪೂಜಿಸಲು ಗಣನಾಥ ಹೊಂದಿಸಿದ ನಿರ್ವಿಘ್ನದಿಂದ ರಾಜ್ಯವನು || ಇಂದು ಜಗವೆಲ್ಲ ಉಮೆನಂದನನ ಪೂಜಿಸಲು ಚೆಂದದಿಂದಲಿ ಸಕಲ ಸಿದ್ಧಿಗಳನಿತ್ತು ತಂದೆ ಸಿರಿಪುರಂದರವಿಠಲನ ಸೇವೆಯೊಳು ಬಂದ ವಿಘ್ನವ ಕಳೆದಾನಂದವನು ಕೊಡುವ || ------------------------------------------pallavi vandisuvadAdiyali gaNanAthana anupallavi sandEha salla SrI hariyAjneyidakuNTu charaNa hinde rAvaNa tAnu vandisade gajamukhana nindu tapavanugaidu vara paDeyalu ondu nimiShadi bandu vighnavanu Acharisi tanda varagaLanella dharege iLisidanu[1] andinA bageyaritu bandu hari dharmajage munde gaNapana poojisendu pElE ondE manadali bandu pUjisalu gaNanAtha hondisida nirvighnadinda rAjyavanu[2] indu jagavella ume nandanana poojisalu chendadindali sakala siddhigaLanittu tande siri purandara viTTalana sEveyoLu banda vighnava kaLedAnandavanu koDuva[3] ------------------------------------------------- 1.Audio link by M. M.L.Vasantha kumari(song 1)[MI] 2.Audio link by Madhu balakrishna (song 33)[MI] 3.Audio Link by Sangeetha (song 1)[MI] 4.Audio link by Rajkumar bharati (song 2)[MI] 4.Audio link by R.K.Srikantan[Rg]
ರಚನೆ :ಪುರಂದರ ದಾಸ ಶರಣು ಬೆನಕನೆ ಕನಕರೂಪನೆ ಕಾಮಿನಿ ಸಂಗದೂರನೇ ಶರಣು ಸಾಂಬನ ಪ್ರೀತಿ ಪುತ್ರನೆ ಶರಣು ಜನರಿಗೆ ಮಿತ್ರನೆ ಏಕದಂತನೆ ಲೋಕಖ್ಯಾತನೆ ಏಕವಾಕ್ಯ ಪ್ರವೀಣನೇ ಏಕವಿಂಶತಿ ಪತ್ರಪೂಜಿತನೇಕ ವಿಘ್ನ ವಿನಾಯಕ [1] ಲಂಬಕರ್ಣನೆ ನಾಸಿಕಾಧರನೆ ಗಾಂಭೀರ್ಯಯುತ ಗುಣಸಾರನೇ ಕಂಬುಕಂಧರ ಇಂದುಮೌಳಿಜ ಚಂದನಚರ್ಚಿತಾಂಗನೇ [2] ಚತುರ್ಬಾಹು ಚರಣ ತೊಡಲನೆ ಚತುರ ಆಯುಧ ಧಾರನೇ ಮತಿಯವಂತನೆ ಮಲಿನ ಜಲಿತನೆ ಅತಿಯ ಮಧುರಾಹಾರನೇ [3] ವಕ್ರತುಂಡನೆ ಮಹಾಕಾಯನೆ ಅರ್ಕಕೋಟಿ ಪ್ರದೀಪನೇ ಚಕ್ರಧರ ಹರಬ್ರಹ್ಮಪೂಜಿತ ರಕ್ತ ವಸ್ತ್ರಾಧಾರನೇ [4] ಮೂಷಿಕಾಸನ ಶೇಷಭೂಷಣ ಅಶೇಷ ವಿಘ್ನವಿನಾಯಕ ದಾಸ ಪುರಂದರವಿಟ್ಠಲೇಶನ ಈಶಗುಣಗಳ ಪೊಗಳುವೆ [5] 1.Audio Link by Parameshwara hegde (song 6) 2.Audio Link by Vidya bhushana (song 18) 3.Audio Link by M.S.Sheela(song 1) 4. Audio by a group of singers
