ರಚನೆ:ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ. ದತ್ತಾತ್ರೇಯ ತ್ರಿಮೂರ್ತಿ ರೂಪ ತ್ರಿಭುವನ ಲೋಕ ರಕ್ಷಕ || ಕಾಮಧೇನು ಕಲ್ಪವೃಕ್ಷ ಕಾಮಿತ ಫಲ ದಾಯಕ || ದಂಡ ಕಮಂಡಲ ಶೂಲ ಡಮರುಗ ಶಂಖ ಚಕ್ರ ಶೋಭಿತ || ಉತ್ತಮೋತ್ತಮ ಪುರುಷೋತ್ತಮ ಪೂರ್ಣಚಂದ್ರ ಪ್ರಕಟಿತ || ಭಾವ ಬಂಧನ ಭವ ಭಯ ದೂರ ಭಕ್ತ ಕರುಣಾ ಸಾಗರ || ಕೃತಿಕ ತಾರಾ ಸಿದ್ಧಾನು ಸಾರ ಸಿದ್ಧ ಧೂತ ಮನೊಹರ || ಸಹ್ಯಾದ್ರಿವಾಸ ಸಚ್ಚಿದಾನಂದ ಶ್ರೀ ಗುರು ದತ್ತ ಸ್ವರೂಪ || ================================
Dattatreya trimurti rupa Tribhuvana loka rakshaka||
Kamadhenu kalpavriksha Kaamita phala daayaka||
Danda Kamandala shoola damaruga Shankha chakra shobitha||
Uttamottama purushottama Poornachandra prakatitha||
Bhaava bhandhana bhava bhaya dura bhaktha karuna sagara||
Krithika tara siddhanu saara Siddha dhootha manohara||
Sahyadrivasa Sachidananda Sri guru datta swarupa||
1.AudioLink - by Ganapti Sachchidananda Swamiji(youtube) 2.AudioLink - by Ganapti Sachchidananda Swamiji(yahoo) 3.AudioLink - by Narayanaswamy
ರಚನೆ : ಕನಕದಾಸರು ಭಾಷೆ : ಕನ್ನಡ ಲಾಲಿ ಪಾವನ ಚರಣ ಲಾಲಿ ಅಘ ಹರಣ ಲಾಲಿ ವೆಂಕಟರಮಣ ಲಲಿತ ಕಲ್ಯಾಣ [ಪ] ವನಜಾಕ್ಷ ಮಾಧವ ವಸುದೇವ ತನಯ ಸನಕಾದಿ ಮುನಿವಂದ್ಯ ಸಾಧು ಜನಪ್ರಿಯ ಇನ ಕೋಟಿ ಶತ ತೇಜ ಮುನಿ ಕಲ್ಪ ಭೂಜ ಕನಕಾದ್ರಿ ನಿಲಯ ವೆಂಕಟರಾಯ[೧] ಜಗದೇಕ ನಾಯಕ ಜಲಜದಳ ನೇತ್ರ ಖಗರಾಜ ವಾಹನ ಕಲ್ಯಾಣ ಚರಿತ ಸಗರ ತನಯಾರ್ಚಿತ ಸನಕಾದಿ ವಿನುತ ರಘುವಂಶ ಕುಲ ತಿಲಕ ರಮಣೀಯ ಗಾತ್ರ[೨] ನಂದಗೋಪ ಕುಮಾರ ನವನೀತ ಚೋರ ಮಂದಾಕಿನಿ ಜನಕ ಮೋಹನಾಕಾರ ಇಂದುಧರ ಸತಿ ವಿನುತ ವಿಶ್ವ ಸಂಚಾರ ನಂದ ಗೋವಿಂದ ಮುಚುಕುಂದ ನುತ ಸಾರ[೩] ನರ ಮೃಗಾಕಾರಿ ಹಿರಣ್ಯಕ ವೈರಿ ಕರಿರಾಜ ರಕ್ಷಕ ಕಾರುಣ್ಯ ಮೂರ್ತಿ ಹರಿ ಆದಿಕೇಶವ ಗುರು ಅಪ್ರಮೇಯ ಶ್ರೀಧರ ಶೇಷಗಿರಿ ವರ ತಿಮ್ಮರಾಯ [೪] ---------------------------------------------------laali paavana charaNa laali agha haraNa laali venkataramaNa lalita kalyaaNa vanajaaksha maadhava vasudeva tanaya sanakaadi munivandya saadhu janapriya ina kOTi shata tEja muni