Welcome to my Blog.I hope you enjoy the music.Please leave your comments and suggestions. Thankyou :)
All songs posted here have audio links!!

Harinamada aragiliyu / Harinamadaraginiyu / ಹರಿನಾಮದರಗಿಳಿಯು

November 2, 2010


ಹರಿನಾಮದರಗಿಣಿಯು ಹಾರುತಿದೆ ಜಗದಿ
ಪರಮ ಭಾಗವತರು ಬಲೆಯ ಬೀಸುವರು ||ಪ||

ಕೋಪವೆಂಬ ಮಾರ್ಜಾಲ ಕಂಡರೆ ನುಂಗುವುದು
ತಾಪವೆಂಬುವ ಹುಲಿಯ ಕೊಂಡೊಯ್ವುದು
ಕಾಪಾಡಲದನೊಯ್ದು ಹೃದಯದೊಳಗಿಂಬಿಟ್ಟು
ಆಪತ್ತಿಗೊದಗುವುದು ಆ ಮುದ್ದು ಅರಗಿಣಿಯು |1|

ದಾರಿಯಲಿ ನಡೆವಾಗ ಚೋರರುಪಟಳವಿಲ್ಲ
ಮಾರಿ ಬಂದರೆ ಅದನು ಹೊಡೆದು ನೂಕುವುದು
ಕ್ರೂರ ಯಮಭಟರನು ಮೂಗು ರೆಕ್ಕಿಲಿ ಬಡಿದು
ದಾರಿ ತೋರುವುದು ಮುರಾರಿ ಪಟ್ಟಣಕೆ |2|

ಎಷ್ಟು ವರ್ಣಿಸಲಿ ನಾ ಈ ಮುದ್ದು ಅರಗಿಣಿಯ
ಹೊಟ್ಟೆಯೊಳಗೀರೇಳು ಜಗವನಿಂಬಿಟ್ಟು
ಸೃಷ್ಟೀಶ ಪುರಂದರ ವಿಠಲನ ನೆನೆ ನೆನೆದು
ಮುಟ್ಟಿ ಭಜಿಸುವುದು ಈ ಮುದ್ದು ಅರಗಿಣಿಯು|3|


1.Audio by Roopa Deepa Kasaravalli

2.Audio by Narasimha Nayaka [song 16]

6 comments:

sunata said...

thank you so much. may god bless you with all prosperity .

Shree said...

Thanks for your wishes. Keep visiting.

vedasudhe said...

ಹರಿನಾಮದರಗಿಣಿಯು ಹಾಡ್ತಾ ಇಲ್ಲವೇಕೇ? ಕೊಂಡಿ ಸರಿಯಾಗಲಿಲ್ಲವೇ?

Shree said...

ಶ್ರೀಧರ್ ಅವರೇ, ಯಾವ ಕೊಂಡಿ ಸರಿಯಿಲ್ಲ?? ನನಗೆ ಎರಡೂ ಕೊಂಡಿಗಳು ಸರಿಯಾಗಿ ಹಾಡುತ್ತಿವೆಯಲ್ಲ.ಕೆಲವೊಮ್ಮೆ ಈ websiteಗಳು ಕೆಲಸ ಮಾಡುವುದಿಲ್ಲ, ಪುನಃ ಪ್ರಯತ್ನ ಮಾಡಿ ನೋಡಿ.

vedasudhe said...

ಕೊಂಡಿ ತೆರೆಯಿಯಿತು.ಹಾಡು ಕೇಳಿದೆ. ಚೆನ್ನಾಗಿದೆ.ಧನ್ಯವಾದಗಳು.ನಿಮ್ಮ ಪ್ರಯತ್ನಗಳು ಬಹು ಉಪಯೋಗಿಯಾಗಿವೆ.ನಮಸ್ತೆ
-ಶ್ರೀಧರ್

Shreeprada said...

Dhanyavadagalu!

stat

Counter

Blog Widget by LinkWithin
 
Bhakthi Geetha / ಭಕ್ತಿ ಗೀತೆಗಳು - by Templates blogger