ಕಂಡೆ ಕಂಡೆ ಸ್ವಾಮಿಯ ಬೇಡಿಕೊಂಡೆ || ಕಂಡೆ ತಿರುಪತಿ ವೆಂಕಟೇಶನ ಕಾರಣಾತ್ಮಕ ಸಾರ್ವಭೌಮನ ಕಾಮಿತಾರ್ಥಗಳೀವ ದೇವನ ಕರುಣಾನಿಧಿ ಎಂದೆನಿಸಿ ಮೆರೆವನ || ಕೋಟಿಸೂರ್ಯ ಪ್ರಕಾಶವೆನಿಪ ಕಿರೀಟವನು ಮಸ್ತಕದಿ ಕಂಡೆನು ನೋಟಕಾಶ್ಚರ್ಯವಾದ ನಗೆಮುಖನೊಸಲಿನಲಿ ತಿರುಮಣಿಯ ಕಂಡೆನು ಸಾಟಿಯಿಲ್ಲದೆ ಚತುರ ಹಸ್ತದಿ ಶಂಖಚಕ್ರಗದಾಬ್ಜ ಕಂಡೆನು ಬೂಟಕದ ಮಾತಲ್ಲ ಕೇಳಿರೋ ಭೂರಿದೈವರ ಗಂಡನಂಘ್ರಿಯ|| ತಪ್ಪುಕಾಣಿಕೆ ಕಪ್ಪವನು ಸಮಸ್ತದ್ವೀಪಗಳಿಂದಲಿ ತರಿಸುವ ಉಪ್ಪು ಓಗರಗಳನೆ ಮಾರಿಸಿ ಉಚಿತದಿಂದಲಿ ಹಣವ ಗಳಿಸುವ ಇಪ್ಪತ್ತು ದುಡ್ಡಿಗೆ ಸೇರು ತೀರ್ಥ ಒಪ್ಪದಲಿ ಕ್ರಯ ಮಾಡಿ ಕೊಡಿಸುವ ಸರ್ಪಶಯನ ಸಾರ್ವಭೌಮನ ಅಪ್ಪ ವೆಂಕಟರಮಣನಂಘ್ರಿಯ || ಉರದಿ ಶ್ರೀ ದೇವಿಯಳ ಕಂಡೆನು ಉನ್ನತದ ಕೌಸ್ತುಭವ ಕಂಡೆನು ಗರುಡ ಕಿನ್ನರನಾರದಾದಿ ಗಂಧರ್ವರ ಎಡಬಲದಲಿ ಕಂಡೆನು ತರತರದಿ ಭಕ್ತರಿಗೆ ವರಗಳ ಕರೆದು ಕೊಡುವುದ ನಿರತ ಕಂಡೆನು ಶರಧಿಶಯನನ ಶೇಷಗಿರಿಯ ವರದ ಪುರಂದರವಿಠಲನಂಘ್ರಿಯ ||1. Audio Link by Balamurali Krishna (song 5) 2.Audio Link by Vidya Bhushana ಕೆಲವು ಪದಗಳ ಅರ್ಥ: ನೊಸಲು - ಹಣೆ,ನೆತ್ತಿ,ತಲೆಯ ಮಧ್ಯಭಾಗ, ಬೂಟ - ಮೋಸ, ಕಪಟ ಅಂಘ್ರಿ - ಹೆಜ್ಜೆ, ಪಾದ,ಕಾಲು ಭೂರಿ - ಹೆಚ್ಚು, ಅಧಿಕ,ಚಿನ್ನ, ಹೊನ್ನು,ವಿಸ್ತಾರವಾದ, ವಿಶಾಲವಾದ ಕ್ರಯ - ಬೆಲೆ, ಕಿಮ್ಮತ್ತು ಓಗರ - ಬೇಯಿಸಿದ ಆಹಾರ, ಅನ್ನ ತರ - ಸಾಲು,ಕ್ರಮ,ಯೋಗ್ಯವಾದುದು
ನರಸಿಂಹನ ಪಾದ ಭಜನೆಯ ಮಾಡೋ ||ಪ || ದುರಿತ ಪರ್ವತವ ಖಂಡಿಸುವ ಕುಲಿಶದಂತೆ ||ಅ|| ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ ವರ ಕಂಭದಿಂ ಬಂದ ಸಿರಿ ನರಹರಿ ನಮ್ಮ || ತರಳನ ಮೊರೆ ಕೇಳಿ ತ್ವರಿತದಲಿ ಬಂದು ದುರುಳನ ಕರುಳ ತನ್ನ ಕೊರಳಲ್ಲಿ ಧರಿಸಿದ || ಹರಿ ವಿರಿಂಚಾರಾದ್ಯರು ಕರವೆತ್ತಿ ಮುಗಿಯಲು ಪರಮ ಶಾಂತನಾದ ಪುರಂದರವಿಠಲ || Audio Link by Vidya Bhushana
ಹರಿ ಕುಣಿದಾ ನಮ್ಮ ಹರಿ ಕುಣಿದ ||ಪ ||ಅರಳೆಲೆಮಾಗಾಯಿ ಕೊರಳ ಮುತ್ತಿನ ಸರ ತರಳೆಯರೊಡಗೂಡಿ ಹರಿ ಕುಣಿದ ||
ಅಂದುಗೆ ಅರಳೆಲೆ ಬಿಂದುಲ್ಲಿ ಬಾಪುರಿ ಚೆಂದದಿ ನಲಿಯುತ ಹರಿ ಕುಣಿದ ||
ಅಕಳಂಕಚರಿತ ಮಕರಕುಂಡಲಧರ ಸಕಲರ ಪಾಲಿಪ ಹರಿ ಕುಣಿದ ||
ಉಟ್ಟ ಪಟ್ಟೆಯ ದಟ್ಟಿ ಇಟ್ಟ ಕಾಂಚಿಯ ಧಾಮ ದಿಟ್ಟ ಮಲ್ಲರ ಗಂಡ ಹರಿ ಕುಣಿದ ||
ಪರಮಭಾಗವತರ ಕೇರಿಯೊಳಾಡುವ ಪುರಂದರವಿಠಲ ಹರಿ ಕುಣಿದ ||
1.Audio Link by Venkatesh Kumar (song 8) 2.Audio Link by Ranjani Nagaraj below
