ರಚನೆ : ಪುರಂದರ ದಾಸರು
ರಾಗ : ರಾಗ ಮಾಲಿಕೆ
ತಾಳ : ಆದಿ
ಪಲ್ಲವಿ
ಚಂದ್ರಚೂಡ ಶಿವ ಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ
ಅನುಪಲ್ಲವಿ
ಸುಂದರ ಮೃಗದರ ಪಿನಾಕಧರಹರ ಗಂಗಾಧರ ಶಿರ ಗಜ ಚರ್ಮಾಂಬರಧರ
ಚರಣ
ನಂದಿ ವಾಹನಾನಂದಿಂದ ಮೂರ್ಜಗದಿ ಮೆರೆವನು ನೀನೆ
ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವನು ನೀನೆ
ಕಂದರ್ಪನ ಕ್ರೋಧದಿಂದ ಕಣ್ತೆರದು ಕೊಂದ ಉಗ್ರನು ನೀನೆ
ಇಂದಿರೇಶ ಶ್ರೀ ರಾಮನ ಪಾದವ ಚಂದದಿ ಪೋಗಳುವನು ನೀನೆ೧
ಬಾಲ ಮೃಕಂಡನ ಕಾಲನು ಎಳೆವಾಗ ಪಲಿಸಿದವನು ನೀನೆ
ಕಾಲಕೂಟ ವಿಷವ ಪಾನ ಮಾಡಿದ ನೀಲಕಂಠ ನೀನೆ
ವಾಲಯದಿ ಕಪಾಲವ ಪಿಡಿದು ಭಿಕ್ಷೆ ಬೇಡೋ ದಿಗಂಬರನು ನೀನೆ
ಜಾಲ ಮಾಡುವ ಗೋಪಾಲನೆಂಬ ಪೆಣ್ಣಿಗೆ ಮರುಳಾದವನು ನೀನೆ೨
ಧರೆಗೆ ದಕ್ಷಿಣ ಕಾವೇರಿ ತೀರ ಕುಂಭಾಪುರ ನಿವಾಸನು ನೀನೆ
ಕರದಲಿ ವೀಣೆಯ ಗಾನವ ಮಾಡುವ ನಮ್ಮ ಉರಗ ಭೂಷಣನು
ಕೊರಳಲಿ ಭಸ್ಮ ರುದ್ರಾಕ್ಷಿ ಧರಿಸಿದ ಪರಮ ವೈಷ್ಣವನು ನೀನೆ
ಗರುಡ ಗಮನ ಶ್ರೀ ಪುರಂದರ ವಿಠಲಗೆ ಪ್ರಾಣ ಪ್ರಿಯನು ನೀನೆ೩
ಈ ಹಾಡನ್ನು ಬೇರೆ ಬೇರೆ ಕಲಾವಿಧರು ಬೇರೆ ರಾಗಗಳಲ್ಲಿ ಹಾಡಿದ್ದಾರೆ.
(Album link)
2.AudioLink by Sri Vidya Bhushana
3.Audio by M L Vasantha Kumari [song 10]
3.Audio by M S Sheela [song 9]
ರಾಗ : ಸಾವೇರಿ
ರಚನೆ : ಪುರಂದರ ದಾಸರು
ಪಲ್ಲವಿ
ವೆಂಕಟರಮಣನೆ ಬಾರೋ ಶೇಷಾಚಲವಾಸನೆ ಬಾರೋ ||
ಅನುಪಲ್ಲವಿ
ಪಂಕಜನಾಭ ಪರಮ ಪವಿತ್ರ ಶಂಕರ ಮಿತ್ರನೇ ಬಾರೋ||
ಚರಣ
ಮುದ್ದು ಮುಖದ ಮಗುವೆ ನಿನಗೆ ಮುತ್ತು ಕೊಡುವೆನು ಬಾರೋ
ನಿರ್ದಯವೇಕೋ ನಿನ್ನೊಳಗೆ ನಾನು ಪೊಂದಿದ್ದೇನು ಬಾರೋ ||೧|| ಮಂದರ ಗಿರಿಯನೆತ್ತಿದ ಆನಂದ ಮೂರ್ತಿಯೇ ಬಾರೋ
ನಂದನ ಕಂದ ಗೋವಿಂದ ಮುಕುಂದ ಇಂದಿರೆಯರಸನೆ ಬಾರೋ ||೨||
||೩||
1.Audio Link by Ramprasad
2.Audio Link by Roopa,Deepa
