By far the most requested song!!! I will shortly post the audio too.
This aarati song is commonly sang in Smartha households.The original song has these stanzas below. These refer to all the deities in the Shringeri temple.
ಮಂಗಳಂ ಗುರು ಶ್ರೀ ಚಂದ್ರಮೌಳೇಶ್ವರಗೆ
ಶಕ್ತಿ ಗಣಪತಿ ಶಾರದಾಂಬೆಗೆ ಶಂಕರಾಚಾರ್ಯರಿಗೆ||
ವಿದ್ಯಾರಣ್ಯರಿಗೆ ಗುರು ವಿದ್ಯಾಶಂಕರಗೆ
ವಾಗೇಶ್ವರಿಗೂ ವಜ್ರದೇಹಿ ಗಾರುಡಾಂಜನಯ್ಯನಿಗೆ||
ತುಂಗ ಭದ್ರೆಗೆ ಶೃಂಗ ನಿವಾಸಿನಿಗೆ
ಶೃಂಗೇರಿಯಲ್ಲಿ ನೆಲೆಸಿರುವಂತ ಶಾರದಾಂಬೆಗೆ|| ----------------------------
These few lines below are added to the song by my family members. We always sing these additional lines.
ನಂದಿವಾಹನಗೆ ನಾಗರಾಜನಿಗೆ /ನಾಗಭೂಷಣಗೆ
ನಂಜನಗೂಡಲಿ ನೆಲಸಿ ಇರುವ ನಂಜುಂಡೇಶ್ವರಗೆ||
ಶೃಂಗೇರಿ ವಾಸರಿಗೆ ಶ್ರೀ ಜಗದ್ಗುರುಗಳಿಗೆ
ಗೊಂದಾವಳಿಯಲಿ ನೆಲಸಿ ಇರುವ ಬ್ರಹ್ಮ ಚೈತನ್ಯರಿಗೆ|| ------------------------- Mangalam Guru Shri Chandra Mowleshwarage
Shakti Ganapathi Sharadambege Shankaracharyarige||
Kaalabhairavage KaaLi Durgige
Vara veera shoora dheera hanuma maaruti charaNakke||
ರಚನೆ : ಪುರಂದರ ದಾಸರು (ಲಕ್ಷ್ಮೀ ವೆಂಕಟರಮಣ/ದಶಾವತಾರ ಆರತಿ) ಪಲ್ಲವಿ: ಪಂಕಜ ಮುಖಿಯರೆಲ್ಲರು ಬಂದು ಲಕ್ಷ್ಮೀ ವೇಂಕಟರಮಣಗಾರತಿ ಎತ್ತಿರೆ
ಚರಣ: ಮತ್ಸ್ಯಾವತಾರಗೆ ಮಂದರೋದ್ಧಾರಗೆ ಅಚ್ಚರಿಯಿಂದ ಭೂಮಿ ತಂದವಗೆ ಹೆಚ್ಚಾದ ಉಕ್ಕಿನ ಕಂಭದಿಂದಲಿ ಬಂದ ಲಕ್ಷ್ಮೀ ನರಸಿಂಹಗಾರತಿ ಎತ್ತಿರೆ(1) ವಾಮನ ರೂಪಲಿ ದಾನ ಬೇಡಿದವಗೆ ಪ್ರೇಮದಿ ಕೊಡಲಿಯ ಪಿಡಿದವಗೆ ರಾಮಚಂದ್ರನಾಗಿ ದಶ ಶಿರನನು ಕೊಂದ ಸ್ವಾಮಿ ಶ್ರೀ ಕೃಷ್ಣಗಾರತಿ ಎತ್ತಿರೆ(2)