ಪಲ್ಲವಿ ವೆಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ ಬ್ರಹ್ಮಶಂಕರಾದಿ ವಂದ್ಯ ಎನಗೆ ಮುಕ್ತಿ ತೋರಿಸೊ ಚರಣ ನಷ್ಟ ಮೊದಲಾದಂಥ ಕಷ್ಟ ಬಿಡಿಸೊ ನಿನ್ನ ಪಟ್ಟದ ರಾಣಿಗೆ ಹೇಳಿ ಪದವಿ ಕೊಡಿಸೊ ಇಷ್ಟ ಭಕ್ತಜನರೊಳು ಎನ್ನ ಸೇರಿಸೊ ಈ ಸೃಷ್ಟಿಯೊಳು ನಿನ್ನ ದಾಸಾನು ದಾಸನೆನಿಸೊ [೧] ಉಟ್ಟು ಉಂಡು ಮಿಕ್ಕಿದ್ದೆಲ್ಲ ಎನಗೆ ಹಾಕಿಸೊ ಪೊಂಬಟ್ಟಲೊಳಗಿನ ಹಾಲು ಉಚ್ಚಿಷ್ಟ ಹಾಕಿಸೊ ಗಟ್ಯಾಗಿ ಸಕ್ಕರೆ ತುಪ್ಪ ರೊಟ್ಟಿ ಉಣ್ಣಿಸೊ ಮುಂದೆ ಹುಟ್ಟಿ ಇಹ ಜನ್ಮಂಗಳ ಎನಗೆ ಬಿಡಿಸೊ [೨] ಕಿಟ್ಟಗಟ್ಟಿದ ಕಬ್ಬಿಣಕ್ಕೆ ಪುಟವ ಹಾಕಿಸೊ ಉತ್ಕೃಷ್ಟ ಬಂಗಾರದೊಳು ಎನ್ನ ಸೇರಿಸೊ ಬೆಟ್ಟಿಗೆ ಉಂಗುರ ಮಾಡಿ ಎನ್ನ ಧರಿಸೊ ಸ್ವಾಮಿ ದಿಟ್ಟ ಪುರಂದರ ವಿಠಲನೆ ದಯದಿ ಪಾಲಿಸೊ [೩] Audio Link by Balamurali Krishna
Composer: Dayananda Saraswati raaga: Durga taaLa: aadi Language: Sanskrit ಪಲ್ಲವಿ ರಾಮಂ ಭಜೆ ಶ್ಯಾಮಂ ಮನಸಾ ರಾಮಂ ಭಜೆ ಶ್ಯಾಮಂ ವಚಸ ಸರ್ವ ವೇದ ಸಾರ ಭೂತಂ ಸರ್ವ ಭೂತ ಹೇತು ನಾತಂ ಅನುಪಲ್ಲವಿ ವಿಭೀಷಣ ಅಂಜನೇಯ ಪೂಜಿತ ಚರಣಂ ವಸಿಷ್ಟಾದಿ ಮುನಿಗಣ ವೇದಿತ ಹೃದಯಂ ವಶೀಕೃತ ಮಾಯಾಕಾರಿತ ವೇಷಂ ಈಶಂ ಪುರೇಶಂ ಸರ್ವೇಶಂ ಚರಣ ನೀಲ ಮೇಘ ಶ್ಯಾಮಲಂ ನಿತ್ಯ ಧರ್ಮಚಾರಿಣಂ ದಂಡಿನಂ ಕೋ ದಂಡಿನಂ ದುರಾಚಾರ ಖಂಡನಮ್ ಜನ್ಮ ಮೃತ್ಯು ಜರವ್ಯಾಧಿ ದುಖ ದೋಷ ಭವಹರಂ ======================================= pallavi rAmam bhajE shyAmama manasA rAmam bhajE shyAmam bhajE vachasA sarva veda saara bhootam sarva bhoota hetu naatam anupallavi vibhIShaNa AnjanEya pUjita charaNam vasiShTAdi munigaNa vEdita hrudayam vashIkrita mayAkaarita vESham Esham purEsham sarvEsham charaNa nIla mEgha shyAmalam nitya dharmachAriNam daNDinam kOdaNDinam durAchAra khaNDanam janma mrutyu jarAvyAdhi dukha dOSha bhavaharam1. Audio Link by Maharajapuram Santhanam (Raaga) 2. Audio Link by Maharajapuram Santhanam (esnips)
ಸದಾ ಎನ್ನ ಹೃದಯದಲ್ಲಿ, ವಾಸ ಮಾಡೋ ಶ್ರೀ ಹರೀ ನಾದ ಮೂರ್ತಿ ನಿನ್ನ ಪಾದ, ಮೋದದಿಂದ ಭಜಿಸುವೆನೋ ಙ್ಞಾನವೆಂಬೋ ನವರತ್ನದ ಮಂಟಪದ ಮಧ್ಯದಲ್ಲಿ ವೇಣುಗಾನ ಲೋಲನ ಕುಳ್ಳಿರಿಸಿ ಧ್ಯಾನದಿಂದ ಭಜಿಸುವೇನೋ ಭಕ್ತಿರಸವೆಂಬೋ ಮುತ್ತು ಮಾಣಿಕ್ಯದಾ ಹರಿವಾಣದೀ ಮುಕ್ತನಾಗಬೇಕು ಎಂದುಮುತ್ತಿನ ಆರತಿ ಎತ್ತುವೇನೋ ನಿನ್ನ ನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ ಘನ ಮಹಿಮ ವಿಜಯ ವಿಠಲ ನಿನ್ನ ಭಕುತರ ಕೇಳೋ ಸೊಲ್ಲ ------------------------------------------------------------------- pallavi sadaa enna hrdayadalli vAsamADO shri hari anupallavi nAda murti ninna pAda mOdadinda bhajisuveno jnAnavembo navaratna maNTapada madhyadali vENugAna lOlana kuLLirisi dhYanadinda bhajisuveno bhakti rasavembO mttuu mANikyada harivANAdi muktanAga bEku endu muttinArati ettuveno ninna nAnu biDuvanalla enna neenu bidalu salla ghana mahima vijayavithala ninna bhakutara kELO solla 1.Audio Link by Bombay Sisters 2. Audio link by Bhimsen Joshi below