kalpa bhooja kanakaadri nilaya venkataraaya[1] jagadEka naayaka jalajadaLa nEtra khagaraaja vaahana kalyaaNa charita sagara tanayaarchita sanakaadi vinuta raghuvansha kula tilaka ramaNeeya gaatra[2] nandagopa kumaara navaneeta chOra mandaakini janaka mohanaakaara indudhara sati vinuta vishva sanchaara nanda govinda muchukunda nuta saara[3] nara mrigaakaari hiranyaka vairi kariraaja rakshaka kaarunya moorti hari aadikEshava guru apramEya shreedhara shEshagiri vara timmaraaya[4] 1.AudioLink - by M.S.Sheela 2.AudioLink - by Pallavi Arun 3.AudioLink - by Vidya Bhushana
ರಚನೆ : ಪುರಂದರ ದಾಸರು ಭಾಷೆ : ಕನ್ನಡ
ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು ಪದುಮನಾಭನ ಪಾದದೊಲುಮೆ ಎನಗಾಯಿತು ||ಪ|| ಮುಕ್ತರಾದರು ಎನ್ನ ನೂರೊಂದು ಕುಲದವರು ಮುಕ್ತಿ ಮಾರ್ಗಕೆ ಯೋಗ್ಯ ನಾನಾದೆನು ಮುಕ್ತಿದಾಯಕನ ಭಕ್ತಿಗೆ ಮನವು ನೆಲೆಸಿತು ವ್ಯಕ್ತವಾಯಿತು ನಾಲಿಗೆಯೊಳು ಹರಿನಾಮ ||1||
ಹರಿಯ ತೀರ್ಥ ಪ್ರಸಾದವಿಂದೆನಗೆ ದೊರಕಿತು ಹರಿಕಥಾಮೃತವೆನ್ನ ಕಿವಿಗೊದಗಿತೋ ಹರಿದಾಸರು ಎನ್ನ ಬಂಧು ಬಳಗಾದರು ಹರಿಮುದ್ರೆ ಎನಗಾಭರಣವಾಯಿತು ||2||
ಹಿಂದೆನ್ನ ಸಂತತಿಗೆ ಸಕಲ ಸಾಧನ ವಾಯಿತು ಮುಂದೆನ್ನ ಜನ್ಮವು ಸಫಲ ವಾಯಿತು ತಂದೆ ಪುರಂದರ ವಿಠಲನೆಂದೆಂಬ ಪರದೈವ ಬಂದು ಹೃದಯದಲಿ ನೆಲೆಯಾಗಿ ನಿಂತ ||3||
1.AudioLink - by Balamurali Krishna (musicindiaonline - song 12)
2.AudioLink - by Balamurali Krishna (kannadaaudio)
ರಚನೆ : ಮುತ್ತಯ್ಯ ಭಾಗವತರ್ ರಾಗ : ನವರಸ ಕನ್ನಡ ತಾಳ : ಆದಿ ಭಾಷೆ : ಸಂಸ್ಕೃತ ಪಲ್ಲವಿ ದುರ್ಗಾದೇವಿ ದುರಿತ ನಿವಾರಿಣಿ ಅನುಪಲ್ಲವಿ ಸ್ವರ್ಗಾಪವರ್ಗ ಸೌಖ್ಯ ದಾಯಿನೀ ಸುರೇಶ ಪಾಲಿನಿ ಸಲಹು ಜನನಿ ಚರಣ ಪ್ರಾಣಾಗ್ನಿ ಸಂಯೋಗದಿ ಜನಿಸಿದ ಪ್ರಣವ ನಾದ ಸಪ್ತ ಸ್ವರ ರೂಪಿಣಿ ವೀಣಾದಿ ವಾದ್ಯ ನೃತ್ಯ ಗಾನ ವಿನೋದಿನಿ ಹರಿಕೇಶ ಭಾಮಿನಿ ------------------------------------------------------------ pallavi durgAdEvi durita nivAriNi anupallavi svargApavarga saukhya dAyini surEsha pAlini salahu janani charaNa prANAgni samyogadi janisida praNava nAda sapta svara roopiNI veeNAdi vAdya nrutya gAna vinOdini harikEsha bhAmini