Composer: Purandara Dasa Language: Kannada
ಪಲ್ಲವಿ ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಅಚ್ಯುತ ಅನಂತನ ಅನುಪಲ್ಲವಿತೂಗಿರೆ ವರಗಿರಿಯಪ್ಪ ತಿಮ್ಮಪ್ಪನ ತೂಗಿರೆ ಕಾವೇರಿ ರಂಗಯ್ಯನ ಚರಣ ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ ನಾಗಕನ್ನಿಕೆಯರು ತೂಗಿರೇ ನಾಗವೇಣಿಯರು ನೇಣು ಪಿಡಿದುಕೊಂಡು ಬೇಗನೆ ತೊಟ್ಟಿಲ ತೂಗಿರೆ (೧) ಇಂದ್ರ ಲೋಕದಲ್ಲುಪೇಂದ್ರ ಮಲಗ್ಯಾನೆ ಇಂದು ಮುಖಿಯರೆಲ್ಲ ತೂಗಿರೆ ಇಂದ್ರ ಕನ್ನಿಕೆಯರು ಬಂದು ಮುಕುಂದನ ತೊಟ್ಟಿಲ ತೂಗಿರೆ (೨) ಆಲದೆಲೆಯ ಮೇಲೆ ಶ್ರೀಲೋಲ ಮಲಗ್ಯಾನೆ ನೀಲ ಕುಂತಳೆಯರು ತೂಗಿರೆ ವ್ಯಾಳ ಶಯನ ಹರಿ ಮಲಗು ಮಲಗು ಎಂದು ಬಾಲ ಕೃಷ್ಣಯ್ಯನ ತೂಗಿರೆ (೩) ಸಾಸಿರ ನಾಮದ ಸರ್ವೋತ್ತಮನೆಂದು ಸೂಸುತ್ತ ತೊಟ್ಟಿಲ ತೂಗಿರೆ ಲೇಸಾಗಿ ಮಡುವಿನೊಳು ಶೇಷನ ತುಳಿದಿಟ್ಟ ದೋಷ ವಿದೂರನ ತೂಗಿರೆ (೪) ಅರಳೆಲೆ ಮಾಗಾಯಿ ಕೊರಳ ಮುತ್ತಿನಹಾರ ತರಳನ ತೊಟ್ಟಿಲ ತೂಗಿರೇ ಸಿರಿದೇವಿ ರಮಣನ ಪುರಂದರ ವಿಠಲನೆ ಕರುಣದಿ ಮಲಗೆಂದು ತೂಗಿರೆ (೫)
----------------------------------------------------------------------------
toogire rangana toogire krishnana toogire achuta anantana toogire varagiriyappa timmappana toogire kaveri rangayyanaa nagalokadalli narayana malagyane nagakannikeyaru thoogire nagaveniyaru neNu piDidukonDu begane tottila tugire [1] indra lokadalli upendra malagyane indu mukhiyarella toogire indra kannikeyaru bandu mukundana tottila thugire [2] aaladeleya mele shreelola malagyane neela kuntaLeyaru toogire vyalshayana hari malagu malagu endu bala krishnnayyana toogire [3] sasira namada sarvottamanendu soosutta tottila toogire lesaagi maDuvinoLu sheshana tuLiditta dosha vidoorana toogire [4] araLele magayi koraLa muttinahaara taraLana tottila toogire siridevi ramaNana purandara viThalane karuNadi malagendu toogire [5]1. Audio Link by Vidya Bhushana (song 24) 2.Audio Link by Pallavi Arun 3.Audio Link by Pushpa Jagadeesh 4.Audio Link by Kavitha Subramaniam