ODi barayya / ಓಡಿ ಬಾರಯ್ಯ ವೈಕುಂಠಪತಿ ನಿನ್ನ
ರಚನೆ : ಪುರಂದರ ದಾಸ
ರಾಗ : ಭೈರವಿ
ತಾಳ : ಆದಿ
ಪಲ್ಲವಿ
ಓಡಿ ಬಾರಯ್ಯ ವೈಕುಂಠಪತಿ ನಿನ್ನ ನೋಡುವೆ ಮನದಣಿಯ
ಅನುಪಲ್ಲವಿ
ನೋಡಿ ಮುದ್ದಾಡಿ ಮಾತಾಡಿ ಸಂತೋಷದಿ ಕೂಡಿ
ಪಾಡಿ ಪೊಗಳುವೇನು ಪರಮ ಪುರುಷ ಹರಿಯೆ
ಚರಣ
ಕೆಂದಾವರೆ ಪೋಲ್ವ ಪಾದಗಳಿಂದ ರಂಗ
ಧಿಂ ಧಿಂ ಧಿಮಿಕೆಂದು ಕುಣಿಯುತಲಿ
ಅಂದುಗೆ ಕಿರುಗೆಜ್ಜೆ ಗಲುಗಲುರೆನ್ನಲು
ಕುಂದಣ ಉಡಿದಾರ ಝಣ ಝಣ ಎನ್ನಲು
ಮಂಗಳಾತ್ಮಕ ಮೋಹನಕಾಯ ರಂಗ
ಸಂಗೀತಲೋಲ ಸದ್ಗುಣ ಶೀಲ
ಅಂಗನೆಯರಿಗೆಲ್ಲ ಅತಿಪ್ರಿಯನಾದ
ಶುಭಾಂಗ ಶ್ರೀಪುರಂದರ ವಿಠಲರಾಯ
1.AudioLink - ಕರ್ನಾಟಕ ಸಂಗೀತ ಶೈಲಿಯಲ್ಲಿ ಕೇಳಿ.
2.AudioLink (song 43) - Anantha Kulkarni ಅವರು ಹಿಂದೂಸ್ತಾನಿ ಶೈಲಿಯಲ್ಲಿ ಹಾಡಿದ್ದಾರೆ.
ರಚನೆ : ಪುರಂದರದಾಸರು
ರಾಗ : ಸಿಂಧು ಭೈರವಿ
ತಾಳ : ಆದಿ
ವೆಂಕಟಾಚಲ ನಿಲಯಂ ವೈಕುಂಠ ಪುರ ವಾಸಂ
ಪಂಕಜ ನೇತ್ರಂ ಪರಮ ಪವಿತ್ರಂ
ಶಂಖ ಚಕ್ರಧರ ಚಿನ್ಮಯ ರೂಪಂ
ಅಂಬುಜೋದ್ಭವ ವಿನುತಂ ಅಗಣಿತ ಗುಣ ನಾಮಾಂ
ತುಂಬುರು ನಾರದ ಗಾನವಿಲೋಲಂ
ಮಕರ ಕುಂಡಲಧಾರ ಮದನ ಗೋಪಾಲಂ
ಭಕ್ತ ಪೋಷಕ ಶ್ರೀ ಪುರಂದರ ವಿಠಲಂ
Audio Link by Nithyashree (song 7)
2.AudioClip below M L Vasantha kumari ಹಾಡಿದ್ದಾರೆ.
ರಚನೆ : ಪುರಂದರ ದಾಸರು
ಲಾಲಿಸಿದಳು ಮಗನ ಯಶೋದೆ
ಲಾಲಿಸಿದಳು ಮಗನ
ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು
ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ೧
ಬಾಲಕನೆ ಕೆನೆ ಹಾಲು ಮೊಸರನೀವೇ
ಲೀಲೆಯಿಂದಲಿ ಎನ್ನ ತೋಳ ಮೇಲೆ ಮಲಗೆಂದು೨
ಮುಗುಳುನಗೆಯಿಂದ ಮುದ್ದು ತಾತಾರೆಂದು
ಜಗದೊಡೆಯನೇ ಶ್ರೀಪುರಂದರ ವಿಠಲನ೩
1.AudioLink by Padmaja Kishore ಈ ಹಾಡನ್ನು ಚಲನಚಿತ್ರದಲ್ಲಿ ಉಪಯೋಗಿಸಿದ್ದಾರೆ
2.AudioLink by S.Janaki
3.Audio link by Surekha