1.AudioLink - by Nityashree (hummaa)
2.AudioLink - by Nityashree (raaga)
ರಚನೆ : ಪುರಂದರ ದಾಸರು ಭಾಷೆ : ಕನ್ನಡ
ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ ||ಪ||
ಪಾಲಿಸೆ ಎನ್ನನು ಪಾಲಾಬ್ಧಿ ಸಂಜಾತೆ
ಲಲಿತಾಂಗಿ ಶುಭೆ ದೇವಿ ಮಂಗಳೆ ದೇವಿ ||ಅ||
ವೇದಾಭಿಮಾನಿ ಸಾರಸಾಕ್ಷಿ ಶ್ರೀಧರ ರಮಣಿ
ಕಾದುಕೋ ನಿನ್ನಯ ಪಾದ ಸೇವಕರನ್ನು
ಆದಿಶಕ್ತಿ ಸರ್ವಾಧಾರೆ ಗುಣಪೂರ್ಣೆ ||1||
ದಯದಿಂದ ನೋಡೆ ಭಜಿಪ ಭಕ್ತರ ಭಯ ದೂರ ಮಾಡೆ
ದಯ ಪಾಲಿಸೆ ಮಾತೆ ತ್ರೈಲೋಕ್ಯ ವಿಖ್ಯಾತೆ
ಜಯದೇವಿ ಸುವ್ರತೆ ಹಯವದನನ ಪ್ರೀತೆ ||2||
ನೀನಲ್ಲದನ್ಯ ರಕ್ಷಿಪರನ್ನು ಕಾಣೆ ನಾ ಮುನ್ನ
ದಾನವಾಂತಕ ಸಿರಿಪುರಂದರವಿಠಲನ
ಧ್ಯಾನಿಪ ಭಕುತರ ಮಾನ ನಿನ್ನದು ತಾಯೆ||3||
3. AudioLink by Roopa Deepa (song10)
ರಚನೆ : ಪುರಂದರ ದಾಸರು ರಾಗ : ಅಟಾಣ ತಾಳ : ಆದಿ ಭಾಷೆ : ಕನ್ನಡ
ಸಕಲ ಗ್ರಹ ಬಲ ನೀನೇ ಸರಸಿಜಾಕ್ಷನಿಖಿಲ ರಕ್ಷಕ ನೀನೆ ವಿಶ್ವವ್ಯಾಪಕನೇ ||ಪ||
ರವಿಚಂದ್ರ ಬುಧ ನೀನೇ ರಾಹು ಕೇತುವು ನೀನೇ ಕವಿ ಗುರುವು ಶನಿಯು ಮಂಗಳನು ನೀನೇ ದಿವ ರಾತ್ರಿಯು ನೀನೇ ನವ ವಿಧಾನವು ನೀನೇ ಭವರೋಗ ಹರ ನೀನೇ ಭೇಷಜನು ನೀನೇ ||೧||
ಪಕ್ಷಮಾಸವು ನೀನೇ ಪರ್ವ ಕಾಲವು ನೀನೇ ನಕ್ಷತ್ರ ಯೋಗ ತಿಥಿ ಕರಣಗಳು ನೀನೇ ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ ಪಕ್ಷಿವಾಹನ ದೀನರಕ್ಷಕನು ನೀನೆ ||೨||
ಋತುವತ್ಸರವು ನೀನೆ ಮತ್ತೆ ಯುಗಾದಿಯು ನೀನೇ ಕ್ರತುವು ಹೋಮ ಯಜ್ಞ ಸದ್ಗತಿಯು ನೀನೇ ಜಿತವಾಗಿ ಎನ್ನೊಡೆಯ ಪುರಂದರ ವಿಟ್ಟಲನೆ ಶ್ರುತಿಗೇ ಸಿಲುಕದ ಮಹಾಮಹಿಮನು ನೀನೇ ||೩|| ------------------------------------------------ sakala graha bala neenE sarasijAksha || nikhila rakshaka neenE vishwavyApakanE |p| ravi chandra budha neenE rAhu kEtuvu neenE kavi guru shaniyu mangaLanu neenE divarAthriyu neenE nava vidhAnavu neenE bhavarOgahara neenE bhEshajanu neenE |1| pakshamAsavu neenE parva kAlavu neenE nakshatra yOga tithi karaNagaLu neenE akshayavendu draupdtiya mAnava kAyda pakshivAhana deena rakshakanu neenE |2| rutu vatsaravu neenE matte yugAdiyu neenE kratu hOma yagna sadgatiyu neenE jitavAgi yennoDeya purandara viTalane shrutige silukada mahAmahimanu neenE |3|1.AudioLink - by SP Ramh 2.AudioLink - by VidyaBhushana
ರಚನೆ : ಮುತ್ತಯ್ಯ ಭಾಗವತರ್ ರಾಗ : ಮೋಹನ ಕಲ್ಯಾಣಿತಾಳ : ಆದಿ ಭಾಷೆ : ಕನ್ನಡ
ಪಲ್ಲವಿ ಭುವನೇಶ್ವರಿಯ ನೆನೆ ಮಾನಸವೇ ಭವ ಬಂಧಗಳ ಭೀತಿಯ ಬಿಡುವೆ
ಅನುಪಲ್ಲವಿ ಭವದಲಿ ಬರಿದೇ ನವೆಯದೇ ನೋಯದೇ ತವ ಸುವಿಲಾಸದಿ ತಣಿಯುವೆ ಸುಖಿಸುವೆ
ಚರಣ ವೃಜಿನಂಗಳನು ವಿದಲಿಪ ಮಾತೆಯ ತ್ರಿಜಗಜ್ಜನನಿಯ ತ್ರಿಗುಣಾತೀತೆಯ ನಿಜ ಭಕ್ತಾವನ ಸುರವರ ಸುರಭಿಯ ಅಜ ಸನ್ನುತೆ ಶ್ರೀ ಹರಿಕೇಶಾಂಗಿಯ
-----------------------------------------------------
Composer : Muttaiah Bhagavatar
pallavi bhuvaneshvariya nene maanasave bhava bandhagaLa bheetiya biDuve anupallavi bhavadali baridE naveyade nOyade tava suvilaasadi taNiyuve sukhisuve charaNa vrijinangaLanu vidalipa maateya trijagajjananiya triguNaateeteya nija bhaktAvana suravara surabhiya aja sannute shri harikEshAngiya 1.AudioLink - by Sowmya
2.AudioLink - by Nityashree
ರಚನೆ : ಪುರಂದರ ದಾಸರು ರಾಗ : ಶಹನ ತಾಳ : ಖಂಡ ಛಾಪು
ಜಯತು ಕೋದಂಡರಾಮ ಜಯತು ದಶರಥರಾಮ ಜಯತು ಸೀತಾರಾಮ ಜಯತು ರಘುರಾಮ ಜಯತು ಜಯತು|ಪ|
ತಮದೈತ್ಯನನು ಮಡುಹಿ ಮಂದರಾಚಲ ನೆಗಹಿ ಪ್ರೀತಿಯಿಂದಲಿ ತಂದು ಸಕಲ ಭೂತಳವ ಕ್ಷೇತ್ರದಿಂದುದ್ಭವಿಸಿ ಮೊರೆಯಿಡುವ ಬಾಲಕನ ಭೀತಿಯನು ಬಿಡಿಸಿ ನೆರೆಕಾಯ್ದ ರಘುರಾಮ |1| ಬಲಿಯೊಳ್ ದಾನವ ಮಾಡಿ ನೆಲನ ಈರಡಿ ಮಾಡಿ ಛಲದಿಂದ ಕ್ಷತ್ರಿಯರ ಕುಲವ ಹೋಗಾಡಿ ಲಲನೆಗೋಸುಗ ಬಂದ ನೆವದಿಂದ ರಾವಣನ ತಲೆಗಳನು ಚೆಂಡಾದಿ ಮೆರೆದ ರಘುರಾಮ|2|
ವಸುದೇವಸುತನೆನಿಸಿ ವನಿತೆಯರ ವ್ರತಗೆಡಿಸಿ ಎಸೆವ ತುರಗವನೇರಿ ಮಲ್ಲರನು ಸವರಿ ವಸುಧೆಯೊಳು ಪುರಂದರವಿಠಲ ನೀ ಪಾಲಿಸೈ ಬಿಸಜಾಕ್ಷಯೋಧ್ಯಪುರವಾಸ ರಘುರಾಮ |3|
AudioLink - sung by M.S.Sheela
ರಚನೆ : ಪುರಂದರ ದಾಸರು ತಾಳ : ಆದಿ ಭಾಷೆ : ಕನ್ನಡ ರಾಮ ರಾಮ ರಾಮ ಎನ್ನಿರೋ ಇಂಥಸ್ವಾಮಿಯ ನಾಮವ ಮರೆಯದಿರೋ ಪ
ತುಂಬಿದ ಪಟ್ಟಣಕೊಂಭತ್ತು ಭಾಗಿಲು ಸಂಭ್ರಮದರಸರು ಐದು ಮಂದಿ ಡಂಭಕತನದಿಂದ ತಿರುಗುವ ಕಾಯವ ನಂಬಿ ನೆಚ್ಚಿ ನೀವು ಕೆಡಬೇಡಿರೊ ೧
ನೆಲೆ ಇಲ್ಲದ ಕಾಯ ಎಲುವಿನ ಪಂಜರ ಬಲಿದು ಸುತ್ತಿದ ಚರ್ಮದ ಹೊದಿಕೆ ಮಲಮೂತ್ರಂಗಳು ಕೀವು ಕ್ರಿಮಿಗಳಿಂದ ಭರಿತ ದೇಹವ ನೆಚ್ಚಿ ಕೆಡಬೇಡಿರೊ ೨
ಹರಿ ಬ್ರಹ್ಮ ಸುರರಿಂದ ವಂದಿತ ಆಗಿಪ್ಪ ಹರಿ ಸರ್ವೋತ್ತಮನೆಂದೆನ್ನಿರೊ ಪುರಂದರವಿಠಲನ ಚರಣವ ಭಜಿಸಿರೊ ದುರಿತ ಭಯಗಳಿಂದ ದೂರಾಗಿರೊ ೩
1.AudioLink by Vidya Bhushana(song 9)
2.AudioLink by Vidya Bhushana 3.AudioLink by Group of artists
ರಚನೆ : ಪುರಂದರ ದಾಸರು ಭಾಷೆ : ಕನ್ನಡ ಪಲ್ಲವಿ ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲಿರಯ್ಯ
ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ ಆಯಸ್ಥಿತಗತವಾದ ಅತಿ ಪಾಪವನ್ನು ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ ದಾಯವನು ವಾಲ್ಮೀಕಿ ಮುನಿರಾಯ ಬಲ್ಲ ೧
ಮತ್ತೆ ಮಾ ಎಂದೆನಲು ಹೊರಬಿದ್ದ ಪಾಪಗಳು ಒತ್ತಿ ಒಳ ಪೋಗದಂತೆ ಕವಾಟವಾಗಿ ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ ಭಕ್ತವರ ಹನುಮಂತನೊಬ್ಬ ತಾ ಬಲ್ಲ ೨
ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು ಪರಮ ವೇದಗಳೆಲ್ಲ ಪೊಗಳುತಿಹವು ಸಿರಿಯರಸ ಸನ್ಸ್ಕ್ರಿತ ನಾಮವನು ಸಿರಿ ಕಾಶಿಯೊಳಗಿಪ್ಪ ಶಿವನು ತಾ ಬಲ್ಲ ೩
1.AudioLink by Vidyabhushana
2.AudioLink by Vidyabhushana (song 27)
PS: I am giving 2 links - in case one does not work you can use the other one:)
ರಚನೆ : ಮುತ್ತಯ್ಯ ಭಾಗವತರ್ ರಾಗ : ಶುದ್ಧ ಧನ್ಯಾಸಿ ತಾಳ : ಆದಿ ಭಾಷೆ : ಸಂಸ್ಕೃತ ಪಲ್ಲವಿ ಹಿಮಗಿರಿ ತನಯೇ ಹೇಮಲತೆ ಅಂಬ ಈಶ್ವರಿ ಶ್ರೀಲಲಿತೆ ಮಾಮವ ಅನುಪಲ್ಲವಿ ರಮಾ ವಾಣಿ ಸಂಸೇವಿತ ಸಕಲೇ ರಾಜರಾಜೇಶ್ವರಿ ರಾಮ ಸಹೋದರಿ ಚರಣ ಪಾಶಾಂಕುಶೇಶು ದಂಡಕರೇ ಅಂಬ ಪರಾತ್ಪರೆ ನಿಜ ಭಕ್ತಪರೇ ಅಚಾಂಬರೇ ಹರಿಕೇಶ ವಿಲಾಸೇ ಆನಂದ ರೂಪೇ ಅಮಿತ ಪ್ರತಾಪೇ ---------------------------------------------------------- pallavi himagiri tanayE hEmalate ambA Ishvari shri lalitE mAmava anupallavi ramA vANi samsEvita sakalE rAjarAjEshvari rAma sahOdari charaNa pAshAnkushEshu danDakarE ambA parAtparE nija bhaktaparE achAmbarE harikEsha vilAsE Ananda roopE amita pratApE 1.AudioLink by Soumya
2.AudioLink by Nityashree
ರಚನೆ : ಪುರಂದರ ದಾಸರು ರಾಗ : ಆನಂದಭೈರವಿ ತಾಳ : ಏಕ ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ ವಿಠಲ ನಾಮ ತುಪ್ಪವ ಕಲಸಿ ಬಾಯ ಚಪ್ಪರಿಸಿರೋ|| ಒಮ್ಮಾನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ ಸುಮ್ಮಾನೆ ಸಜ್ಜಿಗೆಯ ತೆಗೆದು ಸಣ್ಣ ಶಾವಿಗೆಯ ಹೊಸೆದು|| ಹೃದಯವೆಂಬೊ ಮಡಕೆಯಲಿ ಭಾವವೆಂಬೊ ಎಸರನಿಟ್ಟು ಬುದ್ಧಿಯಿಂದ ಪಾಕ ಮಾಡಿ ಹರಿವಾಣಕೆ ಬಡಿಸಿಕೊಂಡು|| ಆನಂದ ಆನಂದವೆಂಬೊ ತೇಗು ಬಂದಿತು ಕಾಣಿರೊ ಆನಂದ ಮೂರುತಿ ನಮ್ಮ ಪುರಂದರ ವಿಠಲನ ನೆನೆಯಿರೊ|| 1.AudioLink - Priya sisters ಅವರು ಹಾಡಿದ್ದಾರೆ 2.AudioLink - Sudha Raghunathan ಅವರು ಹಾಡಿದ್ದಾರೆ
ರಚನೆ : ಪುರಂದರ ದಾಸ ರಾಗ : ಸೌ ರಾಷ್ಟ್ರ ತಾಳ : ಮಿಶ್ರಛಾಪು ಶರಣು ಸಿದ್ಧಿ ವಿನಾಯಕ ಶರಣು ವಿದ್ಯಾ ಪ್ರದಾಯಕ ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಕ ವಾಹನ ನಿಟಿಲ ನೇತ್ರನ ದೇವಿ ಸುತನೆ ನಾಗಭೂಷಣ ಪ್ರಿಯನೆ ತಟಿಲತಾಂಕಿತ ಕೋಮಲಾಂಗನೆ ಕರ್ಣಕುಂಡಲ ಧಾರನೆ|| ೧ || ಬಟ್ಟ ಮುತ್ತಿನ ಪದಕ ಹಾರನೆ ಬಾಹುಹಸ್ತ ಚತುಷ್ಟನೆ ಇಟ್ಟ ತೊಡುಗೆಯ ಹೇಮ ಕಂಕಣ ಪಾಶ ಅಂಕುಶ ಧರನೆ || ೨ || ಕುಕ್ಷಿ ಮಹಾ ಲಂಬೋದರನೆ ಇಕ್ಷುಚಾಪನ ಗೆಲಿದನೆ ಪಕ್ಷಿವಾಹನ ಸಿರಿ ಪುರಂದರ ವಿಠಲನ ನಿಜ ದಾಸನೆ || ೩ ||1.AudioLink by Balamurali Krishna 2.AudioLink by Maharajapuram Santhanam - 3.Audio link by Rajkumar (song 3)
ರಚನೆ : ವಿಜಯ ದಾಸರು ಪಲ್ಲವಿ ಕೈಲಾಸ ವಾಸ ಗೌರೀಶ ಈಶ ತೈಲ ಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ || ಅಹೋರಾತ್ರಿಯಲ್ಲಿ ನಾನು ಅನುಜರಾಗ್ರಣಿಯಾಗಿ ಮಹಿಯೊಳಗೆ ಚರಿಸಿದೆನೋ ಮಹದೇವನೇ ಅಹಿ ಭೂಶಣನೆ ಎನ್ನ ಅವಗುಣ ಗಳೆಣಿಸದಲೇ ವಿಹಿತ ಧರ್ಮದಲಿಡು ವಿಷ್ಣು ಭಕುತಿಯನು ಕೊಡು ಶಂಭೋ |೧|
ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ ಧನುಜಗತ ಮದಹಾರಿ ದಂಡ ಪ್ರಣಾಮವ ಮಾಡ್ಪೆ ಮಣಿಸು ಈ ಶಿರವ ಸಜ್ಜನ ಚರಣ ಕಮಲದಲ್ಲಿ ಶಂಭೋ |೨|
ಭಾಗೀರಥಿಧರನೆ ಭಯವ ಪರಿಹರಿಸಯ್ಯ ಲೇಸಾಗಿ ನೀ ಸಲಹೊ ಸಂತತ ಸರ್ವದೇವ ಭಾಗವತಗಳ ಪ್ರಿಯ ವಿಜಯ ವಿಠಲನಂಘ್ರಿ ಜಾಡು ಮಾಡದೆ ಭಜಿಪ ಭಾಗ್ಯವನು ಕೊಡು ಶಂಭೋ |೩|
1.AudioLink by Vidya Bhushana
2.AudioLink by Balamuralikrishna(song 1) 3.AudioLink by Pt.Bhimsen Joshi
ರಚನೆ : ಪುರಂದರ ದಾಸರು ರಾಗ : ರಾಗಮಾಲಿಕೆ ತಾಳ : ಆದಿ (ರಾಗ : ಕುರುಂಜಿ) ಪಲ್ಲವಿ ಕ್ಷೀರಾಬ್ಧಿ ಕನ್ನಿಕೆ ಶ್ರೀ ಮಹಾಲಕ್ಷ್ಮಿ ಯಾರಿಗೆ ವಧುವಾಗುವೇ ನೀನು || ಚರಣ ಶರಧಿ ಬಂಧನ ರಾಮಚಂದ್ರ ಮೂರ್ತಿಗೋ ಪರಮಾತ್ಮ ಅನಂತ ಪದ್ಮನಾಭಗೋ ಸರಸಿಜನಾಭ ಶ್ರೀ ಜನಾರ್ಧನ ಮೂರ್ತಿಗೋ ಉಭಯಕಾವೇರಿ ರಂಗ ಪಟ್ಟಣದರಸಗೋ || ೧ || ( ರಾಗ : ಯಮನ್ ಕಲ್ಯಾಣಿ ) ಚೆಲುವ ಮೂರುತಿ ಬೇಲೂರ ಚೆನ್ನಿಗರಾಯನಿಗೋ ಗೆಳತಿ ಹೇಳು ಉಡುಪಿ ಶ್ರೀ ಕ್ರಿಷ್ಣರಾಯನಿಗೋ ಇಳೆಯೊಳು ಪಾಂಡುರಂಗ ವಿಠಲ ರಾಯಗೋ ನಳಿನಾಕ್ಷಿ ಹೇಳಮ್ಮ ಬದರಿ ನಾರಾಯಣಗೋ || ೨ || ( ರಾಗ : ದರ್ಬಾರಿ ಕಾನಡ ) ಮಲಯಜ ಗಂಧೀ ಬಿಂದು ಮಾಧವರಾಯಗೋ ಸುಲಭ ದೇವ ರು ಪುರುಷೋತ್ತಮಗೋ ಫಲದಾಯಕ ನಿತ್ಯ ಮಂಗಳ ದಾಯಕಗೋ ಚೆಲುವೆ ನಾಚದೆ ಪೇಳು ಶ್ರೀ ವೆಂಕಟೇಶಗೋ || ೩ || ( ರಾಗ : ಸಿಂಧುಭೈರವಿ ) ವಾಸವಾರ್ಚಿತ ಕಂಚಿ ವರದರಾಜನಿಗೋ ಆ ಶ್ರೀಮುಷ್ಣದಲ್ಲಿ ಆದೀವರಾಯ ನಿಗೋ ಶೇಷಶಾಯಿಯಾದ ಶ್ರೀಮನ್ ನಾರಾಯಣಗೋ ಸಾಸಿರ ನಾಮದೊಡೆಯ ಅಳಗಿರಿಶಗೋ || ೪ || ( ರಾಗ : ಮಣಿರಂಗು ) ಶರಣಾಗತ ರಕ್ಷಕ ಸಾರಂಗ ಪಾಣಿಗೋ ವರಗಳ ನೀಡುವ ಶ್ರೀನಿವಾಸ ಗೋ ಕುರುಕುಲಾಂತಕ ರಾಜ ಗೋಪಾಲ ಮೂರ್ತಿಗೋ ಸ್ಥಿರವಾಗಿ ಪುರಂದರ ವಿಟ್ಟಲರಾಯನಿಗೋ || ೫ || 1.AudioLink by Maharajapuram Santhanam (musicindia)2.AudioLink by Maharajapuram Santhanam (raaga)
ರಚನೆ : ಪುರಂದರ ದಾಸರು
ರಾಗ : ರಾಗ ಮಾಲಿಕೆ
ತಾಳ : ಆದಿ
ಪಲ್ಲವಿ
ಚಂದ್ರಚೂಡ ಶಿವ ಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ
ಅನುಪಲ್ಲವಿ
ಸುಂದರ ಮೃಗದರ ಪಿನಾಕಧರ ಹರ ಗಂಗಾಧರ ಶಿರ ಗಜ ಚರ್ಮಾಂ ಬರ ಧರ
ಚರಣ
ನಂದಿ ವಾಹನಾನಂದಿಂದ ಮೂರ್ಜಗದಿ ಮೆರೆವನು ನೀನೆ
ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವನು ನೀನೆ
ಕಂದರ್ಪನ ಕ್ರೋಧದಿಂದ ಕಣ್ತೆರದು ಕೊಂದ ಉಗ್ರನು ನೀನೆ
ಇಂದಿರೇಶ ಶ್ರೀ ರಾಮನ ಪಾದವ ಚಂದದಿ ಪೋಗಳುವನು ನೀನೆ ೧
ಬಾಲ ಮೃಕಂಡನ ಕಾಲನು ಎಳೆವಾಗ ಪಲಿಸಿದವನು ನೀನೆ
ಕಾಲಕೂಟ ವಿಷವ ಪಾನ ಮಾಡಿದ ನೀಲಕಂಠ ನೀನೆ
ವಾಲಯದಿ ಕಪಾಲವ ಪಿಡಿದು ಭಿಕ್ಷೆ ಬೇಡೋ ದಿಗಂಬರನು ನೀನೆ
ಜಾಲ ಮಾಡುವ ಗೋಪಾಲನೆಂಬ ಪೆಣ್ಣಿಗೆ ಮರುಳಾದವನು ನೀನೆ ೨
ಧರೆಗೆ ದಕ್ಷಿಣ ಕಾವೇರಿ ತೀರ ಕುಂಭಾಪುರ ನಿವಾಸನು ನೀನೆ
ಕರದಲಿ ವೀಣೆಯ ಗಾನವ ಮಾಡುವ ನಮ್ಮ ಉರಗ ಭೂಷಣನು
ಕೊರಳಲಿ ಭಸ್ಮ ರುದ್ರಾಕ್ಷಿ ಧರಿಸಿದ ಪರಮ ವೈಷ್ಣವನು ನೀನೆ
ಗರುಡ ಗಮನ ಶ್ರೀ ಪುರಂದರ ವಿಠಲಗೆ ಪ್ರಾಣ ಪ್ರಿಯನು ನೀನೆ ೩
ಈ ಹಾಡನ್ನು ಬೇರೆ ಬೇರೆ ಕಲಾವಿಧರು ಬೇರೆ ರಾಗಗಳಲ್ಲಿ ಹಾಡಿದ್ದಾರೆ.
(Album link)
2.AudioLink by Sri Vidya Bhushana
3.Audio by M L Vasantha Kumari [song 10]
3.Audio by M S Sheela [song 9]
ರಾಗ : ಸಾವೇರಿ ರಚನೆ : ಪುರಂದರ ದಾಸರು ಪಲ್ಲವಿ ವೆಂಕಟರಮಣನೆ ಬಾರೋ ಶೇಷಾಚಲವಾಸನೆ ಬಾರೋ || ಅನುಪಲ್ಲವಿ ಪಂಕಜನಾಭ ಪರಮ ಪವಿತ್ರ ಶಂಕರ ಮಿತ್ರನೇ ಬಾರೋ||ಚರಣ ಮುದ್ದು ಮುಖದ ಮಗುವೆ ನಿನಗೆ ಮುತ್ತು ಕೊಡುವೆನು ಬಾರೋ ನಿರ್ದಯವೇಕೋ ನಿನ್ನೊಳಗೆ ನಾನು ಪೊಂದಿದ್ದೇನು ಬಾರೋ ||೧|| ಮಂದರ ಗಿರಿಯನೆತ್ತಿದ ಆನಂದ ಮೂರ್ತಿಯೇ ಬಾರೋ ನಂದನ ಕಂದ ಗೋವಿಂದ ಮುಕುಂದ ಇಂದಿರೆಯರಸನೆ ಬಾರೋ ||೨|| || ೩ || 1.Audio Link by Ramprasad 2.Audio Link by Roopa,Deepa
ODi barayya / ಓಡಿ ಬಾರಯ್ಯ ವೈಕುಂಠಪತಿ ನಿನ್ನ ರಚನೆ : ಪುರಂದರ ದಾಸ ರಾಗ : ಭೈರವಿ ತಾಳ : ಆದಿ
ಪಲ್ಲವಿ
ಓಡಿ ಬಾರಯ್ಯ ವೈಕುಂಠಪತಿ ನಿನ್ನ ನೋಡುವೆ ಮನದಣಿಯ
ಅನುಪಲ್ಲವಿ
ನೋಡಿ ಮುದ್ದಾಡಿ ಮಾತಾಡಿ ಸಂತೋಷದಿ ಕೂಡಿ ಪಾಡಿ ಪೊಗಳುವೇನು ಪರಮ ಪುರುಷ ಹರಿಯೆ
ಚರಣ
ಕೆಂದಾವರೆ ಪೋಲ್ವ ಪಾದಗಳಿಂದ ರಂಗ ಧಿಂ ಧಿಂ ಧಿಮಿಕೆಂದು ಕುಣಿಯುತಲಿಅಂದುಗೆ ಕಿರುಗೆಜ್ಜೆ ಗಲುಗಲುರೆನ್ನಲು ಕುಂದಣ ಉಡಿದಾರ ಝಣ ಝಣ ಎನ್ನಲು ಮಂಗಳಾತ್ಮಕ ಮೋಹನಕಾಯ ರಂಗ ಸಂಗೀತಲೋಲ ಸದ್ಗುಣ ಶೀಲ ಅಂಗನೆಯರಿಗೆಲ್ಲ ಅತಿಪ್ರಿಯನಾದ ಶುಭಾಂಗ ಶ್ರೀಪುರಂದರ ವಿಠಲರಾಯ
1.AudioLink - ಕರ್ನಾಟಕ ಸಂಗೀತ ಶೈಲಿಯಲ್ಲಿ ಕೇಳಿ.
2.AudioLink (song 43) - Anantha Kulkarni ಅವರು ಹಿಂದೂಸ್ತಾನಿ ಶೈಲಿಯಲ್ಲಿ ಹಾಡಿದ್ದಾರೆ.
ರಚನೆ : ಪುರಂದರದಾಸರು ರಾಗ : ಸಿಂಧು ಭೈರವಿ ತಾಳ : ಆದಿವೆಂಕಟಾಚಲ ನಿಲಯಂ ವೈಕುಂಠ ಪುರ ವಾಸಂ
ಪಂಕಜ ನೇತ್ರಂ ಪರಮ ಪವಿತ್ರಂ ಶಂಖ ಚಕ್ರಧರ ಚಿನ್ಮಯ ರೂಪಂ
ಅಂಬುಜೋದ್ಭವ ವಿನುತಂ ಅಗಣಿತ ಗುಣ ನಾಮಾಂ ತುಂಬುರು ನಾರದ ಗಾನವಿಲೋಲಂ
ಮಕರ ಕುಂಡಲಧಾರ ಮದನ ಗೋಪಾಲಂ ಭಕ್ತ ಪೋಷಕ ಶ್ರೀ ಪುರಂದರ ವಿಠಲಂ
Audio Link by Nithyashree (song 7)
2.AudioClip below M L Vasantha kumari ಹಾಡಿದ್ದಾರೆ .
ರಚನೆ : ಪುರಂದರ ದಾಸರು
ಲಾಲಿಸಿದಳು ಮಗನ ಯಶೋದೆ ಲಾಲಿಸಿದಳು ಮಗನ ಅರಳೆಲೆ ಮಾಗಾಯಿ ಬೆರಳಿ ಗುಂಗುರ ವಿಟ್ಟು ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ ೧ ಬಾಲಕನೆ ಕೆನೆ ಹಾಲು ಮೊಸರನೀವೇ ಲೀಲೆಯಿಂದಲಿ ಎನ್ನ ತೋಳ ಮೇಲೆ ಮಲಗೆಂದು ೨ ಮುಗುಳುನಗೆಯಿಂದ ಮುದ್ದು ತಾತಾರೆಂದು ಜಗದೊಡೆಯನೇ ಶ್ರೀ ಪುರಂದರ ವಿಠಲನ ೩ 1.AudioLink by Padmaja Kishore
ಈ ಹಾಡನ್ನು ಚಲನಚಿತ್ರದಲ್ಲಿ ಉಪಯೋಗಿಸಿದ್ದಾರೆ2.AudioLink by S.Janaki 3.Audio link by Surekha